ಬೆಂಗಳೂರು: ಮರಾಠಿ ಅಭಿವೃದ್ದಿ ನಿಗಮ ರಚನೆ ವಿಚಾರ ಇದೀಗ ಕನ್ನಡ ಪರ ಸಂಘಟನೆಗಳು ಹಾಗೂ ನಡುವಿನ ಸಂಘರ್ಷವಾಗಿ ಮಾರ್ಪಡುತ್ತಿದೆ. ನಿಗಮ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5 ಕ್ಕೆ ಕರೆ ನೀಡಿವೆ. ಆದರೆ ಇದಕ್ಕೆ ಬಿಜೆಪಿ ಶಾಸಕರು ಹಾಗೂ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರಿಣಾಮ ಇಬ್ಬರ ನಡುವಿನ ಸಂಘರ್ಷದ ವಾತಾವರಣ ಸೃಷ್ಟಿಯಾಗುತ್ತಿದೆ. ಮರಾಠಿ ನಿಗಮ ರಚನೆ ವಿರೋಧಿಸಿ ಡಿಸೆಂಬರ್ 5 ರಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್ ಕರೆ ಕೊಟ್ಟಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೂ ಕರೆ ಕೊಟ್ಟಿವೆ. ಮರಾಠಿಗರನ್ನು ಓಲೈಕೆ ಮಾಡುವ ಉದ್ದೇಶದಿಂದ ಸರ್ಕಾರ ಮರಾಠಿ ನಿಗಮ ಸ್ಥಾಪನೆ ಮಾಡಿದೆ ಎಂದು ಆರೋಪಿಸಿದೆ. ಆದರೆ ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸಬಾರದು ಎಂದು ವಿನಂತಿ ಮಾಡಿದ್ದಾರೆ. ಒಂದು ವೇಳೆ ಬಲವಂತದ ಬಂದ್ ಮಾಡಿಸಿದರೆ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ. ಈ ನಡುವೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡ ಪರ ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ. ಮಾಜಿ ಶಾಸಕ ಹಾಗೂ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡು ಅವರು ತಾಕತ್ತಿದ್ದರೆ ಬಂದ್ ನಡೆಯಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಅವರಷ್ಟೇ ಅಲ್ಲ, ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಕೂಡಾ ವಾಟಾಳ್ ನಾಗರಾಜ್‌ಗೆ ಸವಾಲು ಹಾಕಿದ್ದಾರೆ. ನಿನಗೆ ತಾಕತ್ತಿದ್ದರೆ ರಾಜ್ಯ ಬಂದ್ ಮಾಡು ವಾಟಾಳ್ ನಾಗರಾಜ್ ಎಂದು ಟ್ವಿಟ್ಟರ್‌ನಲ್ಲಿ ಏಕವಚನದಲ್ಲೇ ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಕರ್ನಾಟಕ ಬಂದ್ ಕನ್ನಡ ಪರ ಸಂಘಟನೆಗಳು ಹಾಗೂ ಬಿಜೆಪಿ ಸರ್ಕಾರದ ನಡುವಿನ ಸಂಘರ್ಷವಾಗಿ ಮಾರ್ಪಡುತ್ತಿದೆ. ಈ ನಡುವೆ ಬಂದ್‌ಗೆ ಎಲ್ಲ ರೀತಿಯ ತಯಾರಿಗಳನ್ನು ಕನ್ನಡ ಪರ ಸಂಘಟನೆಗಳು ನಡೆಸುತ್ತಿವೆ. ಆದರೆ ಈ ಬಂದ್ ಎಷ್ಟರ ಮಟ್ಟಿಗೆ ಯಶಸ್ವಿ ಆಗಲಿದೆ ಎಂಬುವುದು ಸದ್ಯದ ಕುತೂಹಲ.
from India & World News in Kannada | VK Polls https://ift.tt/2KtCQmv