ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ಗೂ ಕೇಂದ್ರ ತಜ್ಞ ಸಮಿತಿ ಗ್ರೀನ್ ಸಿಗ್ನಲ್: ನಿರ್ಬಂಧಿತ ಬಳಕೆಗೆ ಶಿಫಾರಸು!

ಹೊಸದಿಲ್ಲಿ: ಕೇಂದ್ರ ಸರ್ಕಾರ ರಚಿಸಿದ ವಿಶೇಷ , ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿರುವ ಕೊರೊನಾ ಲಸಿಕೆಗೆ ಅನುಮತಿ ನೀಡಿದ್ದು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ದ ಅನುಮೋದನೆಗೆ ಕಳುಹಿಸಿಕೊಡಲಾಗಿದೆ. ಆದರೆ ಕೋವ್ಯಾಕ್ಸಿನ್ ಲಸಿಕೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಮಾತ್ರ ಶಿಫಾರಸು ಮಾಡುತ್ತಿರುವುದಾಗಿ ಕೇಂದ್ರ ತಜ್ಞ ಸಮಿತಿ ಸ್ಪಷ್ಟಪಡಿಸಿದೆ. ಕೋವ್ಯಾಕ್ಸಿನ್ ಲಸಿಕೆಯ ಪರಿಣಾಮಕಾರಿತ್ವದ ಮಾಹಿತಿಯ ಕೊರತೆಯ ಹೊರತಾಗಿಯೂ, ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಶಿಫಾರಸು ಮಾಡುತ್ತಿರುವುದಾಗಿ ಕೇಂಧ್ರ ತಜ್ಷ ಸಮಿತಿ ಹೇಳಿದೆ. ಆದರೆ ಅಂತಿಮ ತೀರ್ಮಾನವನ್ನು ಡಿಸಿಜಿಐ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ. ಯಾವುದೇ ಔಷಧಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸೂಚಿಸಲು ಸಾಕಷ್ಟು ಪುರಾವೆಗಳಿದ್ದರೆ ಮಾತ್ರ ನಿರ್ಬಂಧಿತ ಬಳಕೆಯ ಅನುಮೋದನೆಯನ್ನು ನೀಡಲಾಗುತ್ತದೆ. ಅಂದರೆ ಕೋವ್ಯಾಕ್ಸಿನ್ ಈ ಪರೀಕ್ಷೆಯಲ್ಲ ಯಶಸ್ವಿಯಾಗಿದೆ ಎಂದೇ ಅರ್ಥ ಎಂದು ತಜ್ಞ ಸಮಿತಿ ಸದಸ್ಯರು ಹೇಳಿದ್ದಾರೆ. ಲಸಿಕೆ ಪರಿಣಾಮಕಾರಿತ್ವದ ದತ್ತಾಂಶವು ಎಲ್ಲಾ ಮೂರು ಹಂತಗಳ ಸಂಯೋಜಿತ ವಿಶ್ಲೇಷಣೆಯ ಫಲಿತಾಂಶವಾಗಿದ್ದು, ಈ ದತ್ತಾಂಶದ ಆಧಾರದ ಮೇಲೆ ಕೋವ್ಯಾಕ್ಸಿನ್‌ಗೆ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಶಿಫಾರಸು ಮಾಡಿರುವುದಾಗಿ ಸಮಿತಿ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರ ರಚಿಸಿದ ವಿಶೇಷ ತಜ್ಞ ಸಮಿತಿ ಆಕ್ಸ್‌ಫರ್ಡ್‌-ಆಸ್ಟ್ರಾಜೆನಿಕಾ ಕೊರೊನಾ ಲಸಿಕೆಗೆ ಅನುಮತಿ ನೀಡಿದ್ದು, ಇದೀಗ ಕೋವ್ಯಾಕ್ಸಿನ್‌ಗೂ ಗ್ರೀನ್ ಸಿಗ್ನಲ್ ನೀಡಿದೆ. ಫೈಜರ್ ಲಸಿಕೆಗೆ ಅನುಮತಿ ನೀಡುವುದು ಇನ್ನೂ ಬಾಕಿಯಿದೆ. ಒಟ್ಟಿನಲ್ಲಿ ದೇಶಾದ್ಯಂತ ನೀಡುವಿಕೆಯ ತಾಲೀಮು ನಡೆದಿರುವಾಗಲೇ, ಎರಡು ಕೊರೊನಾ ಲಸಿಕೆಗಳಿಗೆ ಕೇಂದ್ರ ತಜ್ಞ ಸಮಿತಿ ಅನುಮತಿ ನೀಡಿರುವುದು ಗಮನ ಸೆಳೆದಿದೆ.


from India & World News in Kannada | VK Polls https://ift.tt/3b60vom

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...