ಡಿಸಿಜಿಐ ನಿರ್ಧಾರ ಸ್ವಾಗತಿಸಿದ ಪ್ರಧಾನಿ: ಭಾರತೀಯರು ಹೆಮ್ಮೆಪಡುವ ಕ್ಷಣ ಎಂದ ಮೋದಿ!

ಹೊಸದಿಲ್ಲಿ: ದೇಶದ ಮೊಟ್ಟ ಮೊದಲ ಲಸಿಕೆಗೆ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ() ಅನುಮತಿ ನೀಡಿದೆ. ಆಕ್ಸ್‌ಫರ್ಡ್‌-ಆಸ್ಟ್ರಾಜೆನಿಕಾ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್‌ ಲಸಿಕೆಗಳ ಸಾರ್ವತ್ರಿಕ ಬಳಕೆಗೆ ಅನುಮತಿ ನೀಡಿರುವ ಡಿಸಿಜಿಐ, ಶೀಘ್ರದಲ್ಲೇ ಈ ಲಸಿಕೆ ಹಂಚಿಕೆ ಹಾಗೂ ವಿತರಣೆಗೆ ಮುಂದಡಿ ಇಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಈ ಎರಡೂ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದೂ ಡಿಸಿಜಿಐ ಸ್ಪಷ್ಟಪಡಿಸಿದೆ. ಇನ್ನು ಡಿಸಿಜಿಐ ನಿರ್ಧಾರವನ್ನು ಸ್ವಾಗತಿಸಿರುವ , ಇದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುವ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶವಾಸಿಗಳು ಬಹಳ ದಿನಗಳಿಂಧ ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದಾಗಿದೆ ಎಂದು ಹೇಳಿದ್ದಾರೆ. ಕೊರೊನಾ ಲಸಿಕೆಗೆ ಅನುಮತಿ ನೀಡಿರುವ ಡಿಸಿಜಿಐ ನಿರ್ಧಾರವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಲಸಿಕೆ ಲಭ್ಯತೆಗಾಗಿ ಶ್ರಮಿಸಿದ ವೈದ್ಯ ವಿಜ್ಞಾನಿಗಳ ಶ್ರಮವನ್ನು ದೇಶ ಸದಾ ಸ್ಮರಿಸಲಿದೆ ಎಂದು ಹೇಳಿದ್ದಾರೆ. ಡಿಸಿಜಿಐ ಅನುಮತಿ ನೀಡಿರುವ ಕೊರೊನಾ ಲಸಿಕೆಗಳು ದೇಶೀಯ ನಿರ್ಮಿತವಾಗಿದ್ದು, ನಮ್ಮ ವೈದ್ಯ ವಿಜ್ಞಾನಿಗಳು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕಟಿಬದ್ಧರಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ ಎಂದು ಪ್ರಧಾನಿ ಮೋದಿ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ದೇಶದಿಂದ ಮಾರಕ ಕೊರೊನಾ ವೈರಸ್‌ನ್ನು ಒದ್ದೊಡಿಸುವ ಕ್ಷಣ ಹತ್ತಿರವಾಗಿದ್ದು, ಈ ವೇಳೆ ನಾನು ದೇಶದ ವೈದ್ಯಕೀಯ ಸಮುದಾಯ, ಪೊಲೀಸ್, ಕೊರೊನಾ ವಾರಿಯರ್ಸ್‌ಗಳಿಗೆ ತುಂಬು ಹೃದುಯದ ಧನ್ಯವಾದ ಅರ್ಪಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.


from India & World News in Kannada | VK Polls https://ift.tt/3o51IQu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...