ಕೋವಿಡ್‌ -19 ನಿರ್ವಹಣೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿ, ರಾಜ್ಯ ಸರ್ಕಾರಕ್ಕೆ ವಜೂಭಾಯಿ ವಾಲಾ ಪ್ರಶಂಸೆ

ಬೆಂಗಳೂರು: ಕೋವಿಡ್‌ -19 ಸೋಂಕು ನಿಗ್ರಹ ಮಾಡುವುದಲ್ಲಿ ಕರ್ನಾಟಕರಾಜ್ಯ ದೇಶಕ್ಕೆ ಮಾದರಿಯಾಗಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅವರು ರಾಜ್ಯ ಸರ್ಕಾರಕ್ಕೆ ಪ್ರಶಂಸೆ ಮಾಡಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಗಮನಸೆಳೆದರು. ಕರ್ನಾಟಕ ಸರ್ಕಾರವು ಜನತೆಯ ಸಹಕಾರದೊಂದಿದೆ ಹಗಲಿರುಳು ಶ್ರಮಿಸಿ ಕೋವಿಡ್‌ ಅಲೆಯನ್ನು ತಗ್ಗಿಸುವುದರಲ್ಲಿ ಯಶಸ್ವಿಯಾಗಿದೆ. ಈ ಬಿಕ್ಕಟ್ಟಿನಅವಕಾಶವನ್ನು ತಮ್ಮ ಸಾಮರ್ಥ್ಯ ವೃದ್ದಿಸಲು ಹಾಗೂ ಆರೋಗ್ಯ ಮೂಲಸೌಕರ್ಯ, ಪಿಪಿಇ ಕಿಟ್‌, ವೆಂಟಿಲೇಟರ್‌ಉತ್ಪಾದನೆಯನ್ನು ಹೆಚ್ಚಿಸಲು ಬಳಸಿಕೊಂಡಿದೆ ಎಂದರು. ಇದು ಪ್ರಧಾನಿ ನರೇಂದ್ರ ಮೋದಿ ದೂರದರ್ಶಿತ್ವ ಆತ್ಮ ನಿರ್ಭರ್‌ ಭಾರತ್ ಕಾರ್ಯಕ್ರಮದ ದಿಶೆಯಲ್ಲಿ ಒಂದು ಉತ್ತಮ ಹೆಜ್ಜೆಯಾಗಿದೆ ಭಾರತವು ಎರಡು ಲಸಿಕೆಗಳನ್ನು ಉತ್ಪಾದಿಸಿರುವುದಲ್ಲದೆ ಈ ಲಸಿಕೆಯನ್ನು ವಿದೇಶಗಳಿಗೂ ರಫ್ತು ಮಾಡುತ್ತಿರುವುದು ಗಮನಾರ್ಹ ಎಂದು ತಿಳಿಸಿದರು. ಸಮರ್ಥ ನಾಯಕರಾದ ಮೋದಿ ನೇತೃತ್ವದಲ್ಲಿ ಲಸಿಕೆ ಹಂತಹಂತವಾಗಿ ಪ್ರತಿಯೊಬ್ಬರಿಗೈ ತಲುಪುವಂತೆ ಕಾರ್ಯನಿರ್ವಹಿಸುತ್ತೇವೆ ಎಂದ ಅವರು ಕೋವಿಡ್‌ ಸಂದರ್ಭದಲ್ಲಿ ಅವಿರತವಾಗಿ ಶ್ರಮಿಸಿದ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಕೃಷಿ ವಲಯಗಳಲ್ಲಿ ಬದಲಾವಣೆ ತರಲು ಸರ್ಕಾರ ಜಲಾನಯನ ಅಭಿವೃದ್ದಿಯ ಕಡೆ ಗಮನವನ್ನು ಕೇಂದ್ರೀಕರಿಸಿದೆ. 2020-21 ನೇ ಸಾಲಿನಲ್ಲಿ ಸರ್ಕಾರವು ಜಲಾನಯನ ಅಭಿವೃದ್ದಿಗಾಗಿ 170 ಕೋಟಿ ಅಯವ್ಯಯವನ್ನು ಕಲ್ಪಿಸಿದೆ. ಇದರಿಂದಾಗಿ ಭೂ ರಹಿತ ಕಾರ್ಮಿಕರಿಗೆ ಮಗತ್ತು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉದ್ಯೋಗಾವಕಾಶ ಸಿಕ್ಕಂತಾಗಿದೆ ಎಂದು ತಿಳಿಸಿದರು. ಅಲ್ಲದೆ ಕೋವಿಡ್ ನಿಗ್ರಹಿಸುವ ಹೋರಾಟದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ದೇಶದಲ್ಲೇ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ. ವಲಸೆ ಕಾರ್ಮಿಕರ ಬೆನ್ನೆಲುಬಾಗಿ ಸರ್ಕಾರ ನಿಂತಿದೆ. 16 ಲಕ್ಷಕ್ಕಿಂತಲೂ ಹೆಚ್ಚು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹಣಕಾಸು ನೆರವು ರೂಪದಲ್ಲಿ824.21 ಕೋಟಿ ನೀಡಿದೆ. 90 ಲಕ್ಷ ಆಹಾರ ಪೊಟ್ಟಣಗಳನ್ನು ವಿತರಿಸಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.


from India & World News in Kannada | VK Polls https://ift.tt/2NCG4pu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...