ಒಪ್ಪಂದದ ಶಾಯಿ ಆರುವ ಮುನ್ನವೇ ವೈರಸ್ ಕಳುಹಿಸಿದ ಚೀನಾ: ಮತ್ತೆ ಗುಡುಗಿದ ಟ್ರಂಪ್!

ವಾಷಿಂಗ್ಟನ್: ಚೀನಾದೊಂದಿಗೆ ಮಾಡಿಕೊಂಡ ಬೃಹತ್ ವಾಣಿಜ್ಯ ಒಪ್ಪಂದದ ಶಾಯಿ ಆರುವ ಮುನ್ನವೇ ನಮಗೆ ಕೊರೊನಾ ವೈರಸ್‌ನ್ನು ಕಾಣಿಕೆಯನ್ನಾಗಿ ನೀಡಿತು ಎಂದು ಅಧ್ಯಕ್ಷ ಗುಡುಗಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಚೀನಾದಿಂದ ಬಂದ ಮಾರಕ ಕೊರೊನಾ ವೈರಸ್ ಅಮೆರಿಕದಲ್ಲಿ ಇಷ್ಟೊಂದು ಆವು-ನೋವನ್ನು ತರುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊರೊನಾ ವೈರಸ್ ಹಾವಳಿ ಆರಂಭಕ್ಕೂ ಮುನ್ನ ನಾವು ಚೀನಾದೊಂದಿಗೆ ಬೃಹತ್ ವಾಣಿಜ್ಯ ಒಪ್ಪಂದ ಮಾಡಿಕೊಂಡಿದ್ದೇವು. ಆದರೂ ಚೀನಾ ಕೊರೊನಾ ವೈರಸ್ ಹಾವಳಿಯ ಕುರಿತು ಯಾವುದೇ ಮುನ್ಸೂಚನೆ ನೀಡದೇ ನಮಗೆ ದ್ರೋಹ ಬಗೆಯಿತು ಎಂದು ಟ್ರಂಪ್ ಕಿಡಿಕಾರಿದ್ದಾರೆ. ಜಗತ್ತಿಗೆ ಮಾರಕ ಕೊರೊನಾ ವೈರಸ್ ಹರಡಲು ಚೀನಾ ಕಾರಣ ಎಂಬ ತಮ್ಮ ಆರೋಪವನ್ನು ಮತ್ತೊಮ್ಮೆ ಪುನರುಚ್ಛಿಸಿರುವ ಟ್ರಂಪ್, ಚೀನಾ ಈ ದುರ್ಘಟನೆ ಸಂಭವಿಸಲು ಬಿಡಬಾರದಿತ್ತು ಎಂದು ಅಭಿಪ್ರಾಯಪಟ್ಟರು. ಅಮೆರಿಕದೊಂದಿಗಿನ ವಾಣಿಜ್ಯ ಒಪ್ಪಂದದ ಶಾಯಿ ಆರುವ ಮುನ್ನವೇ ಚೀನಾ ಕೊರೊನಾ ವೈರಸ್ ದ್ರೋಹ ಎಸಗಿದ್ದು, ಇದಕ್ಕಾಗಿ ಆ ರಾಷ್ಟ್ರ ಸೂಕ್ತ ಬೆಲೆ ತೆರಬೇಕಿದೆ ಎಂದು ಎಚ್ಚರಿಕೆ ನೀಡಿದರು. ಚೀನಾ ತನ್ನ ಕೊರೊನಾ ವೈರಸ್ ದ್ರೋಹವನ್ನು ಮುಚ್ಚಿಡಲೆಂದೇ ತನ್ನ ಸೈನ್ಯಕ್ಕೆ ಆಕ್ರಮಣಕಾರಿ ವರ್ತನೆ ತೋರಲು ಆದೇಶ ನೀಡಿದೆ. ಅಲ್ಲದೇ ಹಾಂಕಂಗ್ ವಿವಾದಾತ್ಮಕ ಕಾನೂನು ಜಾರಿ ಮಾಡುವ ಮೂಲಕ ವಿಶ್ವದ ಗಮನವನ್ನು ಬೇರಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಟ್ರಂಪ್ ಆರೋಪಗಳ ಸುರಿಮಳೆಗೈದರು.


from India & World News in Kannada | VK Polls https://ift.tt/3gplwKm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...