ಮೈಸೂರು ವಿವಿಯಲ್ಲಿ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಪೀಠ

ಮೈಸೂರು: ಮೈಸೂರು ವಿಶ್ವ ವಿದ್ಯಾಲಯದಲ್ಲಿ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸ್ಥಾಪನೆಗೆ ಮೈಸೂರು ವಿವಿ ಸಿಂಡಿಕೇಟ್‌ ಸಭೆ ಅನುಮೋದನೆ ನೀಡಿದೆ. ಸಂಗೀತ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯನ್ನು ಪ್ರಧಾನ ಉದ್ದೇಶವನ್ನಾಗಿ ಇರಿಸಿಕೊಂಡು ಸಂಗೀತದ ಎಲ್ಲಾ ಪ್ರಕಾರಗಳ ಬಹುಮುಖ ಬೆಳವಣಿಗೆಗಾಗಿ ಪೀಠವನ್ನು ಭೂಮಿಕೆಯಾಗಿ ಅಳವಡಿಸಿಕೊಂಡು ಇದರ ಕಾರ್ಯ ವ್ಯಾಪ್ತಿಯನ್ನು ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಕ್ಷೇತ್ರದ ವ್ಯಾಪ್ತಿಗೆ ಒಳಪಡಿಸುವುದು ಉದ್ದೇಶ. ವಿವಿಯ ಲಲಿತಕಲೆಗಳ ಕಾಲೇಜಿನಲ್ಲಿ ಸಂಗೀತ ಪೀಠ ಸ್ಥಾಪನೆಯಾಗಲಿದ್ದು, ಪೀಠದ ಆರಂಭಕ್ಕೆ ವಾರ್ಷಿಕವಾಗಿ ಐದು ಲಕ್ಷ ರೂ. ಮೀಸಲು ಇರಿಸಲಾಗಿದೆ. ಈ ಅನುದಾನದಲ್ಲಿ ವಿಶೇಷ ಉಪನ್ಯಾಸ, ಕಾರ್ಯಾಗಾರ, ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ಗ್ರಂಥ ಪ್ರಕಟಣೆ ಮುಂತಾದ ಶೈಕ್ಷಣಿಕ ಕಾರ್ಯಗಳನ್ನು ಆಯೋಜಿಸುವುದು. ಇವೆಲ್ಲವನ್ನು ನಿರ್ವಹಿಸಲು ಕ್ಷೇತ್ರ ತಜ್ಞರೊಬ್ಬರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ(ವಾರ್ಷಿಕ) ನೇಮಿಸಿಕೊಳ್ಳುವುದು, ಗೌರವ ಸಂಭಾವನೆ ನೀಡಲು ನಿರ್ಧರಿಸಲಾಗಿದೆ.


from India & World News in Kannada | VK Polls https://ift.tt/3oalslB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...