ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಭೀಕರ ಹಿಂಸಾತ್ಮಕ ಗಡಿ ಘರ್ಷಣೆ ಬಳಿಕದ ಪರಿಸ್ಥಿತಿ ಅವಲೋಕಿಸಲು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ಇಂದು(ಶುಕ್ರವಾರ) ಲೇಹ್‌ಗೆ ಭೇಟಿ ನೀಡಲಿದ್ದಾರೆ. ಲೇಹ್‌ಗೆ ಭೇಟಿ ನೀಡಲಿರುವ ಬಿಪಿನ್ ರಾವತ್, ಘರ್ಷಣೆ ಕುರಿತು ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ ಸದ್ಯದ ಗಡಿ ಪರಿಸ್ಥಿತಿಯನ್ನು ಖುದ್ದು ಅವಲೋಕಿಸಲಿದ್ದಾರೆ. ಸೇನೆಯ 14 ಕೋರ್‌ನ ಹಿರಿಯ ಸೇನಾಧಿಕಾರಿಗಳು ಬಿಪಿನ್ ರಾವತ್ ಅವರಿಗೆ ಲಡಾಖ್ ಗಡಿಯಲ್ಲಿನ ಸದ್ಯದ ಸ್ಥಿತಿಗತಿಯ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಭೂಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಮತ್ತು ಲಡಾಖ್‌ಗೆ ಭೇಟಿ ನೀಡಿದ್ದು, ಇದೀಗ ಬಿಪಿನ್ ರಾವತ್ ಕೂಡ ಲೇಹ್‌ಗೆ ಭೇಟಿ ನೀಡಲಿರುವುದು ತಿವ್ರ ಕುತೂಹಲ ಮೂಡಿಸಿದೆ. ಲಡಾಖ್ ಗಡಿ ಘರ್ಷಣೆ ಬಳಿಕ ಸೇನೆಯಲ್ಲಿ ಚಟುವಟಿಕೆಗಳು ತೀವ್ರಗೊಳ್ಳುತ್ತಿದ್ದು, ಖುದ್ದು ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ವಸ್ತುಸ್ಥಿತಿ ಅಧ್ಯಯನ ನಡೆಸಲಿರುವುದು ದೇಶದ ಗಮನ ಸೆಳೆದಿದೆ.
from India & World News in Kannada | VK Polls https://ift.tt/31I2mem