ಚೀನಾ ಕ್ಯಾತೆಗೆ ಭಾರತದ ಬ್ರಹ್ಮೋಸ್‌ ಉತ್ತರ..! ಹಡಗನ್ನೇ ಪುಡಿಗಟ್ಟುತ್ತೆ ಕ್ಷಿಪಣಿ..!

ಹೊಸ ದಿಲ್ಲಿ: ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಬಲ್ಲ ಸೂಪರ್ ಸಾನಿಕ್ ಕ್ಷಿಪಣಿಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಮಾದರಿಯ ಪರೀಕ್ಷೆ ಯಶಸ್ವಿಯಾಗಿರೋದು ಭಾರತಕ್ಕೆ ಸಾಧಿಸಿದ ಅತಿದೊಡ್ಡ ಮೈಲುಗಲ್ಲು ಎಂದೇ ವಿಶ್ಲೇಷಿಸಲಾಗುತ್ತಿದೆ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದಲ್ಲಿ ಭಾರತೀಯ ನೌಕಾ ಪಡೆ ಈ ಒಂದು ಪ್ರಯೋಗವನ್ನು ನಡೆಸಿದೆ. ಈ ಯಶಸ್ವಿಯಾಗಿದೆ ಎಂದು ರಕ್ಷಣಾ ಪಡೆ ಮೂಲಗಳು ತಿಳಿಸಿವೆ. ಕಳೆದ ವಾರವಷ್ಟೇ ಭಾರತ ಬ್ರಹ್ಮೋಸ್‌ ಸೂಪರ್‌ ಸಾನಿಕ್ ಕ್ಷಿಪಣಿಗಳ ‘ಲೈವ್ ಆಪರೇಷನಲ್ ಫೈರಿಂಗ್’ ನಡೆಸಿ ಯಶಸ್ವಿಯಾಗಿತ್ತು. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹದಲ್ಲೇ ಈ ಪ್ರಯೋಗ ನಡೆದಿತ್ತು. ಇದೀಗ ಇದೇ ದ್ವೀಪ ಸಮೂಹದಲ್ಲೇ ನಿರೋಧಕ ಕ್ಷಿಪಣಿಗಳನ್ನು ಉಡಾಯಿಸಿ ನೌಕಾಪಡೆ ಯಶಸ್ವಿಯಾಗಿದೆ. ಭಾರತ ಹಾಗೂ ಚೀನಾ ನಡುವೆ ಲಡಾಕ್ ವಿಚಾರಕ್ಕೆ ಸಂಬಂಧಿಸಿದಂತೆ ತಿಕ್ಕಾಟ ಏರ್ಪಟ್ಟಿರುವ ಹೊತ್ತಲ್ಲೇ ಬ್ರಹ್ಮೋಸ್ ಕ್ಷಿಪಣಿಗಳು ಈ ಸಾಧನೆ ಮೆರೆದಿರೋದು, ಭಾರತದ ಪಾಲಿಗೆ ಧನಾತ್ಮಕ ಬೆಳವಣಿಗೆಯಾಗಿದೆ. ಭಾರತ ಹಾಗೂ ರಷ್ಯಾ ಜಂಟಿ ಸಂಶೋಧನೆಯಾದ ಈ ಬ್ರಹ್ಮೋಸ್ ಕ್ಷಿಪಣಿಗಳನ್ನು ಸಬ್‌ಮೆರಿನ್, ಹಡಗು, ವಿಮಾನ ಅಥವಾ ಭೂಮಿಯಿಂದಲೂ ಉಡಾಯಿಸಬಹುದಾಗಿದೆ. ಭಾರತ ಸೇನೆ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ಹಾಗೂ ಚೀನಾ ನಡುವ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಅಳವಡಿಸಿದೆ. ಲಡಾಕ್, ಅರುಣಾಚಲ ಪ್ರದೇಶ ಸೇರಿದಂತೆ ಹಲವೆಡೆ ಈ ಕ್ಷಿಪಣಿಗಳನ್ನು ಪ್ರತಿಷ್ಠಾಪಿಸಲಾಗಿದೆ.


from India & World News in Kannada | VK Polls https://ift.tt/3ofnXTF

ಫಲಿಸಿತು ಸಚಿವ ರಮೇಶ್ ಜಾರಕಿಹೊಳಿ ಒತ್ತಡ ತಂತ್ರ, ಸಿ.ಪಿ ಯೋಗೇಶ್ವರ್‌ಗೆ ಕೊನೆಗೂ ಸಚಿವ ಸ್ಥಾನ ಫಿಕ್ಸ್ !

ಬೆಂಗಳೂರು: ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್‌ಗೆ ನೀಡಬೇಕು ಎಂಬ ಸಚಿವ ರಮೇಶ್ ಜಾರಕಿಹೊಳಿ ಒತ್ತಡ ತಂತ್ರ ಕೊನೆಗೂ ವರ್ಕೌಟಾಗಿದೆ. ಸಚಿವ ಸ್ಥಾನಕ್ಕಾಗಿ ನಿರಂತರ ಲಾಬಿ ನಡೆಸುತ್ತಿದ್ದ ಸಿ.ಪಿ ಯೋಗೇಶ್ವರ್ ಕೊನೆಗೆ ರಮೇಶ್ ಜಾರಕಿಹೊಳಿ ಮೊರೆ ಹೋಗಿದ್ದರು. ಕಳೆದ ಶನಿವಾರ ಬೆಂಗಳೂರಿನ ರಮೇಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. ಇದಾಗ ಬಳಿಕ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಸಿ.ಪಿ ಯೋಗೇಶ್ವರ್ ಪರವಾಗಿ ಬ್ಯಾಟಿಂಗ್ ಮಾಡಿದ್ದರು. ಅಲ್ಲದೆ ದೆಹಲಿಗೆ ತೆರಳಿ ವರಿಷ್ಠರ ಜೊತೆಗೆ ಮಾತುಕತೆ ನಡೆಸಿದ್ದರು. ಇವೆಲ್ಲದರ ಪರಿಣಾಮ ಇದೀಗ ಸಿಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ಪಕ್ಕ ಎನ್ನುವುದು ತಿಳಿದುಬಂದಿದೆ. ಸಿಪಿವೈಗೆ ಸಚಿವ ಸ್ಥಾನಕ್ಕೆ ಕೆಲ ಶಾಸಕರ ವಿರೋಧ! ಸಿಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಲು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹಾಗೂ ಶಾಸಕ ರಾಜೂಗೌಡ ಸೇರಿ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂದು ರೇಣುಕಾಚಾರ್ಯ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅವರಿಗೆ ಸಚಿವ ಸ್ಥಾನ ನೀಡಿದರೆ ನಮಗೂ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆಪ್ತರ ಒತ್ತಡಕ್ಕೆ ಮಣಿಯದ ಬಿಎಸ್‌ವೈ! ಸಿಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವ ಗೊಂದಲ ವಿಚಾರ ಸಂಪುಟ ವಿಸ್ತರಣೆ ವಿಳಂಬಕ್ಕೆ ಒಂದು ಕಾರಣ ಆಗಿತ್ತು. ಆದರೆ ಇದೀಗ ಮೂಲಕ ಒತ್ತಡ ಹೇರುವಲ್ಲಿ ಸಿಪಿ ಯೋಗೇಶ್ವರ್ ಯಶಸ್ವಿಯಾಗಿದ್ದಾರೆ. ಆಪರೇಷನ್ ಕಮಲದಲ್ಲಿ ಮುಂಚೂಣಿಯಲ್ಲಿದ್ದ ಯೋಗೇಶ್ವರ್! ಸಿಪಿ ಯೋಗೇಶ್ವರ್ ಆಪರೇಷನ್ ಕಮಲದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದರು. ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ತಮ್ಮ ಪಕ್ಷಕ್ಕೆ ರಾಜೀನಾಮೆ ಕೊಡಿಸಿ ಬಿಎಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯ ಸಂದರ್ಭದಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಆದರೆ ಚುನಾವಣೆಯಲ್ಲಿ ಸೋತ ಕಾರಣದಿಂದಾಗಿ ಸಚಿವ ಸ್ಥಾನ ನಿರಾಕರಿಸಲಾಗಿತ್ತು. ಬಳಿಕ ವಿಧಾನಪರಿಷತ್‌ಗೆ ಆಯ್ಕೆ ಮಾಡಲಾಗಿತ್ತು. ಇದೀಗ ಕೊನೆಗೂ ಸಿಎಂ ಬಿಎಸ್ ಯಡಿಯೂರಪ್ಪ ಸಿಪಿ ಯೋಗೇಶ್ವರ್ ಅವರಿಗೆ ನೂರಕ್ಕೆ ನೂರರಷ್ಟು ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ.


from India & World News in Kannada | VK Polls https://ift.tt/3mpGP1v

ಇಬ್ಬರು ಪುಟ್ಟಮಕ್ಕಳ ಜತೆ ತಾಯಿ ಆತ್ಮಹತ್ಯೆ: ಮೇಲುಕೋಟೆಯಲ್ಲಿ ಹೃದಯ ವಿದ್ರಾವಕ ಘಟನೆ

(ಮಂಡ್ಯ): ಮೇಲುಕೋಟೆ ಹೋಬಳಿಯ ಕುಪ್ಪಳ್ಳಿ ಗ್ರಾಮದಲ್ಲಿಇಬ್ಬರು ಪುಟ್ಟ ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ನಿವೇದಿತಾ (26) ತನ್ನ ಮಕ್ಕಳಾದ ಗಾನವಿ (6) ಹಾಗೂ ಉಲ್ಲಾಸ (4) ಗೆ ನೇಣು ಬಿಗಿದು ನಂತರ ತಾನೂ ನೇಣಿಗೆ ಶರಣಾಗಿದ್ದಾರೆ. ಮೂಲತ ನಲ್ಲಹಳ್ಳಿ ಗ್ರಾಮದ ನಿವೇದಿತಾ ಅವರನ್ನು 8 ವರ್ಷಗಳ ಹಿಂದೆ ಕುಪ್ಪಳ್ಳಿ ಗ್ರಾಮದ ಕೃಷ್ಣೇಗೌಡರಿಗೆ ಮದುವೆ ಮಾಡಿಕೊಡಲಾಗಿತ್ತು. ನಿವೇದಿತಾ ಈಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಖಿನ್ನತೆಗೊಳಗಾಗಿದ್ದರು. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಪತಿ ಕೃಷ್ಣೇಗೌಡ ಹೊಲಕ್ಕೆ ರಾಗಿ ಕುಯ್ಯುವ ಕೆಲಸದ ಮೇಲೆ ಹೋಗಿದ್ದಾಗ ಹೆಂಚಿನ ಮನೆಯ ತಮ್ಮ ಕೊಠಡಿಯ ತೀರಿಗೆ ಹಗ್ಗ ಕಟ್ಟಿ ತನ್ನ ಮಕ್ಕಳನ್ನು ನೇತು ಹಾಕಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ತಾಯಿ ಸುಜಾತ ದೂರು ನೀಡಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಮೇಲುಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರುಶುರಾಮ್‌, ಮೇಲುಕೋಟೆ ಎಸ್‌.ಐ ಗಣೇಶ್‌, ಶ್ರೀರಂಗಪಟ್ಟಣ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲಿಸಿದರು.


from India & World News in Kannada | VK Polls https://ift.tt/3fUPiYe

ಚಿಪ್ಸ್‌ ತಯಾರಿಸುವ ನೇಂದ್ರ ಬಾಳೆಗೆ ಇಲ್ಲ ಬೆಲೆ: ಕೊರೊನಾ ಬಳಿಕ ಕಂಗಾಲಾಗಿರುವ ರೈತ, ಲಕ್ಷ ಖರ್ಚು ಮಾಡಿ ಬಾಳೆ ಬೆಳೆದ ಅನ್ನದಾತ ಹೈರಾಣ!

ಚಾಮರಾಜನಗರ: ನೇಂದ್ರ ಬಾಳೆ ಬೆಲೆ ಪಾತಾಳಕ್ಕಿಳಿದಿದ್ದು, ಈ ಬಾಳೆ ಬೆಳೆದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆ.ಜಿ. ನೇಂದ್ರ ಬಾಳೆಯನ್ನು ಆರೇಳು ರೂಪಾಯಿಗೂ ಕೇಳೋರಿಲ್ಲದಂತಾಗಿದೆ. ಹೀಗಾಗಿ ಜಿಲ್ಲೆಯ ಹಲವಾರು ತೋಟಗಳಲ್ಲಿ ಹಣ್ಣಾಗಿದ್ದರೂ ಬಾಳೆಗೊನೆ ಕೊಯ್ಲು ಮಾಡುವ ಗೊಡವೆಗೆ ರೈತರು ಮುಂದಾಗಿಲ್ಲ. ಸಾವಿರಾರು ರೂ. ವೆಚ್ಚ ಮಾಡಿ ಬೆಳೆದ ಬೆಳೆಗೆ ತಕ್ಕ ಬೆಲೆ ಇಲ್ಲದಾಗಿದ್ದು, ಬೆಳೆಗಾರ ತೀವ್ರ ಸಮಸ್ಯೆಗೆ ಸಿಲುಕಿದ್ದಾನೆ. ನೇಂದ್ರ ಬಾಳೆಯನ್ನು ಹೆಚ್ಚಾಗಿ ಚಿಪ್ಸ್‌ ತಯಾರಿಕೆಗೆ ಬಳಸುತ್ತಾರೆ. ದಕ್ಷಿಣ ಕನ್ನಡ ಹಾಗೂ ಕೇರಳದಲ್ಲಿ ಈ ನೇಂದ್ರ ಬಾಳೆಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ, ಕೋವಿಡ್‌ ಕಾರಣ ಕೇರಳದಲ್ಲಿ ಚಿಪ್ಸ್‌ ತಯಾರಿಕೆ ಪ್ರಮಾಣ ತಗ್ಗಿದೆ. ಅಲ್ಲದೇ ಜಿಲ್ಲೆ ಸೇರಿದಂತೆ ಹಲ ಪ್ರದೇಶದಲ್ಲಿ ಈ ಬಾರಿ ನೇಂದ್ರಬಾಳೆ ವಿಸ್ತೀರ್ಣ ಹೆಚ್ಚಾಗಿದೆ. ಹೀಗಾಗಿ ಧಾರಣೆಯೂ ಕುಸಿದಿದೆ ಎನ್ನುತ್ತಾರೆ ಖರೀದಿದಾರರು. ಹಾಗೆ ನೋಡಿದರೆ ನೇಂದ್ರಬಾಳೆ ಬೆಲೆ ಕೋವಿಡ್‌ಗೂ ಮುನ್ನ ಕೆಜಿಗೆ 35ರಿಂದ 40 ರೂ. ಇತ್ತು. ಆದರೀಗ ಆರೇಳು ರೂಪಾಯಿಗೂ ಖರೀದಿ ಮಾಡುವವರಿಲ್ಲ. ಜಿಲ್ಲೆಯ ಅಳತೆಗೆ ಕೇರಳ ರಾಜ್ಯಕ್ಕೆ ಹೆಚ್ಚಾಗಿ ನೇಂದ್ರ ಬಾಳೆ ಪೂರೈಕೆ ಆಗುತ್ತಿತ್ತು. ಈಗಲೂ ಆಗುತ್ತಿದ್ದರೂ ಈ ಹಿಂದಿನಷ್ಟಿಲ್ಲ ಎಂಬುದು ಬಾಳೆ ಮಂಡಿ ಮಾಲೀಕರ ಅಭಿಪ್ರಾಯ. 12 ಸಾವಿರ ಹೆಕ್ಟೇರ್‌ನಲ್ಲಿಬಾಳೆ!ಜಿಲ್ಲೆಯಲ್ಲಿ ಏಲಕ್ಕಿ, ಪಚ್ಚೆಬಾಳೆ ಹಾಗೂ ನೇಂದ್ರ ಬಾಳೆಯನ್ನು ಒಟ್ಟು 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ವಾರ್ಷಿಕವಾಗಿ ಬೆಳೆಯಲಾಗುತ್ತಿದೆ. ಈ ಪೈಕಿ ಇಷ್ಟು ವರ್ಷ ನೇಂದ್ರ ಬಾಳೆ ವಿಸ್ತೀರ್ಣ ಕಡಿಮೆ ಇತ್ತು. ಈ ಬಾರಿ ಬಾಳೆ ಪ್ರದೇಶದಲ್ಲಿ ಹೆಚ್ಚು ಭಾಗವನ್ನು ನೇಂದ್ರ ಆವರಿಸಿಕೊಂಡಿದೆ. ಬೆಳೆ ಹೆಚ್ಚಾದ ಹಿನ್ನೆಲೆಯಲ್ಲಿ ದರವೂ ಕುಸಿತ ಕಂಡಿದೆ. ಬೆಳೆ ವಿಸ್ತೀರ್ಣ ಹೆಚ್ಚಳಕ್ಕೆ ಕಾರಣ ? ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಹಲ ಕೆರೆಗಳು ತುಂಬಿವೆ. ಅದರಲ್ಲೂ ಚಾ.ನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಕೆರೆಗಳಲ್ಲಿ ನೀರು ಭರ್ತಿಯಾಗಿದೆ. ಹೀಗಾಗಿ ಸಹಜವಾಗೇ ಅಂತರ್ಜಲ ವೃದ್ಧಿಯಾಗಿದೆ.ಆ ಕೆರೆ ಪ್ರದೇಶಗಳಲ್ಲಿ ರೈತರು ತೋಟಗಾರಿಕೆ ಬೆಳೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅದರಲ್ಲೂ ಬಾಳೆ ಬೆಳೆಯುವುದು ಹೆಚ್ಚಿದೆ. ಈ ಹಿಂದೆ ಬತ್ತಿದ್ದ ಪಂಪ್‌ಸೆಟ್‌ಗಳಲ್ಲೂಇದೀಗ ನೀರು ಬರುತ್ತಿದ್ದು, ಬಾಳೆಯತ್ತ ರೈತರು ಆಕರ್ಷಿತರಾಗಿದ್ದಾರೆ. ಹೀಗಾಗಿ 12 ಸಾವಿರ ಹೆಕ್ಟೇರ್‌ನಲ್ಲಿದ್ದ ಬಾಳೆ ಇದೀಗ ಒಂದರಿಂದ ಒಂದೂವರೆ ಸಾವಿರ ಹೆಕ್ಟೇರ್‌ ಹೆಚ್ಚಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಅಷ್ಟೆಯಲ್ಲ, ತರಕಾರಿ ಬೆಳೆಯೂ ಇದೇ ಕಾರಣಕ್ಕೆ ಹೆಚ್ಚಿದೆ. ಹೀಗಾಗಿ ಬಹುತೇಕ ತರಕಾರಿಗಳ ಬೆಲೆಯೂ ಕುಸಿತಕ್ಕೆ ಒಳಗಾಗಿದೆ. ತಿಂಗಳ ಹಿಂದೆಯಿದ್ದ ಬೆಲೆ ಇದೀಗ ತರಕಾರಿಗಳಿಗೆ ಇಲ್ಲದಂತಾಗಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ಬಾಳೆಯಿಂದಲೇ ತಯಾರಾಗುವ ಚಿಫ್ಸ್‌ಗೆ ಬೆಲೆ ಕಡಿಮೆಯಾಗಿಲ್ಲ. ಬೇಡಿಕೆಯೂ ಕುಸಿದಿಲ್ಲ. ಆದರೆ, ಅದೇ ಚಿಪ್ಸ್‌ ಮಾಡುವ ನೇಂದ್ರ ಬಾಳೆಗೆ ಮಾತ್ರ ಬೆಲೆಯೇ ಇಲ್ಲದಂತಾಗಿದೆ. ಇಂಥ ವ್ಯವಸ್ಥೆಯಲ್ಲಿರೈತರು ಲಾಭಗಳಿಸುವುದಾದರೂ ಹೇಗೆ?-ಗುರುಸ್ವಾಮಿ, ರೈತನೇಂದ್ರ ಬಾಳೆ ಇದೀಗ ಹೆಚ್ಚಿನ ವಿಸ್ತೀರ್ಣದಲ್ಲಿದ್ದು, ಮಂಡಿಗೆ ಹೆಚ್ಚಿನ ಪ್ರಮಾಣದಲ್ಲಿಬರುತ್ತಿದೆ. ಇದರೊಂದಿಗೆ ಕೇರಳದಲ್ಲಿಬೇಡಿಕೆ ಕುಸಿದಿದೆ. ಇದು ಬೆಲೆ ಮೇಲೆ ಪರಿಣಾಮ ಬೀರಿದೆ. ಮಾರುಕಟ್ಟೆ ವಿಸ್ತರಣೆಯಾಗದೇ ಬೆಲೆ ಸಿಗುವುದು ಸದ್ಯಕ್ಕೆ ಕಷ್ಟ.-ಸೋಮಣ್ಣ, ಬಾಳೆ ವ್ಯಾಪಾರಿ


from India & World News in Kannada | VK Polls https://ift.tt/3mqWqxY

ಕಲಬುರಗಿಯಲ್ಲಿ ಎಚ್‌ಐವಿ ಸೋಂಕು ಸಾಮಾನ್ಯರಲ್ಲಿಇಳಿಕೆ, ಗರ್ಭಿಣಿಯರಲ್ಲಿ ಏರಿಕೆ..!

ಕಲಬುರಗಿ: ಜಿಲ್ಲೆಯಲ್ಲಿ ಎಚ್‌ಐವಿ ಹರಡುವಿಕೆ ಗಣನೀಯವಾಗಿ ಇಳಿಕೆ ಕಂಡು ಬಂದಿದ್ದು, ವರ್ಷದಿಂದ ವರ್ಷಕ್ಕೆ ಸೋಂಕು ಇಳಿಕೆಯಾಗುತ್ತಿರುವುದು ಸಮಾಧಾನಕರ ವಿಷಯ. ಆದ್ರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಗರ್ಭಿಣಿಯರಲ್ಲಿ ಅಲ್ಪ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.ಎಚ್‌ಐವಿ ಸೋಂಕು ತಡೆಗೆ ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಏಡ್ಸ್‌ ಪೀಡಿತರ ಸಂಖ್ಯೆ ಇಳಿಮುಖದತ್ತ ಸಾಗಿದೆ ಎಂಬುದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳಿಂದ ಸಾಬೀತಾಗಿದೆ. ಪ್ರಮುಖವಾಗಿ ಗರ್ಭಿಣಿಯರಲ್ಲಿ ಎಚ್‌.ಐ.ವಿ ಸೋಂಕು ಶೇ.0.01ಕ್ಕೆ ಇಳಿದಿರುವುದನ್ನು 2019-20ರ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರಿಕ್ಷಾ ಕೇಂದ್ರಗಳಲ್ಲಿನ (ಐಸಿಟಿಸಿ) ಅಂಕಿ ಅಂಶಗಳಿಂದ ರುಜುವಾತಾಗಿದೆ.

2020-21ರಲ್ಲಿ ಅಕ್ಟೋಬರ್‌ ಅಂತ್ಯದವರೆಗೆ ಕೇವಲ 34,650 ಜನರನ್ನು ಟೆಸ್ಟ್‌ ಮಾಡಿದ್ದು ಇದರಲ್ಲಿ 17 ಜನರಿಗೆ ಸೋಂಕು ತಗುಲಿದ್ದು, ವರ್ಷಾಂತ್ಯದವರಿಗೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಂಭವವಿದೆ.


ಕಲಬುರಗಿಯಲ್ಲಿ ಎಚ್‌ಐವಿ ಸೋಂಕು ಸಾಮಾನ್ಯರಲ್ಲಿಇಳಿಕೆ, ಗರ್ಭಿಣಿಯರಲ್ಲಿ ಏರಿಕೆ..!

ಕಲಬುರಗಿ:

ಜಿಲ್ಲೆಯಲ್ಲಿ ಎಚ್‌ಐವಿ ಹರಡುವಿಕೆ ಗಣನೀಯವಾಗಿ ಇಳಿಕೆ ಕಂಡು ಬಂದಿದ್ದು, ವರ್ಷದಿಂದ ವರ್ಷಕ್ಕೆ ಸೋಂಕು ಇಳಿಕೆಯಾಗುತ್ತಿರುವುದು ಸಮಾಧಾನಕರ ವಿಷಯ. ಆದ್ರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಗರ್ಭಿಣಿಯರಲ್ಲಿ ಅಲ್ಪ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಎಚ್‌ಐವಿ ಸೋಂಕು ತಡೆಗೆ ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಏಡ್ಸ್‌ ಪೀಡಿತರ ಸಂಖ್ಯೆ ಇಳಿಮುಖದತ್ತ ಸಾಗಿದೆ ಎಂಬುದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳಿಂದ ಸಾಬೀತಾಗಿದೆ. ಪ್ರಮುಖವಾಗಿ ಗರ್ಭಿಣಿಯರಲ್ಲಿ ಎಚ್‌.ಐ.ವಿ ಸೋಂಕು ಶೇ.0.01ಕ್ಕೆ ಇಳಿದಿರುವುದನ್ನು 2019-20ರ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರಿಕ್ಷಾ ಕೇಂದ್ರಗಳಲ್ಲಿನ (ಐಸಿಟಿಸಿ) ಅಂಕಿ ಅಂಶಗಳಿಂದ ರುಜುವಾತಾಗಿದೆ.



​ಗರ್ಭಿಣಿಯರಲ್ಲಿ ಅಲ್ಪ ಏರಿಕೆ
​ಗರ್ಭಿಣಿಯರಲ್ಲಿ ಅಲ್ಪ ಏರಿಕೆ

ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಗರ್ಭಿಣಿಯರಲ್ಲಿ ಸೋಂಕು ಅಲ್ಪ ಏರಿಕೆಯಾಗಿದೆ. 2019-20ರಲ್ಲಿ 88932 ಜನರಿಗೆ ಟೆಸ್ಟ್‌ ಮಾಡಿದರೆ 16 ಜನರಿಗೆ ಸೋಂಕು ತಗುಲಿತ್ತು. ಆದರೆ, 2020-21ರಲ್ಲಿ ಅಕ್ಟೋಬರ್‌ ಅಂತ್ಯದವರೆಗೆ ಕೇವಲ 34650 ಜನರನ್ನು ಟೆಸ್ಟ್‌ ಮಾಡಿದ್ದು ಇದರಲ್ಲಿ 17 ಜನರಿಗೆ ಸೋಂಕು ತಗುಲಿದ್ದು, ವರ್ಷಾಂತ್ಯದವರಿಗೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಂಭವವೂ ಇರುವುದಕ್ಕೆ ಆತಂಕಕ್ಕೆ ಕಾರಣವಾಗಿದೆ.



​ಸೋಂಕು ಇಳಿಕೆಗೆ ಕಾರ್ಯಕ್ರಮಗಳು
​ಸೋಂಕು ಇಳಿಕೆಗೆ ಕಾರ್ಯಕ್ರಮಗಳು

ಜಿಲ್ಲೆಯಲ್ಲಿ 25 ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಎಚ್‌ಐವಿ ಪರೀಕ್ಷೆ ಮತ್ತು ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ. 115 ಎಫ್‌ಐಸಿಟಿಸಿ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ಎಚ್‌ಐವಿ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಮೂರು ಎಆರ್‌ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 18 ಲಿಂಕ್‌ ಎಆರ್‌ಟಿ ಕೇಂದ್ರಗಳು, 8 ರಕ್ತನಿಧಿ ಕೇಂದ್ರ, 1 ಸುರಕ್ಷಾ ಕ್ಲಿನಿಕ್‌ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.



ಐದು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ
ಐದು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ

ಜಿಲ್ಲೆಯಲ್ಲಿ ಏಡ್ಸ್‌ ನಿಯಂತ್ರಣಕ್ಕೆ, ಸರಕಾರದ ಸೌಲಭ್ಯ, ಆಪ್ತ ಸಮಾಲೋಚನೆಗೆ ಐದು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆ, ಸ್ನೇಹಾ ಸೊಸೈಟಿ, ದಿವ್ಯ ಜೀವನ ಪಾಸಿಟಿವ್‌ ನೆಟ್‌ವರ್ಕ್, ಸಾಥಿ ಹಾಗೂ ಸ್ವಾಮಿ ವಿವೇಕಾನಂದ ಯೂತ್‌ ಮೂಮೆಂಟ್‌ ಕಾರ್ಯನಿರ್ವಹಿಸುತ್ತಿವೆ.



ಏಡ್ಸ್‌ ಬಗ್ಗೆ ಅರಿವು
ಏಡ್ಸ್‌ ಬಗ್ಗೆ ಅರಿವು

ಕಾಲೇಜು ರೆಡ್‌ ರಿಬ್ಬನ್‌ ಕ್ಲಬ್‌ನಿಂದ ಜಿಲ್ಲೆಯಲ್ಲಿ ಒಟ್ಟು 68 ಕಾಲೇಜುಗಳಲ್ಲಿ ಆರ್‌ಆರ್‌ಸಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಶಾಲೆಯಲ್ಲಿ ಎಇಪಿ (ಆಡೊಲೆಸೆಂಟ್‌ ಎಜುಕೇಷನ್‌ ಪ್ರೋಗ್ರಾಮ್‌) ಯಿಂದ ಜಿಲ್ಲೆಯಲ್ಲಿ ಪ್ರತಿ ವರ್ಷ 250 ಶಾಲೆಗಳಲ್ಲಿ 50 ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನುರಿತ ತರಬೇತಿ, ಆಪ್ತ ಸಮಾಲೋಚಕರಿಂದ ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಆಶಾ ಕಾರ್ಯಕರ್ತೆಯರಿಗೆ ಎಚ್‌ಐವಿ ನಿಯಂತ್ರಣ ತರಬೇತಿ ನೀಡಿ ಇವರಿಂದ ಜಿಲ್ಲಾದ್ಯಂತ ಪ್ರತಿ ಮನೆಗಳಿಗೆ ಭೇಟಿ ನೀಡಿ ಎಚ್‌ಐವಿ ತಡೆಯ ಮಾಹಿತಿ ನೀಡಲಾಗಿದೆ.



ಕಲಬುರಗಿಯಲ್ಲಿ 4880 ಪೀಡಿತರು
ಕಲಬುರಗಿಯಲ್ಲಿ 4880 ಪೀಡಿತರು

ಜಿಲ್ಲೆಯಲ್ಲಿ ಒಟ್ಟು 4880 ಎಚ್‌ಐವಿ ಸೋಂಕಿತರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಬುರಗಿಯಲ್ಲಿ 1916, ಜೇವರ್ಗಿಯಲ್ಲಿ 734, ಆಳಂದದಲ್ಲಿ 526, ಅಫಜಲಪುರದಲ್ಲಿ 372, ಚಿತ್ತಾಪುರದಲ್ಲಿ 635, ಚಿಂಚೋಳಿಯಲ್ಲಿ 385, ಸೇಡಂನಲ್ಲಿ 312 ಸೋಂಕಿತರಿದ್ದಾರೆ.





from India & World News in Kannada | VK Polls https://ift.tt/37mbxCC

ಡೇವಿಡ್‌ ವಾರ್ನರ್‌ ಸ್ಥಾನ ತುಂಬುವ ಮೂವರು ಆಟಗಾರರನ್ನು ಹೆಸರಿಸಿದ ಫಿಂಚ್‌!

ಸಿಡ್ನಿ: ಆರಂಭಿಕ ಅವರಂತಹ ಯಾವುದೇ ಸ್ಟಾರ್‌ ಬ್ಯಾಟ್ಸ್‌ಮನ್‌ ಕಳೆದುಕೊಂಡರೆ ಯಾವುದೇ ತಂಡಕ್ಕಾದರೂ ಹಿನ್ನಡೆಯಾಗುತ್ತದೆ, ಆದರೆ ಅವರ ಸ್ಥಾನವನ್ನು ತುಂಬಲು ತಂಡದಲ್ಲಿ ಹಲವು ಆಯ್ಕೆಗಳಿವೆ ಎಂದು ಆಸೀಸ್‌ ನಾಯಕ ಹೇಳಿದ್ದಾರೆ. ಭಾರತ ವಿರುದ್ಧ ಭಾನುವಾರದ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುವ ವೇಳೆ ನೆಲಕ್ಕೆ ಉರುಳಿದ ಡೇವಿಡ್‌ ವಾರ್ನರ್‌ ತೊಡೆ ಸಂದು ಗಾಯಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮೂರನೇ ಏಕದಿನ ಪಂದ್ಯ ಹಾಗೂ ಟಿ20 ಸರಣಿಯಿಂದ ಹೊರ ಬಿದ್ದಿದ್ದಾರೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಅಲೆಕ್ಸ್ ಕೇರಿ, ಮಾರ್ನಸ್‌ ಲಾಬುಶೇನ್‌ ಹಾಗೂ ಮ್ಯಾಥ್ಯೂ ವೇಡ್‌ ಇವರಲ್ಲಿ ಒಬ್ಬರು ತಮ್ಮ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಫಿಂಚ್‌ ತಿಳಿಸಿದ್ದಾರೆ. "ನಾವು ಒಂದು ಸ್ಥಾನಕ್ಕಾಗಿ ಯಾರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ. ತಂಡದಲ್ಲಿಯೇ ಡೇವಿಡ್‌ ವಾರ್ನರ್‌ ಸ್ಥಾನದಲ್ಲಿ ಆಡುವವರ ಹಲವು ಆಯ್ಕೆಗಳಿವೆ. ಮ್ಯಾಥ್ಯೂ ವೇಡ್‌, ಮಾರ್ನಸ್‌ ಲಾಬುಶೇನ್‌ ಹಾಗೂ ಅಲೆಕ್ಸ್ ಕೇರಿ ತಂಡದಲ್ಲಿದ್ದಾರೆ. ಇದರಲ್ಲಿ ಅಂತಿಮವಾಗಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ," ಎಂದು ಕ್ರಿಕೆಟ್‌.ಕಾಮ್‌.ಟಯುಗೆ ಫಿಂಚ್‌ ಹೇಳಿದ್ದಾರೆ. "ಕಳೆದ ಎರಡು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮವಾಗಿ ಆಡಿದ್ದಾರೆ. ಓಡಿಐ ಸರಣಿಯಲ್ಲಿಯೇ ಇದು ಅದ್ಭುತವಾದ ಅಂಶವಾಗಿದೆ. ಈಗಾಗಲೇ ಓಡಿಐ ಸರಣಿಯನ್ನು ವಶಪಡಿಸಿಕೊಂಡು ಸುರಕ್ಷಿತವಾಗಿರುವ ನಾವು, ಮೂರನೇ ಅಥವಾ ಅಂತಿಮ ಏಕದಿನ ಪಂದ್ಯದಲ್ಲಿ ಸುಗಮವಾಗಿ ಪ್ರಯೋಗವನ್ನು ನಡೆಸಬಹುದಾಗಿದೆ," ಎಂದರು. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಬಂದಾಗ ಡೇವಿಡ್‌ ವಾರ್ನರ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌. ಹಾಗಾಗಿ, ಅವರು ತಂಡದ ಅಂತಿಮ 11ಕ್ಕೆ ತುಂಬಾ ಅಗತ್ಯವಿದೆ. "ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಡೇವಿಡ್‌ ವಾರ್ನರ್‌ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದರೆ ತಪ್ಪಾಗಲಾರದು. ಹಾಗಾಗಿ ಅವರಿಗಿಂತ ಉತ್ತಮ ಆಟಗಾರರು ಆಡಿದ್ದಾರೆ ಎಂಬ ಬಗ್ಗೆ ನಾನು ಯೋಚಿಸುವುದಿಲ್ಲ. ವಾರ್ನರ್‌ ಅವರಂಥ ಆಟಗಾರರು ಅಂತಿಮ 11 ರಿಂದ ಹೊರಗುಳಿದರೆ ಯಾವುದೇ ತಂಡ ದೌರ್ಬಲ್ಯವಾಗಿ ಕಾಣುತ್ತದೆ. ಆದರೆ, ಅವರ ಸ್ಥಾನದಲ್ಲಿ ಆಡುವ ಹಲವು ಆಟಗಾರರು ನಮ್ಮಲ್ಲಿ ಇದ್ದಾರೆ," ಎಂದು ಫಿಂಚ್‌ ತಿಳಿಸಿದರು. ಭಾನುವಾರ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 51 ರನ್‌ಗಳಿಂದ ಭಾರತದ ವಿರುದ್ಧ ಗೆಲುವು ಸಾಧಿಸಿತ್ತು ಹಾಗೂ 2-0 ಅಂತರದಲ್ಲಿ ಏಕದಿನ ಸರಣಿಯನ್ನು ವಶ ಪಡಿಸಿಕೊಂಡಿತ್ತು. ಟಿ20 ಸರಣಿಗೆ ವಾರ್ನರ್‌ ಸ್ಥಾನಕ್ಕೆ ಡಿ'ಆರ್ಸಿ ಶಾರ್ಟ್‌ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಬಿಗ್‌ಬ್ಯಾಷ್‌ ಲೀಗ್‌ನ ಕಳೆದ ಎರಡು ಆವೃತ್ತಿಗಳಿಂದ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆಗಿದ್ದಾರೆ. ಹಿರಿಯ ವೇಗಿ ಪ್ಯಾಟ್‌ ಕಮಿನ್ಸ್‌ಗೂ ಅಂತಿಮ ಏಕದಿನ ಪಂದ್ಯ ಹಾಗೂ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆ ಮೂಲಕ ಅವರು ಟೆಸ್ಟ್‌ ಸರಣಿಗೆ ಇಂದಿನಿಂದಲೇ ತಯಾರಿಯನ್ನು ನಡೆಸಲಿದ್ದಾರೆ. ಡಿ.17 ರಿಂದ ಅಡಿಲೇಡ್‌ ಓವಲ್‌ನಲ್ಲಿ ಮೊದಲನೇ ಟೆಸ್ಟ್ ಪಂದ್ಯ ಶುರುವಾಗಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mqR4Tq

ಮಂಡ್ಯ ಜಿಲ್ಲೆಯಲ್ಲಿ ಭತ್ತ ಖರೀದಿಗೆ ಆನ್ ಲೈನ್ ನೋಂದಣಿ ಆರಂಭ!

ಮಂಡ್ಯ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸಂಬಂಧ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಸೋಮವಾರ ಆರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ತಿಳಿಸಿದರು. ಜಿಲ್ಲೆಯಲ್ಲಿ ಈ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಭತ್ತದ ಇಳುವರಿಯೂ ಚೆನ್ನಾಗಿ ಬಂದಿದೆ. ಸರಕಾರ ಕೂಡ ಬೆಂಬಲ ಬೆಲೆ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭತ್ತ ಖರೀದಿ ಸಂಬಂಧ ರೈತರು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಸಲು 30 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು. ಕಳಪೆ ಬೆಲ್ಲ ತಯಾರಿಕೆ ವಿರುದ್ಧ ಕ್ರಮ ಜಿಲ್ಲೆಯಲ್ಲಿ ಕಳಪೆ ಸಕ್ಕರೆ ಬಳಸಿ ಬೆಲ್ಲ ತಯಾರಿಕೆ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಕಳಪೆ ಸಕ್ಕರೆ ಬಳಸಿ ಬೆಲ್ಲ ತಯಾರಿಸುವವರನ್ನು ಪತ್ತೆ ಹಚ್ಚಲಾಗುವುದು. ಬೆಲ್ಲ ತಯಾರಿಕೆಯಲ್ಲಿ ಅಪಾಯಕಾರಿ ರಾಸಾಯನಿಕ ಬಳಸುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಸದ್ಯಕ್ಕೆ ಕೊರೊನಾ ಸೋಂಕು ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಸಮುದಾಯದಲ್ಲಿ ಕೋವಿಡ್‌ ಪ್ರಮಾಣ ಕಡಿಮೆಯಾಗಿದೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬರುತ್ತಿರುವವರಲ್ಲಿ ಶೇ.50ರಷ್ಟು ಮಾತ್ರ ಸೋಂಕು ಕಂಡು ಬರುತ್ತಿದೆ. ಕಳೆದ 15 ದಿನಗಳಿಂದ ಯಾವುದೇ ಸಾವು ಕೂಡ ಕಂಡುಬಂದಿಲ್ಲ. ಸೋಮವಾರ ಕೇವಲ 32 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 61 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 284 ಸಕ್ರಿಯ ಪ್ರಕರಣಗಳಷ್ಟೇ ಇವೆ ಎಂದು ತಿಳಿಸಿದರು. ಕೊರೊನಾ 2ನೇ ಅಲೆ ಬರುವ ಮುಂಚೆಯೇ ಸೋಂಕನ್ನು ಸಮರ್ಥವಾಗಿ ಎದುರಿಸಲು ಮೂಲಸೌಕರ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೂ ಜನರು ಎಚ್ಚರಿಕೆಯಿಂದ ಇರಬೇಕು. ಕೆಮ್ಮು, ನೆಗಡಿ, ಜ್ವರ, ಮೈಕೈ ನೋವು ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಿಬೇಕು. ಆಗಾಗ್ಗೆ ಸ್ಯಾನಿಟೈಸರ್‌ ಬಳಸಬೇಕು. ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು.


from India & World News in Kannada | VK Polls https://ift.tt/39uSaKj

ಲಾಕ್‌ ಡೌನ್‌ ಬಳಿಕ ಸೈಕಲ್‌ಗೂ ಬಂತು ಶುಕ್ರದೆಸೆ: ಮಾರಾಟ ಹೆಚ್ಚಳ, ಪೂರೈಕೆಯೇ ಇಲ್ಲ..!

ಆತೀಶ್‌ ಬಿ.ಕನ್ನಾಳೆ ಶಿವಮೊಗ್ಗ: ಮಾರುಕಟ್ಟೆಗೆ ವಿಭಿನ್ನ ವಿನ್ಯಾಸದ ಬೈಕ್‌ಗಳು ಲಗ್ಗೆ ಇಡುತ್ತಿದ್ದಂತೇ ಬಹುತೇಕರು ಅವುಗಳಿಗೆ ಮಾರುಹೋಗಿದ್ದರು. ಹೀಗಾಗಿ, ಸೈಕಲ್‌ಗಳಿಗೆ ಹೇಳಿಕೊಳ್ಳಬಹುದಾದ ಬೇಡಿಕೆ ಇರಲಿಲ್ಲ. ಆದರೆ, ಕೋವಿಡ್‌ ಜನರ ಈ ಮನಸ್ಥಿತಿ ಬದಲಿಸಿದೆ! ಲಾಕ್‌ ಡೌನ್‌ ನಂತರ ಕಳೆದ ಏಪ್ರಿಲ್‌ನಿಂದ ಸೈಕಲ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಜನರಲ್ಲಿ ಸೈಕಲ್‌ ಕ್ರೇಜ್‌ ಹೆಚ್ಚಾಗಿದೆ. ಆದರೆ, ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗೆ ಪೂರೈಕೆ ಇಲ್ಲದ್ದರಿಂದ ಬೇಕಾದ ಸೈಕಲ್‌ಗಳೇ ಸಿಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಕಳೆದ ಎಂಟು ತಿಂಗಳಲ್ಲಿ ಶೇ.35-40ರಷ್ಟು ಬೇಡಿಕೆ ಹೆಚ್ಚಾಗಿದೆ. ಬಹುತೇಕ ಸೈಕಲ್‌ಗಳು ಲೂಧಿಯಾನ ಮತ್ತು ದಿಲ್ಲಿಯಿಂದ ಪೂರೈಕೆ ಆಗುತ್ತಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೊಸ ಸೈಕಲ್‌ಗಳ ಉತ್ಪಾದನೆ ಸಾಧ್ಯವಾಗಿಲ್ಲ. ಹೀಗಾಗಿ, ದಾಸ್ತಾನು ಮಾಡಲಾದ ಹಳೆಯ ಸೈಕಲ್‌ಗಳನ್ನೇ ಮಾಡಲಾಗುತ್ತಿದೆ. ಅವೂ ಸಹ ಖಾಲಿಯಾಗುವ ಹಂತದಲ್ಲಿದೆ. ಹೊಸ ಸೈಕಲ್‌ಗಳನ್ನು ಪೂರೈಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ, ಕೋವಿಡ್‌ನಿಂದಾಗಿ ಉತ್ಪಾದನಾ ಘಟಕಗಳಲ್ಲೂ ಮಾನವ ಸಂಪನ್ಮೂಲದ ಕೊರತೆ ಎದುರಾಗಿದ್ದು, ಅಗತ್ಯವಿರುವ ಸೈಕಲ್‌ಗಳು ಸಿಗುವುದೇ ಕಷ್ಟ ಸಾಧ್ಯವಾಗಿದೆ. ಸೈಕಲ್‌ ಸಿದ್ಧಗೊಂಡು ಮಾರಾಟಗಾರರ ಕೈಸೇರಲು ಕನಿಷ್ಠವೆಂದರೂ ಏಳೆಂಟು ತಿಂಗಳು ಬೇಕಾಗುವ ಸಾಧ್ಯತೆ ಇದೆ. ಬೇಡಿಕೆಗೆ ಅನುಗುಣವಾಗಿ ಇಲ್ಲದ್ದರಿಂದ ಸೈಕಲ್‌ ಬೆಲೆಯಲ್ಲಿ ಶೇ.4-5ರಷ್ಟು ಏರಿಕೆ ಕಂಡಿದೆ. 'ನಿತ್ಯ ಅಂಗಡಿಗೆ 10-15 ಜನ ಸೈಕಲ್‌ ಕೇಳಿಕೊಂಡು ಬರುತ್ತಿದ್ದು, ಅದರಲ್ಲಿ ಸರಾಸರಿ 10 ಜನ ಖರೀದಿಸುತ್ತಿದ್ದಾರೆ. ಮಾಸಿಕ ಸರಾಸರಿ 300ಕ್ಕೂ ಹೆಚ್ಚು ಸೈಕಲ್‌ ಮಾರಾಟವಾಗುತ್ತಿವೆ. ಈ ಹಿಂದೆ ಅಕ್ಟೋಬರ್‌, ನವೆಂಬರ್‌ ಹಬ್ಬದ ಸಂದರ್ಭದಲ್ಲಿ ಸೈಕಲ್‌ ಖರೀದಿ ಮಾಡಲಾಗುತ್ತಿತ್ತು. ಆದರೆ, ಆಫ್‌ ಸೀಸನ್‌ನಲ್ಲಿ ದಿನಕ್ಕೆ 2-3 ಸೈಕಲ್‌ ಖರೀದಿಸಿದರೂ ಹೆಚ್ಚಿತ್ತು. ಈ ಸಲ ಮೇ ತಿಂಗಳಿಂದ ಇಲ್ಲಿವರೆಗೆ ಖರೀದಿ ನಿರಂತರವಾಗಿ ನಡೆಯುತ್ತಿದೆ. ಬೇಡಿಕೆಯಲ್ಲಿ ಶೇ.40ರಷ್ಟು ಏರಿಕೆಯಾಗಿದೆ' ಎನ್ನುತ್ತಾರೆ ಶಿವಮೊಗ್ಗದ ಶಂಕರ್ಸ್ ಸೈಕಲೋತ್ಸವದ ಮಾಲೀಕರು. ಗ್ರಾಮೀಣರಿಂದಲೂ ಡಿಮ್ಯಾಂಡ್‌ ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕು ಸೇರಿ ಚನ್ನಗಿರಿ, ಹೊನ್ನಾಳಿ, ತರೀಕೆರೆ ತಾಲೂಕುಗಳಿಂದಲೂ ಜನ ಒಟ್ಟಾಗಿ ಬಂದು ಮೂರ್ನಾಲ್ಕು ಸೈಕಲ್‌ಗಳನ್ನು ಏಕಕಾಲಕ್ಕೆ ಖರೀಸುತ್ತಿದ್ದಾರೆ. ಶಾಲೆಗಳು ಇನ್ನೂ ಆರಂಭ ಆಗದ ಕಾರಣ ಮಕ್ಕಳ ಸೈಕಲ್‌ಗಳಿಗೂ ನಿರಂತರ ಬೇಡಿಕೆ ಸೃಷ್ಟಿಯಾಗಿದೆ. ಇವುಗಳ ಪೂರೈಕೆಯಲ್ಲೂ ಸ್ವಲ್ಪ ಪ್ರಮಾಣದ ಕೊರತೆ ಇದೆ. 9 ಸಾವಿರದಿಂದ ಆರಂಭ ಬಹುತೇಕ ಗ್ರಾಹಕರು ಗೇಯರ್‌ ಸೈಕಲ್‌ಗಳನ್ನೇ ಕೇಳುತ್ತಿದ್ದಾರೆ. ಅದರ ಬೆಲೆ 9 ಸಾವಿರ ರೂ.ದಿಂದ 30 ಸಾವಿರ ರೂ.ವರೆಗೆ ಇದೆ. ದುಡ್ಡು ಕೊಟ್ಟು ಖರೀದಿಸಲು ಸಿದ್ಧರಿದ್ದರೂ ಅವರಿಗೆ ಬೇಕಾದ ಬಣ್ಣ, ವಿನ್ಯಾಸದ ಸೈಕಲ್‌ ಸಿಗುವುದು ಕಷ್ಟವಾಗಿದೆ.


from India & World News in Kannada | VK Polls https://ift.tt/3g0NXPK

ಮಾವು ಬೆಳೆಗೆ ಬೂದಿ ರೋಗದ ಭೀತಿ: ಹವಾಮಾನ ವೈಪರೀತ್ಯದಿಂದ ಬೆಳೆಗೆ ಕಂಟಕ!

ರವಿಕಿರಣ್‌ ವಿ.ರಾಮನಗರ ರಾಮನಗರ: ರಾಮನಗರ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದು. ರಾಜ್ಯದ ಮಾರುಕಟ್ಟೆಗೆ ಮೊದಲು ಪ್ರವೇಶಿಸುವುದು ಕೂಡ ಜಿಲ್ಲೆಯ ಮಾವು ಎಂಬುದು ವಿಶೇಷ. ಆದರೆ ಈಗ ಮಾವು ಬೆಳೆಗೆ ಭೀತಿ ಕಾಣಿಸಿಕೊಂಡಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಅತೀ ಹೆಚ್ಚು ಮಾವುಬೆಳೆ ಬೆಳೆದರೂ, ಹಣ್ಣಿನ ಸಿಹಿಯನ್ನು ರಾಜ್ಯದ ಜನರಿಗೆ ಮೊದಲು ಉಣಿಸುವುದು ಜಿಲ್ಲೆಯ ಕೃಷಿಕ ಎಂಬುದು ಗಮನಾರ್ಹ. ಜಿಲ್ಲೆಯ ಮಾವು ಮೊದಲು ಮಾರುಕಟ್ಟೆಗೆ ಪ್ರವೇಶಿಸುವುದರಿಂದ ಸಹಜವಾಗಿಯೇ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಇದರ ಲಾಭ ಪಡೆಯಬೇಕಾದರೆ, ಕೈತಪ್ಪಿ ಹೋಗದಂತೆ ಕೃಷಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹೂವು ಚಿಗುರುವ ಸಮಯಸದ್ಯ ಮಾವಿನ ಮರಗಳು ಹೂ ಬಿಡುವ ಹಂತದಲ್ಲಿದೆ. ಅರಳಿದ ಹೂ ತೆನೆ ಮತ್ತು ಕಚ್ಚಿದ ಎಳೆಯ ಕಾಯಿಗಳ(ಹರಳು) ಮಾರಕ ಕೀಟ ಮತ್ತು ರೋಗಗಳಿಂದ ರಕ್ಷಿಸುವುದು ಅತ್ಯಗತ್ಯವಾಗಿದೆ. ಈ ಹಂತದಲ್ಲಿ ಮಾವಿಗೆ ಜಿಗಿಹುಳು, ಹೂ ತೆನೆ ಬುಡ ಕೊರಕ ಮತ್ತು ರೋಗಗಳಾದ ಹೂತೆನೆ, ಒಣಗುವ ಅಥವಾ ಕಪ್ಪಾಗುವ ರೋಗ, ಬಿಚ್ಚುರೋಗ, ಬೂದಿ ರೋಗ, ಕಾಡಿಗೆ ರೋಗದ ಶೇಷ ಹಾಗೂ ಇತರೆ ರಸ ಹೀರುವ ಕೀಟಗಳು ಸಹ ಹಾನಿ ಉಂಟು ಮಾಡುತ್ತದೆ. ಈ ಎಲ್ಲಾ ರೋಗಗಳನ್ನು ಮತ್ತು ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಕಾಯಿ ಬೆಳೆಯುತ್ತಿದೆ ಜಿಲ್ಲೆಯ ಕನಕಪುರ ಹಾಗೂ ರಾಮನಗರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇ ಹೂ ಕಚ್ಚಿ, ಕಾಯಿ ಬೆಳೆಯುವ ಹಂತದಲ್ಲಿದೆ. ಹಾಗಾಗಿ ಸಂರಕ್ಷಣೆ ಅತ್ಯಗತ್ಯವಾಗಿದೆ. ಸಿಂಪಡಿಸಬೇಕಾದ ಔಷಧಗಳು ಹೂ ಬಿಡುವ ನಿಕಟ ಪೂರ್ವ ಮತ್ತು ಹೂತೆನೆ ಹೊರ ಹೊಮ್ಮುವ ಹಂತದಲ್ಲಿ ಲ್ಯಾಮ್ಡಾ ಸೈಹ್ಯಾಲೋತ್ರಿನ್‌ ಜತೆಗೆ ನೀರಿನಲ್ಲಿ ಕರಗುವ ಗಂಧಕ ಸೇರಿಸಿ ಔಷಧ ಸಿಂಪಡಣೆ ಮಾಡಬೇಕಾಗುತ್ತದೆ. ಇದರಿಂದ ಕೀಟ ರೋಗಗಳ ನಿಯಂತ್ರಣದ ಜತೆಗೆ, ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಹೊತೆನೆ ಹಂತ ಈ ಹಂತದಲ್ಲಿ ಹೂ ತೆನೆ ಉದ್ದವಾಗುವ ಹಾಗೂ ಹೂ ಅರಳುವ ಹಂತವಾಗಿರುವ ಕಾರಣ, ಇಮಿಡಾಕ್ಲೋಪ್ರಿಡ್‌ ಮತ್ತು ಹೆಕ್ಸಕೊನಜೋಲ್‌ ನಿಯಮಿತ ಪ್ರಮಾಣದಲ್ಲಿ ಸೇರಿಸಿ ಔಷಧಿ ಸಿಂಪಡಿಸಬೇಕಾಗುತ್ತದೆ. ಇದರಿಂದ ಹೂ ತೆನೆ ಒಣಗುವ ರೋಗ, ಬೂದಿ ರೋಗ ಮತ್ತು ಎಲ್ಲಾ ರಸ ಹೀರುವ ಕೀಟಗಳು ನಿಯಂತ್ರಿಸಲ್ಪಡುತ್ತದೆ. ಹೂ ಅರಳಿದ ಹಂತ ಇನ್ನು ಹೂ ಸಂಪೂರ್ಣವಾಗಿ ಅರಳಿದ ನಂತರ ಮತ್ತು ಪರಾಗ ಸ್ಪರ್ಶ ಹಂತ ಕಾಯಿ ಕಚ್ಚುವ ಹಂತದಲ್ಲಿ ಡೈನೊಕಾಪ್‌, ಮ್ಯಾಂಕೋಜೆಬ್‌, ಪ್ಲಾನೋಪಿಕ್ಸ್‌ ಸೇರಿಸಿ ಔಷಧ ಸಿಂಪಡಿಸಬೇಕಾಗುತ್ತದೆ. (ಆದರೆ, ಹೂ ಹಂತದಲ್ಲಿಯಾವುದೇ ಕೀಟನಾಶಕಗಳನ್ನು ಉಪಯೋಗಿಸಬಾರದು). ಇದರಿಂದ ಕೀಟ ರೋಗಗಳ ನಿಯಂತ್ರಣವಾಗುತ್ತದೆ. ಮ್ಯಾಂಗೊ ಸ್ಪೇಷಲ್‌ ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಅವುಗಳಿಗೆ ಮಾವು ಸ್ಟೆಷಲ್‌ ಅನ್ನು ಪ್ರತಿ 10 ಲೀಟರ್‌ ನೀರಿನಲ್ಲಿ 50 ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸುವುದು. ಈ ಸಿಂಪಡಣಾ ದ್ರಾವಣಕ್ಕೆ ಸೋಪು ದ್ರಾವಣವನ್ನು 0.5 ಮಿ.ಲೀ/ಲೀ ಮತ್ತು ಅರ್ಧ ಹೋಳು ನಿಂಬೆ ರಸ ಬೆರಸಿ ಸಿಂಪಡಿಸಿದರೆ, ಅದು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುತ್ತದೆ. ಲಾಭ ಪಡೆದುಕೊಳ್ಳಿ ಜಿಲ್ಲೆಯ ಮಾವು ಮೊದಲ ಬಾರಿಗೆ ರಾಜ್ಯದ ಮಾರುಕಟ್ಟೆಗೆ ಪ್ರವೇಶ ಪಡೆಯುವುದರಿಂದ ರೈತರು ಇದರ ಸಂಪೂರ್ಣ ಲಾಭ ಪಡೆದು ಕೊಳ್ಳಬಹುದಾಗಿದೆ. ಮರದ ಹಾಗೂ ಕಾಯಿಗಳ ಆರೈಕೆ ಮುತುವರ್ಜಿಯಿಂದ ಮಾಡಬೇಕಾಗುತ್ತದೆ. ಮಾರ್ಚ್, ಏಪ್ರಿಲ್‌ನಲ್ಲಿ ಮಾರುಕಟ್ಟೆಯಲ್ಲಿ ಮಾವು ಬೆಲೆ ಕಡಿಮೆ ಇರುವುದರಿಂದ ಇದರ ಲಾಭ ಪಡೆಯಬಹುದು ಎಂಬುದು ಅಧಿಕಾರಿಗಳ ಹೇಳಿಕೆ. ತಾಲೂಕು ಮಾವು ವಿಸ್ತೀರ್ಣ(ಹೆ)
  • ಚನ್ನಪಟ್ಟಣ 5758.00
  • ರಾಮನಗರ 12757.00
  • ಕನಕಪುರ 4486.00
  • ಮಾಗಡಿ 9623.00
  • ಒಟ್ಟು 32651.00
ಮಾರುಕಟ್ಟೆಗೆ ಮೊದಲು ಪ್ರವೇಶಿಸುವುದು ರಾಮನಗರ ಮಾವು. ಇದರ ಲಾಭ ಪಡೆಯಬೇಕಾದರೆ ರೈತರು ಅತ್ಯಂತ ಜಾಗರೂಕತೆ ವಹಿಸಿ ಮಾವು ಬೆಳೆಗೆ ಬೇಕಾದ ಪೋಷಣೆ ಹಾಗೂ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಸಿದ್ದರಾಜು, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ರಾಮನಗರ


from India & World News in Kannada | VK Polls https://ift.tt/33x9Xwv

'ಸ್ಮಿತ್‌ ಅವರನ್ನು ಈಗಲೇ ಕಟ್ಟಿಹಾಕಿ, ಇಲ್ಲ ತೊಂದರೆಗೆ ಸಿಲುಕುತ್ತೀರಿ': ಕೊಹ್ಲಿ ಪಡೆಗೆ ಎಚ್ಚರಿಕೆ ನೀಡಿದ ಗಂಭೀರ್‌!

ಹೊಸದಿಲ್ಲಿ: ವಿಶ್ವದ ಅತ್ಯಂತ ಶ್ರೇಷ್ಠ ಓಡಿಐ ಬ್ಯಾಟ್ಸ್‌ಮನ್‌ ಎಂದು ನಾವು ಪದೇ-ಪದೆ ಕರೆಯುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗಿಂತ ಆಸ್ಟ್ರೇಲಿಯಾ ಮಾಜಿ ನಾಯಕ ಜಾಸ್ತಿ ದೂರವಿಲ್ಲ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ಮುಕ್ತಾಯವಾಗಿದ್ದ ಹದಿಮೂರನೇ ಆವೃತ್ತಿಯಲ್ಲಿ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್ ತಂಡದಲ್ಲಿ ಸ್ಟೀವನ್‌ ಸ್ಮಿತ್‌ ಹೇಳಿಕೊಳ್ಳುವಂಥ ಬ್ಯಾಟಿಂಗ್‌ ಪ್ರದರ್ಶನ ತೋರಿರಲಿಲ್ಲ. ಅದರಂತೆಯೇ ರಾಜಸ್ಥಾನ್‌ ಕೂಡ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿ ಪ್ಲೇಆಫ್ಸ್‌ನಿಂದ ಹೊರಬಿದ್ದಿತ್ತು. ಐಪಿಎಲ್‌ ಮುಗಿದ ಬೆನ್ನಲ್ಲೆ ಭಾರತ ವಿರುದ್ಧದ ಸರಣಿ ಪ್ರಯುಕ್ತ ಸ್ಟೀವನ್‌ ಸ್ಮಿತ್‌ ಅವರ ಫಾರ್ಮ್‌ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಕಳೆದ ಕೆಲ ದಿನಗಳ ಹಿಂದೆ ಆರಂಭವಾಗಿದ್ದ ಏಕದಿನ ಸರಣಿಯಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಈ ಎರಡೂ ಪಂದ್ಯಗಳಲ್ಲಿ ಸ್ಮಿತ್ 62 ಎಸೆತಗಳಲ್ಲಿ ಎರಡು ಸ್ಪೋಟಕ ಶತಕಗಳನ್ನು ಸಿಡಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜತೆ ಮಾತನಾಡಿದ , "ಇದು ಸ್ಟೀವನ್‌ ಸ್ಮಿತ್‌ ಅವರ ಅದ್ಭುತ ದರ್ಜೆಯ ಬ್ಯಾಟಿಂಗ್‌ ಹಾಗೂ ಶ್ರೇಷ್ಠತೆಗಿಂತ ಜಾಸ್ತಿ ದೂರ ಅವರಿಲ್ಲ. ನಾವು ವಿರಾಟ್‌ ಕೊಹ್ಲಿಯನ್ನು ವಿಶ್ವದ ಅತ್ಯಂತ ಶ್ರೇಷ್ಠ ಓಡಿಐ ಆಟಗಾರ ಎಂದು ಕರೆಯುತ್ತೇವೆ, ಸ್ಟೀವನ್ ಸ್ಮಿತ್‌ ಭಾರತದ ನಾಯಕನಿಗಿಂತ ಬಹು ದೂರವಿಲ್ಲ," ಎಂದು ಹೇಳಿದರು. "18 ಓವರ್‌ಗಳಲ್ಲಿ ಶತಕ ಸಿಡಿಸುವುದು ಹಾಗೂ 60 ಎಸೆತಗಳಲ್ಲಿ ಸತತ ಎರಡು ಶತಕಗಳನ್ನು ಬಾರಿಸುವುದು ತಮಾಷೆಯ ವಿಷಯವಲ್ಲ. ಹೌದು, ವಿರಾಟ್‌ ಕೊಹ್ಲಿ ಉತ್ತಮ ಅಂಕಿಗಳನ್ನು ಹೊಂದಿದ್ದಾರೆ, ಆದರೆ ಕಳೆದ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕನ ಎರಡು ಪಂದ್ಯಗಳ ಪ್ರಭಾವವನ್ನು ನೀವು ನೋಡಬಹುದು," ಎಂದು ತಿಳಿಸಿದರು. "ಭಾರತಕ್ಕೆ ಇದು ಕಠಿಣವಾಗುತ್ತಿದೆ. ದೀರ್ಘ ಅವಧಿಯ ಪ್ರವಾಸದಲ್ಲಿ ಇದು ಭಾರತಕ್ಕೆ ಇನ್ನೂ ಮೂರನೇ ಪಂದ್ಯವಾಗಿದೆ. ಹಾಗಾಗಿ, ಈಗಲೇ ಟೀಮ್‌ ಇಂಡಿಯಾ ಲಯವನ್ನು ಕಂಡುಕೊಳ್ಳಬೇಕು. ಸ್ಟೀವನ್‌ ಸ್ಮಿತ್‌ ಅವರನ್ನು ಹೇಗೆ ಔಟ್‌ ಮಾಡಬೇಕೆಂಬುದನ್ನು ಕಂಡುಕೊಳ್ಳದೇ ಇದ್ದಲ್ಲಿ, ಈ ಪ್ರವಾಸದುದ್ದಕ್ಕೂ ಬೌಲರ್‌ಗಳಿಗೆ ಅವರು ಕಾಡಲಿದ್ದಾರೆ," ಎಂದು ಎಚ್ಚರಿಕೆ ನೀಡಿದರು. "ಅವರು ರನ್‌ಗಳಿಗಾಗಿ ದೊಡ್ಡ ಹಸಿವನ್ನು ಹೊಂದಿದ್ದಾರೆ ಮತ್ತು ಇದೀಗ ಪ್ರಾರಂಭ ಅಷ್ಟೇ. ಒಮ್ಮೆ ಅವರು ಈ ರೀತಿಯ ಫಾರ್ಮ್‌ನೊಂದಿಗೆ ಟೆಸ್ಟ್ ಸ್ವರೂಪಕ್ಕೆ ಹೋದರೆ ಅಥವಾ ಪ್ರವೇಶಿಸಿದರೆ, ಅದು ಭಾರತಕ್ಕೆ ತೊಂದರೆಯಾಗಲಿದೆ," ಎಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದರು. ಬುಧವಾರ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಹಣಾಹಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lq2hlJ

ಮಂಗಳೂರು: ಆಳ ಸಮುದ್ರದಲ್ಲಿ ಬೋಟ್ ದುರಂತಕ್ಕೀಡಾಗಿ 6 ಮಂದಿ ನಾಪತ್ತೆ, 19

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್‌ವೊಂದು ದುರಂತಕ್ಕೀಡಾಗಿ ಮಗುಚಿ ಬಿದ್ದ ಪರಿಣಾಮ 6ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು, 19ಮಂದಿಯನ್ನು ರಕ್ಷಣೆ ಮಾಡಲಾಗಿದೆ. ನಾಪತ್ತೆಯಾದವರು ಕಸಬಾ ಬೆಂಗರೆ ಸುತ್ತಮುತ್ತಲ ನಿವಾಸಿಗಳೆಂದು ತಿಳಿದು ಬಂದಿದೆ. ಸೋಮವಾರ ಬೆಳಗ್ಗೆ ಅರಬ್ಬಿ ಸಮುದ್ರದಲ್ಲಿನ ಆಳಸಮುದ್ರದ ಮೀನುಗಾರಿಕೆಗೆ ಪ್ರಶಾಂತ್ ಕುಳಾಯಿ ಮಾಲೀಕತ್ವದ ಶ್ರೀ ರಕ್ಷಾ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ರಾತ್ರಿ ವೇಳೆ ಪಣಂಬೂರ್‌ನ ದಕ್ಕೆಗೆ ಮರಳುತ್ತಿರುವ ಸುಮಾರು 10 ನಾಟಿಕಲ್ ದೂರದಲ್ಲಿ ಬೋಟ್‌ಗೆ ಏನೋ ಡಿಕ್ಕಿ ಹೊಡೆದಂತಾಗಿದೆ, ನೋಡ ನೋಡುತ್ತಿದ್ದಂತೆ ಗಾಳಿಯ ವೇಗಕ್ಕೆ ಬೋಟ್ ಮಗುಚಿ ಬಿದ್ದಿದೆ. ಈ ಅವಘಡಕ್ಕೆ ಬೋಟ್‌ನಲ್ಲಿದ್ದ 6 ಮಂದಿ ನಾಪತ್ತೆಯಾಗಿದ್ದಾರೆ. ಬೋಟ್‌ನ ಚಾಲಕ ಸೇರಿದಂತೆ 19ಮಂದಿ ಡಿಂಗಿ (ಚಿಕ್ಕ ದೋಣಿ)ಯಲ್ಲಿ ರಕ್ಷಣೆ ಪಡೆದು ಉಳಿದ ಬೋಟ್‌ನವರ ಬಳಿ ಸಹಾಯಯಾಚಿಸುತ್ತಿದ್ದರು. ಇದನ್ನು ದೂರದಲ್ಲಿದ್ದ ಬೋಟ್‌ನವರು ಗಮನಿಸಿ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ 19ಮಂದಿಯನ್ನು ರಕ್ಷಣೆ ಮಾಡಿ, ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ನಾಪತ್ತೆಯಾದ 6 ಮಂದಿಗೆ ಕರಾವಳಿ ರಕ್ಷಣಾ ಪಡೆ ಶೋಧ ಕಾರ್ಯ ನಡೆಸುತ್ತಿದೆ. ಪಣಂಬೂರು ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.


from India & World News in Kannada | VK Polls https://ift.tt/3fVrgfu

ಶಿಶು ಮಾರಾಟ ಜಾಲಕ್ಕೆ ಸರ್ಕಾರಿ ವೈದ್ಯನೇ ಕಿಂಗ್‌ ಪಿನ್..! ಗರ್ಭಿಣಿ ಆಗದವರೂ ತಾಯಿ ಆಗಬಹುದು..!

ಆರಗ ರವಿ ಚಿಕ್ಕಮಗಳೂರು: ಕೊಪ್ಪದ ಎಂಎಸ್‌ಡಿಎಂ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರೇ ನವಜಾತ ಶಿಶುಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ಬಯಲಾಗಿದೆ. ಮಗು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯವಾಗಿದ್ದು, ಇದಕ್ಕೆ ವೈದ್ಯರೇ ಸಾಥ್‌ ನೀಡುತ್ತಿರುವುದು ಆತಂಕದ ಬೆಳವಣಿಗೆ. ರಾಜಕೀಯ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿ ಹಾಕಲು ಸಾಕಷ್ಟು ಪ್ರಯತ್ನವೂ ನಡೆದಿದೆ. ಆದರೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಪಟ್ಟು ಸಡಿಲಿಸದ ಕಾರಣ, ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಸೋಮವಾರ ರಾತ್ರಿ ಎಫ್‌ಐಆರ್‌ ದಾಖಲಿಸಲಾಗಿದೆ. ಕೊಪ್ಪ ತಾಲೂಕು ಆಸ್ಪತ್ರೆಯ ಹೆರಿಗೆ ತಜ್ಞ ಡಾ.ಬಾಲಕೃಷ್ಣ ವಿರುದ್ಧ ಮಗುವನ್ನು ಮಾರಾಟ ಮಾಡಿದ ನೇರ ಆರೋಪವಿದ್ದು, ಈ ಹಿಂದೆಯೂ ಆಸ್ಪತ್ರೆಯಲ್ಲಿ ಮಕ್ಕಳ ಮಾರಾಟ ಪ್ರಕರಣಗಳು ನಡೆದಿವೆ ಎನ್ನಲಾಗುತ್ತಿದೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವೈದ್ಯರಿಂದಲೇ ಡೀಲ್‌! ತೀರ್ಥಹಳ್ಳಿಯ ಯುವತಿಯೊಬ್ಬಳು ಮದುವೆಗೆ ಮುನ್ನ ಗರ್ಭಿಣಿಯಾಗಿದ್ದು, ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ 2020 ಮಾರ್ಚ್ 14 ರಂದು ಹೆರಿಗೆಯಾಗಿತ್ತು. ಹೆರಿಗೆ ಮಾಡಿಸಿದ ಡಾ.ಬಾಲಕೃಷ್ಣ, 'ನಿಮಗೆ ಮಗುವನ್ನು ಸಾಕಲು ಸಾಧ್ಯವಿಲ್ಲ. ಮಗುವನ್ನು ಇಲ್ಲೇ ಕೊಟ್ಟು ಹೋಗಿ. ಇಲ್ಲದಿದ್ದರೆ ಮದುವೆಯಾಗದೆ ಗರ್ಭಿಣಿಯಾಗಿದ್ದಕ್ಕೆ ಪೊಲೀಸ್‌ ಕಂಪ್ಲೆಂಟ್‌ ನೀಡುತ್ತೇನೆ. ಅಲ್ಲದೆ ಡಿಸ್ಚಾರ್ಜ್ ಮಾಡುವುದಿಲ್ಲ' ಎಂದು ಹೆದರಿಸಿದ್ದರು. ವೈದ್ಯರು ಹೇಳಿದ ವ್ಯಕ್ತಿಗಳಿಗೆ ಮಗುವನ್ನು ನೀಡಿದ್ದು, ಯುವತಿಗೆ 5 ಸಾವಿರ ರೂ. ಹಾಗೂ ಒಂದು ಚೂಡಿದಾರ್‌ ಕೊಡಿಸಲಾಗಿತ್ತು. ಮಗುವನ್ನು ಪಡೆದವರು ತನ್ನ ಕಣ್ಣೆದುರೇ ವೈದ್ಯರಿಗೆ 50 ಸಾವಿರ ರೂ. ಕೊಟ್ಟಿದ್ದಾಗಿ ಆಕೆಯ ತಾಯಿ ನ.29ರಂದು ತಾಲೂಕು ಆರೋಗ್ಯಾಧಿಕಾರಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ಹೇಳಿಕೆ ನೀಡಿದ್ದಾಳೆ. ಮಗುವಿಗೆ ಜನ್ಮ ನೀಡಿದ ಯುವತಿ ಮಗುವನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿ ಶಿವಮೊಗ್ಗದ ಎನ್‌ಜಿಒದಲ್ಲಿದ್ದಾಳೆ. ಯುವತಿಯ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದಾಗ ಆ ಯುವತಿಗೆ ಹೆರಿಗೆಯಾದ ದಿನ ಕೇಸ್‌ ಶೀಟ್‌ನಲ್ಲಿ'ಹೆರಿಗೆಯಾಗಿಲ್ಲ' ಎಂದು ನಮೂದಿಸಲಾಗಿದೆ. ಅದೇ ಕೇಸ್‌ ಶೀಟ್‌ ನಂಬರ್‌ನಲ್ಲಿ ಇನ್ನೊಬ್ಬರ ಹೆಸರು, ವಿಳಾಸ ನಮೂದಿಸಿ ಅವರಿಗೆ ಹೆರಿಗೆಯಾದಂತೆ ಹೆರಿಗೆ ರಿಜಿಸ್ಟರ್‌ನಲ್ಲಿ ದಾಖಲು ಮಾಡಿರುವುದು ಕಂಡುಬಂದಿದೆ. ವಾಸ್ತವದಲ್ಲಿಇನ್ನೊಬ್ಬಳು ಮಹಿಳೆ (ಮಗುವನ್ನು ಖರೀದಿಸಿದ ಮಹಿಳೆ ಪ್ರೇಮಲತ) ಗರ್ಭಿಣಿಯೇ ಆಗಿರಲಿಲ್ಲ! ತಾಯಿ ಕಾರ್ಡ್‌, ನೋಂದಣಿಯೂ ಇರಲಿಲ್ಲ. ಶೃಂಗೇರಿಯಲ್ಲಿ ವಾಸವಿರುವ ತಮಿಳು ಮೂಲದ ಮಹಿಳೆ ಪ್ರೇಮಲತ ಮತ್ತು ಮಾರಾಟವಾಗಿದ್ದ ಮಗುವನ್ನು ವಶಕ್ಕೆ ಪಡೆಯಲಾಗಿದೆ. ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಮಕ್ಕಳನ್ನು ಮಾರಾಟ ಮಾಡಿದ ಪ್ರಕರಣ ವರದಿಯಾಗಿವೆ. ಎಫ್‌ಐಆರ್‌ಗೆ ಸೂಚನೆ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಮಗು ಮಾರಾಟ ಮಾಡಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸಿದ್ದು, ಮಗುವನ್ನು ವಶಕ್ಕೆ ಪಡೆಯಲಾಗಿದೆ. ಮಗು ಮಾರಾಟದಂತಹ ಪ್ರಕರಣಗಳು ವರದಿಯಾದಾಗ ಪೊಲೀಸ್‌ ಇಲಾಖೆ ವಿಳಂಬ ಮಾಡದೆ ಪ್ರಕರಣ ದಾಖಲಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ. ಆಶಾ ಜವಾಬ್ದಾರಿ ಆಶಾ ಕಾರ‍್ಯಕರ್ತೆಯರು ಮನೆ ಭೇಟಿ ಸಂದರ್ಭ ಆ ಮನೆಯಲ್ಲಿರುವ ಗರ್ಭಿಣಿಯರು, ಬಾಣಂತಿಯರು, ಶಿಶುಗಳ ಮಾಹಿತಿ ಸಂಗ್ರಹಿಸಬೇಕು. ಆದರೆ, ತೀರ್ಥಹಳ್ಳಿಯ ಯುವತಿ ಗರ್ಭಿಣಿಯಾಗಿರುವ ಮಾಹಿತಿಯನ್ನಾಗಲಿ, ಶೃಂಗೇರಿಯ ಮಹಿಳೆ ಗರ್ಭಿಣಿಯೇ ಆಗದೆ ಮಗುವನ್ನು ಸಾಕುತ್ತಿರುವ ಮಾಹಿತಿಯನ್ನಾಗಲಿ ಅಲ್ಲಿನ ಅಶಾ ಮತ್ತು ಅಂಗನವಾಡಿ ಕಾರ‍್ಯಕರ್ತೆಯರು ದಾಖಲಿಸಿಲ್ಲ. ಶೃಂಗೇರಿಯ ತಮಿಳು ಮೂಲದ ಕುಟುಂಬದಲ್ಲಿ ಕಳೆದ 9 ತಿಂಗಳಿಂದ ಈ ಮಗುವಿದ್ದರೂ ಮಗುವಿನ ಮಾರಾಟದ ಬಗ್ಗೆ ಎಲ್ಲಿಯೂ ದೂರು ದಾಖಲಾಗಿರಲಿಲ್ಲ. ವೈದ್ಯರ ವಿರುದ್ಧ ಎಫ್‌ಐಆರ್‌ ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ಡಾ. ಜಿ. ಎಸ್‌. ಬಾಲಕೃಷ್ಣ, ಸ್ಟ್ಯಾಫ್‌ ನರ್ಸ್‌ಗಳಾದ ಶೋಭಾ, ರೇಷ್ಮಾ, ಮಗು ಖರೀದಿಸಿದ್ದ ಪ್ರೇಮಲತ ವಿರುದ್ಧ ಕಲಂ 465, 466, 506, ಆರ್‌/ಡಬ್ಲ್ಯು 34ಐಪಿಸಿ, ಜೆಜೆ ಕಾಯಿದೆ-2015ರ ಕಲಂ 80, 81, 87ರಡಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಾನವಿ ದೂರು ದಾಖಲಿಸಿದ್ದಾರೆ.


from India & World News in Kannada | VK Polls https://ift.tt/37goU72

ಏಡ್ಸ್ ತಡೆಗೆ ಜಾಗತಿಕ ಒಗ್ಗಟ್ಟಿನ ಮಂತ್ರ: ಡಿಸೆಂಬರ್ 1 ವಿಶ್ವ ಏಡ್ಸ್‌ ದಿನಾಚರಣೆ

ರಾಮನಗರ: ಡಿ.1(ಇಂದು), . ಏಡ್ಸ್‌ ರೋಗ ತಡೆಗಟ್ಟುವಿಕೆಗಾಗಿ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಕಾಯಿಲೆ ಸಂಪೂರ್ಣ ಹತೋಟಿಗೆ ಬಂದಿಲ್ಲ. ಏಡ್ಸ್‌ ದಿನಾಚರಣೆ ಅಂಗವಾಗಿ ಸರಕಾರವು ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಪ್ರತಿ ವರ್ಷವೂ ಏಡ್ಸ್‌ ನಿಯಂತ್ರಣಕ್ಕಾಗಿ ಒಂದೊಂದು ಘೋಷವಾಕ್ಯವನ್ನು ಹೊರಡಿಸಲಾಗುತ್ತಿದ್ದು, ಈ ಬಾರಿ ಎಚ್‌ಐವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಜವಾಬ್ದಾರಿಯನ್ನು ಹಂಚಿಕೆ ಎಂಬ ಘೋಷಣೆ ಮಾಡಲಾಗಿದೆ. 194 ಮಂದಿ ಸೋಂಕಿತರು 2019ರ ಏಪ್ರಿಲ್‌ನಿಂದ ಹಿಡಿದು 2020ರ ಮಾರ್ಚ್ ತನಕ ಜಿಲ್ಲೆಯಲ್ಲಿ 47146 ಮಂದಿ ಎಚ್‌ಐವಿ ಟೆಸ್ಟ್‌ಗೆ ಒಳಪಟ್ಟಿದ್ದಾರೆ. 194 ಮಂದಿಯಲ್ಲಿ ಪಾಸಿಟಿವ್‌ ಕಂಡು ಬಂದಿದೆ. 1945-50ರಲ್ಲಿ ಮಧ್ಯ ಆಫ್ರಿಕಾದಲ್ಲಿ ಮೊದಲ ಬಾರಿಗೆ ಏಡ್ಸ್‌ ರೋಗ ಕಂಡು ಬರುತ್ತದೆ. ನಂತರ 1981ರಲ್ಲಿ ಅಮೇರಿಕಾದಲ್ಲಿ ನ್ಯುಮೋನಿಯಾದಿಂದ ಸತ್ತ ವ್ಯಕ್ತಿಯ ದೇಹದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಕಂಡುಬಂದಿದೆ. ಇನ್ನು 1986ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಚೆನ್ನೈನಲ್ಲಿ ಎಚ್‌ಐವಿ ಮೊದಲ ಬಾರಿಗೆ ಪತ್ತೆಯಾಗುತ್ತದೆ. ದೇಶದಲ್ಲಿ 1.6 ಲಕ್ಷ ಮಂದಿ ರೋಗಿಗಳು ಪ್ರಸ್ತುತವಾಗಿ 5ಮಿಲಿಯನ್‌ ಎಚ್‌ಐವಿ ಪ್ರಕರಣಗಳು ಪತ್ತೆಯಾಗಿದೆ. ಭಾರತದಲ್ಲಿ 1.6ಲಕ್ಷ ಮಂದಿ ಈ ಮಾರಕ ಕಾಯಿಲೆಯಿಂದ ನರಳುತ್ತಿದ್ದಾರೆ. ದೇಶದಲ್ಲಿ ಕರ್ನಾಟಕ ರಾಜ್ಯ 5 ಸ್ಥಾನವನ್ನು ಪಡೆದುಕೊಂಡಿದೆ. ವೈರಸ್‌ ಮನುಷ್ಯನ ದೇಹದಲ್ಲಿ ಮಾತ್ರ ಬದುಕಿ ಉಳಿಯಬಹುದು. ಈ ವೈರಸ್‌ನಿಂದ ದೇಹದ ರೋಗ ನಿರೋಧಕ ಶಕ್ತಿ ಕುಸಿಯುತ್ತದೆ. ಬಿಳಿ ರಕ್ತ ಕಣಗಳನ್ನು ನಾಶ ಮಾಡಿ ದೇಹದ ರಕ್ಷಣಾ ವ್ಯವಸ್ಥೆಯನ್ನು ನಾಶ ಮಾಡುತ್ತದೆ. ಏಡ್ಸ್‌ ರೋಗವು ಎಚ್‌ಐವಿ ಸೋಂಕಿನ ಅಂತಿಮ ಘಟ್ಟವಾಗಿರುತ್ತದೆ. ಈ ರೀತಿ ಹರಡುತ್ತದೆ ಸೋಂಕಿನ ವ್ಯಕ್ತಿಗಳಿಂದ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವುದರಿಂದ ಹೆಚ್ಚು ಹರಡುತ್ತದೆ. ಪರೀಕ್ಷಿಸದೆ ರಕ್ತವನ್ನು ಪಡೆಯುವುದರಿಂದ, ಸಂಸ್ಕರಿಸಿದ ಸೂಜಿ, ಸಿರಿಂಜ್‌ಗಳನ್ನು ಬಳಸುವುದು. ಗರ್ಭಾವಸ್ಥೆಯಲ್ಲಿ ಪ್ರಸವದ ಸಂದರ್ಭದಲ್ಲಿ ಬಳಸುವ ಸಲಕರಣೆಗಳು. ಸೋಂಕಿರುವ ತಾಯಿಯ ಎದೆ ಹಾಲು ಉಪಯೋಗಿಸುವುದರಿಂದ ಈ ರೀತಿ ಕಾಯಿಲೆ ಹರಡುತ್ತದೆ. ಲಕ್ಷಣಗಳು ದೇಹದ ತೂಕ ಕ್ಷೀಣಿಸುತ್ತದೆ. ಒಂದು ತಿಂಗಳಿಗಿಂತ ಹೆಚ್ಚು ಕಾಲದ ಭೇದಿ, ತಿಂಗಳಿಗಿಂತ ಹೆಚ್ಚು ಜ್ವರ ಮತ್ತು ಕೆಮ್ಮು ಸೋಂಕಿನ ಲಕ್ಷಣಗಳಾಗಿವೆ. ಈ ರೀತಿ ಹರಡುವುದಿಲ್ಲ ಕೈ ಕುಲುಕುವುದರಿಂದ, ಜತೆಯಲ್ಲಿಊಟ ಮಾಡುವುದರಿಂದ, ಸೊಳ್ಳೆ ಅಥವಾ ಕೀಟ ಕಚ್ಚುವುದರಿಂದ, ಸೋಂಕಿತರಿಗೆ ಆರೈಕೆ ಮಾಡುವುದರಿಂದ ಎಚ್‌ಐವಿ ಹರಡುವುದಿಲ್ಲ. ಇಂದು ಕಾರ್ಯಕ್ರಮ ಏಡ್ಸ್‌ ಕುರಿತ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಜಿಲ್ಲಾಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಏಡ್ಸ್‌ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ವತಿಯಿಂದ ರಾಮನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿಆಯೋಜಿಸಿದೆ. ಜಿಲ್ಲಾಆರೋಗ್ಯ ಇಲಾಖೆ ಮತ್ತು ಜಿಲ್ಲಾಪಂಚಾಯಿತಿ ವತಿಯಿಂದ ವಿಶ್ವ ಏಡ್ಸ್‌ ದಿನಾಚರಣೆಯಲ್ಲಿ ರಾಮನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕುಮಾರ್‌, ಜಿಲ್ಲಾ ಏಡ್ಸ್‌ ನಿಯಂತ್ರಣಾ ಕಾರ್ಯಕ್ರಮಾಧಿಕಾರಿ, ರಾಮನಗರ


from India & World News in Kannada | VK Polls https://ift.tt/2VldWI3

ಮಗಳಿಂದ ನನಗೆ ಜೀವ ಬೆದರಿಕೆ ಇದೆ: ಜೆಎನ್‌ಯು ಮಾಜಿ ವಿದ್ಯಾರ್ಥಿ ಶೆಹ್ಲಾ ರಶೀದ್‌ ವಿರುದ್ಧ ತಂದೆಯಿಂದ ದೂರು!

ಶ್ರೀನಗರ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು) ವಿದ್ಯಾರ್ಥಿ ಸಂಘಟನೆಯ ಮಾಜಿ ಉಪಾಧ್ಯಕ್ಷೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ವಿರುದ್ಧ ಅವರ ತಂದೆಯೇ ಗುರುತರ ಆರೋಪ ಮಾಡಿದ್ದಾರೆ. ಮಗಳೇ ನನಗೆ ಜೀವ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿರುವ ಶೆಹ್ಲಾ ತಂದೆ ಅಬ್ದುಲ್‌ ರಶೀದ್‌, ಜಮ್ಮು ಕಾಶ್ಮೀರ ಡಿಜಿಪಿ ದಿಲ್‌ಬಾಗ್‌ ಸಿಂಗ್‌ಗೆ ಈ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಪತ್ರ ಬರೆದಿದ್ದಾರೆ. ಪತ್ರದಲ್ಲಿ ನಮ್ಮ ಮನೆಯಲ್ಲಿಯೇ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ಈ ಚಟುವಟಿಕೆಯನ್ನು ನಾನು ವಿರೋಧಿಸಿದ್ದಕ್ಕೆ ನನ್ನ ಮಗಳು ಹಾಗೂ ಅವಳ ಭದ್ರತಾ ಸಿಬ್ಬಂದಿ ಜೊತೆಗೆ ಕುಟುಂಬಸ್ಥರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಹೀಗಾಗಿ ರಕ್ಷಣೆ ನೀಡುವಂತೆ ಪತ್ರದಲ್ಲಿ ರಶೀದ್‌ ಮನವಿ ಮಾಡಿದ್ದಾರೆ. ಇನ್ನು ಪತ್ರದಲ್ಲಿ ತನ್ನ ಮಗಳು ಶೆಹ್ಲಾ ರಶೀದ್‌, ಈಗಾಗಲೇ ಯುಎಪಿಎ ಅಡಿ ಬಂಧನವಾಗಿರುವ ಉದ್ಯಮಿ ಜಹೂರ್‌ ವಟಾಲಿ ಹಾಗೂ ಮಾಜಿ ಶಾಸಕ ರಶೀದ್‌ನಿಂದ ಜಮ್ಮು-ಕಾಶ್ಮೀರದ ರಾಜಕೀಯಕ್ಕೆ ಎಂಟ್ರಿ ಕೊಡಲು ಮೂರು ಕೋಟಿ ಪಡೆದಿದ್ದಾಳೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಶೆಹ್ಲಾ, ಆಕೆಯ ತಾಯಿ, ಕುಟುಂಬಸ್ಥರು ಎಲ್ಲರೂ ಅಕ್ರಮ ಹಣ ಹೂಡಿಕೆಗಳಲ್ಲಿ ಈಗಾಗಲೇ ಬಂಧನವಾಗಿರುವ ವಟಾಲಿ ಹಾಗೂ ರಶೀದ್‌ ಜೊತೆ ನಡೆಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಅವರ ಇ-ಮೇಲ್‌, ಬ್ಯಾಂಕ್‌ ಡಿಟೇಲ್ಸ್‌ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಇನ್ನು ನನ್ನ ವಿರುದ್ಧ ಪತ್ನಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಅಡಿ ಕೇಸ್‌ ಹಾಕಿದ್ದಾಳೆ. ಪಿತೂರಿ ನಡೆಸಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾಳೆ. ಸದ್ಯ ನಾನು ಕೂಡ ಕೋರ್ಟ್‌ನಲ್ಲಿ ದಾವೆ ಹೂಡಿದ್ದೇನೆ. ಸತ್ಯಾಂಶ ಹೊರಬರಲಿದೆ ಎಂದು ತಂದೆ ಅಬ್ದುಲ್‌ ರಷೀದ್‌ ಹೇಳಿದ್ದಾರೆ. ಇನ್ನು ತಂದೆ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಶೆಹ್ಲಾ ರಶೀದ್‌, ತಾಯಿಗೆ ಹಿಂಸೆ ನೀಡುತ್ತ, ನಿಂದನೆ ಮಾಡುವ ನನ್ನ ಜೈವಿಕ ತಂದೆ ಸುಳ್ಳು ಹೇಳುತ್ತಿದ್ದಾನೆ. ತಾಯಿ ಜೊತೆ ನಾನು, ಸಹೋದರಿ ದೂರು ನೀಡಿದ್ದೇವೆ. ಇದು ಕೌಟುಂಬಿಕ ವಿಚಾರವಾಗಿದ್ದು, ಸುಳ್ಳು ಹೇಳುತ್ತಿರುವ ತಂದೆಯನ್ನು ನಂಬಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ.


from India & World News in Kannada | VK Polls https://ift.tt/3o3CaD0

ತುಂಗಭದ್ರಾ ಹಿನ್ನೀರಿನಲ್ಲಿಎಣ್ಣೆ ಅಂಶ..? ನೀರನ್ನು ಕುದಿಸಿ ಕುಡಿಯುವಂತೆ ಜನರಿಗೆ ಸಂದೇಶ..!

ಕೊಟ್ಟೂರು (ಬಳ್ಳಾರಿ): ಕೊಟ್ಟೂರುಪಟ್ಟಣ ಸೇರಿದಂತೆ ಕೂಡ್ಲಿಗಿ, ಹಗರಿ ಬೊಮ್ಮನ ಹಳ್ಳಿಗಳಿಗೆ ಕುಡಿವ ನೀರು ಸರಬರಾಜಾಗುವ ನದಿ ಹಿನ್ನೀರಿನಲ್ಲಿ ಮತ್ತು ಜಲಶುದ್ಧೀಕರಣ ಘಟಕ, ಉಪ ಘಟಕಗಳಲ್ಲಿನ ನೀರಿನಲ್ಲಿ ಅಂಶ ಕಂಡು ಬಂದಿದೆ! ಹೀಗಾಗಿ, ನೀರನ್ನು ಕುದಿಸಿ ಕುಡಿಯುವಂತೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಬಗ್ಗೆ ಹೊಸಪೇಟೆಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮೂರು ಸ್ಥಳೀಯ ಆಡಳಿತಗಳಿಗೆ ನವೆಂಬರ್ 27ರಂದು ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾಕಷ್ಟು ಸುದ್ದಿ ಮಾಡಿದೆ. ಆದರೆ ಪಟ್ಟಣದಲ್ಲಿ ಸರಬರಾಜಾಗುತ್ತಿರುವ ನೀರಿನಲ್ಲಿ ಈವರೆಗೂ ಯಾವುದೇ ಎಣ್ಣೆ ಅಂಶ ಕಂಡು ಬಂದಿಲ್ಲ. ಅಲ್ಲದೇ ಮೊದಲು ಕಂಡಿದ್ದ ಎಣ್ಣೆ ಅಂಶ ಈಗಿಲ್ಲ. ನೀರು ಶುದ್ಧವಾಗಿದೆ ಎಂದು ಮಂಡಳಿ ಅಧಿಕಾರಿಗಳೇ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೂ ನೀರು ಶುದ್ಧವಾಗಿದ್ದರೂ ವಾಟ್ಸಪ್‌ನಲ್ಲಿ ಹರಿದಾಡುತ್ತಿರುವ ಪತ್ರ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಒಳಚರಂಡಿ ಮಂಡಳಿ ಅಧಿಕಾರಿಗಳು ಎಣ್ಣೆ ಅಂಶ ಕುರಿತು ಪತ್ರ ಬರೆದಾಗಲೇ, ನಾವು ಪಟ್ಟಣದಲ್ಲಿ ನೀರು ಕಾಯಿಸಿ ಕುಡಿಯಲು ಪ್ರಚಾರ ಮಾಡಿದ್ದೆವು. ಅಲ್ಲದೇ ಈ ಕುರಿತು ಮತ್ತಷ್ಟು ವಿವರ ಪಡೆಯಲು ಅಧಿಕಾರಿಗಳನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿದಾಗ, ಈಗ ಎಣ್ಣೆ ಅಂಶ ಕಂಡು ಬರುತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಅಂದಿನಿಂದ ಈವರೆಗೆ ಕುಡಿವ ನೀರಿನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಕೊಟ್ಟೂರು ಪ.ಪಂ. ಮುಖ್ಯಾಧಿಕಾರಿ ಟಿ.ಎಸ್‌.ಗಿರೀಶ್‌ ಹೇಳಿದ್ದಾರೆ.


from India & World News in Kannada | VK Polls https://ift.tt/3fUNX3F

ಚಂದ್ರಾನ್ವೇಷಣೆಯತ್ತ ಚೀನಾದ ಹೊಸ ಹೆಜ್ಜೆ

ಈ ಲೇಖನ ಸಿದ್ಧಪಡಿಸುವ ಹೊತ್ತಿಗೆ ಟೀವಿ ಮಾಧ್ಯಮಗಳಲ್ಲಿ ವರ್ಷದ ಕೊನೆಯ ಹಾಗೂ ಕಾರ್ತೀಕ ಸೋಮವಾರದಂದೇ ಜರುಗುತ್ತಿರುವ ಗ್ರಹಣದ ‘ಗಂಡಾಂತರ’, ‘ಗ್ರಹಚಾರ’ಗಳದೇ ಸುದ್ದಿ. ಗ್ರಹಣ ತರಬಹುದಾದ ಆತಂಕ, ದುಗುಡ, ಫಲಾಫಲಗಳ ವಿಶ್ಲೇಷಣೆಗಳ ಮನರಂಜನಾ ಕಾರ್ಯಕ್ರಮಗಳ ನಡುವೆಯೇ ಆಸಕ್ತರ ಗಮನ ಸೆಳೆಯುವ ಸುದ್ದಿಯೊಂದು ಬಿತ್ತರವಾಗಿದೆ. ಚೀನಾ ದೇಶದ ‘’ ಗಗನನೌಕೆಯು ತನ್ನ 112 ಗಂಟೆಗಳ ಸುದೀರ್ಘ ಯಾತ್ರೆಯ ನಂತರ ಮೊನ್ನೆ ಶನಿವಾರದಂದು (ನವೆಂಬರ್ 28) ಚಂದ್ರನಿಂದ 400 ಕಿಲೋಮೀಟರ್ ದೂರದ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದೆ. ಪರಿಭ್ರಾಮಕವನ್ನು ಕಕ್ಷೆಯಲ್ಲೇ ಉಳಿಸಿ, ನೌಕೆಯಿಂದ ಬೇರ್ಪಟ್ಟ ಇಳಿವಾಹನವೊಂದು ಚಂದ್ರನತ್ತ ಹೊರಡುತ್ತದೆ. ಮುಂದಿನ ಭಾನುವಾರದ ಹೊತ್ತಿಗೆ ಅದು ಚಂದ್ರನ ಕಗ್ಗತ್ತಲ ಪ್ರದೇಶವೆಂದೇ ಗುರುತಿಸಲಾದ ಭಾಗದಲ್ಲಿ ಇಳಿಯಲಿದೆ. ಡಿಸೆಂಬರ್ 15-17ರ ಹೊತ್ತಿಗೆ ನೌಕೆಯು ತನ್ನ 23 ದಿನಗಳ ಯಾತ್ರೆಯನ್ನು ಮುಗಿಸಿ ಭೂಮಿಗೆ ಹಿಂದಿರುಗುವ ನಿರೀಕ್ಷೆಯಿದೆ. ‘ಚಾಂಗ್ಹ’ ಎಂಬುದು ಚೀನೀ ಪುರಾಣಗಳಲ್ಲಿ ಉಲ್ಲೇಖವಾಗಿರುವ ಚಂದ್ರ ದೇವತೆಯ ಹೆಸರು. ಇದೇ ನಾಮಸರಣಿಯ ನಾಲ್ಕು ನೌಕೆಗಳು ಈ ಹಿಂದೆ ಚಂದ್ರಾನ್ವೇಷಣೆಗೆಂದೇ ಉಡ್ಡಯಣೆಯಾಗಿವೆ. ಈ ಬಾರಿಯ ವಿಶೇಷವೇನೆಂದರೆ ಚಂದ್ರನ ಕಕ್ಷೆಯಲ್ಲಿ ಪರಿಭ್ರಮಿಸುವ ನೌಕೆಯ ಜತೆಗೆ ಚಂದ್ರನ ನೆಲದ ಮೇಲಿಳಿಯುವ ಮತ್ತೊಂದು ನೌಕೆಯಿರುತ್ತದೆ. ಎರಡನೆಯ ನೌಕೆಯೊಳಗಿಂದ ಹೊರಬರುವ ಯಂತ್ರದಲ್ಲಿ ಒಂದು ರೊಬಾಟ್ (ಯಂತ್ರಮಾನವ), ರಂಧ್ರ ಮಾಡಬಲ್ಲ ಕೊರಕ, ಕೊರೆದ ಮಾದರಿಯನ್ನು ಪರಿಶೀಲಿಸುವ ಯಂತ್ರ, ರಾಸಾಯನಿಕ ವಿಶ್ಲೇಷಕ, ಕ್ಯಾಮೆರಾ, ರೇಡಾರ್ ಹಾಗೂ ಕೊರೆದದ್ದನ್ನು ಎತ್ತಿ ಹಾಕಬಲ್ಲ ಬೋಗುಣಿಗಳಿರುತ್ತವೆ. ಸಂಗ್ರಹಿಸಿದ ಸಾಮಗ್ರಿಯನ್ನು ಈ ವಾಹನವು ಒಂದು ಪೆಟ್ಟಿಗೆಯಲ್ಲಿಟ್ಟು ಭೂಮಿಗೆ ಹಿಂದಿರುಗುವ ವಾಹನದಲ್ಲಿ ಅದನ್ನು ಅಡಕ ಮಾಡುತ್ತದೆ. ಅಲ್ಲಿಂದ ಮೇಲೇರುವ ಹಿಂದಿರುಗುವ ವಾಹನವು ಚಂದ್ರನನ್ನು ಪರಿಭ್ರಮಿಸುತ್ತಿರುವ ನೌಕೆಯ ಕಕ್ಷೆಯನ್ನು ಪ್ರವೇಶಿಸಿ, ಅದಕ್ಕೆ ಜೋಡಣೆಗೊಳ್ಳುತ್ತದೆ. ಈ ನೌಕೆಯು ಚಂದ್ರನ ಕಕ್ಷೆಯನ್ನು ತೊರೆದು ಭೂಮಿಯತ್ತ ತನ್ನ ಪಯಣವನ್ನು ಆರಂಭಿಸುತ್ತದೆ. ಡಿಸೆಂಬರ್ ಮಧ್ಯಭಾಗದ ಹೊತ್ತಿಗೆ ಅದು ಭೂಮಿಗೆ ಹಿಂದಿರುಗುವ ಹಿಂದಿರುಗುತ್ತದೆ. ಈ ಸಂದರ್ಭದಲ್ಲಿ ಅದು ಅಲ್ಲಿನ ನೆಲವನ್ನು ಎರಡು ಮೀಟರ್ಗಳಷ್ಟು ಬಗೆದು, ಸುಮಾರು ಎರಡು ಕಿಲೋಗ್ರಾಂ ಮಾದರಿಯನ್ನು ಸಂಗ್ರಹಿಸಲಿದೆ. ಚಂದ್ರಾನ್ವೇಷಣೆಯಲ್ಲಿ ಇದು ಚೀನಾ ದೇಶದ ಆರನೆಯ ನೌಕಾ ಉಡ್ಡಯಣೆ. ಜತೆಗೆ ಇದುವರೆಗೂ ಕೈಗೊಂಡಿರುವ ಯಾತ್ರೆಗಳಲ್ಲಿ ಇದು ಅತಿ ಕಠಿಣವಾದದ್ದು. ಮೊದಲೆರಡು ನೌಕೆಗಳು ಚಂದ್ರನ ಕಕ್ಷೆಯಲ್ಲಿ ಪರಿಭ್ರಮಿಸಿದ್ದವು. ಮುಂದಿನೆರಡು ನೌಕೆಗಳಲ್ಲಿ ಪರಿಭ್ರಾಮಕಗಳ ಜತೆಗೆ ಇಳಿವಾಹನಗಳೂ ಇದ್ದವು. ‘ಚಾಂಗ್ಹ-4’ ನೌಕೆಯು ಚಂದ್ರನ ಅತಿದೂರದ ಭಾಗದತ್ತ ಜನವರಿ 2019ರಲ್ಲಿ ಇಳಿದಿತ್ತು. 2014ರಲ್ಲಿ ಉಡ್ಡಯಣೆಯಾದ ‘ಚಾಂಗ್ಹ-5ಟಿ1’ ನೌಕೆಯು ಚಂದ್ರನಿಂದ ಅತಿ ವೇಗದಲ್ಲಿ ಹಿಂದಿರುಗುವ ಯೋಜನೆಯನ್ನು ಪರಿಶೀಲಿಸಿತ್ತು. ಹಾಗೆಯೇ ಭೂವಾತಾವರಣದ ಮರುಪ್ರವೇಶವು ಒಮ್ಮೆ ತಪ್ಪಿದರೆ ಸರಿಪಡಿಸಿಕೊಳ್ಳುವುದು ಹೇಗೆಂಬುದನ್ನು ಪ್ರಾಯೋಗಿಕವಾಗಿ ಕಂಡುಕೊAಡಿತ್ತು. ಜತೆಗೆ ಪ್ರಸ್ತುತ ‘ಚಾಂಗ್ಹ-5’ ನೌಕೆ ಇಳಿಯಬಹುದಾದ ಜಾಗದ ಚಿತ್ರವನ್ನೂ ತೆಗೆದುಕೊಂಡು ಬಂದಿತ್ತು. ಚಂದ್ರನ ಮೇಲೆ ಮಾನವ ಕಾಲಿಡಲು ಸಾಧ್ಯವಾದದ್ದು ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ನಡೆಸುತ್ತಿದ್ದ ಶೀತಲ ಸಮರದಿಂದಲೇ. 1950ರ ದಶಕದಲ್ಲಿ ತಂತ್ರಜ್ಞಾನಕ್ಕೊಂದು ಪ್ರತಿ-ತಂತ್ರಜ್ಞಾನವನ್ನು ಪೈಪೋಟಿಯ ಮೇಲೆ ಸೃಷ್ಟಿಸುತ್ತಾ ಬಂದ ಈ ಎರಡೂ ದೇಶಗಳಿಗೆ ವೈಜ್ಞಾನಿಕ ಪ್ರಭುತ್ವ ಸಾಧಿಸಬೇಕೆಂಬ ಗುರಿಯಿತ್ತು. ಪೂರ್ವ ಮತ್ತು ಪಶ್ಚಿಮಗಳ ಈ ಮುಸುಕಿನ ಯುದ್ಧ ಭುವಿಯ ಮೇಲಿಂದ ಗಗನಕ್ಕೇರಿದ್ದು ಈ ಸಮಯದಲ್ಲೇ. ಕ್ರಿ.ಶ.1959ರಲ್ಲಿ ಭೂಮಿಯನ್ನು ಪರಿಭ್ರಮಿಸುವ ಮೊತ್ತ ಮೊದಲ ಕೃತಕ ಉಪಗ್ರಹವೊಂದನ್ನು ಅಂತರಿಕ್ಷಕ್ಕೆ ತೂರಿ ಬಿಡುವುದರ ಜತೆಗೆ ಚಂದ್ರನ ಸಮೀಪ ಹಾದು ಹೋಗುವ `ಫ್ಲೈಬೈ' ಒಂದನ್ನು ಉಡ್ಡಯಿಸಿದ ಸೋವಿಯತ್ ಒಕ್ಕೂಟವು ಜಗತ್ತನ್ನೇ ನಿಬ್ಬೆರಗಾಗಿಸುವುದರ ಜತೆಗೆ ಅಮೆರಿಕವನ್ನು ತಲ್ಲಣಗೊಳಿಸಿತು. ಆಗ ಶುರುವಾದ ಸಾಮಾಜಿಕ ಹಾಗೂ ರಾಜಕೀಯ ಒತ್ತಡಗಳಿಂದಾಗಿ ಅಮೆರಿಕ ಚಂದ್ರಾನ್ವೇಷಣೆಗಾಗಿ `ಅಪೋಲೋ' ಕಾರ್ಯವನ್ನು ಹಮ್ಮಿಕೊಂಡಿತು. ತನ್ನ `ಲೂನಾ' ಕಾರ್ಯಕ್ರಮದ ಮೂಲಕ ಮಾನವ ರಹಿತ ಚಂದ್ರಾನ್ವೇಷಣೆಯಲ್ಲಿ ಮೊದಲಿಗನಾದ ಸೋವಿಯತ್ ಒಕ್ಕೂಟದ 20 ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಅನೇಕ `ಮೊದಲಿಗ' ಬಿರುದುಗಳನ್ನು ಗಳಿಸಿದೆ. ಮೊದಲನೆಯ `ಪತ್ತೆದಾರ' ನಳಿಕೆಯನ್ನು (ಪ್ರೋಬ್) ಚಂದ್ರನಿಗೆ ಗುದ್ದಿದ್ದ, ಮೊತ್ತ ಮೊದಲ `ಬಾನಾಡಿ' (ಫ್ಲೈಬೈ) ಸುತ್ತಿಸಿ ಚಂದ್ರನ ಚಿತ್ರ ಗ್ರಹಿಸಿದ, ಮೊತ್ತ ಮೊದಲ (ಮಾನವ ರಹಿತ) ನೌಕೆಯನ್ನು ಸಲೀಸಾಗಿ ಇಳಿಸಿದ, ಮೊದಲ ಚಂದ್ರ ಪರಿಭ್ರಾಮಕ (ಆರ್ಬಿಟರ್) ಉಡ್ಡಯಿಸಿದ, ಪತ್ತೆದಾರ ನಳಿಕೆಯನ್ನು ಚಂದ್ರನ ಸುತ್ತ ಮೊದಲನೆಯದಾಗಿ ಸುತ್ತಿಸಿದ ಹೆಗ್ಗಳಿಕೆ ಸೋವಿಯತ್ ಒಕ್ಕೂಟಕ್ಕಿದೆ. ಇಷ್ಟೆಲ್ಲ ಸಾಹಸ ಮಾಡಿದರೂ ಮಾನವನನ್ನು ಚಂದ್ರನ ಮೇಲೆ ಇಳಿಸಲು ಮಾತ್ರ ಸೋವಿಯತ್ ಒಕ್ಕೂಟಕ್ಕೆ ಸಾಧ್ಯವಾಗಲಿಲ್ಲ. 1976ರ ನಂತರ ಚಂದ್ರನನ್ನು ಮರೆತು ಅಂತರಿಕ್ಷ ನಿಲ್ದಾಣ `ಮೀರ್' ನಿರ್ಮಾಣದತ್ತ ತನ್ನ ಗಮನ ಹರಿಸತೊಡಗಿತು. ಇತ್ತ ಅಮೆರಿಕ 1969ರಿಂದ 1972ರೊಳಗೆ ಆರು ಬಾರಿ ಯಶಸ್ವಿಯಾಗಿ ಚಂದ್ರಯಾತ್ರಿಗಳನ್ನು ಇಳಿಸಿ ಗೆಲುವಿನ `ಹಮ್ಮಿನಿಂದ' ತನ್ನ ಚಂದ್ರ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿತು. ಈ ಅನ್ವೇಷಣೆಗಳಲ್ಲಿ ಚಂದ್ರಯಾತ್ರಿಗಳು 380 ಕಿಲೋಗ್ರಾಮ್ ತೂಕದಷ್ಟು ಚಂದ್ರಶಿಲೆಗಳನ್ನು ತಂದಿದ್ದಾರೆ. 32 ಸಹಸ್ರಕ್ಕೂ ಹೆಚ್ಚಿನ ಛಾಯಾಚಿತ್ರಗಳನ್ನು ತೆಗಿದಿದ್ದಾರೆ. ಚಂದ್ರ ನೆಲದಿಂದ ಕಲ್ಲು-ಮಣ್ಣಿನ ಮಾದರಿಗಳನ್ನು ತರುವುದು ಹೊಸ ಸಂಗತಿಯೇನಲ್ಲ. 1969ರಲ್ಲಿ ಚಂದ್ರ ನೆಲದ ಮೇಲೆ ಮೊದಲ ಬಾರಿ ಕಾಲಿಟ್ಟ ಅಮೆರಿಕದ ‘ಅಪೋಲೊ-11’ ನೌಕೆಯ ಯಾತ್ರಿಗಳು ಅಲ್ಲಿಂದ ಹಿಂದಿರುಗಿ ಬರುವಾಗ 22 ಕಿಲೋಗ್ರಾಂನಷ್ಟು ಚಂದ್ರ-ಮಾದರಿಗಳನ್ನು ಭೂಮಿಗೆ ತಂದಿದ್ದರು. ಮಾನವನನ್ನು ಚಂದ್ರನ ಮೇಲೆ ಇಳಿಸಲಾಗದಿದ್ದರೂ ಸೋವಿಯತ್ ಒಕ್ಕೂಟದ ನೌಕೆಗಳು ತಂದಿರುವ ಚಂದ್ರ ಶಿಲೆಗಳು `ಶೀತಲ ಸಮರ'ದಲ್ಲಿ ಗೆಲುವನ್ನು ತಂದುಕೊಟ್ಟಿವೆ. ‘ಲೂನ-16’ ಹಾಗೂ ‘ಲೂನ-20’ ನೌಕೆಗಳು ತಂದುಕೊಟ್ಟ ರೆಗೊಲಿತ್ ಶಿಲೆಗಳು ಅಪೋಲೋ ತಂದ ಶಿಲೆಗಳಿಗಿಂತ ಪರಿಶುದ್ಧವಾಗಿದೆ. ಕಾರಣ, ಅಪೋಲೋ ಇಳಿದಾಣಗಳು ಸೂಕ್ಷ್ಮ ಉಲ್ಕಾಪಾತಕ್ಕೆ ಬಲಿಯಾದ ಜಾಗಗಳಾಗಿದ್ದರಿಂದ ಭೂ ವಿಜ್ಞಾನಿಗಳಿಗೆ ಬೇಕಾಗಿರುವ ಕೆಲವೊಂದು ಮಾಹಿತಿ ಆ ಶಿಲೆಗಳಲ್ಲಿ ಇರಲಿಲ್ಲ. ‘ಲೂನ’ ತಂದ ಶಿಲೆಗಳಿಂದ ಚಂದ್ರನ ನಿಖರ ವಯಸ್ಸಿನ ಲೆಕ್ಕಾಚಾರ ನಡೆಯುತ್ತಿದೆ. ಚಂದ್ರನ ಜಾತಕ ಬಯಲಾದ ನಂತರ ಭೂಮಿ, ಇನ್ನಿತರ ಸೌರಗ್ರಹಗಳು, ಕಡೆಗೆ ಸೂರ್ಯನ ಇತಿಹಾಸವನ್ನೂ ಬಯಲಿಗೆಳೆಯ ಬೇಕೆಂಬ ಆಕಾಂಕ್ಷೆ ವಿಜ್ಞಾನಿಗಳದು. ಚಂದ್ರನ ಮೇಲೆ ಮನುಷ್ಯ ಕಾಲಿಟ್ಟ ಐವತ್ತು ವರ್ಷಗಳ ನಂತರವೂ ಚಂದ್ರಾನ್ವೇಷಣೆಯ ಬಗ್ಗೆ ಭಾರತ, ಚೀನಾ ಸೇರಿದಂತೆ ಯೂರೋಪ್ ದೇಶಗಳು ಮತ್ತು ಅಮೆರಿಕ ಆಸಕ್ತಿ ತೋರುತ್ತಿವೆ. ಕಾರಣ, ಭೂಮಿ-ಚಂದ್ರ ವ್ಯವಸ್ಥೆಯ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳನ್ನು ಅರಿಯಬೇಕೆಂಬ ಅದಮ್ಯ ಕುತೂಹಲ. ಚಂದ್ರನ ಮೇಲಿನ ಕುಳಿಗಳ ಛಾಯಾಚಿತ್ರಗಳಿಂದ ಅವುಗಳ ಗಾತ್ರವನ್ನು ಹೆಚ್ಚೂ ಕಮ್ಮಿ ನಿರ್ಧರಿಸಲು ಅತ್ಯಾಧುನಿಕ ಉಪಕರಣಗಳನ್ನು ಬಳಕೆ ಮಾಡಲಾಗಿದೆ. ಈಗಾಗಲೇ ಪತ್ತೆಯಾಗಿರುವ 6 ಕಿಲೋಮೀಟರ್ ಆಳದ ಎರಡು ಕುಳಿಗಳ ವ್ಯಾಸ 630 ಮತ್ತು 490 ಕಿಲೋಮೀಟರ್ಗಳಷ್ಟಿದೆ. ಮತ್ತೊಂದು 700 ಕಿಲೋಮೀಟರ್ ವ್ಯಾಸದ ಕುಳಿಯ ಆಳ 3 ಕಿಲೋಮೀಟರ್! ಸದ್ಯಕ್ಕೆ ವಿಜ್ಞಾನಿಗಳು ಇಂಥ ಕುಳಿಗಳ ನಿರ್ಮಾಣಕ್ಕೆ ಎಷ್ಟು ಗಾತ್ರದ ಕಾಯ ಎಷ್ಟು ವೇಗದಿಂದ ಚಂದ್ರನನ್ನು ಬಡಿದಿರಬಹುದೆಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಜತೆಗೆ ಈ ಕುಳಿಗಳು ಎಷ್ಟು ಕೋಟಿ ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದೆಂಬ ಅಂದಾಜು ಮಾಡುತ್ತಿದ್ದಾರೆ. ಚಂದ್ರನ ಮೇಲಿರುವ ಕುಳಿಗಳನ್ನು ಅಭ್ಯಸಿಸಿ ಭೂಮಿಯ ಮೇಲೆ ಅನ್ಯ ಆಕಾಶಕಾಯಗಳು ಎಷ್ಟು ಬಾರಿ, ಎಂಥ ಹೊಡೆತಗಳನ್ನು ಕೊಟ್ಟಿದ್ದವೆಂಬುದನ್ನು ಲೆಕ್ಕಾಚಾರ ಮಾಡಬೇಕೆಂಬ ತುಡಿತ ಅವರಿಗೆ. ಈ ಅಧ್ಯಯನಗಳಿಂದ ಚಂದ್ರ-ಭೂಮಿ-ಸೌರಗ್ರಹಗಳು-ಸೂರ್ಯರ ಸೃಷ್ಟಿಯ ಹಿನ್ನೆಲೆ ಅರಿಯುವ ಪ್ರಯತ್ನ ವಿಜ್ಞಾನಿಗಳದು. ಇವೆಲ್ಲಕ್ಕಿಂತ ಹೆಚ್ಚಾಗಿ ಭೂಮಿಗೆ ಅತ್ಯಂತ ಸಮೀಪವಿರುವ ಸೌರ ಕೂಟ ಬಂಧುವೆಂದರೆ ಚಂದ್ರನೇ. ಮಂಗಳ ಮತ್ತಿತರ ಗ್ರಹಗಳಿಗೆ `ವಲಸೆ' ಹೋಗುವ ಮುನ್ನ ತನ್ನ ಬುದ್ಧಿ, ಸಾಮರ್ಥ್ಯಗಳನ್ನು ಮಿತವ್ಯಯಕಾರಿಯಾಗಿ ಪರೀಕ್ಷಿಸಲು ಚಂದ್ರನಿಗಿಂತ ಮಿಗಿಲಾದ ಪರೀಕ್ಷಾ ಕೇಂದ್ರ ಮತ್ತೊಂದಿಲ್ಲ. ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳನ್ನು ಹಮ್ಮಿಕೊಂಡಿರುವ `ಇಸ್ರೋ' ಸಹಾ ಇದೇ ಉದ್ದಿಶ್ಯದಿಂದ ಚಂದ್ರಾನ್ವೇಷಣೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿದೆ. ಪ್ರಸ್ತುತ ಉಡ್ಡಯಣೆಯ ವಿಷಯ ಕುರಿತಂತೇ ಚರ್ಚಿಸುವುದಾದರೆ ಚೀನಾದ ನೌಕೆಯು ಚಂದ್ರನ ಪಶ್ಚಿಮಾರ್ಧ ಗೋಳದಲ್ಲಿನ ‘ಮಾನ್ಸ್ ರುಮ್ಕರ್’ ಎಂಬಲ್ಲಿ ಇಳಿಯಲಿದೆ. ಕೋಟ್ಯಂತರ ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಜ್ವಾಲಾಮುಖಿಗಳು ಭುಗಿಲೆದ್ದಿದ್ದವೆಂದು ಚಂದ್ರನ ಇತಿಹಾಸ ಹೇಳುತ್ತದೆ. 70 ಕಿಲೋಮೀಟರ್ನಷ್ಟು ವಿಶಾಲವಾಗಿರುವ ಈ ನಿಶ್ಯಕ್ತ ಅಗ್ನಿಪರ್ವತವು ನೆಲದಿಂದ ಒಂದು ಕಿಲೋಮೀಟರ್ ಎತ್ತರಕ್ಕೆ ಚಾಚಿಕೊಂಡಿದೆ. ಕಡೆಯ ಬಾರಿಗೆ ಈ ಅಗ್ನಿಪರ್ವತವು ಒಂದು ಶತಕೋಟಿ ವರ್ಷಗಳ ಹಿಂದೆ ಸಿಡಿದಿರಬಹುದೆಂದು ಅಂದಾಜು ಮಾಡಲಾಗಿದೆ. ಆದ್ದರಿಂದ 460 ಕೋಟಿ ವರ್ಷಗಳ ಚಂದ್ರನ ಇತಿಹಾಸಕ್ಕೆ ಹೋಲಿಸಿದರೆ ಈ ಜ್ವಾಲಾಮುಖಿ ಸಿಡಿತದ ಕಲ್ಲುಗಳು ತೀರಾ ಇತ್ತೀಚಿನವು. ಚಂದ್ರನ ಉಳಿದ ಭಾಗದಲ್ಲಿರುವಂತೆ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಳಿಗಳಿಲ್ಲ. ಈ ಹಿಂದಿನ ‘ಅಪೋಲೊ’ ಹಾಗೂ ‘ಲೂನ’ ಯಾತ್ರೆಗಳಲ್ಲಿ ಸಂಗ್ರಹಿಸಿರುವ ಚಂದ್ರಶಿಲೆಗಳು ಮುನ್ನೂರು ಕೋಟಿ ವರ್ಷಗಳಷ್ಟು ಹಿಂದಿನವು. ಚೀನಾ ಇದೀಗ ನೌಕೆಯನ್ನು ಚಂದ್ರನ ಮೇಲೆ ಇಳಿಸುವ ಜರೂರತ್ತೇನಿದೆ? ಎಂಬ ಪ್ರಶ್ನೆಗೆ ಅಲ್ಲಿನ ಅಧ್ಯಕ್ಷರಾದ ಶೀ ಜಿನ್ಪಿಂಗ್ ಅವರದ್ದು ಒಂದೇ ಉತ್ತರ: ‘ಚೀನಾದ ರಾಷ್ಟ್ರೀಯ ಪುನರುತ್ಥಾನದ ಕನಸುಗಳನ್ನು ನನಸಾಗಿಸುವುದು’.


from India & World News in Kannada | VK Polls https://ift.tt/36pfqHJ

ಮಂಗಳೂರಿನಲ್ಲಿ ಉಗ್ರ ಬರಹ: ಆರೋಪಿಗಳ ಸುಳಿವಿಲ್ಲ, ಪೊಲೀಸರಿಗೆ ಬಿಸಿತುಪ್ಪವಾದ ಪ್ರಕರಣ!

ಮಂಗಳೂರು: ನಗರದ ಬಿಜೈ ಬಟ್ಟಗುಡ್ಡೆ ವಸತಿ ಸಮುಚ್ಚಯ ಕಾಂಪೌಂಡ್‌ನಲ್ಲಿ ಉಗ್ರ ಬರಹ ಪತ್ತೆಯಾಗಿ ಮೂರು ದಿನ, ಕೋರ್ಟ್‌ ಹಳೆ ಪೊಲೀಸ್‌ ಔಟ್‌ಪೋಸ್ಟ್‌ ಗೋಡೆ ಬರಹ ಪತ್ತೆಯಾಗಿ ಒಂದು ದಿನ ಕಳೆದಿದೆ. ಆದರೆ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದ ಯಾವುದೇ ಕುರುಹು ಪೊಲೀಸ್‌ ತನಿಖಾ ತಂಡಕ್ಕೆ ಲಭಿಸಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಿಜೈ ವಸತಿ ಸಮುಚ್ಚಯ ಕಾಂಪೌಂಡ್‌ನಲ್ಲಿ ಸಂಘ ಪರಿವಾರದವರೇ ಲಷ್ಕರ್‌ ತಯ್ಬಾ-ತಾಲಿಬಾನ್‌ಗಳನ್ನು ಆಹ್ವಾನಿಸಲು ಅವಕಾಶ ನೀಡಬೇಡಿ ಎಂದು ಬರೆದಿದ್ದರೆ, ಜಿಲ್ಲಾ ಕೋರ್ಟ್‌ ಸಮೀಪದ ಹಳೆ ಪೊಲೀಸ್‌ ಔಟ್‌ಪೋಸ್ಟ್‌ನ ಗೋಡೆಯ ಮೇಲೆ ಪ್ರವಾದಿ ನಿಂದನೆ ಮಾಡಿದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂದು ಬರೆಯಲಾಗಿತ್ತು. ಈ ಎರಡು ಪ್ರಕರಣದ ತನಿಖೆಗೆ ಕೇಂದ್ರ ಉಪವಿಭಾಗ ಎಸಿಪಿ ಜಗದೀಶ್‌ ನೇತೃತ್ವದ ತಂಡ, ಕದ್ರಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಸವಿತ್ರತೇಜ, ಸಿಸಿಬಿ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌, ಬಂದರು ಇನ್‌ಸ್ಪೆಕ್ಟರ್‌ ಗೋವಿಂದರಾಜ್‌ ನೇತೃತ್ವದ ತಂಡವನ್ನು ನಿಯೋಜಿಸಲಾಗಿದ್ದು, ನಾನಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆದರೆ ಸೋಮವಾರದವರೆಗೆ ಆರೋಪಿಗಳ ಪತ್ತೆಗೆ ಸಂಬಂಧಿಸಿದ ಬಲವಾದ ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಸಿಸಿ ದಾಖಲೆಯಿಲ್ಲಘಟನೆಗೆ ಸಂಬಂಧಿಸಿ ನಗರದ ನಾನಾ ಕಡೆಗಳ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಯುತ್ತಿದ್ದು, ಆರೋಪಿಗಳ ಸ್ಪಷ್ಟ ಚಹರೆ ಸಿಕ್ಕಿಲ್ಲ. ನಗರದ ಹಲವೆಡೆ ಸಿಸಿ ಕ್ಯಾಮೆರಾಗಳು ನಿರ್ವಹಣೆಯಿಲ್ಲದೆ ಕೆಟ್ಟು ಹೋಗಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.


from India & World News in Kannada | VK Polls https://ift.tt/37kFbIp

ಜೆಡಿಎಸ್‌ ತೊರೆಯಲ್ಲ, ಮಾಧ್ಯಮಗಳ ವರದಿ ಸುಳ್ಳು! ವೈಎಸ್‌ವಿ ದತ್ತ ಸ್ಪಷ್ಟನೆ

ಬೆಂಗಳೂರು: ಮಾಜಿ ಶಾಸಕ ಜೆಡಿಎಸ್‌ ತೊರೆಯುತ್ತಾರೆ ಎಂಬ ಊಹಾಪೋಹಕ್ಕೆ ಸ್ವತಃ ಅವರೇ ಬ್ರೇಕ್ ಹಾಕಿದ್ದಾರೆ. ಕೆಲವು ದಿನಗಳಿಂದ ರಾಜಕೀಯವಾಗಿ ಅಷ್ಟೇನು ಸಕ್ರಿಯವಾಗಿಲ್ಲದ ದತ್ತ ಪಕ್ಷವನ್ನು ತೊರೆಯುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು. ಕೆಲವು ಮಾಧ್ಯಮಗಳಲ್ಲೂ ಈ ವರದಿ ಪ್ರಸಾರ ಆಗಿತ್ತು. ಆದರೆ ಸ್ವತಃ ದತ್ತಾ ಅವರೇ ಇದನ್ನು ನಿರಾಕರಣೆ ಮಾಡಿದ್ದಾರೆ. ಈ ಕುರಿತಾಗಿ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಸ್ಪಷ್ಟೀಕರಣ ನೀಡಿರುವ ಅವರು, ಸೋಮವಾರ ರಾತ್ರಿ ಎಚ್‌ಡಿ ದೇವೇಗೌಡರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿಕೊಂಡು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ಮಾತನಾಡಿಕೊಂಡು ಬಂದಿದ್ದೇನೆ.ನನ್ನ ತಲೆಯಲ್ಲಿ ಇದುವರೆಗೂ ಬಂದಿಲ್ಲದ ಆಲೋಚನೆಯನ್ನು ಟಿವಿ ಅವರು ಸುದ್ದಿ ಅಂತ ಪ್ರಸಾರ ಮಾಡಿದ್ದಾರೆ.ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸುಮ್ಮನೆ ಇವನ್ನೆಲ್ಲ ನಿರ್ಲಕ್ಷಿಸಿ. ಜೆಡಿಎಸ್ ಪಕ್ಷ ಸಂಘಟನೆ ಕಡೆ ಗಮನ ಕೊಡೋಣ.ಮೊನ್ನೆ ಪಕ್ಷ ಸಂಘಟನೆ ಬಗ್ಗೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಪಕ್ಷದ ಕಚೇರಿಯಲ್ಲಿ ಮಾತನಾಡಿದ್ದೇನೆ ಅದರ ಕಡೆ ಗಮನ ಕೊಡೋಣ ಎಂದು ಕಾರ್ಯಕರ್ತರಲ್ಲಿ ವಿನಂತಿ ಮಾಡಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಬಂದಿದ್ದ ಆಫರ್ ವೈಎಸ್‌ವಿ ದತ್ತ ಅವರಿಗೆ ಕರ್ನಾಟಕ ಆಮ್‌ ಆದ್ಮಿ ಪಕ್ಷದಿಂದ ಆಫರ್‌ ಬಂದಿತ್ತು. ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಮ್‌ ಆದ್ಮಿ ಪಕ್ಷದ ಉಸ್ತುವಾರಿಯಾಗಿರುವ ರೋಮಿ ಭಾಟಿ ಹಾಗೂ ರಾಜ್ಯ ಸಂಚಾಲಯ ಪೃಥ್ವಿ ರೆಡ್ಡಿ ದತ್ತಾ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನ ನೀಡಿದ್ದರು.ಭೇಟಿ ವಿಚಾರವನ್ನು ದತ್ತ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲೂ ಹಂಚಿಕೊಂಡಿದ್ದರು. ಆದರೆ ಆಮ್‌ ಆದ್ಮಿ ಪಕ್ಷದ ಆಹ್ವಾನವನ್ನು ದತ್ತಾ ನಿರಾಕರಿಸಿದ್ದಾರೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಇರುವರೆಗೂ ಪಕ್ಷ ನಿಷ್ಠೆ ಜೆಡಿಎಸ್‌ಗೆ ಎಂದು ಸ್ಪಷ್ಟಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಪಕ್ಷ ಸಂಘಟನೆಗಿಂತ ಆನ್‌ಲೈನ್‌ ಟ್ಯೂಷನ್‌ನಲ್ಲೇ ಬ್ಯುಸಿ ತಮ್ಮ ವಿಭಿನ್ನ ರಾಜಕೀಯ ನಡೆಯಿಂದ ಗಮನ ಸೆಳೆಯುವ ವೈಎಸ್‌ವಿ ದತ್ತ ಇತ್ತೀಚೆಗೆ ಜೆಡಿಎಸ್‌ ಪಕ್ಷದಲ್ಲಿ ಅಷ್ಟೊಂದು ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಪಕ್ಷದ ಕೆಲವೊಂದು ನಡೆಯಿಂದ ಅವರು ಅಸಮಾಧಾನಿತರಾಗಿದ್ದಾರೆ ಎಂಬ ಮಾಹಿತಿಯೂ ಇದೆ. ಸಕ್ರಿಯ ಚಟುವಟಿಕೆಯಿಂದ ದೂರವಾಗಿದ್ದ ಅವರು ಲಾಕ್‌ಡೌನ್ ಸಂದರ್ಭದಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂದು ಆನ್‌ಲೈನ್‌ನಲ್ಲಿ ಗಣಿತ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಮತ್ತೆ ಜೆಡಿಎಸ್‌ ಪಕ್ಷದ ಸಭೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


from India & World News in Kannada | VK Polls https://ift.tt/3o8tona

ಗಮನಿಸಿ: ಮೆಜೆಸ್ಟಿಕ್‌-ಯಲಹಂಕ-ಯಶವಂತಪುರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಓಡಲಿದೆ 3 ಹೆಚ್ಚುವರಿ ರೈಲು!

ಬೆಂಗಳೂರು: ನೈಋತ್ಯ ರೈಲ್ವೆ ವಿಭಾಗವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಮೂರು ರೈಲುಗಳ ಸಂಚಾರವನ್ನು ಶೀಘ್ರದಲ್ಲೇ ಆರಂಭಿಸಲಿದೆ. ಸಿಲಿಕಾನ್ ಸಿಟಿಯಿಂದ 5 ಕಿಲೋ ಮೀಟರ್ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ಇತ್ತೀಚಿಗಷ್ಟೇ ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಈ ನೂತನ ರೈಲ್ವೆ ನಿಲ್ದಾಣವು ಬಳಕೆಗೆ ರೆಡಿಯಾಗಿದೆ. ಈ ಹಿನ್ನೆಲೆ ನೈಋತ್ಯ ರೈಲ್ವೆ ವಿಭಾಗವು ಈ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಲಾಕ್ ಡೌನ್ ಘೋಷಣೆಗೂ ಮೊದಲು ವಿಮಾನ ನಿಲ್ದಾಣ ಹಾಗೂ ನಗರದ ನಡುವೆ ನಾಲ್ಕು ಜೋಡಿ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಇದರ ಜೊತೆಗೆ ಇದೀಗ ಹೆಚ್ಚುವರಿಯಾಗಿ ಮೂರು ರೈಲುಗಳ ಸಂಚಾರ ನಡೆಸಲು ಮುಂದಾಗಿದೆ. ಪ್ರಮುಖವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಗಳನ್ನು ಗುರಿಯಾಗಿಸಿ ಈ ಸೇವೆ ಆರಂಭಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಲಹಂಕ ಹಾಗೂ ಯಶವಂತಪುರದಿಂದ ಒಂದೊಂದು ರೈಲನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಡಲಾಗುತ್ತದೆ. ಬೆಳಗ್ಗೆ 4.45ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಮೊದಲ ರೈಲು ವಿಮಾನ ನಿಲ್ದಾಣಕ್ಕೆ ತೆರಳಲಿದೆ. ಯಲಹಂಕದಿಂದ ಬೆಳಗ್ಗೆ 7 ಗಂಟೆ ಹಾಗೂ ಯಶವಂತಪುರದಿಂದ ಕೂಡ 7 ಗಂಟೆಗೆ ಒಂದೊಂದು ರೈಲುಗಳು ವಿಮಾನ ನಿಲ್ಧಾಣದತ್ತ ಹೊರಡಲಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈಋತ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಇ ವಿಜಯ, ವಿಮಾನ ನಿಲ್ದಾಣ ನಿರ್ವಹಣೆ ಪ್ರಾಧಿಕಾರದೊಂದಿ ದೀರ್ಘ ಚರ್ಚೆ ಬಳಿಕ ಅನುಮೋದನೆಗಾಗಿ ನಾವು ರೈಲ್ವೇ ಮಂಡಳಿ, ಕೇಂದ್ರ ರೈಲ್ವೇ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ಇದರಿಂದ ನೆರವಾಗಲಿದೆ ಎಂಬುದು ಕೂಡ ಚರ್ಚೆ ವೇಳೆ ಬಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಅನ್‌ಲಾಕ್‌ ಬಳಿಕ ಅನುಮತಿ ನೀಡುತ್ತೇವೆ ಎಂದು ತಿಳಿಸಿರುವುದಾಗಿ ವಿಜಯನ್‌ ಮಾಹಿತಿ ನೀಡಿದ್ದಾರೆ. ಇನ್ನು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಕೇವಲ 30 ರೂಪಾಯಿ ಇರಲಿದೆ. ಯಲಹಂಕದಿಂದ 10 ರೂಪಾಯಿ ಟಿಕೆಟ್‌ನಲ್ಲಿ ಏರ್ ಪೋರ್ಟ್ ತಲುಪಬಹುದಾಗಿದೆ.


from India & World News in Kannada | VK Polls https://ift.tt/3fWksyy

ರಾಜ್ಯದ ರೈತರಿಗೆ ಸಂತಸ ತಂದ ಕೊಬ್ಬರಿ ಬೆಲೆ, ಕ್ವಿಂಟಾಲ್‌ಗೆ ಈಗ 16 ಸಾವಿರ!

ತುರುವೇಕೆರೆ (ತುಮಕೂರು): ರಾಜ್ಯದ ಸಿಹಿ ಕೊಬ್ಬರಿಗೆ ಅಂತಾರಾಜ್ಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ 13 ಸಾವಿರ ರೂ. ಆಜುಬಾಜಿನಲ್ಲಿದ್ದ ಕ್ವಿಂಟಾಲ್‌ ದರ ದಿಢೀರ್‌ನೇ ಜಿಗಿತ ಕಂಡು 16 ಸಾವಿರ ರೂ. ತಲುಪಿ ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು, ಕೊಬ್ಬರಿ ಇತ್ತೀಚಿನ ದಿನಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚಳಗೊಂಡಿದ್ದರೂ ಮಾರುಕಟ್ಟೆ ಬೆಲೆಯಲ್ಲಿ ತೀವ್ರ ಕುಸಿತಗೊಂಡು ಅವಲಂಬಿತ ರೈತರನ್ನು ಕಂಗಾಲಾಗಿಸಿತ್ತು. ಮಾರ್ಚ್‌ನಿಂದ ಜೂನ್‌ವರೆಗೆ ಕ್ವಿಂಟಾಲ್‌ ದರ 10 ಸಾವಿರ ಆಜುಬಾಜಿನಲ್ಲಿದ್ದು, ಕೊನೆ-ಕೊನೆಯಲ್ಲಿ 9200 ರೂ.ವರೆಗೂ ಕುಸಿಯಿತು. ಈ ವೇಳೆ ರಾಜ್ಯದಾದ್ಯಂತ ತೆಂಗು ಬೆಳೆಗಾರರು ಸಹಾಯಧನದೊಂದಿಗೆ ನ್ಯಾಫೆಡ್‌ ತೆರೆಯಲು ಒತ್ತಾಯಿಸಿದ್ದರು. ಅದರಂತೆ ನ್ಯಾಫೆಡ್‌ ಆರಂಭವಾಗಿತ್ತು. ಇದರ ಮಧ್ಯೆಯೇ ದೀಪಾವಳಿ ನಂತರ 15 ದಿನಗಳ ಅಂತರದಲ್ಲಿ ಕ್ವಿಂಟಾಲ್‌ ದರ 3 ಸಾವಿರ ಹೆಚ್ಚಳ ಕಂಡಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ 12 ಆಜುಬಾಜಿನಲ್ಲಿದ್ದ ದರ ನಿರಂತರ ಏರಿಕೆಯೊಂದಿಗೆ 14, 15 ಸಾವಿರ ದಾಟಿ ಇದೀಗ 16 ಸಾವಿರಕ್ಕೆ ಬಂದು ತಲುಪಿದೆ. ಚಳಿಗಾಲಕ್ಕೆ ಮುನ್ನ ಕೊಬ್ಬರಿ ದಾಸ್ತಾನು ಇರಿಸಿದ್ದ ದೆಹಲಿ, ಮಹಾರಾಷ್ಟ್ರ, ಪುಣೆ, ಉತ್ತರ ಭಾರತದ ರಾಜ್ಯಗಳು ಕೊಬ್ಬರಿಗೆ ಈಗ ದಿಢೀರನೆ ಬೇಡಿಕೆ ಸಲ್ಲಿಸಿವೆ. ಕೊರೆವ ಚಳಿಯ ತೀವ್ರತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೊಬ್ಬರಿ ಎಣ್ಣೆ, ಕೊಬ್ಬರಿ ತಿನಿಸುಗಳಿಗೆ ಬೇಡಿಕೆ ಹೆಚ್ಚಳಗೊಂಡಿದೆ. ರಾಜ್ಯದಲ್ಲಿ ತುಮಕೂರು, ಕರಾವಳಿಯಲ್ಲಿ ಯಥೇಚ್ಚವಾಗಿ ಕೊಬ್ಬರಿ ಬೆಳೆಯುತ್ತಾರೆ.


from India & World News in Kannada | VK Polls https://ift.tt/3ocdmbQ

ಕೊಹ್ಲಿ ಇಲ್ಲದೆ 3 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಸೋಲುವುದು ಖಚಿತವೆಂದ ವಾನ್‌!

ಸಿಡ್ನಿ: ಒಮ್ಮೆ ಶತಕ ಸಿಡಿಸಿದರೆ, ಅವರು ಖಂಡಿತಾ 3-4 ಸೆಂಚೂರಿಗಳನ್ನು ಬಾರಿಸುತ್ತಾರೆ ಎಂದು ಹೇಳಿದ ಇಂಗ್ಲೆಂಡ್‌ ತಂಡದ ಮಾಜಿ ನಾಯಕ , ತಂಡದ ನಾಯಕನ ಅನುಪಸ್ಥಿತಿಯಲ್ಲಿ ಟೀಮ್‌ ಇಂಡಿಯಾ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಸೋಲು ಅನುಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು 0-2 ಅಂತರದಲ್ಲಿ ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದೆ. ಭಾನುವಾರ ಮುಕ್ತಾಯವಾಗಿದ್ದ ಎರಡನೇ ಓಡಿಐನಲ್ಲಿ ಕೊಹ್ಲಿ 87 ಎಸೆತಗಳಲ್ಲಿ 89 ರನ್‌ಗಳನ್ನು ಸಿಡಿಸಿದ್ದರು. ಆದರೂ ಅಂತಿಮವಾಗಿ ಭಾರತ ತಂಡ 51 ರನ್‌ಗಳಿಂದ ಸೋಲು ಅನುಭವಿಸಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ಕೊನೆಯ ಶತಕ ಬಾರಿಸಿದ್ದರು. ಅಲ್ಲದೆ ಪ್ರಸಕ್ತ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ ಪ್ರವಾಸದ ಟೆಸ್ಟ್‌ ಸರಣಿಯಲ್ಲಿ 4 ಇನಿಂಗ್ಸ್‌ಗಳಿಂದ ಅವರು ಗಳಿಸಿದ್ದು, ಕೇವಲ 38 ರನ್‌ಗಳು ಮಾತ್ರ. ಈ ಸರಣಿಯನ್ನು ಅವರು ತಮ್ಮ ಜೀವನದಲ್ಲಿಯೇ ಮರೆಯಲು ಸಾಧ್ಯವೇ ಇಲ್ಲ. ಇದೀಗ ವಿರಾಟ್‌ ಕೊಹ್ಲಿ ಬೆನ್ನಿಗೆ ನಿಂತಿರುವ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌, ಭಾರತ ತಂಡದ ನಾಯಕ ಖಂಡಿತಾ ದೊಡ್ಡ ಮೊತ್ತವನ್ನು ಶೀಘ್ರದಲ್ಲಿಯೇ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಮ್ಮೆ ಅವರು ಶತಕ ಗಳಿಸಿದರೆ, 3 ಅಥವಾ 4 ಸೆಂಚೂರಿಗಳನ್ನು ಸಿಡಿಸಲಿದ್ದಾರೆ ಎಂದು ಹೇಳಿದರು. ಪ್ರಸ್ತುತ ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದಿರುವ 46 ಪ್ರಾಯದ ಮಾಜಿ ಆಟಗಾರ, ದಿಲ್ಲಿ ಮೂಲದ ಬ್ಯಾಟ್ಸ್‌ಮನ್‌ ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಕೆಟ್ಟದಾಗಿ ಔಟ್‌ ಆಗದೇ ಇರುವ ಬಗ್ಗೆ ಗಮನ ಹರಿಸಿದ್ದಾರೆ. ಕ್ರಿಕ್‌ಬಝ್‌ ಜತೆ ಮಾತನಾಡಿದ ಅವರು, ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಬಗ್ಗೆ ನಾನು ತಲೆ ಕೆಡಸಿಕೊಳ್ಳುವುದಿಲ್ಲ. ಅವರ ಬ್ಯಾಟಿಂಗ್‌ ಬಗ್ಗೆ ನನಗೆ ಕಾಳಜಿ ಇಲ್ಲ. ಅವರು ಅದ್ಭುತ ಆಟಗಾರ, ಎಲ್ಲಾ ಮಾದರಿಯಲ್ಲೂ ಅವರು ಅತ್ಯುತ್ತಮ ಬ್ಯಾಟ್ಸ್‌ಮನ್‌, ಈ ಬಗ್ಗೆ ಯಾವುದೇ ಅನುಮಾನವಿಲ್ಲ," ಎಂದು ಹೇಳಿದರು. "ಅವರು ಒಮ್ಮೆ ಒಂದು ಶತಕವನ್ನು ಸಿಡಿಸಿದರೆ, ನಂತರ ಅದೇ ಫಾರ್ಮ್‌ ಅನ್ನು ಮುಂದುವರಿಸಿ 3 ಅಥವಾ 4 ಸೆಂಚೂರಿಗಳನ್ನು ಖಂಡಿತಾ ಗಳಿಸುತ್ತಾರೆ. ಕೊಹ್ಲಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ, ಹಾಗಾಗಿ ಅವರ ಬ್ಯಾಟಿಂಗ್‌ ಬಗ್ಗೆ ನಾನು ತಲೆ ಕೆಡಸಿಕೊಳ್ಳುವುದಿಲ್ಲ. ಏಕೆಂದರೆ, ಅವರು ಲಯದಲ್ಲಿಯೇ ಇದ್ದಾರೆ ಎಂಬುದನ್ನು ಕಳೆದ ಪಂದ್ಯಗಳಿಂದ ತಿಳಿದುಕೊಳ್ಳಬಹುದು," ಎಂದು ತಿಳಿಸಿದರು. ವಿರಾಟ್‌ ಕೊಹ್ಲಿ ಇಲ್ಲದೆ ಟೀಮ್‌ ಇಂಡಿಯಾ, ಆಸ್ಟ್ರೇಲಿಯಾ ಮೂರು ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಸವಾಲು.ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಜನವರಿ ಆರಂಭದಲ್ಲಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಅಡಿಲೇಡ್‌ ಟೆಸ್ಟ್‌ ಬಳಿಕ ತವರಿಗೆ ಮರಳಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. "ಅವರ ಅನುಪಸ್ಥಿತಿಯಲ್ಲಿ ಮೂರು ಟೆಸ್ಟ್ ಪಂದ್ಯಗಳ ಬಗ್ಗೆ ನಾನು ಚಿಂತಿಸುತ್ತಿದ್ದೇನೆ. ವಿರಾಟ್‌ ಕೊಹ್ಲಿ ಇಲ್ಲದೆ ಇನ್ನುಳಿದ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಲಿದೆ ಎಂಬುದನ್ನು ನಾನು ಅಂದುಕೊಂಡಿಲ್ಲ. ಬಲಗೈ ಬ್ಯಾಟ್ಸ್‌ಮನ್ ಟೆಸ್ಟ್‌ ತಂಡಕ್ಕೆ ಅತ್ಯಂತ ಮುಖ್ಯ," ಎಂದು ಮೈಕಲ್‌ ವಾನ್‌ ಅಭಿಪ್ರಾಯ ವ್ಯಕ್ತಪಡಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3qilgCD

ದಿಲ್ಲಿ ಗಡಿಯಲ್ಲಿ ಕಾಂಕ್ರಿಟ್‌ ತಡೆಗೋಡೆ ನಿರ್ಮಿಸಿದರು ಜಗ್ಗದ ರೈತರು, ಇಕ್ಕಟ್ಟಿನಲ್ಲಿ ಸಿಲುಕಿದ ಕೇಂದ್ರ ಸರಕಾರ!

ಹೊಸದಿಲ್ಲಿ: ಕೇಂದ್ರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರು ಕಳೆದ 5 ದಿನಗಳಿಂದ ನಡೆಸುತ್ತಿರುವ 'ದಿಲ್ಲಿ ಚಲೋ' ಪ್ರತಿಭಟನೆ ಸೋಮವಾರ ಮತ್ತಷ್ಟು ತೀವ್ರಗೊಂಡಿದೆ. ಪ್ರತಿಭಟನಾಕಾರರು ದಿಲ್ಲಿ ಪ್ರವೇಶಿಸದಂತೆ ಪೊಲೀಸರು ಘಾಜಿಪುರ ಗಡಿಯಲ್ಲಿ ಕಾಂಕ್ರಿಟ್‌ ಗೋಡೆ ನಿರ್ಮಿಸಿದ್ದಾರೆ. ಆದರೂ 5ನೇ ದಿನ ಮತ್ತಷ್ಟು ರೈತರು ಪ್ರತಿಭಟನೆಗೆ ಸೇರ್ಪಡೆಗೊಳ್ಳುವುದರೊಂದಿಗೆ ಪರಿಸ್ಥಿತಿ ನಿಯಂತ್ರಣ ತ್ರಾಸದಾಯಕವಾಗಿದೆ. ಈ ಮಧ್ಯೆ, ಪೊಲೀಸರ ಕ್ರಮಕ್ಕೆ ತಿರುಗೇಟು ಎಂಬಂತೆ, ದಿಲ್ಲಿಗೆ ಸಂಪರ್ಕಿಸುವ ಪ್ರಮುಖ 5 ಹೆದ್ದಾರಿಗಳನ್ನು ಬಂದ್‌ ಮಾಡುವುದಾಗಿ ರೈತರು ಬೆದರಿಕೆಯೊಡ್ಡಿದ್ದಾರೆ. ಹೀಗಾಗಿ ರಾಜಧಾನಿಯ ಗಡಿಯಲ್ಲಿ ಬಿಗಿ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ. ಇತ್ತ ಸಿಂಘು ಮತ್ತು ಟಿಕ್ರಿ ಗಡಿಯಗಳಲ್ಲಿ ಶಾಂತಿಯುತ ಪ್ರತಿಭಟನೆ ಮುಂದುವರಿದಿದೆ. ಬುರಾರಿ ಮೈದಾನಕ್ಕೆ ಶಿಫ್ಟ್‌ ಆದರೆ ಮಾತುಕತೆಗೆ ಸಿದ್ಧವೆಂಬ ಕೇಂದ್ರದ ಆಫರ್‌ ಅನ್ನು ಸೋಮವಾರವೂ ರೈತ ಮುಖಂಡರು ತಿರಸ್ಕರಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರದ ಯಾವುದೇ ಷರತ್ತುಗಳಿಗೆ ಒಪ್ಪುವುದಿಲ್ಲ. ದಿಲ್ಲಿ ಗಡಿಗಳಲ್ಲೇ ಪ್ರತಿಭಟನೆ ಮುಂದುವರಿಸುತ್ತೇವೆ. ಇದು ನಿರ್ಣಾಯಕ ಹೋರಾಟ. ತಮ್ಮ ಬೇಡಿಕೆಗಳು ಈಡೇರದ ಹೊರತು ಹೆಜ್ಜೆ ಹಿಂದಿಡುವುದಿಲ್ಲಎಂದಿದ್ದಾರೆ. ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದರೆ, ಮಾತುಕತೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ರೈತ ಮುಖಂಡರೂ ಪ್ರತಿ ಷರತ್ತು ವಿಧಿಸಿದ್ದಾರೆ. ಬುರಾರಿ ಮೈದಾನಕ್ಕೆ ತಮ್ಮನ್ನು ತೆರಳಿಸುವ ಮೂಲಕ 'ಓಪನ್‌ ಜೈಲ್‌'ನಲ್ಲಿಡಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಸಂಚಾರ ಅಸ್ತವ್ಯವಸ್ತ ಗಡಿಗಳಲ್ಲಿ ರೈತರ ಪ್ರತಿಭಟನೆಯಿಂದಾಗಿ ಸತತ ಐದನೇ ದಿನವೂ ದಿಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು. ಸಿಂಘು ಮತ್ತು ಟಿಕ್ರಿ ಗಡಿಗಳನ್ನು ಮುಚ್ಚಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ ಮನವಿ ಮಾಡಲಾಗಿದೆ. ನಗರವನ್ನು ಸಂಪರ್ಕಿಸುವ ಐದು ಪ್ರಮುಖ ಹೆದ್ದಾರಿಗಳನ್ನು ಮುಚ್ಚುವುದಾಗಿ ರೈತರು ಎಚ್ಚರಿಸಿದ್ದು, ಹೆದ್ದಾರಿ ತಡೆ ನಡೆಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಕೊರೊನಾ ಪರೀಕ್ಷೆಗೆ ವೈದ್ಯರ ಆಗ್ರಹ ಪ್ರತಿಭಟನಾನಿರತ ರೈತರು ಯಾವುದೇ ಕೋವಿಡ್‌-19 ನಿಯಮಗಳನ್ನು ಪಾಲಿಸುತ್ತಿಲ್ಲ. ಅವರಲ್ಲಿ ಹೆಚ್ಚಿನ ಮಂದಿಗೆ ಕೋವಿಡ್‌-19 ಸೋಂಕಿನ ಬಗ್ಗೆ ತಿಳಿವಳಿಕೆ ಇಲ್ಲ. ಹೀಗಾಗಿ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದಿಲ್ಲಿ-ಹರಿಯಾಣ ಗಡಿ ಪ್ರದೇಶ ಸಿಂಘುವಿನಲ್ಲಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಸ್ಥಾಪಿಸಲಾಗಿದ್ದು, ಎಲ್ಲಾ ರೈತರೂ ಅಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ. ಅಲ್ಲದೆ, ಕೆಲವು ವೈದ್ಯರು ಪ್ರತಿಭಟನಾನಿರತ ವೃದ್ಧರು ಮತ್ತು ಕೆಮ್ಮು ಮುಂತಾದ ಲಕ್ಷಣಗಳಿರುವವರಿಗೆ ಮಾಸ್ಕ್‌ ಹಾಗೂ ಮಾತ್ರೆಗಳನ್ನು ವಿತರಿಸಿದ್ದಾರೆ. ಪೊಲೀಸರಿಗೆ ರೈತರಿಂದ ಪ್ರಸಾದ ವಿತರಣೆ ಪಂಜಾಬಿನ ಸಾವಿರಾರು ರೈತರು ಗುರುನಾನಕ್‌ ಅವರ 551ನೇ ಜನ್ಮದಿನ ಆಚರಿಸಿ ರಕ್ಷಣಾ ಸಿಬ್ಬಂದಿಗೆ ಪ್ರಸಾದ ವಿತರಿಸಿದ್ದಾರೆ. ದಿಲ್ಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲೇ ಪ್ರತಿಭಟನೆ ಮುಂದುವರಿಸಿರುವ ರೈತರು, ಅಲ್ಲೇ ಪ್ರಸಾದ ಸಿದ್ಧಪಡಿಸಿ, ಹಂಚಿಕೆ ಮಾಡುತ್ತಿರುವ ವಿಡಿಯೊಗಳು, ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪ್ರತಿಪಕ್ಷಗಳ ವಿರುದ್ಧ ಮೋದಿ ಕಿಡಿ ರೈತರ ಪ್ರತಿಭಟನೆ ವಿಚಾರವಾಗಿ ಸೋಮವಾರವೂ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಐತಿಹಾಸಿಕ ಕೃಷಿ ಸುಧಾರಣಾ ನೀತಿಗಳ ಬಗ್ಗೆ ಪ್ರತಿಪಕ್ಷಗಳು ರೈತರನ್ನು ಹಾದಿ ತಪ್ಪಿಸುತ್ತಿವೆ. ಇದಕ್ಕೆ ವದಂತಿಗಳನ್ನು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನೂತನ ಕೃಷಿ ಕಾಯಿದೆಗಳನ್ನು ಸಮರ್ಥಿಸಿಕೊಂಡರು. ''ಹೊಸ ಕೃಷಿ ಮಾರುಕಟ್ಟೆ ವ್ಯವಸ್ಥೆಯು ಹಳೆಯ ವ್ಯವಸ್ಥೆಯಿಂದ ಹಳೆ ವ್ಯವಸ್ಥೆ ರದ್ದಾಗುವುದಿಲ್ಲ. ಹಳೆಯ ಮಂಡಿ ವ್ಯವಸ್ಥೆಯು ಇದ್ದೇ ಇರುತ್ತದೆ. ಬೇಕಾದವರು ಅದರ ಬಳಕೆ ಮುಂದುವರಿಸಬಹುದು. ಆದರೆ, ಹೊಸ ವ್ಯವಸ್ಥೆಯನ್ನು ಬಳಸಿದರೆ ರೈತರಿಗೆ ಉತ್ತಮ ಮಾರುಕಟ್ಟೆ ಹಾಗೂ ಬೆಲೆ ದೊರೆಯಲಿದೆ,'' ಎಂದು ವಿವರಿಸಿದರು. ರಾತ್ರೋರಾತ್ರಿ ಸಚಿವರ ಸಭೆ ಕೇಂದ್ರದ ಸಂಧಾನ ಮಾತುಕತೆ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ ಬೆನ್ನಲ್ಲೇ, ಭಾನುವಾರ ತಡರಾತ್ರಿ ಕೇಂದ್ರದ ವಿವಿಧ ಸಚಿವರು ತುರ್ತು ಸಭೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಮನೆಗೆ ತೆರಳಿ ಚರ್ಚಿಸಿದರು. ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರೂ ಸಭೆಯಲ್ಲಿಹಾಜರಿದ್ದರು ಎಂದು ಮೂಲಗಳು ತಿಳಿಸಿವೆ.


from India & World News in Kannada | VK Polls https://ift.tt/3mrtsOi

ಡಿಸಿ ರೋಹಿಣಿ ಸಿಂಧೂರಿ ಹಾಗೂ ಜನಪ್ರತಿನಿಧಿಗಳ ಗುದ್ದಾಟ: ಜನಸ್ಪಂದನ ಕಾರ್ಯಕ್ರಮಕ್ಕೆ ಬ್ರೇಕ್

ಮೈಸೂರು: ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ಗುದ್ದಾಟದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, ಜನಸ್ಪಂದನ ಕಾರ್ಯಕ್ರಮ ಸಂಬಂಧ ರೋಹಿಣಿ ಸಿಂಧೂರಿ ಅವರು ನನ್ನನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದರು. ಈ ವೇಳೆ, ಜನಪ್ರತಿನಿಧಿಗಳ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಸಿದ್ದೇನೆ ಎಂದು ಹೇಳಿದ ಸಚಿವ ಅಶೋಕ್, ಜನಸ್ಪಂದನಾ ಕಾರ್ಯಕ್ರಮದ ಉದ್ಘಾಟನೆಗೆ ಶಾಸಕರನ್ನು ಕರೆಯಲೇಬೇಕು ಎಂಬುದನ್ನು ಸಹ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಜನಪ್ರತಿನಿಧಿಗಳ ನಡುವಣ ಸಂಘರ್ಷದ ಹಿನ್ನೆಲೆಯಲ್ಲಿ, ಗೊಂದಲ ಏರ್ಪಟ್ಟಿದೆ. ಇದೇ ಕಾರಣಕ್ಕಾಗಿ ಜನಸ್ಪಂದನ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ ಸಚಿವ , ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದರು. ಜನಸ್ಪಂದನ ಕಾರ್ಯಕ್ರಮಕ್ಕೆ ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ ಅಶೋಕ್, ಕಾರ್ಯಕ್ರಮದಲ್ಲಿ ಜನರ ಅಹವಾಲಗಳನ್ನು ಕೇಳಲಾಗುತ್ತದೆ ಎಂದರು.


from India & World News in Kannada | VK Polls https://ift.tt/3fQnFPP

ಚರ್ಚ್‌ ಸ್ಟ್ರೀಟ್‌ ಬಳಿಕ ಕ್ಲೀನ್ ಏರ್​ ಸ್ಟ್ರೀಟ್ ಯೋಜನೆ ಬೆಂಗಳೂರಿನ ಬೇರೆ ಪ್ರದೇಶಗಳಿಗೂ ವಿಸ್ತರಣೆ: ಈ ಸ್ಥಳದಲ್ಲಿ ವಾಹನಗಳಿಗೆ ವಿಕೇಂಡ್‌ನಲ್ಲಿ ನಿಷೇಧ!

ಬೆಂಗಳೂರು: ಬೆಂಗಳೂರಿನ ಸುಪ್ರಸಿದ್ದ ಚರ್ಚ್ ಸ್ಟ್ರೀಟ್‌ನಲ್ಲಿ ವಾರಾಂತ್ಯದಲ್ಲಿ ವಾಹನ ಸಂಚಾರ ನಿಷೇಧಿಸಿ ಭಾರೀ ಯಶಸ್ಸು ಕಂಡ ಬಳಿಕ ಇದೀಗ ಈ ವಿನೂತನ ವಾಹನ ನಿಷೇಧ ಯೋಜನೆಯನ್ನು ನಗರದ ಇತರ ಪ್ರದೇಶಗಳಿಗೆ ವಿಸ್ತರಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ ಮುಂದಾಗಿದೆ. ವಾರಂತ್ಯದಲ್ಲಿ ವಾಹನ ಸಾಗರವೇ ಹರಿದು ಬರುತ್ತಿದ್ದ ಚರ್ಚ್ ಸ್ಟ್ರೀಟ್ನಲ್ಲಿ ನವೆಂಬರ್‌ 7 ರಿಂದ ಕ್ಲೀನ್ ಏರ್ ಸ್ಟ್ರೀಟ್() ಯೋಜನೆಯಡಿ ನಗರ ಭೂಸಾರಿಗೆ ನಿರ್ದೇಶನಾಲಯ ಶನಿವಾರ ಮತ್ತು ಭಾನುವಾರ ವಾಹನ ಸಂಚಾರ ನಿಷೇಧಿಸಿತ್ತು. ಶುದ್ಧ ಗಾಳಿ, ನೀರು ಪ್ರತಿಯೊಬ್ಬ ನಾಗರೀಕನ ಹಕ್ಕು ಎನ್ನುವ ಧ್ಯೇಯದೊಂದಿಗೆ ಈ ಯೋಜನೆ ಜಾರಿಗೆ ತಂದಿತ್ತು. ಯೋಜನೆ ಆರಂಭವಾಗಿ ತಿಂಗಳು ಆಗುವುದರೊಳಗೆ ಜನರಿಂದ ಭಾರೀ ಸಕರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಹೀಗಾಗಿ ಈ ಯೋಜನೆಯನ್ನು ನಗರದ ಇತರೆ ಪ್ರದೇಶಗಳಿಗೂ ವಿಸ್ತರಿಸಲು ನಗರ ಭೂಸಾರಿಗೆ ನಿರ್ದೇಶನಾಲಯ ಮುಂದಾಗಿದೆ. ಬಸವನಗುಡಿಯಲ್ಲಿರುವ ಸುಪ್ರಸಿದ್ಧ ಗಾಂಧಿ ಬಜಾರ್‌ ರಸ್ತೆಯಲ್ಲಿ ವಿಕೇಂಡ್‌ಗೆ ವಾಹನ ಸಂಚಾರ ಬ್ಯಾನ್‌ ಮಾಡುವ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಮೂಲಕ ಗಾಂಧಿ ಬಜಾರ್‌ ಪ್ರದೇಶವನ್ನು ಪಾದಚಾರಿ ಸ್ನೇಹಿ ರಸ್ತೆಯನ್ನಾಗಿ ಮಾಡುವ ಯೋಜನೆ ಇಟ್ಟುಕೊಂಡಿದೆ. ಏನಿದು ಯೋಜನೆ?ಶುದ್ಧಗಾಳಿ, ನೀರು ಪ್ರತಿಯೊಬ್ಬ ನಾಗರೀಕನ ಹಕ್ಕು ಎನ್ನುವ ಧ್ಯೇಯದೊಂದಿಗೆ ನಗರ ಭೂಸಾರಿಗೆ ನಿರ್ದೇಶನಾಲಯ ಹಾಗೂ ಯಕೆ ಸಹಭಾಗಿತ್ವದಲ್ಲಿ ಕ್ಲೀನ್ ಏರ್ ಸ್ಟ್ರೀಟ್(ಶುದ್ಧ ಗಾಳಿಯ ಬೀದಿ)ಯೋಜನೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತಂದಿದೆ. ಚರ್ಚ್‌ ಸ್ಟ್ರೀಟನ್ನು ಶುದ್ಧ ಗಾಳಿಯ ಬೀದಿಯಾಗಿ ಪರಿವರ್ತಿಸುವ ಉದ್ದೇಶದಿಂದ ಇದೀಗ ಶನಿವಾರ ಹಾಗೂ ಭಾನುವಾರ ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಸದ್ಯ 2021ರ ಫೆಬ್ರವರಿ 21ವರೆಗೂ ಈ ಪೈಲಟ್ ಪ್ರಾಜೆಕ್ಟ್ ಜಾರಿಯಲ್ಲಿರಲಿದೆ. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.


from India & World News in Kannada | VK Polls https://ift.tt/3qfB3Sm

ಗ್ರಾಮಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್, ಡಿಸೆಂಬರ್‌ 7 ರಂದು ಮೊದಲ ಹಂತದ ಎಲೆಕ್ಷನ್

ಬೆಂಗಳೂರು: ಕೋವಿಡ್‌ ಆತಂಕದ ನಡುವೆಯೂ ಗ್ರಾಮಪಂಚಾಯತ್ ಚುನಾವಣೆಯ ದಿನಾಂಕ ಕೊನೆಗೂ ಘೋಷಣೆಗೊಂಡಿದೆ. ಡಿಸೆಂಬರ್‌ 22 ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು ಡಿಸೆಂಬರ್‌ 27 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ರಾಜ್ಯದ ಒಟ್ಟು 5762 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್‌ 30 ರಂದು ಮತಎಣಿಕೆ ನಡೆಯಲಿದೆ. ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಗ್ರಾಮಪಂಚಾಯತ್ ಚುನಾವಣೆಯ ಅಧಿಕೃತ ದಿನಾಂಕವನ್ನು ಘೋಷಣೆ ಮಾಡಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯ ಜೊತೆಗೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್‌ ಕಾರಣಕ್ಕಾಗಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಒಟ್ಟು ಕರ್ನಾಟಕ ರಾಜ್ಯದ ಎಲ್ಲಾ 6,004 ಗ್ರಾಮ ಪಂಚಾಯತ್‌ಗಳ ಪೈಕಿ ಕೆಲವು ಗ್ರಾಮಪಂಚಾಯತ್‌ಗಳನ್ನು ವಿವಿಧ ಕಾರಣಗಳಿಂದಾಗಿ ಚುನಾವಣೆಯಿಂದ ಹೊರಗಿಡಲಾಗಿದೆ. ಎರಡು ಹಂತದಲ್ಲಿ ಒಟ್ಟು 35,884 ಕ್ಷೇತ್ರಗಳ 92,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 113 ತಾಲ್ಲೂಕುಗಳ 2930 ಗ್ರಾಮಪಂಚಾಯತ್‌ಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ 113 ತಾಲ್ಲೂಕುಗಳ 2,832 ಗ್ರಾಮಪಂಚಾಯತ್‌ಗಳಿಗೆ ಮತದಾನ ನಡೆಯಲಿದೆ. 45,128 ಮತಗಟ್ಟೆಗಳು, 2,70,768 ಮತಗಟ್ಟೆ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಭಾಗಿಯಾಗಲಿದ್ದಾರೆ. ಕೋವಿಡ್‌ ಕಾರಣದಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಸೇವೆಯನ್ನು ಪೊಡೆದುಕೊಳ್ಳಲು ನಿರ್ಧರಿಸಲಾಗಿದೆ. ಇನ್ನು ಈ ಬಾರಿ ಬೀದರ್‌ ಜಿಲ್ಲೆಯಲ್ಲಿ ಮತಯಂತ್ರವನ್ನು ಬಳಸಲು ನಿರ್ಧಾರ ಮಾಡಲಾಗಿದ್ದು ಉಳಿದ ಗ್ರಾಮಪಂಚಾಯತ್‌ಗಳಲ್ಲಿ ಮತಪತ್ರದ ಮೂಲಕವೇ ಚುನಾವಣೆ ನಡೆಯಲಿದೆ. ಚುನಾವಣೆ ದಿನಾಂಕ ವಿವರ ಮೊದಲ ಹಂತದ ಮತದಾನ - ಡಿಸೆಂಬರ್‌ 22 ಎರಡನೇ ಹಂತದ ಮತದಾನ - ಡಿಸೆಂಬರ್ 27 ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ -ಡಿಸೆಂಬರ್ 11 ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ- ಡಿಸೆಂಬರ್ 16 ಮೊದಲನೇ ಹಂತದ ಚುನಾವಣೆಯ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಕೊನೆಯ ದಿನಾಂಕ - ಡಿಸೆಂಬರ್ 14 ಎರಡನೇ ಹಂತದ ಚುನಾವಣೆಯ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಕೊನೆಯ ದಿನಾಂಕ - ಡಿಸೆಂಬರ್‌ 19 ಒಟ್ಟು ಮತದಾರರ ಸಂಖ್ಯೆ- 2,97,15,048 ಚುನಾವಣಾಧಿಕಾರಿಗಳ ಸಂಖ್ಯೆ- ಒಟ್ಟು 5847 ಚುನಾವಣಾಧಿಕಾರಿಗಳು, 6085 ಸಹಾಯಕ ಚುನಾವಣಾಧಿಕಾರಿಗಳು, 44128 ಮತಗಟ್ಟೆಗಳಿಗೆ 2,70,768 ಮತಗಟ್ಟೆ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ಕೋವಿಡ್‌ ಕಾರಣದಿಂದಾಗಿ ಗ್ರಾಮಪಂಚಾಯತ್ ಚುನಾವಣೆಯನ್ನು ಮುಂದೂಡುವಂತೆ ಡಾ. ಎಂಕೆ ಸುದರ್ಶನ್ ನೇತೃತ್ವದ ತಜ್ಞರ ಸಮಿತಿ ವರದಿ ನೀಡಿತ್ತು. ಸದ್ಯದ ಮಟ್ಟಿಗೆ ಗ್ರಾಮ ಪಂಚಾಯತ್ ಚುನಾವಣೆ ನಡೆಸುವುದು ಅಪಾಯಕಾರಿ ಎಂದು ಹೇಳಿತ್ತು. ಆದರೆ ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ಸೂಚಿಸಿ ಚುನಾವಣಾ ಆಯೋಗ ಗ್ರಾಮಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಹಳ್ಳಿಯ ಕದನ ಮತ್ತಷ್ಟು ರಂಗೇರಲಿದೆ. ಬಿಜೆಪಿ ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಈ ಚುನಾವಣೆಯನ್ನು ಬಳಸಿಕೊಂಡರೆ ಕಾಂಗ್ರೆಸ್‌ ಕೂಡಾ ಹಳ್ಳಿ ಮಟ್ಟದಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿದೆ.


from India & World News in Kannada | VK Polls https://ift.tt/36m1jTa

ಮತಾಂತರದ ಆಧುನಿಕ ಅಸ್ತ್ರ 'ಲವ್‌ ಜಿಹಾದ್'‌..! ಬಿಜೆಪಿ ನಾಯಕ ಸಿ.ಟಿ. ರವಿ ಲೇಖನ..

ಎಸ್‌. ಎಲ್.‌ ಭೈರಪ್ಪ ಅವರ 'ಆವರಣ' ಎಂಬ ಕಾದಂಬರಿ ಪ್ರಕಟವಾಗಿತ್ತು. ಆಗಿನ ಕಾಲ ಘಟ್ಟಕ್ಕೆ ಅತಿ ಹೆಚ್ಚು ವಿಮರ್ಶೆಗೊಳಪಟ್ಟ ಕಾದಂಬರಿ ಅದು. ಬಹುತೇಕ ವಿಮರ್ಶೆಗಳು ಇತಿಹಾಸ ಆಕರದತ್ತ ಗಮನ ಸೆಳೆಯುವ ಮೂಲಕ ಕಾದಂಬರಿಯಲ್ಲಿದ್ದ ಲವ್‌ ಜಿಹಾದ್‌ ಕುರಿತು ತಣ್ಣನೆಯ ಮೌನ ವಹಿಸಿದ್ದವು. ಕಾದಂಬರಿಯು ಐತಿಹಾಸಿಕವಾಗಿ ಮತ್ತು ಸಾಮಾಜಿಕವಾಗಿ ಸತ್ಯವೋ ಅಥವಾ ಮಿಥ್ಯವೋ ಎನ್ನುವುದು ಬೇರೆಯದೇ ವಿಷಯ. ಆದರೆ ಹಂಪಿಗೆ ಭೇಟಿ ನೀಡಿದ ಕಾದಂಬರಿ ಪಾತ್ರಗಳಾದ ರಝಿಯಾ ಉರುಫ್‌ ಲಕ್ಷ್ಮಿ ಹಾಗೂ ಆಕೆಯ ಪತಿ ಅಮೀರ್‌ ಅದರ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಾರೆ. ಈ ಘಟನೆಯಿಂದಾಗಿ ರಝಿಯಾಳ ತಂದೆ ಜೋಡಿಸಿಟ್ಟಿದ್ದ ಇತಿಹಾಸದ ಪುಸ್ತಕಗಳನ್ನು ಓದುವ ಪ್ರಸಂಗ ಬರುತ್ತದೆ. ಆನಂತರ ಸೆಕ್ಯುಲರ್‌ ಮತ್ತು ಮಾರ್ಕ್ಸಿಸ್ಟರು ಭಾರತದ ಇತಿಹಾಸವನ್ನು ಹೇಗೆ ತಿರುಚಿದ್ದಾರೆ ಎಂಬುದು ಅವಳ ಅರಿವಿಗೆ ಬರುತ್ತದೆ. ಕಥೆ ಅಷ್ಟಕ್ಕೆ ಸೀಮಿತವಾಗಿದ್ದರೆ ಅದೊಂದು ಐತಿಹಾಸಿಕ ವಿಷಯಕ್ಕೆ ಸೀಮಿತವಾಗಿಬಿಡುತ್ತಿತ್ತು. ಆದರೆ ಸುಳ್ಳು ಇತಿಹಾಸವನ್ನೇ ನಂಬಿಸಿ ಇಸ್ಲಾಂಗೆ ಮತಾಂತರವಾದ ಲಕ್ಷ್ಮಿಗೆ ತನ್ನ ತಪ್ಪಿನ ಅರಿವು ಪ್ರಾರಂಭವಾಗುತ್ತದೆ. ಇಂತಹುದೇ ಗೊಂದಲಗಳೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ಈಗ ಅಸಲಿ ವಿಷಯವೆಂದರೆ, ವಿಮರ್ಶಕರು ಅಲ್ಲಿ ಮರೆಮಾಚಿದ್ದ ಲವ್‌ ಜಿಹಾದ್‌ನ ನೈಜಸ್ವರೂಪ ಇಂದು ಸಮಾಜದಲ್ಲಿ ಸ್ಪಷ್ಟವಾಗಿ ರೂಪುಗೊಳ್ಳುತ್ತಿರುವುದು ಗೋಚರವಾಗುತ್ತಿದೆ. ಪ್ರೀತಿಸಿ ವಿವಾಹ ಆಗಲಿಕ್ಕೆ ಜಗತ್ತಿನ ಎಲ್ಲಾ ಸಮುದಾಯಗಳು ತಮ್ಮದೇ ಆದ ಸೀಮಿತ ಅವಕಾಶ ಹಾಗೂ ಕಠಿಣ ನಿರ್ಬಂಧಗಳನ್ನು ಮಾಡಿಕೊಂಡಿರುತ್ತವೆ. ಸಂಪ್ರದಾಯಗಳಿಗೆ ಅಂತರ್ಜಾತಿ ವಿವಾಹವು ಪ್ರಾಯೋಗಿಕವಾಗಿ ಒಗ್ಗಿಕೊಳ್ಳುವ ಸಮಸ್ಯೆ ಎನಿಸಿದರೆ, ರಿಲಿಜನ್‌ಗಳಿಗೆ (ಇಸ್ಲಾಂ, ಕ್ರಿಶ್ಚಿಯಾನಿಟಿ, ಜುಡಾಯಿಸಂ) ಪ್ರೇಮ ವಿವಾಹವು ನಂಬಿಕೆ ಅಥವಾ ತತ್ವಗಳ ಸಮಸ್ಯೆಯಾಗಿ ಕಂಡುಬರುತ್ತದೆ. ಹಾಗೆಯೇ ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ವಂಚನೆಗಳೂ ಸಹ ನಡೆಯುತ್ತಿವೆ. ಇಲ್ಲಿ ಪ್ರೇಮ ವಿವಾಹ ಮತ್ತು ಲವ್‌ ಜಿಹಾದ್‌ ಎರಡೂ ಒಂದೇ ಎಂದು ಭಾವಿಸುವ ಅಗತ್ಯವಿಲ್ಲ. ಸ್ವರೂಪದಲ್ಲಿ ಮತ್ತು ಪರಿಣಾಮದಲ್ಲಿ ಅವೆರಡೂ ಬೇರೆ ಬೇರೆ ಎಂಬುದನ್ನು ನಾವು ನೆನಪಿಡಬೇಕು. ಪ್ರೇಮ ವಿವಾಹ, ಜಾತಿ ಮತ, ಪಂಥಗಳನ್ನು ಮೀರಿ ಎರಡು ಹೃದಯಗಳ ನಡುವೆ ಬೆಸೆಯುವ ಬಂಧವಾಗಿದೆ. ಅಂತಸ್ತು, ಸೌಂದರ್ಯ ಇವೆಲ್ಲವುಗಳಿಗಿಂತ ಪ್ರೀತಿ ಮತ್ತು ಕಾಳಜಿಗಳು ಪ್ರೇಮ ವಿವಾಹಕ್ಕೆ ಭದ್ರ ಬುನಾದಿಯನ್ನು ಹಾಕುತ್ತವೆ. ಪೋಷಕರ ಒಪ್ಪಿಗೆ ಮತ್ತು ವಿರೋಧದ ನಡುವೆಯೂ ಇಂತಹ ವಿವಾಹಗಳು ಏರ್ಪಡುತ್ತವೆ. ಆದಂತಹ ಎಲ್ಲಾ ವಿವಾಹಗಳು ಸುಖಾಂತ್ಯವಲ್ಲದಿದ್ದರೂ ಅದಕ್ಕೆ ಕಾನೂನಿನ ಒಪ್ಪಿಗೆ ಮತ್ತು ಕೌಟುಂಬಿಕ ನಿರ್ಬಂಧಗಳು ಇದ್ದೇ ಇರುತ್ತವೆ. ಅದೇ ಪ್ರೇಮದ ಹೆಸರಿನಲ್ಲಿ ನಡೆಯುತ್ತಿರುವ ಲವ್‌ ಜಿಹಾದ್‌ ಇದಕ್ಕೆ ಸ್ಪಷ್ಟವಾಗಿ ವಿರುದ್ಧವಾದುದಾಗಿದೆ. ಪ್ರೇಮವು ಆಕಸ್ಮಿಕವಾಗಿದ್ದರೆ, ಲವ್‌ ಜಿಹಾದ್‌ ಉದ್ದೇಶಪೂರ್ವಕ ಕೃತ್ಯವಾಗಿರುತ್ತದೆ. ಮೊದಲ ನೋಟದ ಪ್ರೀತಿ ಎನ್ನುವ ಶಬ್ದಾರ್ಥ ಇದಕ್ಕೆ ಸಂಬಂಧಪಡುವುದಿಲ್ಲ. ಇಲ್ಲಿ ಒಂದು ಕೋಮಿನ ಗಂಡು ಅಥವಾ ಹೆಣ್ಣು ಮತ್ತೊಂದು ಕೋಮಿನವರನ್ನು ಮಾಡುವ ಉದ್ದೇಶದಿಂದಲೇ ಪ್ರೀತಿ ಪ್ರೇಮದ ನಾಟಕವು ಏರ್ಪಡುತ್ತದೆ. ಇದರ ಮೂಲಕ ಮೋಸದ ಮತಾಂತರ ಜರುಗಿಬಿಡುತ್ತದೆ. ಯಾವುದೇ ವ್ಯಕ್ತಿ ತನಗೆ ಇಷ್ಟ ಬಂದಂತಹ ಮತವನ್ನು ಅನುಸರಿಸಲು ಕಾನೂನು ಅನುಮತಿ ನೀಡುತ್ತದೆ. ಆದರೆ ಅದು ಬಲವಂತವಾದಾಗ ಕಾನೂನು ಮಧ್ಯಪ್ರವೇಶ ಮಾಡುತ್ತದೆ. ಕೆಲವು ಕ್ರಿಶ್ಚಿಯನ್‌ ಮಿಶನರಿಗಳು ಜನರಿಗೆ ಲಾಲಸೆಯನ್ನು ತೋರಿಸುವ ಮೂಲಕ ಮತಾಂತರ ಮಾಡಿದರೆ, ಇಸ್ಲಾಂ ಪ್ರೀತಿ ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡುತ್ತಿದೆ. ಇಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ, ಅವ್ಯಾಹತವಾಗಿ ನಡೆಯುತ್ತಿರುವ ಇಂತಹ ವಾಮ ಮಾರ್ಗದ ಮತಾಂತರಗಳನ್ನು ತಡೆಯುವುದು ಹೇಗೆ ಎನ್ನುವುದೇ ಆಗಿದೆ. ಲವ್‌ ಜಿಹಾದ್‌ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಅಮಾನವೀಯ ಕೃತ್ಯಗಳಿಂದ ನಮ್ಮ ಸಹೋದರಿಯರನ್ನು ರಕ್ಷಿಸುವ ಜವಾಬ್ದಾರಿ ಸಮಾಜ ಮತ್ತು ಸರಕಾರಕ್ಕೆ ಇಂದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರ ಸೆಪ್ಟೆಂಬರ್‌ 23ರಂದು ಅಲಹಾಬಾದ್‌ ಕೋರ್ಟ್‌ ನೀಡಿದ ತೀರ್ಪಿನ ಅನ್ವಯ ಲವ್‌ ಜಿಹಾದ್‌ಗೆ ಕಡಿವಾಣ ಹಾಕಲು ಸುಗ್ರೀವಾಜ್ಞೆಯನ್ನು ತರಲು ನಿಶ್ಚಯಿಸಿರುವುದು ಸ್ವಾಗತಾರ್ಹ. ಆ ನ್ಯಾಯಾಲಯದ ತೀರ್ಪಿನ ಅನ್ವಯ, ಕೇವಲ ಮತಾಂತರದ ಉದ್ದೇಶದಿಂದ ವಿವಾಹವಾಗುವುದು ಊರ್ಜಿತವಲ್ಲ ಅಥವಾ ಸಮ್ಮತವಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದೆ. ಲವ್‌ ಜಿಹಾದ್‌ ಇಂದು ಕೇವಲ ಮತಾಂತರದ ಅಸ್ತ್ರವಾಗಿ ಮಾತ್ರ ಉಳಿದಿಲ್ಲ, ಬದಲಿಗೆ ಅದರ ಮೂಲಕ ಹೆಣ್ಣು ಮಕ್ಕಳ ಮೇಲೆ ಶೋಷಣೆ ಮತ್ತು ದಬ್ಬಾಳಿಕೆ ಮಾಡುವ ಪ್ರಕ್ರಿಯೆಯಾಗಿ ಅದು ಬದಲಾಗಿದೆ. ನಿಜವಾಗಿಯೂ ಅದೊಂದು ಸಾಮಾಜಿಕ ಪಿಡುಗು ಎಂದರೆ ತಪ್ಪಾಗಲಾರದು. ಪ್ರೀತಿಯ ಅಮಲಿನಲ್ಲಿ ಅನ್ಯ ಕೋಮಿನವರ ಪ್ರೇಮ ನಿಜವೆಂದು ಭಾವಿಸಿ, ವಿವಾಹದ ನಂತರ ಅದರ ಕ್ರೌರ್ಯಗಳು ಅರ್ಥವಾಗುತ್ತಾ ಬರುತ್ತವೆ. ಸ್ತ್ರೀಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಎದುರಿಸಲು ಪ್ರಾರಂಭಿಸಿದರೆ, ಅವರ ಮೇಲೆ ಶೋಷಣೆ, ದಬ್ಬಾಳಿಕೆ ಹಾಗೂ ಕೊಲ್ಲುವ ಮಟ್ಟಕ್ಕೂ ಹೋಗುವಂತಹ ಹೇಯ ಕೃತ್ಯಗಳನ್ನು ಎದುರಿಸಬೇಕಾಗುತ್ತದೆ. ನೆಲದ ಕಾನೂನಿಗೆ ಕಿಮ್ಮತ್ತು ನೀಡದ ಜಿಹಾದಿಗಳು, ಹೆಣ್ಣು ಮಕ್ಕಳ ಸ್ವಾತಂತ್ರ್ಯ, ಸಮಾನತೆಯ ಕುರಿತು ಯೋಚಿಸುವುದು ದೂರದ ಮಾತು. ಇದುವರೆಗೂ, ಕೇರಳದ ಉಚ್ಚ ನ್ಯಾಯಾಲಯವೇ ಸುಮಾರು 4,000 ಹೆಣ್ಣುಮಕ್ಕಳು ಲವ್‌ ಜಿಹಾದ್‌ನ ಮೋಸಕ್ಕೆ ಬಲಿಯಾಗಿದ್ದಾರೆ ಎಂಬ ಅಂಕಿ ಅಂಶವನ್ನು ನೀಡಿದೆ. ಹಾಗೇ ಜಾರ್ಖಂಡ್‌ನ ಮಾಜಿ ಬಿಲ್ಲುಗಾರ್ತಿಯಾಗಿದ್ದ, ತಾರು ಶಹದಿಯೋರವರು ರಂಜಿತ್‌ ಕೊಹ್ಲಿ ಎಂಬಾತನನ್ನು ವಿವಾಹವಾಗಿದ್ದರು. ಆದರೆ ಕಾಲಾನಂತರದಲ್ಲಿ ಆತನ ನಿಜ ನಾಮಧೇಯ ರಖಿಬುಲ್‌ ಹಸನ್‌ ಎಂದು ಗೊತ್ತಾದ ಮೇಲೆ ಇಬ್ಬರ ನಡುವೆ ಮನಸ್ತಾಪ ಪ್ರಾರಂಭವಾಯಿತು. ಕೊನೆಗೆ ಅದು ಹಿಂಸೆಗೆ ತಿರುಗಿ ವಿಚ್ಛೇದನದಲ್ಲಿ ಕೊನೆಯಾಯಿತು ಎಂಬುದು ಇತಿಹಾಸ. ರಾಷ್ಟ್ರ ಮಟ್ಟದ ಕ್ರೀಡಾಪಟುವನ್ನೇ ಮೋಸ ಮಾಡುತ್ತಾರೆಂದರೆ ಸಮಾಜದಲ್ಲಿರುವ ಉಳಿದ ಸಾಮಾನ್ಯ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗಬಹುದು ಎಂಬ ಆತಂಕ ಮೂಡುತ್ತದೆ. ಸಮಾಜದಲ್ಲಿ ವಿಷವನ್ನು ಬಿತ್ತುವ ಯಾವುದೇ ಕೃತ್ಯವಾದರೂ ಸಹ ಅದನ್ನು ಬುಡಸಮೇತ ಕಿತ್ತು ಹಾಕುವ ಕಾರ್ಯಕ್ಕೆ ಕಾನೂನು ಮುಂದಾಗಲೇಬೇಕು. ಭಯೋತ್ಪಾದನೆಯಂತಹ ಹೀನ ಚಟುವಟಿಕೆಗಳನ್ನು ಹತ್ತಿಕ್ಕಬೇಕಾದರೆ, ಬೇರೆ ಬೇರೆ ರೂಪದಲ್ಲಿ ಅವು ಕವಲೊಡೆಯುತ್ತಿರುವುದನ್ನೂ ಆರಂಭದಲ್ಲೇ ಚಿವುಟಬೇಕಾಗುತ್ತದೆ. ವಿಜ್ಞಾನ ತಂತ್ರಜ್ಞಾನಗಳು ಮುಂದುವರಿಯುವ ರೀತಿಯಲ್ಲಿಯೇ ಸಮಾಜದ್ರೋಹಿ ಕೃತ್ಯಗಳು ಬೇರೆ ರೂಪಗಳನ್ನು ತೆಗೆದುಕೊಂಡು, ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿವೆ. ಇವುಗಳನ್ನು ತಡೆಯದ ಹೊರತು, ಉತ್ತಮ ಸಮಾಜದ ನಿರ್ಮಾಣ ಸಾಧ್ಯವಿಲ್ಲ. ಕರ್ನಾಟಕ ಸರಕಾರ ಈ ನಿಟ್ಟಿನಲ್ಲಿ ಮಾಡುತ್ತಿರುವ ಆಲೋಚನೆ ಸರಿಯಾಗಿಯೇ ಇದೆ. ಲವ್‌ ಜಿಹಾದ್‌ ಎನ್ನುವ ಪರಿಕಲ್ಪನೆಯನ್ನು ಬಿಜೆಪಿಯಾಗಲಿ, ಸಂಘ ಪರಿವಾರವಾಗಲೀ ಹುಟ್ಟುಹಾಕಿಲ್ಲ. ಅದು ಸಾರ್ವತ್ರಿಕವಾಗಿ ಚಾಲ್ತಿಯಲ್ಲಿರುವ ಪರಿಕಲ್ಪನೆಯಾಗಿದೆ. ಕೇರಳದ ಹಲವಾರು ಕ್ಯಾಥೋಲಿಕ್‌ ಕ್ರೈಸ್ತರ ಸಮುದಾಯಗಳೂ ಸಹ ಲವ್‌ ಜಿಹಾದ್‌ಗೆ ತಮ್ಮ ಸಮುದಾಯದ ಹೆಣ್ಣುಮಕ್ಕಳು ಬಲಿಪಶುವಾಗಿರುವುದರ ಕುರಿತು ಆತಂಕ ವ್ಯಕ್ತಪಡಿಸಿವೆ. ಆದ್ದರಿಂದ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಎತ್ತಿ ತೋರಿಸಿದರೆ, ಅದನ್ನು ಪಕ್ಷಪಾತವಾಗಿ ನೋಡುವ ಅಗತ್ಯವಿಲ್ಲ. ಭಾರತದ ಮಣ್ಣಿನಲ್ಲಿ ದೇವತೆ ಎಂದೇ ಪರಿಭಾವಿಸುವ ಹೆಣ್ಣನ್ನು ರಕ್ಷಿಸುವ ಮತ್ತು ಅನ್ಯಾಯ ದಬ್ಬಾಳಿಕೆಗಳಿಂದ ಮುಕ್ತಗೊಳಿಸುವ ಹೊಣೆ ನಮ್ಮದು. ಆದ ಕಾರಣ, ಲವ್‌ ಜಿಹಾದ್‌ ಎಂಬ ಹೆಣ್ಣಿನ ಮೇಲೆ ನಡೆಯುವ ಶೋಷಣೆಗಳು ನಿರ್ಮೂಲನೆಗೊಳ್ಳಬೇಕಾಗಿರುವುದು ಇಂದಿನ ತುರ್ತು ಆಗಿದೆ. ಯಾವುದೇ ವ್ಯಕ್ತಿಗೆ ಇಂತಹ ದೌರ್ಜನ್ಯಗಳು ನಡೆದರೆ, ಮಹಿಳಾ ಸಂಘಟನೆಗಳು, ಮಾನವ ಹಕ್ಕುಗಳ ಹೋರಾಟಗಾರರು ತಕ್ಷಣ ಹಾಜರಾಗುತ್ತಾರೆ, ಅಥವಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಲವ್‌ ಜಿಹಾದಿನಿಂದ ತೊಂದರೆಗೆ ಒಳಗಾಗುತ್ತಿರುವ ಹೆಣ್ಣು ಮಕ್ಕಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ, ಯಾವ ಸಂಘಟನೆ ಕೂಡ, ಹೇಳಿಕೆ ಇರಲಿ, ಉಸಿರನ್ನೂ ಕೂಡ ಹೊರಗೆ ಬಿಡುತ್ತಿಲ್ಲ! ಇದಕ್ಕೆ ಆ ಸಂಘಟನೆಗಳಿಗೆ ಅನ್ಯಕೋಮುಗಳ ಕುರಿತು ಮೃದು ಧೋರಣೆಯೋ ಅಥವಾ ಭಯವೋ ಎನ್ನುವುದನ್ನು ಅವರೇ ಸ್ಪಷ್ಟೀಕರಿಸಬೇಕು. ನಮ್ಮ ಹೋರಾಟಗಳು ಪಕ್ಷಪಾತವಾದಾಗ ಸಮಾಜದಲ್ಲಿ ನಡೆಯುತ್ತಿರುವ ನೈಜ ವಾಸ್ತವಗಳು ಮರೆಯಾಗುತ್ತವೆ. ಇದು ನಿಜವಾಗಿಯೂ ದುರದೃಷ್ಟಕರ. ಪೇಮೆಂಟ್‌ ಹೋರಾಟಗಾರರನ್ನು ಹೊರತುಪಡಿಸಿ, ಉಳಿದಿರುವ ಅಲ್ಪ ಸ್ವಲ್ಪ ನೈಜ ಹೋರಾಟಗಾರರಾದರೂ ಇದರ ವಿರುದ್ಧ ದನಿ ಎತ್ತಬಹುದು ಎಂದು ಸಮಾಜ ನಿರೀಕ್ಷಿಸಿತ್ತು. ಆದರೆ ಇವರ ಹೋರಾಟ ಹಿಂದೂ ಸಮಾಜವನ್ನು ವಿರೋಧಿಸುವುದಕ್ಕೆ ಮಾತ್ರ ಸೀಮಿತವಾಗಿದೆ! ಒಟ್ಟಿನಲ್ಲಿ, ಲವ್‌ ಜಿಹಾದ್‌ ಎಂಬ ಸಾಮಾಜಿಕ ಪಿಡುಗನ್ನು ಶಾಸನಾತ್ಮಕವಾಗಿ ಹೆಡೆಮುರಿ ಕಟ್ಟಬೇಕಾಗಿದೆ. ಹಾಗೂ ಮತಾಂತರದ ಉದ್ದೇಶದಿಂದ ನಡೆಯುವ ವಿವಾಹಗಳಿಗೆ ಕಠಿಣ ಕಾನೂನು ಕ್ರಮದ ರುಚಿ ತೋರಿಸಬೇಕಾಗಿದೆ. ಹಿಂದೂ ಸಮುದಾಯ ಎಂದರೆ ಎಲ್ಲವನ್ನೂ ಹೊಂದಿಸಿಕೊಂಡು ಹೋಗುತ್ತದೆ ಎಂಬುದು ನಿಜವಾದರೂ, ಸಾಮಾಜಿಕ ಐಕ್ಯತೆಗೆ ಮತ್ತು ಮಹಿಳೆಯರ ಸ್ಥಾನಮಾನಕ್ಕೆ ಧಕ್ಕೆಯಾದರೆ ಅದಕ್ಕೆ ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕೆಂಬ ಅರಿವು ನಿಚ್ಚಳವಾಗಿದೆ. ಕರ್ನಾಟಕ ಸರಕಾರವೂ ಸುಗ್ರೀವಾಜ್ಞೆಯ ಮೂಲಕ ಮತಾಂತರದ ಇಂತಹ ವಿಕೃತಿಗಳನ್ನು ತಡೆಯಲು ಬಲವಾದ ಕಾನೂನನ್ನು ತರುತ್ತದೆ ಎಂಬ ಆಶಯವಿದೆ.


from India & World News in Kannada | VK Polls https://ift.tt/2KR8wma

ರಾಜಸ್ಥಾನದ ಬಿಜೆಪಿ ಶಾಸಕಿ ಕೊರೊನಾ ಸೋಂಕಿಗೆ ಬಲಿ!

ಜೈಪುರ: ಕೊರೊನಾ ಎಂಬ ಮಹಾಮಾರಿಗೆ ಈಗಾಗಲೇ ಹಲವು ರಾಜಕಾರಣಿಗಳು ಬಲಿಯಾಗಿದ್ದು ಇದೀಗ ರಾಜಸ್ಥಾನದ ಬಿಜೆಪಿ ಶಾಸಕಿಯೊಬ್ಬರು ಅಸುನೀಗಿದ್ದಾರೆ. ರಾಜಸ್ಥಾನದ ರಾಜಸಮಂದ್ ಕ್ಷೇತ್ರದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ(59) ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವ್‌ ಆದ ಬಳಿಕ ಗುರುಗ್ರಾಮದ ಆಸ್ಪತ್ರೆಯಲ್ಲಿ ಶಾಸಕಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನ ಹೊಂದಿದ್ದಾರೆ. ಕಿರಣ್ ಮಹೇಶ್ವರಿ ಅವರಿಗೆ ನವೆಂಬರ್ ಮೊದಲ ವಾರದಲ್ಲಿಯೇ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಸ್ವಲ್ಪ ದಿನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ದಿನದಿಂದ ದಿನ ಕ್ಷೀಣಿಸತೊಡಗಿತ್ತು. ಈ ಹಿನ್ನೆಲೆ ಅವರನ್ನು ಗುರುಗ್ರಾಮದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ರಾಜಸಮಂದ್ ಕ್ಷೇತ್ರದಲ್ಲಿ ಕಿರಣ್ ಮಹೇಶ್ವರಿ ಅವರು ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದು, ಭಾರೀ ಜನಪ್ರಿಯತೆ ಗಳಿಸಿದ್ದರು. ಇದೀಗ ಅವರ ಸಾವು ಅವರ ಬೆಂಬಲಿಗರಿಗೆ ಘಾಸಿ ಉಂಟುಮಾಡಿದೆ. ಇನ್ನು ಕಿರಣ್ ಮಹೆಶ್ವರಿ ನಿಧನಕ್ಕೆ ಪ್ರಧಾನಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.


from India & World News in Kannada | VK Polls https://ift.tt/3fQ1qK2

ಡ್ರಾಪ್‌ ಕೊಡುವ ನೆಪದಲ್ಲಿ ಅರಣ್ಯಕ್ಕೆ ಕರೆದೊಯ್ದು ದರೋಡೆ ಮಾಡಿದ ಮೂವರು ಅಂದರ್..

(ಮೈಸೂರು): ಡ್ರಾಪ್‌ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಣ, ವಾಚ್‌ ಹಾಗೂ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಣಸೂರು ಕೆಂಚನಕೆರೆ ಹೊಸಕೋಟೆ ಗ್ರಾಮದ ದೀಪು, ಅಶೋಕ ಹಾಗೂ ಪುಟ್ಟೇಗೌಡ ಬಂಧಿತರು. ಕೇರಳ ಮೂಲದ ಸಂತೋಷ್‌ ಎಂಬುವವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮರಿಯಾ ನಗರದಲ್ಲಿ ಗುತ್ತಿಗೆ ಆಧಾರದಲ್ಲಿ ಜಮೀನು ಪಡೆದು ಕೋಳಿ ಸಾಕಣೆ ಮಾಡುತ್ತಿದ್ದರು. ನವೆಂಬರ್ 20ರ ಶುಕ್ರವಾರ ವೈಯಕ್ತಿಕ ಕಾರಣಕ್ಕಾಗಿ ಬೆಂಗಳೂರಿಗೆ ತೆರಳಿ ವಾಪಸ್‌ ಅರಕಲಗೂಡಿಗೆ ಬರುತ್ತಿರುವಾಗ ಹುಣಸೂರಿನ ಬಸ್‌ ನಿಲ್ದಾಣದ ಬಳಿ ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಬಸ್‌ ಹೊರಟು ಹೋಗಿತ್ತು. ಬ್ಯಾಗ್‌ ಹಾಗೂ ವಸ್ತುಗಳು ಬಸ್ಸಿನಲ್ಲಿಯೇ ಉಳಿದಿದ್ದ ಕಾರಣ ಮತ್ತೊಂದು ಬಸ್ಸಿನಲ್ಲಿ ಹಿಂಬಾಲಿಸಿ ತಾಲೂಕಿನ ಕಂಪಲಾಪುರದ ಬಳಿ ಇಳಿದು ಲಗೇಜ್‌ ತೆಗೆದುಕೊಳ್ಳಲು ಹೋಗುವ ಮೊದಲೇ ಬಸ್‌ ಹೊರಟು ಹೋಗಿದೆ. ಅಷ್ಟರಲ್ಲಿ ಹಿಂಬಾಲಿಸಿ ಬಂದ ಬಸ್‌ ಸಹ ಹೊರಟು ಹೋಗಿದೆ. ನಂತರ ದಿಕ್ಕು ತೋಚದೆ ಬಾರ್‌ ಮುಂಭಾಗ ನಿಂತಿದ್ದ ದೀಪು, ಪುಟ್ಟೇಗೌಡ ಹಾಗೂ ಅಶೋಕರನ್ನು ಅರಕಲಗೂಡಿಗೆ ಡ್ರಾಪ್‌ ನೀಡುವಂತೆ ಕೋರಿಕೊಂಡಾಗ 3 ಸಾವಿರ ನೀಡಿದರೆ ಬರುವುದಾಗಿ ಹೇಳಿದ್ದಾರೆ. 2 ಸಾವಿರಕ್ಕೆ ತೀರ್ಮಾನ ಮಾಡಿ ಸಂತೋಷ್‌ನನ್ನು ಬೈಕಿನಲ್ಲಿ ಕೂರಿಸಿಕೊಂಡು ಕಂಪಲಾಪುರ-ಬೆಕ್ಯಾ ಮುಖ್ಯರಸ್ತೆಯ ಬಳಿ ದಾರಿ ತಪ್ಪಿಸಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹಣ, ವಾಚ್‌ ಹಾಗೂ ಮೊಬೈಲ್‌ ಅಪಹರಿಸಿ ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಸಂತೋಷ್‌ ಪಕ್ಕದ ಗ್ರಾಮಕ್ಕೆ ತಲುಪಿ ಪೊಲೀಸ್‌ ಠಾಣೆಗೆ ಕರೆದೊಯ್ಯುವಂತೆ ಕೇಳಿಕೊಂಡರೂ ಯಾರೂ ಸಹಾಯಕ್ಕೆ ಬಾರದ ಕಾರಣ ಅಲ್ಲೇ ಇದ್ದ ಅಂಗಡಿ ಮುಂದೆ ಮಲಗಿ, ಬೆಳಗ್ಗೆ ಕೆಲವರ ಸಹಾಯದಿಂದ ಅರಕಲಗೂಡಿಗೆ ತೆರಳಿ ನಂತರ ಪಿರಿಯಾಪಟ್ಟಣ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಶನಿವಾರ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಲ್‌ ಇನ್ಸ್‌ಪೆಕ್ಟರ್‌ ಬಿ.ಆರ್‌.ಪ್ರದೀಪ್‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸದಾಶಿವ ತಿಪ್ಪಾರೆಡ್ಡಿ, ಕ್ರೂಶ್‌, ಗವೀಗೌಡ, ಸೈಯದ್‌ ಕಬೀರುದ್ದೀನ್‌, ಅಸ್ಲಾಂ ಪಾಷ, ರವೀಶ, ಅಬೀಬುಲ್ಲಾಖಾನ್‌, ಸತೀಶ್‌ ಮತ್ತಿತರರು ಇದ್ದರು.


from India & World News in Kannada | VK Polls https://ift.tt/3mySxqZ

ಗ್ರಾಮ ಪಂಚಾಯತ್ ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧ, ನಳಿನ್ ಕುಮಾರ್ ಕಟೀಲ್ ವಿಶ್ವಾಸ

ಬೆಂಗಳೂರು: ಗ್ರಾಮಪಂಚಾಯತ್ ಚುನಾವಣೆಯನ್ನು ಎದುರಿಸಲು ಪಕ್ಷ ಸಂಪೂರ್ಣ ಸಜ್ಜಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಗ್ರಾಮಪಂಚಾಯತ್ ಚುನಾವಣಾ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ. ಚುನಾವಣೆಯನ್ನು ಎದುರಿಸಲು ಪಕ್ಷದ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ತಿಳಿಸಿದರು. ಇನ್ನು ಸಂಪುಟ ವಿಸ್ತರಣೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತಾಗಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಸಂಪುಟ ವಿಸ್ತರಣೆ ವಿಚಾರವಾಗಿ ವರಿಷ್ಠರು ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗ ಎಂಬ ಗೊಂದಲ ಇಲ್ಲ. ಬಿ ಫಾರಂ ಪಡೆದು ಪಕ್ಷದ ಚಿಹ್ನೆಯಲ್ಲಿ ಸ್ಪರ್ಧೆ ನಡೆಸಿದ ಎಲ್ಲರು ಬಿಜೆಪಿಗರೇ. ಬೇರೆ ಬೇರೆ ಕಾರಣಗಳಿಂದ ವಲಸಿಗರು ಸಭೆ ನಡೆಸಿದ್ದಾರೆ ಹೊರತಾಗಿ ಸಂಪುಟ ವಿಸ್ತರಣೆ ವಿಚಾರವಾಗಿ ಅಲ್ಲ. ಅಭಿವೃದ್ದಿ ವಿಚಾರವಾಗಿ ಚರ್ಚೆ ನಡೆಸಲು ಸಭೆ ನಡೆಸಿದ್ದಾರೆ ಎಂದು ವಿವಾದಕ್ಕೆ ತೇಪೆ ಹಾಕುವ ಪ್ರಯತ್ನ ಮಾಡಿದರು. ಇದೇ ಸಂದರ್ಭದಲ್ಲಿ ಸಿಎಂ ಬಿಎಸ್‌ವೈ ರಾಜಕೀಯ ಕಾರ್ಯದರ್ಶಿ ಎನ್‌ಆರ್ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಕಟೀಲ್, ಡಿಕೆಶಿ ಅವರಲ್ಲಿ ಈ ಕುರಿತಾದ ವಿಡಿಯೋ ಇದ್ದರೆ ಬಿಡುಗಡೆ ಮಾಡಲಿ, ಅದರ ಹೊರತಾಗಿ ಸುಳ್ಳು ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.


from India & World News in Kannada | VK Polls https://ift.tt/3q9uyAG

'ನಮ್ಮ ಬೌಲರ್‌ಗಳು ಆಸ್ಟ್ರೇಲಿಯಾ ಎದುರು ತಿಣುಕಾಡುತ್ತಿದ್ದಾರೆಂಬುದನ್ನು ನಂಬಲ್ಲ' : ಕೆ.ಎಲ್‌ ರಾಹುಲ್

ಸಿಡ್ನಿ: ವಿರುದ್ಧ ಸತತ ಎರಡು ಓಡಿಐ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡುವಲ್ಲಿ ವಿಫಲರಾಗಿರುವ ತಂಡದ ಬೌಲರ್‌ಗಳನ್ನು ಟೀಮ್‌ ಇಂಡಿಯಾ ಉಪ ನಾಯಕ ಹಾಗೂ ವಿಕೆಟ್‌ ಕೀಪರ್‌ ಸಮರ್ಥಿಸಿಕೊಂಡಿದ್ದಾರೆ. ಇತ್ತೀಚೆಗೆ ಯುಎಇಯಲ್ಲಿ ಮುಕ್ತಾಯವಾಗಿದ್ದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಭಾರತದ ಬೌಲರ್‌ಗಳ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ, ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡು ಓಡಿಐ ಪಂದ್ಯಗಳಲ್ಲಿ ನಿರೀಕ್ಷಿತ ಬೌಲಿಂಗ್‌ ಮಾಡುವಲ್ಲಿ ವಿಫಲರಾಗಿದ್ದಾರೆ. ಆಸೀಸ್‌ ಬ್ಯಾಟ್ಸ್‌ಮನ್‌ ವಿರುದ್ಧ ದುಬಾರಿಯಾಗುವ ಮೂಲಕ ಭಾರತ ತಂಡ 0-2 ಅಂತರದಲ್ಲಿ ಸರಣಿ ಸೋಲಿಗೆ ಬೌಲರ್‌ಗಳು ಪ್ರಮುಖ ಕಾರಣರಾಗಿದ್ದಾರೆ. ಆತಿಥೇಯ ಬ್ಯಾಟ್ಸ್‌ಮನ್‌ಗಳ ಎದುರು ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಅಷ್ಟೊಂದು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡುತ್ತಿಲ್ಲ ಹಾಗೂ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್‌ ರಾಹುಲ್‌, "ನಮ್ಮ ಬೌಲರ್‌ಗಳು ಹೆಣಗಾಡುತ್ತಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಇದು ವಿಭಿನ್ನ ವಾತಾವರಣ ಹಾಗೂ ವಿಭಿನ್ನ ಮಾದರಿ. ಹಿಂದಕ್ಕೆ ಸರಿದು ಬ್ಯಾಟಿಂಗ್‌ ವಿಕೆಟ್‌ನಲ್ಲಿ ಆಡುವಾಗ ಹೇಗೆ ಬೌಲಿಂಗ್‌ ಮಾಡಬೇಕು ಎಂಬ ಬಗ್ಗೆ ಕಲಿಯುತ್ತೇವೆ," ಎಂದು ಹೇಳಿದರು. "ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ವಿಕೆಟ್ ಪಡೆಯುವುದು ಅತ್ಯಗತ್ಯ, ಆಗ ಮಾತ್ರ ರನ್ ದರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ವಿಕೆಟ್ ಪಡೆಯಲು ನಾವು (ನಮ್ಮ) ಮಂತ್ರವನ್ನು ಕಂಡುಹಿಡಿಯಬೇಕು ಮತ್ತು ಬ್ಯಾಟಿಂಗ್ ಘಟಕವು ಹೇಗೆ 30-40 ರನ್ ಜತೆಯಾಟವನ್ನು ವಿಸ್ತರಿಸಬೇಕೆಂದು ಯೋಚಿಸಬೇಕು," ಅವರು ತಿಳಿಸಿದರು. ಆಸ್ಟ್ರೇಲಿಯಾ ಬೌಲರ್‌ಗಳಿಗೆ ಇದು ಅವರ ತವರು ನೆಲವಾಗಿದ್ದರಿಂದ ಅತ್ಯುತ್ತಮ ಬೌಲಿಂಗ್‌ ಮಾಡಬಲ್ಲರು ಎಂದು ಅಭಿಪ್ರಾಯಪಟ್ಟರು. "ನಾವು ತ್ವರಿತವಾಗಿ ಪರಿಸ್ಥಿತಿಗಳನ್ನು ಹೊಂದಿಕೊಂಡಿಲ್ಲ. ಬೌಲಿಂಗ್ ಗುಂಪಿಗೆ ತ್ವರಿತವಾಗಿ ಹೊಂದಿಕೊಳ್ಳಲು ಇದು ಕಲಿಕೆಯ ರೇಖೆಯಾಗಿದೆ. ಜಸ್‌ಬುಮ್ರಾ ಕೂಡ ಬೌಲಿಂಗ್‌ ಮಾಡಲು ಕಷ್ಟಪಡುತ್ತಿದ್ದು, ಖಂಡಿತಾ ಮುಂದಿನ ಪಂದ್ಯಗಳಲ್ಲಿ ಬಲಿಷ್ಠವಾಗು ಕಮ್‌ಬ್ಯಾಕ್‌ ಮಾಡಲಿದ್ದಾರೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಜಸ್ಪ್ರಿತ್ ಬುಮ್ರಾ ಮೈದಾನದಲ್ಲಿ ತುಂಬಾ ಬೆಂಕಿ ಹಾಗೂ ಸ್ಪರ್ಧಾತ್ಮಕ ಬೌಲರ್‌ ಎಂದು ನಮಗೆ ತಿಳಿದಿದೆ. ಇದಕ್ಕಾಗಿ ಅವರು ಬಹಳಷ್ಟು ಅರ್ಥೈಸುತ್ತಾರೆ. ಬುಮ್ರಾ ಅವರ ಮೌಲ್ಯ ನಮಗೆ ತಿಳಿದಿದೆ. ಚಾಂಪಿಯನ್ ಆಟಗಾರ ಹಿಂತಿರುಗಿ ನಮಗೆ ವಿಕೆಟ್ ಪಡೆಯುವ ಸಮಯ ಬಂದಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ವಿಕೆಟ್‌ಗಳು ಬ್ಯಾಟಿಂಗ್ ಮಾಡಲು ತುಂಬಾ ಚೆನ್ನಾಗಿದೆ. ಹಾಗಾಗಿ ಬೌಲರ್‌ಗಳು ವಿಕೆಟ್ ಪಡೆಯುವುದಿಲ್ಲ ಎಂದು ನೀವು ನೋಡುತ್ತೀರಿ, ಇದು ಸ್ವೀಕಾರಾರ್ಹವಾಗಿದೆ. ತಂಡವು ಈಗಾಗಲೇ ಸರಣಿಯನ್ನು ಕಳೆದುಕೊಂಡಿತು ಆದರೆ ಇದು ಡ್ರೆಸ್ಸಿಂಗ್ ಕೊಠಡಿಯ ಸ್ಥೈರ್ಯದ ಮೇಲೆ ಪರಿಣಾಮ ಬೀರುವುದಿಲ್ಲ," ಎಂದು ರಾಹುಲ್ ಹೇಳಿದ್ದಾರೆ. "ಶಿಬಿರದಲ್ಲಿನ ಮನಸ್ಥಿತಿ ಇನ್ನೂ ಪಾಸಿಟಿವ್‌ ಆಗಿ ಇದೆ. ಕೆಲವೊಮ್ಮೆ ಎದುರಾಳಿ ತಂಡ ಉತ್ತಮ ಕ್ರಿಕೆಟ್‌ ಆಡಿರುವುದನ್ನು ನೀವು ಸ್ವೀಕರಿಸಬೇಕಾಗುತ್ತದೆ. ಇದು ಅವರು ತವರು ನೆಲ. ಪ್ರಾಮಾಣಿಕವಾಗಿ ನಿಜ ಹೇಳಬೇಕೆಂದರೆ ನಾವು ದೀರ್ಘ ಅವಧಿಯ ಬಳಿಕ 50 ಓವರ್‌ಗಳ ಪಂದ್ಯ ಆಡುತ್ತಿದ್ದೇವೆ," ಎಂದು ತಿಳಿಸಿದರು. "ಸದ್ಯ ನಾವು ಸಾಕಷ್ಟು ಸಂಗತಿಗಳ ಮೇಲೆ ಕೆಲಸ ಮಾಡುತ್ತಿದ್ದೇವೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ಗಳಲ್ಲಿ ಹೇಗೆ ಬೌಲಿಂಗ್‌ ಮಾಡಬೇಕೆಂಬ ಬಗ್ಗೆ ಕಲಿಯುತ್ತಿದ್ದೇವೆ. ನಾವೇನು ಜಾಸ್ತಿ ತಪ್ಪು ಮಾಡಲಿಲ್ಲ. ಉತ್ತಮ ಹಾದಿಯಲ್ಲಿ ನಮ್ಮ ಕೌಶಲವನ್ನು ಕಾರ್ಯಗತಗೊಳಿಸಬೇಕಾಗಿದೆ ಅಷ್ಟೆ," ಎಂದರು. ಕ್ಯಾಚ್‌ಗಳನ್ನು ಕೈ ಬಿಟ್ಟಿದ್ದು ಹಾಗೂ ಕಳಪೆ ಫೀಲ್ಡಿಂಗ್‌ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, "ತುಂಬಾ ದಿನಗಳ ನಂತರ ಗ್ಯಾಲರಿ ತುಂಬಾ ವೀಕ್ಷಕರ ಉಪಸ್ಥಿತಿಯಲ್ಲಿ ಆಡಿದ್ದೇವೆ, ಇದು ಆಟಗಾರರಿಗೆ ವಿಭಿನ್ನ ಅನುಭವ ನೀಡಿದೆ. ಅಲ್ಲದೆ, ಗಾಳಿಯಲ್ಲಿ ಚೆಂಡನ್ನು ಹಿಡಿಯುವುದು ಸ್ವಲ್ಪ ಕಷ್ಟವಾಗುತ್ತದೆ. ಪಂದ್ಯ ಎಂದ ಮೇಲೆ ಇದೆಲ್ಲ ಸಂಭವಿಸುತ್ತದೆ." ಎಂದು ತಿಳಿಸಿದರು. ಭಾನುವಾರದ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಫೀಲ್ಡಿಂಗ್‌ ಮಾಡುವಾಗ ಗಾಯಕ್ಕೆ ತುತ್ತಾದರು. ಇನ್ನುಳಿದ ಪಂದ್ಯಗಳಿಗೆ ಅವರು ಲಭ್ಯರಾಗಬಾರದು ಎಂದು ಹಾರೈಸಿದರು. ಆಸೀಸ್‌ ಆರಂಭಿಕ ಬ್ಯಾಟ್ಸ್‌ಮನ್‌ ಸತತ ಅರ್ಧಶತಕಗಳನ್ನು ಸಿಡಿಸಿದರು. "ಅವರು ಗಾಯದಿಂದ ಚೇತರಿಸಿಕೊಳ್ಳಲು ದೀರ್ಘ ಕಾಲ ತೆಗೆದುಕೊಳ್ಳಬೇಕು. ಇವರ ಸ್ಥಾನವನ್ನು ಬೇರೆ ಯಾವೊಬ್ಬ ಬ್ಯಾಟ್ಸ್‌ಮನ್‌ ತುಂಬಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಇದು ನಮ್ಮ ತಂಡಕ್ಕೆ ಒಳ್ಳೆಯದು," ಎಂದು ಕೆ.ಎಲ್‌ ರಾಹುಲ್‌ ಅಭಿಪ್ರಾಯ ಪಟ್ಟರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3o2VlN2

ಗ್ರಾಮಪಂಚಾಯತ್ ಚುನಾವಣೆ ಘೋಷಣೆ ಸಾಧ್ಯತೆ, ಕೆಲವೇ ಕ್ಷಣಗಳಲ್ಲಿ ಚುನಾವಣಾ ಆಯೋಗದಿಂದ ಪತ್ರಿಕಾಗೋಷ್ಠಿ

ಬೆಂಗಳೂರು: ರಾಜ್ಯ ಸೋಮವಾರ ಬೆಳಗ್ಗೆ 11.30 ಕ್ಕೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದು ಗ್ರಾಮಪಂಚಾಯತ್ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಗ್ರಾಮಪಂಚಾಯತ್ ಚುನಾವಣೆಯನ್ನು ಮುಂದೂಡಲಾಗಿತ್ತು. ಆದರೆ ಇದೀಗ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಕೋವಿಡ್‌ ಕಾರಣದಿಂದಾಗಿ ಗ್ರಾಮಪಂಚಾಯತ್ ಚುನಾವಣೆಯನ್ನು ಮುಂದೂಡುವಂತೆ ಡಾ. ಎಂಕೆ ಸುದರ್ಶನ್ ನೇತೃತ್ವದ ತಜ್ಞರ ಸಮಿತಿ ವರದಿ ನೀಡಿತ್ತು. ಸದ್ಯದ ಮಟ್ಟಿಗೆ ಗ್ರಾಮ ಪಂಚಾಯತ್ ಚುನಾವಣೆ ನಡೆಸುವುದು ಅಪಾಯಕಾರಿ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ಫೆಬ್ರವರಿಗೆ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ರಾಜಕೀಯ ಪಕ್ಷಗಳು ನಿಗದಿತ ಅವಧಿಗೆ ಚುನಾವಣೆ ನಡೆಯಲಿ ಎಂಬ ಬೇಡಿಕೆಯನ್ನು ಇಟ್ಟಿದ್ದವು. ಈ ನಿಟ್ಟಿನಲ್ಲಿ ಸೋಮವಾರ 11.30 ಕ್ಕೆ ರಾಜ್ಯ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ಕರೆದಿದೆ. ಪತ್ರಿಕಾಗೋಷ್ಠಿಯಲ್ಲಿ ಗ್ರಾಮಪಂಚಾಯತ್ ಚುನಾವಣೆಯ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಲ್ಲದೆ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆಗಳು ನಡೆಯಬೇಕಿದ್ದು ಈ ಚುನಾವಣೆಗಳ ದಿನಾಂಗವನ್ನು ಪ್ರಕಟಿಸುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.


from India & World News in Kannada | VK Polls https://ift.tt/2VitDQk

ಆಸ್ತಿ ಮೌಲ್ಯ ಹಿಗ್ಗಿಸಿದ ಬಿಬಿಎಂಪಿ ಸೇರ್ಪಡೆ, ವಿಳಂಬ ನೀತಿ ಹಿಂದೆ ಬಿಲ್ಡರ್‌ಗಳ ಕೈವಾಡ ಶಂಕೆ

ನಾಗಪ್ಪ ನಾಗನಾಯಕನಹಳ್ಳಿಬೆಂಗಳೂರು: ಅತ್ತ ಗ್ರಾಮ ಪಂಚಾಯಿತಿ, ಇತ್ತ ಬಿಬಿಎಂಪಿಯಿಂದ ಮೂಲ ಸೌಲಭ್ಯ ಸಿಗದೆ ತ್ರಿಶಂಕು ಸ್ಥಿತಿಯಲ್ಲಿದ್ದ ಗ್ರಾಮಗಳನ್ನು ಪಾಲಿಕೆಯ ತೆಕ್ಕೆಗೆ ಸೇರಿಸಲು ಸಚಿವ ಸಂಪುಟ ಸಭೆ ಕೈಗೊಂಡ ನಿರ್ಧಾರ ಗ್ರಾಮಗಳ ನಿವಾಸಿಗಳನ್ನು ನಿರಾಳರಾಗುವಂತೆ ಮಾಡಿದೆ. ಬಿಬಿಎಂಪಿ ಸೇರ್ಪಡೆ ಬೆನ್ನಲ್ಲೇ ಈಗ ಆಸ್ತಿಗಳ ಮೌಲ್ಯವೂ ಏರಿಕೆಯಾಗುವ ನಿರೀಕ್ಷೆ ಇದೆ.ಯಶವಂತಪುರ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್‌, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೇಪುರ, ಕಾನ್ಷಿರಾಮ್‌ನಗರ ಹಾಗೂ ಲಕ್ಷ್ಮೇಪುರ ಗ್ರಾಮದ ಬಡಾವಣೆಗಳ ಜನರಿಗೆ ಪಾಲಿಕೆ ಸೇರುವ ಕನಸು ಸಾಕಾರಗೊಂಡಿದೆ. ಬಿಬಿಎಂಪಿ ಒಡಲು ಸೇರುತ್ತಿರುವ ಕಾನ್ಷಿರಾಮ್‌ನಗರ, ಲಕ್ಷ್ಮೇಪುರ ಸುತ್ತಲಿನ ಬಡಾವಣೆಗಳದ್ದು ಒಂದು ಕತೆಯಾದರೆ, ಮಲ್ಲಸಂದ್ರ ಮತ್ತು ಉತ್ತರಹಳ್ಳಿ ಮನವರ್ತೆ ಕಾವಲ್‌ನಲ್ಲಿನ ನಿವಾಸಿಗಳದ್ದು ಮತ್ತೊಂದು ವ್ಯಥೆ. ಶೆಟ್ಟಿಹಳ್ಳಿ ವಾರ್ಡ್‌ನ ಮಗ್ಗುಲಲ್ಲೇ ಇದ್ದರೂ ಕಾನ್ಷಿರಾಮ್‌ನಗರ ಮತ್ತು ಲಕ್ಷ್ಮೇಪುರಕ್ಕೆ ಪಾಲಿಕೆಗೆ ಸೇರುವ ಭಾಗ್ಯ ದಕ್ಕಿರಲಿಲ್ಲ. ಹೀಗಾಗಿ, ಸಂಪೂರ್ಣ ನಗರೀಕರಣಗೊಂಡಿದ್ದ ಈ ಪ್ರದೇಶಗಳು ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲೇ ಉಳಿದುಕೊಂಡು, ಅಗತ್ಯ ಮೂಲಸೌಕರ್ಯಗಳಿಲ್ಲದೆ ಸೊರಗಿ ಹೋಗಿದ್ದವು.ಲಾಬಿಯೋ ಅಥವಾ ಪ್ರಮಾದವೋ?: ರಾಜ್ಯ ಸರಕಾರವು ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್‌ನ ಭಾಗಶಃ ಪ್ರದೇಶಗಳು ಸೇರಿದಂತೆ ಒಟ್ಟು 111 ನಗರೀಕರಣಗೊಂಡ ಗ್ರಾಮಗಳನ್ನು ಬಿಬಿಎಂಪಿಗೆ ಸೇರಿಸಲು 2006ರ ನ. 2ರಂದು ಕರಡು ಅಧಿಸೂಚನೆ ಹೊರಡಿಸಿತು. ಆದರೆ, 2007ರ ಜ. 16ರಂದು ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಮಲ್ಲಸಂದ್ರ ಹಾಗೂ ಮನವರ್ತೆ ಕಾವಲ್‌ನ ಅರ್ಧ ಭಾಗವನ್ನೂ ಕೈಬಿಡಲಾಗಿತ್ತು. ತಲಘಟ್ಟಪುರ ಗ್ರಾಮ ಪಂಚಾಯಿತಿ ಅಧೀನದಲ್ಲಿದ್ದ ಎಲ್ಲಪ್ರದೇಶಗಳನ್ನು ಹೆಮ್ಮಿಗೆಪುರ ವಾರ್ಡ್‌ಗೆ ಸೇರ್ಪಡೆ ಮಾಡಲಾಯಿತು. ಆದರೆ, ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್‌ನ ಭಾಗಶಃ ಪ್ರದೇಶಗಳನ್ನು, ಸಂಬಂಧವೇ ಇಲ್ಲದ 10 ಕಿ.ಮೀ ದೂರದಲ್ಲಿರುವ ಕಗ್ಗಲೀಪುರ ಗ್ರಾಮ ಪಂಚಾಯಿತಿ ಮಡಿಲಿಗೆ ಹಾಕಲಾಗಿತ್ತು. ಈ ಗ್ರಾಮಗಳನ್ನು ಪಾಲಿಕೆಗೆ ಸೇರಿಸದಿರುವ ಕಾರಣವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಈ ಪ್ರದೇಶಗಳು ಪಾಲಿಕೆ ತೆಕ್ಕೆ ಸೇರದಂತೆ ವ್ಯವಸ್ಥಿತ ಸಂಚು ರೂಪಿಸಿದ್ದರ ಹಿಂದೆ ಪ್ರಭಾವಿ ಬಿಲ್ಡರ್ಸ್ಗಳ ಕೈವಾಡವಿತ್ತೆ ಎಂಬ ಶಂಕೆಯೂ ವ್ಯಕ್ತವಾಗಿದೆ.ಬಿಬಿಎಂಪಿಗೆ 7 ನಗರಸಭೆ, ಒಂದು ಪುರಸಭೆ ಮತ್ತು 110 ಹಳ್ಳಿಗಳನ್ನು ಸೇರ್ಪಡೆ ಮಾಡಿದ ಸಂದರ್ಭದಲ್ಲಿ ಭೌಗೋಳಿಕವಾಗಿ 552 ಎಕರೆ ವಿಸ್ತೀರ್ಣರುವ ಮಲ್ಲಸಂದ್ರ ಮತ್ತು ನೈಸ್‌ ರಸ್ತೆಗೆ ಹೊಂದಿಕೊಂಡಿರುವ ಯು.ಎಂ.ಕಾವಲ್‌ ಪ್ರದೇಶಗಳಲ್ಲಿ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಪರ್ವ ಶುರುವಾಗಿತ್ತು. ಪಾಲಿಕೆಗೆ ಸೇರಿದರೆ ಕಟ್ಟಡ ನಕ್ಷೆ ಮಂಜೂರಾತಿ, ಒಸಿ, ಸಿಸಿ ಶುಲ್ಕ ಮತ್ತು ಕೋಟ್ಯಂತರ ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಅಲ್ಲದೇ ಅಧಿಕ ಅಂತಸ್ತುಗಳಿಗೆ ಅನುಮತಿ ಸಿಗುವುದಿಲ್ಲವೆಂಬ ಕಾರಣಕ್ಕೆ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು, ಪ್ರಭಾವ ಬಳಸಿ ಈ ಎರಡೂ ಗ್ರಾಮಗಳು ಪಾಲಿಕೆಗೆ ಸೇರಿದಂತೆ ನೋಡಿಕೊಂಡಿವೆ ಎಂಬ ಆರೋಪ ಕೇಳಿಬಂದಿದೆ.

ಅತ್ತ ಗ್ರಾಮ ಪಂಚಾಯಿತಿ, ಇತ್ತ ಬಿಬಿಎಂಪಿಯಿಂದ ಮೂಲ ಸೌಲಭ್ಯ ಸಿಗದೆ ತ್ರಿಶಂಕು ಸ್ಥಿತಿಯಲ್ಲಿದ್ದ ಗ್ರಾಮಗಳನ್ನು ಪಾಲಿಕೆಯ ತೆಕ್ಕೆಗೆ ಸೇರಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದ್ದು, ಫ್ಲ್ಯಾಟ್‌, ಸೈಟ್‌ ಬೆಲೆ ಹೆಚ್ಚುವ ಮತ್ತು ಎ ಖಾತಾ, ಹೆಚ್ಚಿನ ಸೌಲಭ್ಯ ಸಿಗುವ ನಿರೀಕ್ಷೆ ಇದೆ.


ಆಸ್ತಿ ಮೌಲ್ಯ ಹಿಗ್ಗಿಸಿದ ಬಿಬಿಎಂಪಿ ಸೇರ್ಪಡೆ, ವಿಳಂಬ ನೀತಿ ಹಿಂದೆ ಬಿಲ್ಡರ್‌ಗಳ ಕೈವಾಡ ಶಂಕೆ

ನಾಗಪ್ಪ ನಾಗನಾಯಕನಹಳ್ಳಿ

ಬೆಂಗಳೂರು

:

ಅತ್ತ ಗ್ರಾಮ ಪಂಚಾಯಿತಿ, ಇತ್ತ ಬಿಬಿಎಂಪಿಯಿಂದ ಮೂಲ ಸೌಲಭ್ಯ ಸಿಗದೆ ತ್ರಿಶಂಕು ಸ್ಥಿತಿಯಲ್ಲಿದ್ದ ಗ್ರಾಮಗಳನ್ನು ಪಾಲಿಕೆಯ ತೆಕ್ಕೆಗೆ ಸೇರಿಸಲು ಸಚಿವ ಸಂಪುಟ ಸಭೆ ಕೈಗೊಂಡ ನಿರ್ಧಾರ ಗ್ರಾಮಗಳ ನಿವಾಸಿಗಳನ್ನು ನಿರಾಳರಾಗುವಂತೆ ಮಾಡಿದೆ. ಬಿಬಿಎಂಪಿ ಸೇರ್ಪಡೆ ಬೆನ್ನಲ್ಲೇ ಈಗ ಆಸ್ತಿಗಳ ಮೌಲ್ಯವೂ ಏರಿಕೆಯಾಗುವ ನಿರೀಕ್ಷೆ ಇದೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್‌, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೇಪುರ, ಕಾನ್ಷಿರಾಮ್‌ನಗರ ಹಾಗೂ ಲಕ್ಷ್ಮೇಪುರ ಗ್ರಾಮದ ಬಡಾವಣೆಗಳ ಜನರಿಗೆ ಪಾಲಿಕೆ ಸೇರುವ ಕನಸು ಸಾಕಾರಗೊಂಡಿದೆ. ಬಿಬಿಎಂಪಿ ಒಡಲು ಸೇರುತ್ತಿರುವ ಕಾನ್ಷಿರಾಮ್‌ನಗರ, ಲಕ್ಷ್ಮೇಪುರ ಸುತ್ತಲಿನ ಬಡಾವಣೆಗಳದ್ದು ಒಂದು ಕತೆಯಾದರೆ, ಮಲ್ಲಸಂದ್ರ ಮತ್ತು ಉತ್ತರಹಳ್ಳಿ ಮನವರ್ತೆ ಕಾವಲ್‌ನಲ್ಲಿನ ನಿವಾಸಿಗಳದ್ದು ಮತ್ತೊಂದು ವ್ಯಥೆ. ಶೆಟ್ಟಿಹಳ್ಳಿ ವಾರ್ಡ್‌ನ ಮಗ್ಗುಲಲ್ಲೇ ಇದ್ದರೂ ಕಾನ್ಷಿರಾಮ್‌ನಗರ ಮತ್ತು ಲಕ್ಷ್ಮೇಪುರಕ್ಕೆ ಪಾಲಿಕೆಗೆ ಸೇರುವ ಭಾಗ್ಯ ದಕ್ಕಿರಲಿಲ್ಲ. ಹೀಗಾಗಿ, ಸಂಪೂರ್ಣ ನಗರೀಕರಣಗೊಂಡಿದ್ದ ಈ ಪ್ರದೇಶಗಳು ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲೇ ಉಳಿದುಕೊಂಡು, ಅಗತ್ಯ ಮೂಲಸೌಕರ್ಯಗಳಿಲ್ಲದೆ ಸೊರಗಿ ಹೋಗಿದ್ದವು.

ಲಾಬಿಯೋ ಅಥವಾ ಪ್ರಮಾದವೋ?:

ರಾಜ್ಯ ಸರಕಾರವು ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್‌ನ ಭಾಗಶಃ ಪ್ರದೇಶಗಳು ಸೇರಿದಂತೆ ಒಟ್ಟು 111 ನಗರೀಕರಣಗೊಂಡ ಗ್ರಾಮಗಳನ್ನು ಬಿಬಿಎಂಪಿಗೆ ಸೇರಿಸಲು 2006ರ ನ. 2ರಂದು ಕರಡು ಅಧಿಸೂಚನೆ ಹೊರಡಿಸಿತು. ಆದರೆ, 2007ರ ಜ. 16ರಂದು ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಮಲ್ಲಸಂದ್ರ ಹಾಗೂ ಮನವರ್ತೆ ಕಾವಲ್‌ನ ಅರ್ಧ ಭಾಗವನ್ನೂ ಕೈಬಿಡಲಾಗಿತ್ತು. ತಲಘಟ್ಟಪುರ ಗ್ರಾಮ ಪಂಚಾಯಿತಿ ಅಧೀನದಲ್ಲಿದ್ದ ಎಲ್ಲಪ್ರದೇಶಗಳನ್ನು ಹೆಮ್ಮಿಗೆಪುರ ವಾರ್ಡ್‌ಗೆ ಸೇರ್ಪಡೆ ಮಾಡಲಾಯಿತು. ಆದರೆ, ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್‌ನ ಭಾಗಶಃ ಪ್ರದೇಶಗಳನ್ನು, ಸಂಬಂಧವೇ ಇಲ್ಲದ 10 ಕಿ.ಮೀ ದೂರದಲ್ಲಿರುವ ಕಗ್ಗಲೀಪುರ ಗ್ರಾಮ ಪಂಚಾಯಿತಿ ಮಡಿಲಿಗೆ ಹಾಕಲಾಗಿತ್ತು. ಈ ಗ್ರಾಮಗಳನ್ನು ಪಾಲಿಕೆಗೆ ಸೇರಿಸದಿರುವ ಕಾರಣವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಈ ಪ್ರದೇಶಗಳು ಪಾಲಿಕೆ ತೆಕ್ಕೆ ಸೇರದಂತೆ ವ್ಯವಸ್ಥಿತ ಸಂಚು ರೂಪಿಸಿದ್ದರ ಹಿಂದೆ ಪ್ರಭಾವಿ ಬಿಲ್ಡರ್ಸ್ಗಳ ಕೈವಾಡವಿತ್ತೆ ಎಂಬ ಶಂಕೆಯೂ ವ್ಯಕ್ತವಾಗಿದೆ.

ಬಿಬಿಎಂಪಿಗೆ 7 ನಗರಸಭೆ, ಒಂದು ಪುರಸಭೆ ಮತ್ತು 110 ಹಳ್ಳಿಗಳನ್ನು ಸೇರ್ಪಡೆ ಮಾಡಿದ ಸಂದರ್ಭದಲ್ಲಿ ಭೌಗೋಳಿಕವಾಗಿ 552 ಎಕರೆ ವಿಸ್ತೀರ್ಣರುವ ಮಲ್ಲಸಂದ್ರ ಮತ್ತು ನೈಸ್‌ ರಸ್ತೆಗೆ ಹೊಂದಿಕೊಂಡಿರುವ ಯು.ಎಂ.ಕಾವಲ್‌ ಪ್ರದೇಶಗಳಲ್ಲಿ ಗಗನಚುಂಬಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಪರ್ವ ಶುರುವಾಗಿತ್ತು. ಪಾಲಿಕೆಗೆ ಸೇರಿದರೆ ಕಟ್ಟಡ ನಕ್ಷೆ ಮಂಜೂರಾತಿ, ಒಸಿ, ಸಿಸಿ ಶುಲ್ಕ ಮತ್ತು ಕೋಟ್ಯಂತರ ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಅಲ್ಲದೇ ಅಧಿಕ ಅಂತಸ್ತುಗಳಿಗೆ ಅನುಮತಿ ಸಿಗುವುದಿಲ್ಲವೆಂಬ ಕಾರಣಕ್ಕೆ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು, ಪ್ರಭಾವ ಬಳಸಿ ಈ ಎರಡೂ ಗ್ರಾಮಗಳು ಪಾಲಿಕೆಗೆ ಸೇರಿದಂತೆ ನೋಡಿಕೊಂಡಿವೆ ಎಂಬ ಆರೋಪ ಕೇಳಿಬಂದಿದೆ.



​ಮೂಲಸೌಕರ್ಯಕ್ಕೆ ಪರದಾಟ
​ಮೂಲಸೌಕರ್ಯಕ್ಕೆ ಪರದಾಟ

ಮಲ್ಲಸಂದ್ರ ಗ್ರಾಮವು ಈಗಲೂ ಕಗ್ಗಲೀಪುರ ಗ್ರಾಮ ಪಂಚಾಯಿತಿಯಲ್ಲಿಯೇ ಇದೆ. ಸ್ವತ್ತುಗಳ ಮಾಲೀಕರು ಅಲ್ಲಿಯೇ ಕಂದಾಯ ಕಟ್ಟುತ್ತಿದ್ದಾರೆ. ಆದರೆ, ಪಂಚಾಯಿತಿಯಿಂದ ಏನೇನೂ ಸೌಲಭ್ಯಗಳು ದೊರಕುತ್ತಿಲ್ಲ. ಕಸ ನಿರ್ವಹಣೆ, ಬೀದಿದೀಪ, ಚರಂಡಿ, ಒಳಚರಂಡಿ, ಕುಡಿಯುವ ನೀರಿಗಾಗಿ ಈ ಗ್ರಾಮದ ಜನರು ಪರಿತಪಿಸುವಂತಾಗಿದೆ. ಇ-ಖಾತೆ ಕೂಡ ಸಿಕ್ಕಿಲ್ಲ. ಈ ಗ್ರಾಮದಲ್ಲಿನ ಆಸ್ತಿಗಳ ಮಾಲೀಕರು ಈವರೆಗೆ 68.52 ಲಕ್ಷ ರೂ. ಕಂದಾಯ ಪಾವತಿಸಿದ್ದಾರೆ.

ಮಲ್ಲಸಂದ್ರ ಗ್ರಾಮದಲ್ಲಿಈಗಾಗಲೇ ಹಲವು ಅಪಾರ್ಟ್‌ಮೆಂಟ್‌ಗಳು, ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಹಲವು ವಸತಿ ಸಮುಚ್ಛಯಗಳು ನಿರ್ಮಾಣ ಹಂತದಲ್ಲಿವೆ. ಗೋದ್ರೇಜ್‌, ಸುರಭಿ, ಸಲಾರ್‌ಪುರಿಯಾ ಸತ್ವ, ಶ್ರೀರಾಮ್‌ ಸಿಂಪೋನಿ, ಪೂರ್ವಾಂಕರ ಹೈಲ್ಯಾಂಡ್ಸ್‌, ಪ್ರಾವಿಡೆಂಟ್‌ ಸೇರಿದಂತೆ ಹಲವು ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಸಾವಿರಾರು ಫ್ಲ್ಯಾಟ್‌ಗಳನ್ನು ನಿರ್ಮಿಸಿವೆ. ಈ ಗ್ರಾಮವು ಪಾಲಿಕೆಗೆ ಸೇರ್ಪಡೆಯಾಗುವುದರಿಂದ ನಿವೇಶನಗಳು, ಫ್ಲ್ಯಾಟ್‌ಗಳ ಮೌಲ್ಯವು ಜಾಸ್ತಿಯಾಗಲಿದೆ.

''ಪಾಲಿಕೆಗೆ ಸೇರಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಿದೆವು. ಇದೀಗ ಶಾಸಕ, ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ಪ್ರಯತ್ನದಿಂದ ಮಲ್ಲಸಂದ್ರ ಪಾಲಿಕೆಗೆ ಸೇರ್ಪಡೆಗೊಂಡಿದೆ,'' ಎಂದು ಶ್ರೀರಾಮ್‌ ಸಿಂಪೋನಿ ಅಪಾರ್ಟ್‌ಮೆಂಟ್‌ನ ಪ್ರೊ. ಸತ್ಯನಾರಾಯಣ, ಶ್ರೀರಾಮ್‌ ಬಾಲಸುಬ್ರಮಣ್ಯ ತಿಳಿಸಿದರು.



​ವ್ಯಾಪ್ತಿ ಗ್ರಾ.ಪಂ, ವೋಟು ಪಾಲಿಕೆಯಲ್ಲಿ!
​ವ್ಯಾಪ್ತಿ ಗ್ರಾ.ಪಂ, ವೋಟು ಪಾಲಿಕೆಯಲ್ಲಿ!

ಮಲ್ಲಸಂದ್ರ ಮತ್ತು ಉತ್ತರಹಳ್ಳಿ ಮನವರ್ತೆ ಕಾವಲ್‌ನಲ್ಲಿನ ನಿವಾಸಿಗಳ ಹೆಸರುಗಳು ಗ್ರಾಮ ಪಂಚಾಯಿತಿ ಮತದಾರರ ಪಟ್ಟಿಯಲ್ಲಿಲ್ಲ. ಇವರು ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಪಂಚಾಯಿತಿ ಚುನಾವಣೆಯಲ್ಲಿಮತವನ್ನೇ ಚಲಾಯಿಸಿಲ್ಲ. ಬದಲಿಗೆ ಇವರ ಹೆಸರುಗಳು ಪಾಲಿಕೆಯ ಹೆಮ್ಮಿಗೆಪುರ ವಾರ್ಡ್‌ನ ಮತದಾರರ ಪಟ್ಟಿಯಲ್ಲಿದ್ದು, ಪ್ರತಿ ಚುನಾವಣೆಯಲ್ಲಿಇಲ್ಲಿಯೇ ಮತ ಹಾಕುತ್ತಿದ್ದಾರೆ.



'ಎ' ಖಾತಾ ನೀಡಲು ನಿರಾಕರಿಸಿದ್ದ ಅಧಿಕಾರಿಗಳು
'ಎ' ಖಾತಾ ನೀಡಲು ನಿರಾಕರಿಸಿದ್ದ ಅಧಿಕಾರಿಗಳು

''2016ರ ನವೆಂಬರ್‌ನಲ್ಲಿಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಖಾತಾ ಮೇಳ ನಡೆಸಿ, ಅರ್ಜಿಗಳನ್ನು ಸ್ವೀಕರಿಸಿದ್ದರು. ಬಳಿಕ ಈ ಪ್ರದೇಶವು ಪಾಲಿಕೆಗೆ ಸೇರುವುದಿಲ್ಲವೆಂದು ಖಾತಾ ವಿತರಣೆ ತಡೆ ಹಿಡಿದರು. ಅಲ್ಲಿಂದ ಪಾಲಿಕೆಗೆ ಸೇರಿಸಬೇಕೆಂಬ ಹೋರಾಟ ಶುರು ಮಾಡಿದೆವು. ತೆರಿಗೆಯನ್ನಷ್ಟೇ ಕಟ್ಟಿಸಿಕೊಳ್ಳುವ ಪಾಲಿಕೆಯು ರಸ್ತೆ, ಬೀದಿದೀಪ ಸೇರಿದಂತೆ ಯಾವುದೇ ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಅತ್ತ ಗ್ರಾ.ಪಂ, ಇತ್ತ ಪಾಲಿಕೆಗೂ ಸೇರದ ಪ್ರದೇಶದಲ್ಲಿರುವ ನಾವು ಸೌಲಭ್ಯಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿತ್ತು,'' ಎಂದು ಶೋಭಾ ಸನ್‌ಕ್ರೆಸ್ಟ್‌ನ ನಿವಾಸಿ ವಾಣಿ ಅಳಲು ತೋಡಿಕೊಂಡರು.

''ಅಧಿಕೃತ ದಾಖಲೆಗಳಲ್ಲಿ ಪಾಲಿಕೆ ಅಧೀನದಲ್ಲಿಲ್ಲದ್ದರೂ 2018ರವರೆಗೆ ತೆರಿಗೆ ಪಾವತಿಸಲಾಗಿದೆ. ಆದರೆ, ಪಾಲಿಕೆಯಿಂದ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ, ಕೆಲವರು ತೆರಿಗೆ ಪಾವತಿ ಮಾಡುತ್ತಿಲ್ಲ. 'ಎ' ಖಾತಾ ನೀಡಲು ಅಧಿಕಾರಿಗಳು ನಿರಾಕರಿಸಿದಂದಿನಿಂದಲೇ ಪಾಲಿಕೆಗೆ ಸೇರಿಸುವಂತೆ ಹೋರಾಟ ಆರಂಭಿಸಿದೆವು. ಈಗ ಹೋರಾಟಕ್ಕೆ ಫಲ ಸಿಕ್ಕಿದೆ,'' ಎಂದು ಶೋಭಾ ಹಿಲ್‌ವ್ಯೂ ಅಪಾರ್ಟ್‌ ನಿವಾಸಿಗಳ ಸಂಘದ ಸದಸ್ಯರಾದ ಸುಬ್ರಮಣ್ಯ ಪೊಡಿಪಾಡಿ ಮತ್ತು ಚೈತನ್ಯಾ ಸುಬ್ರಮಣ್ಯ 'ವಿಜಯ ಕರ್ನಾಟಕ' ಬಳಿ ಸಂತಸ ಹಂಚಿಕೊಂಡರು.

ಬೆಂಗಳೂರು: ಆಸ್ತಿ ಮಾಲೀಕರ ಮೇಲೆ ‘ಕರ’ ಭಾರ, ಕೊರೊನಾ ಸಂಕಷ್ಟ ನಡುವೆ ನಗರ ವಾಸಿಗಳಿಗೆ ಮತ್ತೊಂದು ಶಾಕ್‌



ಪಾಲಿಕೆಯಲ್ಲಿಲ್ಲದ ಆಸ್ತಿಗಳಿಗೆ 'ಬಿ' ಖಾತೆ:
ಪಾಲಿಕೆಯಲ್ಲಿಲ್ಲದ ಆಸ್ತಿಗಳಿಗೆ 'ಬಿ' ಖಾತೆ:

ತಲಘಟ್ಟಪುರ ಸಮೀಪದ ಉತ್ತರಹಳ್ಳಿ ಮನವರ್ತೆ ಕಾವಲ್‌ನಲ್ಲಿನ ಶೋಭಾ ಹಿಲ್‌ವ್ಯೂ, ಸನ್‌ಸ್ಕೇಪ್‌, ಸನ್‌ಕ್ರೆಸ್ಟ್‌ ಅಪಾರ್ಟ್‌ಮೆಂಟ್‌ಗಳು ಹಾಗೂ ಸುತ್ತಮುತ್ತಲಿನ ನಿವಾಸಿಗಳಲ್ಲಿ ತಾವು ಪಾಲಿಕೆ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದೇವೆಯೇ ಎಂಬ ಗೊಂದಲದಲ್ಲಿ ಮುಳುಗಿ ಹೋಗಿದ್ದರು. ಬಿಬಿಎಂಪಿ ರಚನೆಯಾದ ಬಳಿಕ 2010-11 ಮತ್ತು 2011-12ರಲ್ಲಿ ಫ್ಲ್ಯಾಟ್‌ಗಳನ್ನು ಖರೀದಿ ಮಾಡಿದ್ದವರು ಕಗ್ಗಲೀಪುರ ಗ್ರಾ.ಪಂಚಾಯಿತಿಯಲ್ಲೇ ಕಂದಾಯ ಕಟ್ಟಿದ್ದರು. ಆನಂತರ ಪಾಲಿಕೆಯಲ್ಲಿಆಸ್ತಿ ತೆರಿಗೆ ಪಾವತಿಸಲು ಶುರು ಮಾಡಿದರು.

ಆಸ್ತಿ ತೆರಿಗೆ ಪಾವತಿಸದ ನಿವಾಸಿಗಳಿಗೆ ನೋಟಿಸ್‌ ಜಾರಿ ಮಾಡುತ್ತಿದ್ದ ಪಾಲಿಕೆಯು, 'ಎ' ಖಾತಾ ಕೇಳಿದವರಿಗೆ 'ನೀವಿರುವ ಪ್ರದೇಶ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ, ಕಗ್ಗಲೀಪುರ ಗ್ರಾ.ಪಂ ವ್ಯಾಪ್ತಿಗೆ ಬರುತ್ತದೆ' ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಹೀಗಾಗಿ, ಬಹುತೇಕರು ಖಾತಾ ನೀಡದ ಹೊರತು ಆಸ್ತಿ ತೆರಿಗೆ ಕಟ್ಟುವುದಿಲ್ಲವೆಂದು ಹೋರಾಟ ನಡೆಸುತ್ತಿದ್ದಾರೆ. ಪಾಲಿಕೆ ಅಧೀನಕ್ಕೆ ಬಾರದ ಈ ಅಪಾರ್ಟ್‌ಮೆಂಟ್‌ನಲ್ಲಿನ ಹಲವು ಫ್ಲ್ಯಾಟ್‌ಗಳಿಗೆ 'ಬಿ' ಖಾತಾ ಹೇಗೆ ನೀಡಲಾಯಿತು ಎಂಬ ವಿಚಾರವು ಕುತೂಹಲ ಮೂಡಿಸಿದೆ. ಅಧಿಕಾರಿಗಳು ಲಂಚ ಪಡೆದು ನಕಲಿ 'ಬಿ' ಖಾತಾ ನೀಡಿದ್ದಾರೆ ಎಂಬ ಆರೋಪವಿದೆ.

ಕಸ ಎಸೆಯುವವರ ಮೇಲೆ ಕ್ಯಾಮೆರಾಗಳ ಕಣ್ಗಾವಲು: ಎಲ್ಲೆಂದರಲ್ಲಿ ಕಸ ಹಾಕಿದ್ರೆ ಸಿಕ್ಕಿ ಬೀಳ್ತೀರಿ ಹುಷಾರ್‌!





from India & World News in Kannada | VK Polls https://ift.tt/33psD0X

'ಕೈ'ಕೊಟ್ಟ ವರ್ಷಗಳ ಬಳಿಕ ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆಗೆ..!

ಮುಂಬಯಿ: ಬಾಲಿವುಡ್‌ ಊರ್ಮಿಳಾ ಮಾತೋಂಡ್ಕರ್ ರಾಜಕೀಯ ಮರು ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಪಕ್ಷವನ್ನು ತೊರೆದ 1 ವರ್ಷಗಳ ಬಳಿಕ ಊರ್ಮಿಳಾ ಮತ್ತೆ ಪಾಲಿಟಿಕ್ಸ್‌ಗೆ ಎಂಟ್ರಿ ಆಗುತ್ತಿದ್ದು, ರಂಗೀಲಾ ನಟಿಗೆ ಸ್ವಾಗತ ಕೋರುತ್ತಿದೆ. ಮಂಗಳವಾರ ಶಿವಸೇನೆ ಸೇರಲಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ನಾಮಾಂಕಿತ ಸದಸ್ಯೆಯನ್ನಾಗಿ ನೇಮಕ ಮಾಡಲು ಊರ್ಮಿಳಾ ಅವರ ಹೆಸರನ್ನು ಶಿವಸೇನೆ ಪ್ರಸ್ತಾಪ ಮಾಡಿತ್ತು. ಈ ಮೂಲಕ, ಮತ್ತೆ ರಾಜಕೀಯ ವಲಯದಲ್ಲಿ ಊರ್ಮಿಳಾ ಅವರ ಹೆಸರು ಪ್ರಚಲಿತಕ್ಕೆ ಬಂತು. ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಉದ್ದವ್ ಠಾಕ್ರೆ ಅವರ ಸಮೀಪವರ್ತಿ ಹರ್ಷಲ್ ಪ್ರಧಾನ್, ಸಿಎಂ ಕಚೇರಿಯಲ್ಲಿ ಊರ್ಮಿಳಾ ಅವರು ಅಧಿಕೃತವಾಗಿ ಶಿವಸೇನೆ ಸೇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಊರ್ಮಿಳಾ ಮಾತೋಂಡ್ಕರ್ ಅವರು ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದ್ರೆ, ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಎದುರು ಸೋಲು ಕಂಡಿದ್ದರು. ಸೆಪ್ಟೆಂಬರ್ 10, 2019ರಂದು ಊರ್ಮಿಳಾ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಮುಂಬೈ ನಗರ ಕಾಂಗ್ರೆಸ್‌ನಲ್ಲಿ ಗೊಂದಲ ಏರ್ಪಟ್ಟಿರುವ ಕಾರಣ, ಈ ನಿಲುವು ತಳೆದಿರೋದಾಗಿ ಅವರು ಹೇಳಿದ್ದರು. ಸಂಜಯ್ ನಿರುಪಮ್ ಹಾಗೂ ಮಿಲಿಂದ್ ದಿಯೋರಾ ನಡುವಣ ಗುದ್ದಾಟ ಇದಕ್ಕೆಲ್ಲಾ ಕಾರಣವಾಗಿತ್ತು. ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ನಟಿ ಕಂಗನಾ ರಾಣಾವತ್ ವಿರುದ್ಧ ಇತ್ತೀಚೆಗಷ್ಟೇ ಊರ್ಮಿಳಾ ಮಾತೋಂಡ್ಕರ್ ವಾಗ್ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ತಿರುಗೇಟು ನೀಡಿದ್ದ ಕಂಗನಾ, ಊರ್ಮಿಳಾ ಅವರನ್ನು ‘ನೀಲಿ ಚಿತ್ರ ನಟಿ' ಎಂದು ಲೇವಡಿ ಮಾಡಿದ್ದರು. ಇವರಿಬ್ಬರ ನಡುವಣ ಗುದ್ದಾಟ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.


from India & World News in Kannada | VK Polls https://ift.tt/3o904gg

ಭಿನ್ನಾಭಿಪ್ರಾಯಕ್ಕೆ ಬ್ರೇಕ್, ಗೆಲ್ಲಲು ಪ್ಲ್ಯಾನ್! ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಮಹತ್ವದ ಚರ್ಚೆ

ಬೆಂಗಳೂರು: ಸತತ ಸೋಲು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ, ನಾಯಕತ್ವ ಬದಲಾವಣೆ ಚರ್ಚೆಯಿಂದ ಕಳೆಗುಂದಿರುವ ಪಕ್ಷಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಮುಖ ನಾಯಕರ ಸಭೆ ಸೋಮವಾರ ನಡೆಯಲಿದೆ. ಬೆಂಗಳೂರಿನ ಹೊರ ವಲಯದ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯದ ಪ್ರಮುಖ ಕಾಂಗ್ರೆಸ್ ಮುಖಂಡರು ಹಾಗೂ ಎಐಸಿಸಿ ಪ್ರತಿನಿಧಿ ಕೂಡಾ ಭಾಗಿಯಾಗಲಿದ್ದಾರೆ. ಶಿರಾ, ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ನಡುವಿನ ಭಿನ್ನಾಭಿಪ್ರಾಯ ಇದಕ್ಕೆ ಕಾರಣ ಎಂಬ ಚರ್ಚೆಯೂ ಪಕ್ಷದ ಆಂತರಿಕ ವಲಯದಲ್ಲಿದೆ. ಈ ನಡುವೆ ಇಬ್ಬರು ನಾಯಕರ ಬೆಂಬಲಿಗರು ಬಹಿರಂಗವಾಗಿಯೇ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಚರ್ಚೆಯನ್ನು ಮುನ್ನಲೆಗೆ ತಂದಿದ್ದು ಕಾರ್ಯಕರ್ತರಲ್ಲೂ ಗೊಂದಲ ಸೃಷ್ಟಿಸಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗಳಿಗೆ ಚುರುಕು ನೀಡುವ ನಿಟ್ಟಿನಲ್ಲಿ ಸೋಮವಾರ ಕಾಂಗ್ರೆಸ್ ಪ್ರಮುಖ ನಾಯಕರ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ ಪರಮೇಶ್ವರ್‌ ಸೇರಿದಂತೆ ಪಕ್ಷದ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಎಐಸಿಸಿಯಿಂದ ಪ್ರತಿನಿಧಿಯಾಗಿ ಮಹಾರಾಷ್ಟ್ರದ ಸಚಿವೆಯೊಬ್ಬರು ಭಾಗಿಯಾಗಲಿದ್ದಾರೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ವಾತಾವರಣ ಇದೆ. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ, ನಾಯಕತ್ವ ಬದಲಾವಣೆ ಚರ್ಚೆ, ಸಂಪುಟ ವಿಸ್ತರಣೆ ಗೊಂದಲ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೆ ಇದರ ಲಾಭವನ್ನು ಪಡೆಯಲು ಕಾಂಗ್ರೆಸ್ ತಯಾರಿ ನಡೆಸುತ್ತಿಲ್ಲ ಎಂಬ ಅಭಿಪ್ರಾಯ ಪಕ್ಷದ ಹಿರಿಯ ಮುಖಂಡರಲ್ಲಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಸರ್ಕಾರದ ವಿರುದ್ಧ ಸೂಕ್ತ ರೀತಿಯಲ್ಲಿ ಹೋರಾಟ ರೂಪಿಸುವಲ್ಲಿ ಕಾಂಗ್ರೆಸ್ ನಾಯಕತ್ವ ಎಡವುತ್ತಿದೆ ಎಂಬ ಅಭಿಪ್ರಾಯವೂ ಪಕ್ಷದ ವಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರದ ಸಭೆ ಮಹತ್ವ ಪಡೆದುಕೊಳ್ಳಲಿದೆ. ಸಭೆಯಲ್ಲಿ ಪಕ್ಷದ ಮುಂದಿನ ಹೋರಾಟದ ರೂಪುರೇಷೆಯ ಕುರಿತಾಗಿ ಚರ್ಚೆ ನಡೆಯಲಿದೆ. ಅಲ್ಲದೆ ಗ್ರಾಮಪಂಚಾಯತ್ ಚುನಾವಣೆ, ಬಸವಕಲ್ಯಾಣ, ಮಸ್ಕಿ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣಾ ತಂತ್ರಗಾರಿಕೆಯ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.


from India & World News in Kannada | VK Polls https://ift.tt/2Ju7cER

ಕೊರೊನಾ ಲಸಿಕೆ ಪಡೆದ ಬಳಿಕ ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿದ ವ್ಯಕ್ತಿ ವಿರುದ್ಧ 100 ಕೋಟಿ ಮಾನನಷ್ಟ ಹೂಡಿದ ಸೇರಂ ಇನ್‌ಸ್ಟಿಟ್ಯೂಟ್‌

ಹೊಸದಿಲ್ಲಿ: ಜಗತ್ತಿನ ಹಲವು ದೇಶಗಳಲ್ಲಿ ಸಂಬಂಧ ಹಲವು ಮಟ್ಟದ ಪ್ರಯೋಗಗಳು ನಡೆಯುತ್ತಿದೆ. ಈ ಸಂಬಂಧ ಭಾರತದಲ್ಲೂ ಕೂಡ ಈ ಸಂಬಂಧ ಪ್ರಯೋಗ ನಡೆಯುತ್ತಿದೆ. ಈ ಮಧ್ಯೆಯೇ ಪುಣೆ ಮೂಲದ ಅಭಿವೃದ್ದಿಪಡಿಸುತ್ತಿರುವ ಕೊರೊನಾ ಲಸಿಕೆಯಾದ ಕೋವಿಶೀಲ್ಡ್‌ನಿಂದ ತನಗೆ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ಒಬ್ಬ ವ್ಯಕ್ತಿ ಆರೋಪಿಸಿದ್ದಾನೆ. ಈ ವ್ಯಕ್ತಿ ವಿರುದ್ಧ ಇದೀಗ ಸೇರಂ ಇನ್‌ಸ್ಟಿಟ್ಯೂಟ್‌ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದೆ. ಹೌದು, ಚೆನ್ನೈ ಮೂಲದ 40 ವರ್ಷದ ಸ್ವಯಂಸೇವಕರೊಬ್ಬರು ಮಾನವ ಪ್ರಯೋಗದ ಹಿನ್ನೆಲೆ ಕೋವಿಶೀಲ್ಡ್‌ ಲಸಿಕೆಯನ್ನು ಪಡೆದುಕೊಂಡಿದ್ದರು. ಆದರೆ ಲಸಿಕೆ ಪಡೆದ ನಂತರ ಈ ವ್ಯಕ್ತಿ ತನಗೆ ಮಾನಸಿಕ ಹಾಗೂ ನರ ಸಂಬಂಧ ಸಮಸ್ಯೆಗಳು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ ತನಗೆ ಸೇರಂ ಇನ್‌ಸ್ಟಿಟ್ಯೂಟ್‌ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು ಎಂದಿರುವ ಸೇರಂ ಸಂಸ್ಥೆ ವ್ಯಕ್ತಿ ವಿರುದ್ಧ ಸೇರಂ ಇನ್‌ಸ್ಟಿಟ್ಯೂಟ್‌ 100 ಕೋಟಿ ರೂ. ಮಾನನಷ್ಟ ಕೇಸ್‌ ದಾಖಲಿಸಿದೆ. ಸೋಮವಾರ ಇದರ ನೋಟಿಸ್‌ ಈ ವ್ಯಕ್ತಿಯ ಕೈ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಜೊತೆಯಾಗಿ ಕೋವಿಶೀಲ್ಡ್‌ ಲಸಿಕೆಯನ್ನು ಪುಣೆಯ ರಂ ಇನ್‌ಸ್ಟಿಟ್ಯೂಟ್‌ ಅಭಿವೃದ್ಧಿ ಪಡಿಸಿದ್ದು ಇದೀಗ ಮಾನವನ ಮೇಲೆ ಪ್ರಯೋಗ ನಡೆಸುತ್ತಿದೆ. ಇದುವರೆಗೆ ಯಾವುದೇ ಸ್ವಯಂ ಸೇವಕರಿಗೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಆದರೆ ಈ ವ್ಯಕ್ತಿ ಮಾತ್ರ ತನ್ನ ಆರೋಗ್ಯದಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇರಂ ಸಂಸ್ಥೆಯ ಅಧಿಕಾರಿಯೊಬ್ಬರು, ಲಸಿಕೆ ಪರೀಕ್ಷೆಗೆ ಒಳಗಾದ ಸ್ವಯಂಸೇವಕನ ಆರೋಗ್ಯ ಸ್ಥಿತಿಗೂ ಕೋವಿಡ್‌ ಲಸಿಕೆಗೆ ಯಾವುದೇ ಸಂಬಂಧವಿಲ್ಲ. ಇದು ದುರುದ್ದೇಶಪೂರಿತ ಆರೋಪವಾಗಿದ್ದು ತನ್ನ ಆರೋಗ್ಯ ಸಮಸ್ಯೆಗೆ ಈ ಲಸಿಕೆಯನ್ನು ದೂಷಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೇ ಹಣ ಗಳಿಸುವ ಉದ್ದೇಶದಿಂದ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಅದಾಗ್ಯೂ ವ್ಯಕ್ತಿಯ ಆರೋಗ್ಯದ ಸಂಬಂಧ ಪರೀಕ್ಷೆ ನಡೆಸಿದ್ದು, ಸದ್ಯ ಅವರ ಆರೋಗ್ಯ ಸಂಪೂರ್ಣವಾಗಿ ಉತ್ತಮವಾಗಿದೆ ಎಂದಿದ್ದಾರೆ.


from India & World News in Kannada | VK Polls https://ift.tt/3mp4tLy

ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಗೆ ಬಿಎಸ್‌ವೈ ಪ್ಲ್ಯಾನ್, ಹೈಕಮಾಂಡ್‌ ನೀಡುತ್ತಾ ಒಪ್ಪಿಗೆ?

ಬೆಂಗಳೂರು: ಕಗ್ಗಂಟು ಮುಂದುವರಿದಿದ್ದು ಡಿಸೆಂಬರ್‌ 7 ರಿಂದ ಆರಂಭ ಆಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ತೆರೆಮರೆಯಲ್ಲಿ ಹೈಕಮಾಂಡ್‌ ಜೊತೆಗೆ ಮಾತುಕತೆ ನಡೆಯುತ್ತಿದ್ದು ಅಂತಿಮ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಮಸೂದೆಗಳು ಮಂಡನೆಯಾಗಲಿವೆ. ಗೋಹತ್ಯೆ ನಿಷೇಧ ಹಾಗೂ ಲವ್‌ ಜಿಹಾದ್ ಕುರಿತಾಗಿ ಮಸೂದೆ ಮಂಡನೆ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ತಯಾರಿಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂಬುವುದು ಬಿಎಸ್‌ವೈ ಯೋಜನೆಯಾಗಿದೆ. ಆದರೆ ಯಡಿಯೂರಪ್ಪ ಯೋಜನೆ ಶೀಘ್ರದಲ್ಲೇ ಕಾರ್ಯಗತಗೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಬಿಎಸ್‌ವೈ ನೀಡಿರುವ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸುತ್ತಿಲ್ಲ. ಪರಿಣಾಮ ಕಗ್ಗಂಟು ತೀವ್ರಗೊಳ್ಳುತ್ತಿದೆ. ಈ ನಡುವೆ ಸಂಪುಟ ವಿಸ್ತರಣೆ ಅಖಾಡದಲ್ಲಿ ಸ್ವಾಮೀಜಿಗಳ ಪ್ರವೇಶ ಪರಿಸ್ಥಿತಿಯನ್ನು ಮತ್ತಷ್ಟು ಬಿಗುಗೊಳಿಸಿದೆ. ಸಚಿವ ಸ್ಥಾನ ಆಕಾಂಕ್ಷಿಗಳ ಪರವಾಗಿ ಸ್ವಾಮೀಜಿಗಳು ಹೇಳಿಕೆ ನೀಡಲು ಆರಂಭಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದ ಕುರುಬ ಸಮಾಜದ ಮೂವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಬೇಡಿಕೆ ಇಟ್ಟಿದ್ದಾರೆ. ಎಂಟಿಬಿ ನಾಗರಾಜ್‌, ಎಚ್‌. ವಿಶ್ವನಾಥ್ ಹಾಗೂ ಆರ್‌ ಶಂಕರ್‌ಗೆ ಸಚಿವ ಸ್ಥಾನ ನೀಡಬೇಕು ಎಂಬುವುದು ಅವರ ಆಗ್ರಹವಾಗಿದೆ. ಆದರೆ ಇರುವ ಏಳು ಸ್ಥಾನಕ್ಕಾಗಿ ಮೂಲ ಹಾಗೂ ವಲಸಿಗರ ನಡುವೆ ಪೈಪೋಟಿ ಮುಂದುವರಿದಿದೆ. ವಲಸಿಗರ ಪರವಾಗಿ ಕೆ.ಎಸ್ ಈಶ್ವರಪ್ಪ ಕೂಡಾ ಬ್ಯಾಟಿಂಗ್ ಶುರುಮಾಡಿದ್ದಾರೆ. ಅಲ್ಲದೆ ವಲಸಿಗ ಸಚಿವರು ಕೂಡಾ ಸಾಥ್ ನೀಡುತ್ತಿದ್ದಾರೆ. ಜೊತೆಗೆ ನಾಯಕತ್ವದ ಬದಲಾವಣೆ ಚರ್ಚೆಯೂ ತೀವ್ರಗೊಳ್ಳುತ್ತಿದ್ದು ಪಕ್ಷದ ಆಂತರಿಕ ವಲಯದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ವಿಧಾನಮಂಡಲ ಅಧಿವೇಶನಕ್ಕೂ ಮೊದಲು ಸಂಪುಟ ಸರ್ಕಸ್‌ಗೆ ಬ್ರೇಕ್ ಹಾಕಲು ಪ್ರಯತ್ನ ಮುಂದುವರಿಸಿದ್ದಾರೆ. ಆದರೆ ಈ ಪ್ರಯತ್ನಕ್ಕೆ ಹೈಕಮಾಂಡ್‌ ಒಪ್ಪಿಗೆ ಸಿಗತ್ತಾ ಎಂಬುವುದು ಸದ್ಯದ ಕುತೂಹಲ.


from India & World News in Kannada | VK Polls https://ift.tt/3mkJBFf

ಲವ್‌ ಜಿಹಾದ್‌ ಕಾನೂನಿಗೂ ಮೊದಲು ಯಾರು ಯಾರನ್ನು ಲವ್‌-ಮದುವೆಯಾಗಿದ್ದಾರೆ ಅಂತ ನೋಡಿಕೊಳ್ಳಲಿ: ಡಿಕೆ ಶಿವಕುಮಾರ್‌ ಟಾಂಗ್‌

ಉಡುಪಿ: ಲವ್‌ ಜಿಹಾದ್‌ ವಿರುದ್ಧ ಕಾನೂನು ತರುವ ಮೊದಲು ಯಾವ ಲೀಡರ್‌ ಮಕ್ಳು ಯಾರನ್ನು ಲವ್‌ ಮಾಡಿದ್ದಾರೆ, ಯಾರನ್ನು ಮದುವೆ ಮಾಡ್ಕೊಂಡಿದಾರೆ ಎನ್ನುವುದನ್ನು ತಿಳ್ಕೊಳಿ. ಈ ನಿಟ್ಟಿನಲ್ಲಿ ಕೇಂದ್ರ ಬಿಜೆಪಿಯೇ ತೀರ್ಮಾನಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಸುದ್ದಿಗಾರರ ಜತೆ ಭಾನುವಾರ ಮಾತನಾಡಿ, ಬಿಜೆಪಿ, ಕಾಂಗ್ರೆಸ್‌ ಯಾವುದೇ ಪಕ್ಷವಿದ್ದರೂ ಭಾರತದಲ್ಲಿ ಪ್ರೀತಿ, ಮದುವೆ ಎಲ್ಲವೂ ಅವರವರ ಇಚ್ಛೆ, ಹಕ್ಕು, ಧರ್ಮ. ಪ್ರೀತಿ, ವಿಶ್ವಾಸ, ಮಾನವೀಯತೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದರು. ಜನತೆಗೆ ಸತ್ಯ ತಿಳಿಸಿ! ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ‍್ಯದರ್ಶಿ ಸಂತೋಷ್‌ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಗೃಹ ಸಚಿವರು ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದು ಸಂತೋಷ್‌ ಪತ್ನಿ ಹೇಳಿದ್ದಾರೆ. ಪ್ರತಿಪಕ್ಷೀಯರಾಗಿ ನಾವೇನು ಕಣ್ಣು ಮುಚ್ಚಿ ಕೂರೋಕಾಗುತ್ತಾ? ರಾಜ್ಯದ ಜನತೆಗೆ ಸತ್ಯ ತಿಳಿಸೋದು ನಮ್ಮ ಜವಾಬ್ದಾರಿ. ವಿಡಿಯೋ ಬಿಡುಗಡೆ ಮಾಡುವುದಾಗಿ ನಾ ಹೇಳಿಲ್ಲ. ಸಿಎಂ ರಾಜಕೀಯ ಕಾರ‍್ಯದರ್ಶಿ ಅಂತಂದ್ರೆ ರಸ್ತೇಲಿ ಹೋಗೋರಲ್ಲ, ಸಾಮಾನ್ಯ ಕಾರ‍್ಯಕರ್ತನೂ ಅಲ್ಲ. ಬಿಜೆಪಿಯ ಎಲ್ಲ ರಾಜಕೀಯ ಬೆಳವಣಿಗೆ ವೇಳೆ ಸಂತೋಷ್‌ ಹೆಸರು ಕೇಳಿಬರುತ್ತಿದ್ದು, ಅವರ ಎಲ್ಲ ವ್ಯವಹಾರ ಗೊತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ವೇಳೆ ಅವರ ಕಾರಾರ‍ಯಚರಣೆಯನ್ನೂ ನೋಡಿದ್ದೇವೆ. ಸಂಸಾರದಲ್ಲಿ ಬಿರುಕಿಲ್ಲಎಂದು ಸಂತೋಷ್‌ ಪತ್ನಿ ಹೇಳಿದ್ದಾರೆ. ಸಿಡಿ, ರೆಕಾರ್ಡ್‌ ಇತ್ತೋ, ಇಲ್ವೋ ಎಲ್ಲವೂ ತನಿಖೆಯಿಂದ ಹೊರಬರಲಿ, ಸತ್ಯ ಏನೆಂದು ತಿಳಿಯಲಿ. ಅಧಿಕಾರಕ್ಕೆ ತೊಂದರೆ, ಹೆಸರಿಗೆ ಕುಂದು ಬಂದಿರಲೂಬಹುದು ಎಂದರು. ಸಂತೋಷ್‌ ವ್ಯವಹಾರ, ರಾಜಕಾರಣದ ಗುಟ್ಟು ಏನೆಂದು ತಿಳಿಸಿ. ಕೆಲ ಬಿಜೆಪಿ ನಾಯಕರು ಸಂತೋಷ್‌ ವಿಷಯದಲ್ಲಿ ಮೈ ಪರಚಿಕೊಳ್ಳುತ್ತಿದ್ದು ಸಚಿವ ಈಶ್ವರಪ್ಪ ಮಾತಾಡಿಲ್ಲ. ಯಾರಾರ‍ಯರು ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆನ್ನುವುದು ನಮಗೆ ಗೊತ್ತು. ನಮಗೆ ಅಗತ್ಯವಿಲ್ಲದ ವಿಚಾರ ಅದೆಂದು ಸುಮ್ಮನಿದ್ದೇವೆ ಎಂದರು. ರಾಜ್ಯದಲ್ಲಿ ಬಿಜೆಪಿ ಸಂಪುಟ ವಿಸ್ತರಣೆ ಕಗ್ಗಂಟು ಬಿಜೆಪಿ ಆಂತರಿಕ ವಿಚಾರ. ಅದಕ್ಕೂ ಕಾಂಗ್ರೆಸಿಗೂ ಸಂಬಂಧವಿಲ್ಲ ಎಂದ ಅವರು,ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರ ಸಭೆ ಬೆಂಗಳೂರಿನಲ್ಲಿ ನ.30ರಂದು ನಡೆಯಲಿದೆ ಎಂದರು. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಬೀಳಲು ಡಿಕೆಶಿ ಕಾರಣ ಎಂದ ಮಾಜಿ ಸಿಎಂ ಕುಮಾರಸ್ವಾಮಿ ಏನು ಬೇಕಾದರೂ ಹೇಳಲಿ. ಕುಮಾರಸ್ವಾಮಿ ಹಿರಿಯರಿದ್ದಾರೆ. ಇಷ್ಟು ಬೇಗ ಹೇಳ್ತಿದ್ದಾರಲ್ವಾ, ಇನ್ನೂ ಏನಾದರೂ ಬಾಕಿ ಇದ್ದರೆ ಹೇಳಲಿ, ಸಂತೋಷ ಎಂದು ವ್ಯಂಗ್ಯವಾಡಿದರು.


from India & World News in Kannada | VK Polls https://ift.tt/37kETB3

ಕಾರವಾರ: ಉಸಿರಾಡಲು ಹರಸಾಹಸ ಪಡುತ್ತಿದ್ದ ಮೀನಿನ ಬಾಯಿಗೆ ಬೀಡಿ ಇರಿಸಿ ವಿಕೃತಿ ಮೆರೆದ ಕಾರ್ಮಿಕರು!

ಕಾರವಾರ: ಆಗಷ್ಟೇ ಸಮುದ್ರದಿಂದ ತಂದ ಸಾವು-ಬುದಕಿನ ನಡುವೆ ಹೋರಾಡುತ್ತಿದ್ದ ವೇಳೆ ವಿಕೃತ ಮನಸ್ಸಿನ ಕೆಲ ಕಾರ್ಮಿಕರು ಮೀನಿನ ಬಾಯಿಗೆ ಬೀಡಿ ಇರಿಸಿ ವಿಕೃತಿ ಮೆರೆದಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಮೀನು ಬಾಯಿ ತೆಗೆದ್ರೆ ಅದಕ್ಕೆ ಕೆಲ ಕಾರ್ಮಿಕರು ಬೀಡಿ ಇರಿಸಿ ಸೇದುವಂತೆ ಮಾಡಿ ವಿಕೃತಿ ಮೆರೆದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕಾರವಾರದ ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ಏನಿದೆ?ಕೆಲ ಕಾರ್ಮಿಕರು(ಅಲ್ಲಿನ ಕಾರ್ಮಿಕರಾಗಿರುವ ಸಾಧ್ಯತೆ) ಹಿಂದಿ ಮಾತನಾಡುತ್ತಿರುವುದು ವೀಡಿಯೋದಲ್ಲಿ ಗಮನಿಸಬಹುದಾಗಿದೆ. ಸಮುದ್ರದಿಂದ ತಂದಿರುವ ಮೀನನ್ನು ಮೇಜಿನ ಮೇಲೆ ನೇರವಾಗಿ ಇಡುತ್ತಾರೆ. ಈ ವೇಳೆ ಸಾವು-ಬದುಕಿನ ನಡುವೆ ಮೀನು ಹೋರಾಡುತ್ತಿರುತ್ತದೆ. ನೀರು ಹಾಗೂ ಉಸಿರಾಟಕ್ಕಾಗಿ ಮೀನು ಬಾಯಿ ತೆಗೆಯುತ್ತಿರುತ್ತದೆ. ಈ ವೇಳೆ ಓರ್ವ ಮೀನಿನ ಬಾಯಿಗೆ ಬೀಡಿ ಇಟ್ಟು ಬೆಂಕಿ ಹಚ್ಚುತ್ತಾನೆ. ಮೀನು ಊಸಿರಾಡುವಾಗ ಅದು ಬೀಡಿ ಸೇದುವಂತೆ ಕಾಣುತ್ತದೆ. ಸದ್ಯ ಯುವಕರ ಈ ಕುಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೀವ ಉಳಿಸದಿದ್ದರು ಪರವಾಗಿಲ್ಲ ಈ ರೀತಿಯ ಕುಕೃತ್ಯ ಮಾತ್ರ ಎಸಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/2HOzdqj

ಬೆಂಗಳೂರು: ಹೊರಗಡೆ ದೇವರ ಚಿತ್ರ, ಒಳಗಡೆ ಡ್ರಗ್ಸ್;‌ 16 ಲಕ್ಷದ ಕೆನಡಾ ಮಾದಕದ್ರವ್ಯ ವಶಕ್ಕೆ ಪಡೆದ ಕಸ್ಟಮ್ಸ್‌, ಓರ್ವ ಅರೆಸ್ಟ್

ಆನೇಕಲ್‌: ದೇವರ ಪೋಟೊವಿರುವ ಸ್ಟ್ಯಾಂಪ್‌ ಮಾದರಿಯ ಎಲ್‌ಎಸ್‌ಡಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಕೇರಳದ ಕೊಟ್ಟಾಯಂ ಮೂಲದ ಅರುಣ್ ಅಂಥೋನಿ‌(22) ಮತ್ತು ಗಣೇಶ್‌(22) ಬಂಧಿತರು. ಅರುಣ್‌ ಬೊಮ್ಮಸಂದ್ರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಲ್ಯಾಬ್‌ಟೆಕ್ನಿಶಿಯನ್‌ ಆಗಿ ಕೆಲಸ ಮಾಡುತ್ತಿದ್ದ. ಅರುಣ್‌ ಇದ್ದ ಆಸ್ಪತ್ರೆಯ ವಿಳಾಸಕ್ಕೆ ಗಣೇಶ್‌ ಕೇರಳದಿಂದ ಆಗಾಗ್ಗೆ ಡ್ರಗ್ಸ್‌ ಇರುವ ಕೊರಿಯರ್‌ ಕಳುಹಿಸುತ್ತಿದ್ದ. ಅಮಲ್‌ ಬೈಜು ಎಂಬಾತ ಡ್ರಗ್ಸ್‌ ಹೊಂದಿರುವ ಕೊರಿಯರ್‌ ಪಡೆದು ನಾನಾ ಕಡೆ ಮಾರಾಟ ಮಾಡುತ್ತಿದ್ದ. ಪ್ರತಿ ಪಾರ್ಸೆಲ್‌ ತಲುಪಿಸಿದ್ದಕ್ಕೆ ಅರುಣ್‌ ಇಪ್ಪತ್ತು ಸಾವಿರ ರೂಪಾಯಿ ಕಮಿಷನ್‌ ಪಡೆಯುತ್ತಿದ್ದ. ಆರೋಪಿಗಳು ನೆದರ್‌ಲ್ಯಾಂಡ್‌ನಿಂದ ಎಲ್‌ಎಸ್‌ಡಿ ಡ್ರಗ್‌ ತರಿಸುತ್ತಿದ್ದರು. ಚಾಮರಾಜಪೇಟೆಯಲ್ಲಿರುವ ಪೋಸ್ಟ್‌ ಆಫೀಸಿಗೆ ಬಂದಿದ್ದ ಕೊರಿಯರ್‌ ಮೇಲೆ ಕಸ್ಟಮ್ಸ್‌ ಅಧಿಕಾರಿಗಳು ಕಣ್ಣಿಟ್ಟಿದ್ದರು. ಈ ವೇಳೆ ಡ್ರಗ್ಸ್‌ ಸಾಗಾಟದ ಸುಳಿವು ಸಿಕ್ಕಿತ್ತು. ಕಸ್ಟಮ್ಸ್‌ ಅಧಿಕಾರಿಗಳು ಹೆಬ್ಬಗೋಡಿ ಪೊಲೀಸರ ನೆರವಿನಿಂದ ಆರೋಪಿಗಳಿಗೆ ಬಲೆ ಬೀಸಿ ಬೀಸಿದ್ದರು. ಒಂದು ಸ್ಟ್ಯಾಂಪ್‌ಗೆ 4-5 ಸಾವಿರ ಸ್ಟ್ಯಾಂಪ್‌ ಪೇಪರ್‌ಗೆ ಡ್ರಗ್ಸ್‌ ಲೇಪನ ಮಾಡಲಾಗಿರುತ್ತದೆ. ಅದನ್ನು ಬಾಯಲ್ಲಿ ಇಟ್ಟುಕೊಂಡರೆ ಕರಗಿ ಕಿಕ್‌ ಕೊಡುತ್ತದೆ. ಆರೋಪಿಗಳು ಒಂದು ಸ್ಟ್ಯಾಂಪ್‌ ಅನ್ನು ಬರೋಬ್ಬರಿ ನಾಲ್ಕರಿಂದ ಐದು ಸಾವಿರ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದಕ್ಕೆ ದೇವರ ಫೋಟೊಗಳನ್ನು ಬಳಸುತ್ತಿದ್ದು ಖತರ್ನಾಕ್‌ ಖದೀಮರ ಕಳ್ಳಾಟ ಬಯಲಾಗಿದೆ.


from India & World News in Kannada | VK Polls https://ift.tt/3lp1EsG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...