72ನೇ ಗಣರಾಜ್ಯೋತ್ಸವದ ಸಂಭ್ರಮ; ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಕೆ.ಸುಧಾಕರ್ ರವರಿಂದ ಧ್ವಜಾರೋಹಣ!

ಚಿಕ್ಕಬಳ್ಳಾಪುರ: ದೇಶದಾದ್ಯಂತ ಇಂದು 72 ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರವರು 72 ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನಂತರ ಸಚಿವ ಡಾ.ಕೆ.ಸುಧಾಕರ್ ಅವರು ಪಥ ಪರಿವೀಕ್ಷಣೆ ಮಾಡಿ ಪಥ ಸಂಚಲನದ ವೀಕ್ಷಣೆ ಮಾಡಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಚಿಕ್ಕನರಸಿಂಹ್ಮಯ್ಯ( ಚಿನ್ನಿ), ನಗರ ಸಭೆ ಅಧ್ಯಕ್ಷ ಆನಂದಬಾಬು, ಜಿಲ್ಲಾಧಿಕಾರಿ.ಆರ್.ಲತಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು. ಈ ಬಾರಿಯ ಗಣರಾಜೋತ್ಸವದಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳಿಲ್ಲದೆ ಕಾರ್ಯಕ್ರಮವು ಕಳೆ ಗುಂದಿದ್ದು, ಕೇವಲ ಪೋಲಿಸ್ , ಗೃಹರಕ್ಷಕ ದಳ, ಎನ್.ಸಿ.ಸಿ. ಮಾತ್ರ ಪಥಸಂಚಲನದಲ್ಲಿ ಭಾಗಿಯಾಗಿತ್ತು. ಅಧಿಕಾರಿಗಳು ಮತ್ತು ಕೆಲವೇ ಜನ ಸಾರ್ವಜನಿಕರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು.


from India & World News in Kannada | VK Polls https://ift.tt/3c8Gf68

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...