
ಶಶಿಧರ ಹೆಗಡೆ ಬೆಂಗಳೂರುಬೆಂಗಳೂರು: ರಾಜ್ಯ ಸರಕಾರದ ಸಾಧನೆಯ ಬಗ್ಗೆ ಬಿಜೆಪಿ ಉಸ್ತುವಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ವಿಜಯ ಕರ್ನಾಟಕ'ಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ರಾಜ್ಯ ಬಿಜೆಪಿಗೆ ಸಂಬಂಧಿಸಿದಂತೆ ಹಲವು ಸಂಗತಿಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಯಡಿಯೂರಪ್ಪ ಅವರು ಜನನಾಯಕರು. ಆದರೆ, ಅವರಿಗೆ 75 ವರ್ಷ ದಾಟಿರುವುದರಿಂದ ಬಿಜೆಪಿಯ ಅಲಿಖಿತ ನಿಯಮದಂತೆ ನಿವೃತ್ತಿಗೆ ಸೂಚಿಸಿರುವ ಬಗ್ಗೆ ಚರ್ಚೆ ನಡೆಯುತ್ತಿದೆಯಲ್ಲ? ಇಲ್ಲಿ ವಯಸ್ಸು ಮುಖ್ಯವಲ್ಲ. ಕೋವಿಡ್ ಸಂದರ್ಭದಲ್ಲಿ ತೆಲಂಗಾಣ ಸಿಎಂ ಕೆಸಿಆರ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆಯಿಂದ ಹೊರ ಬಂದಿರಲಿಲ್ಲ. ಯಡಿಯೂರಪ್ಪ ಬಹಳ ಕ್ರಿಯಾಶೀಲರಾಗಿದ್ದರು. ಕೋವಿಡ್ ಉಸ್ತುವಾರಿ ನೋಡಿಕೊಂಡರು. ಜನರನ್ನೂ ಭೇಟಿ ಮಾಡಿದರು. ಹಾಗಾಗಿ ವಯಸ್ಸಿನ ಪ್ರಶ್ನೆ ಉದ್ಭವಿಸುವುದಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಸಿಎಂ ಆಗಿ ಮುಂದುವರಿಯುತ್ತಾರೆ. ಬದಲಾವಣೆ ಪ್ರಶ್ನೆ ಪದೇಪದೆ ಯಾಕೆ ಬರುತ್ತಿದೆ ಎಂದೇ ಅರ್ಥವಾಗುತ್ತಿಲ್ಲ. ಈ ಬಗ್ಗೆ ಊಹಾತ್ಮಕ ಚರ್ಚೆಯಾಗುತ್ತಿದೆ. ವಾಸ್ತವ ಹಾಗಿಲ್ಲ. ಯಡಿಯೂರಪ್ಪ ಜನಪ್ರಿಯ ನಾಯಕರಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಅತ್ಯಂತ ಹಿರಿಯರು. ಈ ಅವಧಿ ಪೂರ್ತಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಈ ನಡುವೆಯೂ ನಾಯಕತ್ವದ ವಿಚಾರದಲ್ಲಿಗೊಂದಲವೇಕೆ? ಯಡಿಯೂರಪ್ಪ ಅವರಿಗೆ ಗೌರವಯುತ ವಿದಾಯ ಹೇಳಲು ಹೈಕಮಾಂಡ್ ಬಯಸಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆಯಲ್ಲ? ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಹಾಗೆ ಊಹೆ ಮಾಡಲಾಗುತ್ತಿದೆಯಷ್ಟೇ. ಇಂತಹ ಚರ್ಚೆಗೆ(ಗೌರವದ ವಿದಾಯ) ಉತ್ತರ ಕೊಡಲಾಗದು. ಇದು ನಮ್ಮ ಗಮನದಲ್ಲೂಇಲ್ಲ. ನಮಗೆ ಅಂತಹ ಯಾವುದೇ ಮಾಹಿತಿಯೂ ಇಲ್ಲ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹೊರತಾದ ಸಮರ್ಥರು ಇನ್ಯಾರಿದ್ದಾರೆ? ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರೇ ಮುಂದುವರಿಯುವ ಕಾರಣ ಇಂತಹ ಪ್ರಶ್ನೆ ಉದ್ಭವಿಸದು. ಭವಿಷ್ಯದ ದೃಷ್ಟಿಯಿಂದ ಎರಡನೇ ಹಂತದ ನಾಯಕರ ಬಗ್ಗೆ... ಇಡೀ ದೇಶದಲ್ಲಿ ಕೆಳಹಂತದಿಂದ ಯುವಕರನ್ನು ಬೆಳೆಸಿ ಮುಂಚೂಣಿಗೆ ತರುವುದು ಪಕ್ಷದ ಉದ್ದೇಶ. ಯಡಿಯೂರಪ್ಪ ನಾಯಕತ್ವದಲ್ಲಿ ವಿಶ್ವಾಸ ಇರುವುದಾದರೆ ಸಂಪುಟ ವಿಸ್ತರಣೆ ವಿಳಂಬಿಸುತ್ತಿರುವುದೇಕೆ? ಬಿಎಸ್‌ವೈ ನಾಯಕತ್ವದಲ್ಲಿ ಖಂಡಿತ ವಿಶ್ವಾಸವಿದೆ. ಆದರೆ, ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಪಂಚಾಯಿತಿ ಚುನಾವಣೆ ಕಾರಣಕ್ಕೆ ಮುಂದೂಡಿಕೆ ಆಗಿರಬಹುದು. ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೂ ಕೋವಿಡ್ ಬಂದಿತ್ತು. ಅವರೀಗ ಗುಣಮುಖರಾಗಿದ್ದಾರೆ. ಹಾಗಿದ್ದರೆ ಸಂಪುಟ ವಿಸ್ತರಣೆ ಯಾವಾಗ? ಪುನರ್‌ರಚನೆ ಆಗಲಿದೆಯಾ? ಯಾವಾಗ ಎಂದು ಸಿಎಂ ಹೇಳುತ್ತಾರೆ. ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ ಎನ್ನುವುದು ಅವರ ವಿವೇಚನೆಗೆ ಬಿಟ್ಟಿದ್ದಾಗಿದೆ. ಇಷ್ಟೆಲ್ಲದರ ಹೊರತಾಗಿಯೂ ನಾಯಕತ್ವದ ಬಗ್ಗೆ ಪದೇಪದೆ ಚರ್ಚೆಯಾಗುವುದರಿಂದ ಸರಕಾರ ಅಸ್ಥಿರಗೊಳ್ಳುತ್ತದೆ. ರಾಜ್ಯದಲ್ಲಿ ಬಹುತೇಕ ಅಂತಹುದೇ ಸ್ಥಿತಿ ಇದೆಯಲ್ಲ?ನೀವು ಹೇಳುತ್ತಿರುವುದು ಸರಿಯಿದೆ. ಇದರಿಂದ ಸರಕಾರಕ್ಕೆ ಸ್ವಲ್ಪ ತೊಂದರೆಯಾಗುತ್ತದೆ. ನಾಯಕತ್ವದ ಬದಲಾವಣೆಯಿಲ್ಲವೆಂದು ನಾನು ಈಗಾಗಲೇ ಹಲವಾರು ಬಾರಿ ಹೇಳಿದ್ದೇನೆ. ಜತೆಗೆ ಅವರು ಸಮಾಜದ ಎಲ್ಲ ವರ್ಗದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡುತ್ತಿದ್ದಾರೆ. ಹಾಗಾಗಿ ಯಾರೂ ಕೂಡ ಇಂತಹ ಚರ್ಚೆ ಮಾಡಬಾರದೆಂದು ಸೂಚನೆ ಕೊಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುತ್ತೀರಾ? ಇಲ್ಲ. ಅಂತಹ ಯಾವುದೇ ಪ್ರಸ್ತಾಪವಿಲ್ಲ. ಬಹಿರಂಗ ಹೇಳಿಕೆ ನೀಡದಂತೆ ಯತ್ನಾಳ್‌ರಂಥವರಿಗೆ ಎಚ್ಚರಿಕೆ ಬಸನಗೌಡ ಪಾಟೀಲ್ ಯತ್ನಾಳ್‌ರಂಥವರು ನಾಯಕತ್ವದ ಬಗ್ಗೆ ಪದೇ ಪದೆ ಹೇಳಿಕೆ ನೀಡುತ್ತಿದ್ದಾರಲ್ಲ? ಯಾರೂ ಕೂಡ ಹಾಗೆ ಮಾತನಾಡಬಾರದು. ನಾನು ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದೇನೆ. ಯಾರಿಗೇ ಅಭಿಪ್ರಾಯ ಹಂಚಿಕೊಳ್ಳುವುದಿದ್ದರೆ ಪಕ್ಷದ ವೇದಿಕೆಯಲ್ಲಿ ಹೇಳಿಕೆ ನೀಡಬೇಕು. ಅದನ್ನು ಬಿಟ್ಟು ಬಹಿರಂಗ ಹೇಳಿಕೆ ನೀಡಕೂಡದು. ಯಾವತ್ತೂ ಹಾಗೆ ನಡೆದುಕೊಳ್ಳಬಾರದು. ಅದು ಒಳ್ಳೆಯದಲ್ಲ. ನಮ್ಮ ಪಕ್ಷದದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಅದರ ಪ್ರಕಾರ ಸ್ವಯಂ ಚೌಕಟ್ಟು ಹಾಕಿಕೊಂಡು ಪಕ್ಷದ ವೇದಿಕೆಯಲ್ಲಿ ಮಾತನಾಡಬೇಕು. ರಾಜ್ಯದಲ್ಲಿ ಪಕ್ಷದ ಸಂಘಟನೆ ಬಗ್ಗೆ ಹೇಳಿ? ಸಂಘಟನೆ ಉತ್ತಮವಾಗಿದೆ. ಈ ನಿಟ್ಟಿನಲ್ಲಿಇನ್ನಷ್ಟು ಕೆಲಸ ಮಾಡಲಾಗುವುದು. ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಹಾಗೂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ರಾಜ್ಯದ ಪ್ರತಿ ಬೂತ್‌ನಲ್ಲಿ ಪಕ್ಷದ ಸಂಘಟನೆ ಸದೃಢಗೊಳಿಸಲಾಗುವುದು. ಮುಂದಿನ ಬಾರಿಯೂ ಬಹುಮತ ಗಳಿಸುವತ್ತ ಸಂಘಟನೆಗೆ ಬಲ ತುಂಬಲಾಗುವುದು.
from India & World News in Kannada | VK Polls https://ift.tt/3hAYx0B