ಉಡುಪಿ ಜಿಲ್ಲೆಗೆ ಪ್ಲಸ್ಸೂ ಇಲ್ಲ, ಮೈನಸ್ಸೂ ಇಲ್ಲ: ನಿರಾಶೆಯ ಬೆಂಕಿಗೆ ಕಾರ್ಕಳ ಶಾಸಕ ಸುನಿಲ್‌ ಟ್ವೀಟ್‌

ಎಸ್‌.ಜಿ. ಕುರ್ಯ ಉಡುಪಿ: ರಾಜ್ಯ ಸರಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ/ಪುನಾರಚನೆಯಿಂದ ಎರಡನೇ ಬಾರಿಯೂ ಉಡುಪಿ ಜಿಲ್ಲೆಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ, ಯಥಾಸ್ಥಿತಿಯ ನಿರಾಶೆಯೇ ಮುಂದುವರಿದಿದೆ. ಪಕ್ಷ ನಿಷ್ಠೆಯ ನೆಲೆಯಲ್ಲಿ ಯಾರೊಬ್ಬರೂ ತಮಗೆ ಸಿಗದ ಸಚಿವ ಸ್ಥಾನಕ್ಕೆ ಸಂಬಂಧಿಸಿ ಅತೃಪ್ತಿ, ಅಸಮಾಧಾನ ಹೊರಹಾಕಿಲ್ಲ. ಆದರೆ ಕಾರ್ಕಳ ವಿ. ಸುನಿಲ್‌ ಕುಮಾರ್‌ ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯ ಮಾರ್ಗ ತಿಳಿದಿಲ್ಲ ಎನ್ನುವ ಮೂಲಕ ಜಾತಿ ರಾಜಕೀಯ, ಬ್ಲ್ಯಾಕ್‌ಮೇಲ್‌ ದಾರಿ ಹಿಡಿಯದಿರುವ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕೈ ಬಿಟ್ಟರೆ, ಬಿಲ್ಲವ ಸಮುದಾಯದಿಂದ ಎದುರಾಗಬಹುದಾದ ಪ್ರತಿರೋಧವನ್ನು ಶಾಸಕ ವಿ. ಸುನಿಲ್‌ ಸಂಪುಟ ಸೇರ್ಪಡೆ ಮೂಲಕ ತಣ್ಣಗಾಗಿಸುವ ಯತ್ನ ಹುತ್ತಕ್ಕೆ ಕೈ ಹಾಕಿದಂತಾದೀತೆಂದು ಬಿಜೆಪಿ ನಾಯಕರು ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ. ಐದಕ್ಕೆ ಐದೂ ಬಿಜೆಪಿಉಡುಪಿ ಜಿಲ್ಲೆಯ ಐದಕ್ಕೆ ಐದು ವಿಧಾನಸಭೆ ಕ್ಷೇತ್ರವನ್ನೂ ಬಿಜೆಪಿ ಮಡಿಲಿಗೆ ಮತದಾರ 2018ರಲ್ಲಿ ಹಾಕಿದ್ದು ಮಾತ್ರವಲ್ಲ ಲೋಕಸಭೆ ಬಳಿಕ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂ ಚುನಾವಣೆಯಲ್ಲೂ ಕಮಲವನ್ನು ಅರಳಿಸಿದ್ದಾರೆ. ಆದರೆ ಜಿಲ್ಲೆಯ ಅಭಿವೃದ್ಧಿಗೆ ಕೃತಜ್ಞತಾ ರೂಪದ ಯಾವುದೇ ಕೊಡುಗೆ ಸಂದಿಲ್ಲ. ಮೂರನೇ ಬಾರಿ ಕಾಪು ಶಾಸಕರಾದ ಲಾಲಾಜಿ ಆರ್‌. ಮೆಂಡನ್‌ ಅವರಿಗೆ ಸಚಿವ ಸ್ಥಾನ ನೀಡುವಂತೆ ಮೊಗವೀರ ಸಮುದಾಯದ ಮುಖಂಡರು ಉಡುಪಿ, ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಒತ್ತಡ ಹೇರಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನ ಘೋಷಣೆಯಾದರೂ ಬಳಿಕ ಅದು ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ಪಾಲಾಯಿತು. ಲಾಲಾಜಿಗೇ ಆಳ, ಅಗಲದ ಅರಿವಿಲ್ಲದ ನಿಗಮವೊಂದನ್ನು ನೀಡಿದ್ದರೂ ಇನ್ನೂ ಅಧ್ಯಕ್ಷ ಸ್ಥಾನ ಸ್ವೀಕರಿಸಿಲ್ಲ. ಕಾಂಗ್ರೆಸ್‌ನಲ್ಲಿದ್ದ ಬಿ.ಎಂ. ಸುಕುಮಾರ ಶೆಟ್ಟಿ, ಪ್ರಧಾನಿ ಮೋದಿ ಅಭಿಮಾನದಿಂದ ಬಿಜೆಪಿ ಸೇರಿದ್ದು ಬೈಂದೂರು ಶಾಸಕರಾಗಿ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಉಡುಪಿ ಶಾಸಕ ಕೆ. ರಘುಪತಿ ಭಟ್‌ ಮೂರನೇ ಬಾರಿ ಶಾಸಕರಾಗಿದ್ದರೂ ಸರಕಾರ, ಬಿಜೆಪಿಯ ಸ್ಥಿತಿಗತಿ ಅರಿತು, ತಾವು ಪ್ರತಿನಿಧಿಸುತ್ತಿರುವ ಸಮುದಾಯದ ನೆಲೆಯಲ್ಲಿ ಸಚಿವ ಸ್ಥಾನದ ಲಾಬಿಯ ಉಸಾಬರಿಗೇ ಹೋಗಿಲ್ಲ. 2011-12ರಲ್ಲಿ ಬೆಂಗಳೂರಿಗೆ ಕರೆಸಿ ಸಚಿವ ಸ್ಥಾನ ನೀಡದೆ ಮಾಡಿದ ಅವಮಾನ ವಿರುದ್ಧ 2013ರಲ್ಲಿ ಪಕ್ಷೇತರರಾಗಿ ಗೆದ್ದು ಬಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಬಿಜೆಪಿಗೆ ಕರೆ ತಂದ ಯಡಿಯೂರಪ್ಪ 2018ರಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನದ ಭರವಸೆ ನೀಡಿದ್ದರು. ಆದರೆ 104 ಸೀಟು ಬಂದರೂ ಬಿಜೆಪಿ ಬದಲು ಕಾಂಗ್ರೆಸ್‌, ಜೆಡಿಎಸ್‌ ಅಧಿಕಾರಕ್ಕೆ ಬಂದು ಒಂದೇ ವರ್ಷದಲ್ಲಿ ಉರುಳಿತು. ಕುಂದಾಪುರದಿಂದ ಐದನೇ ಬಾರಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈಗ ಸಾರ್ವಜನಿಕವಾಗಿ ಮಾತ್ರವಲ್ಲ ಬಿಜೆಪಿ ವೇದಿಕೆಯಲ್ಲೂ ವಿರಳವಾಗಿದ್ದು ಸಚಿವ ಸ್ಥಾನ ಕೊಟ್ಟರೂ ನಿಭಾಯಿಸುವ ಮನಸ್ಥಿತಿಯಿಲ್ಲ. ಸಚಿವ ಸ್ಥಾನ ಸಿಗದಿದ್ದರೂ ಪರವಾಗಿಲ್ಲ, ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನಾದರೂ ಕೊಡಿ ಎಂದರೆ ಕೊರೊನಾ ದೆಸೆಯಿಂದ ಅದಕ್ಕೂ ಕಲ್ಲುಬಿದ್ದಿದೆ. ಹೀಗಾಗಿ ಮುಂದಿನ ಎರಡೂವರೆ ವರ್ಷ ಒಂದೆಡೆ ಅತೃಪ್ತಿಯ ನಡುವೆ ಸರಕಾರ ನಡೆಸೋದು ಮತ್ತೊಂದೆಡೆ ಕ್ಷೇತ್ರದ ಅಭಿವೃದ್ಧಿಯನ್ನು ನಿಭಾಯಿಸೋದು ಹೇಗೆನ್ನುವ ಚಿಂತೆ ಬಿಜೆಪಿ ಶಾಸಕರನ್ನು ಕಾಡುತ್ತಿದೆ. ಬಿಜೆಪಿ ರಾಜ್ಯ, ಕೇಂದ್ರ ನಾಯಕರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಉಡುಪಿ ಜಿಲ್ಲೆಗೆ ರಾಜ್ಯ, ಕೇಂದ್ರದ ವಿವಿಧ ಯೋಜನೆಗಳಡಿ ಸಾಕಷ್ಟು ಅನುದಾನ ಬಿಡುಗಡೆ, ಪ್ರಗತಿ ಸಾಧನೆಯಾಗಬೇಕೆನ್ನುವುದೇ ನಮ್ಮ ನಿರೀಕ್ಷೆ. ಕುಯಿಲಾಡಿ ಸುರೇಶ್‌ ನಾಯಕ್‌, ಅಧ್ಯಕ್ಷರು, ಉಡುಪಿ ಜಿಲ್ಲಾ ಬಿಜೆಪಿ


from India & World News in Kannada | VK Polls https://ift.tt/39tMG0B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...