ಲಖನೌ: ಮಾರಕ ಕೊರೊನಾ ವೈರಸ್‌ಗೆ ದೇಶದಲ್ಲಿ ಲಸಿಕೆ ಸಿದ್ಧತೆ ಇನ್ನೇನು ಅಂತಿಮ ಹಂತಕ್ಕೆ ಬಂದು ತಲುಪಿದೆ. ಕೋಟ್ಯಂತರ ಭಾರತೀಯರು ಕಾತರದಿಂದ ಕಾಯುತ್ತಿದ್ದ ದಿನಗಳು ಇನ್ನೇನು ಸಮೀಪದಲ್ಲಿವೆ. ಆದರೆ ಕೊರೊನಾ ಲಸಿಕೆಯಲ್ಲೂ ರಾಜಕೀಯ ಮಾಡುವ ಮನಸ್ಸುಗಳು ಅದಾಗಲೇ ತಮ್ಮ ಕೀಳು ರಾಜಕೀಯ ಶುರುವಿಟ್ಟುಕೊಂಡಿವೆ. ಲಸಿಕೆಯಲ್ಲೂ ಪಕ್ಷ ನೋಡುವ ಹಾಗೂ ಲಸಿಕೆ ಮೇಲೆ ಅನುಮಾನ ವ್ಯಕ್ತಪಡಿಸುವ ಮೂಲಕ ಸಮಾಜವಾದಿ ಪಕ್ಷ ಈ ಕೀಳು ರಾಜಕೀಯದ ಶಿಖರವನ್ನು ತಲುಪಿದೆ. ಬಿಜೆಪಿ ಕೊಡಲಿರುವ ಲಸಿಕೆ ನಂಬಲು ಯೋಗ್ಯವಲ್ಲ ಎಂದಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಯಾವುದೇ ಕಾರಣಕ್ಕೂ ತಾವು ಲಸಿಕೆಯನ್ನು ಹಾಕಿಸಿಕೊಳ್ಳುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಮತ್ತೋರ್ವ ಎಸ್‌ಪಿ ನಾಯಕ , ಬಿಜೆಪಿ ನೀಡಲಿರುವ ಲಸಿಕೆಯಲ್ಲಿ ಏನೂ ಬೇಕಾದರೂ ಇರಬಹುದು ಎಂದು ಹೇಳುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಬಿಜೆಪಿ ನೀಡಲಿರುವ ಲಸಿಕೆಯಲ್ಲಿ ಏನು ಬೇಕಾದರೂ ಇರಬಹುದು. ಜನಸಂಖ್ಯೆಯನ್ನು ಕೊಲ್ಲುವ ಹಾಗೂ ಕಡಿಮೆ ಮಾಡುವ ಉದ್ದೇಶದಿಂದ ಲಸಿಕೆಯಲ್ಲಿ ಏನನ್ನಾದರೂ ಬೆರೆಸಿರಬಹುದು. ನೀವು ಅಸಮರ್ಥರಾಗಲೂಬಹುದು. ಹೀಗಾಗಿ ಅಖಿಲೇಶ್ ಯಾದವ್ ಅವರ ಅನುಮಾನ ಸರಿಯಾಗಿದೆ ಎಂದು ಅಶುತೋಷ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. ಎಸ್‌ಪಿ ನಾಯಕರ ಮಾತುಗಳು ಅಲ್ಪಸಂಖ್ಯಾತ ಸಮುದಾಯದಲ್ಲಿ ಗೊಂದಲ ಸೃಷ್ಟಿಸಲೆಂದೇ ನೀಡುತ್ತಿರುವ ಹೇಳಿಕೆಗಳು ಎಂದು ವಿಶ್ಲೇಷಿಸಲಾಗಿದ್ದು, ನೆಪದಲ್ಲಿ ನಿರ್ದಿಷ್ಟ ಜನಸಂಖ್ಯೆಯನ್ನು ಕೊಲ್ಲುವ ಅಥವಾ ಅವರನ್ನು ಅಸಮರ್ಥರನ್ನಾಗಿ ಮಾಡುವ ಮೂಲಕ ಜನಸಂಖ್ಯೆ ಕಡಿಮೆ ಮಾಡುವ ಇರಾದೆ ಹೊಂದಿದೆ ಎಂದು ಹೇಳುವ ಮೂಲಕ ಎಸ್‌ಪಿ ನಾಯಕರು ಭಯದ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
from India & World News in Kannada | VK Polls https://ift.tt/386xffi