
ಬೆಳಗಾವಿ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನ ಸೌಧ ಎದುರು ರೈತರು ಟ್ರಾಕ್ಟರ್‌ನಲ್ಲಿಯೇ ರಾಷ್ಟ್ರ ಮಾಡಿದರು. ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿದ್ದ ಟ್ರ್ಯಾಕ್ಟರ್ ಜಾಥಾ ಹೊರಡುವ ಮುನ್ನ ರಾಷ್ಟ್ರ ಧ್ವಜಾರೋಹಣ ಮಾಡಿ ಬಳಿಕ ರಾಷ್ಟಗೀತೆ ಹಾಡಿದರು. ಈ ವೇಳೆ ನೂರಾರು ರೈತರು ಭಾಗವಹಿಸಿದ್ದರು. ರೈತರ ಪರ ಘೋಷಣೆಗಳನ್ನು ಕೂಗಿದ ರೈತರು ಸರ್ಕಾರದ ವಿರುದ್ಧವೂ ಘೋಷಣೆ ಕೂಗಿದರು. ರಾಷ್ಟ್ರ ಧ್ವಜಾರೋಹಣ ಮಾಡಿದ ಬಳಿಕ ಟ್ರ್ಯಾಕ್ಟರ್ ರ್ಯಾಲಿಗೆ ರೈತರು ಚಾಲನೆ ನೀಡಿದರು. ಸುವರ್ಣ ವಿಧಾನಸೌಧದಿಂದ ಹೊರಟ ರ್ಯಾಲಿ ಬೆಳಗಾವಿ ನಗರದತ್ತ ಸಾಗಿದೆ. ಚನ್ನಮ್ಮ ವೃತ್ತದಲ್ಲಿ ಸಾವಿರಾರು ರೈತರು ಸಮಾವೇಶಗೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರಿಗೂ ಒತ್ತಡದವಿದ್ದೂ, ಭಾರೀ ಬಿಗಿ ಬಂದೋಬಸ್ತ್ ಹಮ್ಮಿಕೊಳ್ಳಲಾಗಿದೆ.
from India & World News in Kannada | VK Polls https://ift.tt/3cauEDy