ರಾಜ್ಯಾದ್ಯಂತ ಶುದ್ಧ ಕನ್ನಡ ನಾಮಫಲಕ ಅಭಿಯಾನ; ಇನ್ಮುಂದೆ ಅಂಗಡಿಗಳ ಮುಂದೆ ರಾರಾಜಿಸಲಿದೆ ಕನ್ನಡ ಫಲಕ!

ಬೆಂಗಳೂರು; ರಾಜ್ಯದ ಅಂಗಡಿ-ಮುಂಗಟ್ಟುಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಸೂಚನೆ ನೀಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯಾದ್ಯಂತ ಆರಂಭಿಸಿರುವ ಮೂರು ದಿನಗಳ 'ಶುದ್ಧ ಅಭಿಯಾನಕ್ಕೆ ಕಮರ್ಷಿಯಲ್‌ ಸ್ಟ್ರೀಟ್‌ ವೃತ್ತದಲ್ಲಿ ಚಾಲನೆ ನೀಡಿ ಮಂಗಳವಾರ ಅವರು ಮಾತನಾಡಿದರು. ರಾಜ್ಯ ಮತ್ತು ಕೇಂದ್ರ ಸರಕಾರದ ಕಚೇರಿಗಳು, ಸಾರ್ವಜನಿಕ ಅಂಗಡಿ-ಮುಂಗಟ್ಟುಗಳು ಶುದ್ಧ ಕನ್ನಡವನ್ನು ನಾಮಫಲಕದಲ್ಲಿ ಬಳಕೆ ಮಾಡಬೇಕು ಎಂಬ ಉದ್ದೇಶದಿಂದ ಈ ಹಮ್ಮಿಕೊಳ್ಳಲಾಗಿದೆ. , ಮಾಲ್‌ಗಳಲ್ಲಿ ವ್ಯಾಪಾರ-ವಹಿವಾಟು ನಡೆಸುವ ಮಾಲೀಕರು, ವ್ಯಾಪಾರಸ್ಥರು ಮನಃಪೂರ್ವಕವಾಗಿ ಮಾಡಬೇಕಾದ ಕನ್ನಡದ ಕೆಲಸವನ್ನು ಹಕ್ಕೊತ್ತಾಯದ ಮೂಲಕ ಮಾಡುವ ಅನಿವಾರ್ಯತೆ ಬಂದೊದಗಿರುವುದು ವಿಪರ್ಯಾಸದ ಸಂಗತಿ. ಈ ಧೋರಣೆ ಸಹಿಸಲು ಸಾಧ್ಯವಿಲ್ಲ. ಅಂಗಡಿ-ಮುಂಗಟ್ಟುಗಳ ನಾಮಫಲಕ ಕಡ್ಡಾಯವಾಗಿ ಕನ್ನಡದಲ್ಲಿರಲಿ ಎಂದು ಹೇಳಿದರು. ರಾಜ್ಯಾದ್ಯಂತ ಮೂರು ದಿನಗಳ ಕಾಲ ಕೇಂದ್ರ ಮತ್ತು ರಾಜ್ಯ ಸರಕಾರದ ಕಚೇರಿ, ಸಾರ್ವಜನಿಕ ಅಂಗಡಿ, ಮುಂಗಟ್ಟುಗಳ ಮುಂದೆ ಶುದ್ಧ ಕನ್ನಡ ನಾಮಫಲಕ ಅಭಿಯಾನ ನಡೆಸಿ ಕಚೇರಿ ಮುಖ್ಯಸ್ಥರು, ಮಾಲೀಕರಿಗೆ ಶುದ್ಧ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು,'' ಎಂದರು. ಇದೇ ವೇಳೆ ನಾಮಫಲಕದಲ್ಲಿ ಕನ್ನಡ ಕಡೆಗಣಿಸಿರುವ ಮತ್ತು ಚಿಕ್ಕದಾಗಿ ಹಾಕಲಾಗಿರುವ ಅಂಗಡಿ, ಮಾಲ್‌ಗಳಿಗೆ ತೆರಳಿ ಮಾಲೀಕರಿಗೆ ಹಕ್ಕೊತ್ತಾಯದ ಮನವಿ ಪತ್ರ ನೀಡಲಾಯಿತು. ''ಇಲ್ಲಿನ ಸವಲತ್ತುಗಳನ್ನು ಬಳಸಿಕೊಂಡು ವ್ಯಾಪಾರ ವಹಿವಾಟು ನಡೆಸುವ ನೀವು ಸರಕಾರದ ಭಾಷಾ ನೀತಿಯನ್ನು ಪಾಲಿಸಬೇಕಿದೆ. ನಿಮಗೆ ಅನ್ನ ನೀಡಿದ ನೆಲದ ಋುಣ ಪಾಲಿಸಲು ಕನ್ನಡವನ್ನು ಎಲ್ಲ ಹಂತದಲ್ಲೂ ಪ್ರಧಾನವಾಗಿ ಬಳಸಬೇಕು,'' ಎಂದು ಅವರು ತಾಕೀತು ಮಾಡಿದರು. ಕನ್ನಡ ಜಾಗೃತಿ ಪಡೆ ಸದಸ್ಯರಾದ ಮಮತಾ ಅಶೋಕ್‌ ಮತ್ತು ಗಿರೀಶ್‌ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕನ್ನಡ ಜಾಗೃತಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕನ್ನಡ ಕಾಯಕ ಪಡೆ ಸದಸ್ಯರು, ಕನ್ನಡಪರ ಚಿಂತಕರು, ಹೋರಾಟಗಾರರು ಪಾಲ್ಗೊಂಡು, ಇಡೀ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿರುವ ಎಲ್ಲಾ ಅಂಗಡಿ, ಮಾಲ್‌ಗಳಲ್ಲೂ ಶುದ್ಧ ಕನ್ನಡ ನಾಮಫಲಕವನ್ನು ಬಳಸುವಂತೆ ಹಕ್ಕೊತ್ತಾಯದ ಮನವಿ ಪತ್ರ ವಿತರಿಸಿದರು. ಮುಖ್ಯಮಂತ್ರಿಗಳು ಘೋಷಿಸಿದ 'ಕನ್ನಡ ಕಾಯಕ ವರ್ಷಾಚರಣೆ' ಪ್ರಯುಕ್ತ ನಡೆಯುವ ಈ ಅಭಿಯಾನ ಸರಣಿ 'ಬಾರಿಸು ಕನ್ನಡ ಡಿಂಡಿಮ'ದ ಮೂರನೇ ಅಭಿಯಾನವಾಗಿದೆ. ರಾಜ್ಯ ಸರಕಾರವು 2020ರ ನ.1ರಿಂದ 2021ರ ಅ.31ರವರೆಗಿನ ಅವಧಿಯನ್ನು 'ಕನ್ನಡ ಕಾಯಕ ವರ್ಷ' ಎಂದು ಘೋಷಿಸಿದ್ದು, ಅದರ ಅನುಷ್ಠಾನದ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಹಿಸಿಕೊಂಡಿದೆ.


from India & World News in Kannada | VK Polls https://ift.tt/3qURYcx

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...