ಕ್ರಿಕೆಟ್ ಬಗ್ಗೆ ಚಿಂತೆಯಿಲ್ಲ; ಜಾಲಿ ಮೂಡ್‌ನಲ್ಲಿ ಧೋನಿ ಫ್ಯಾಮಿಲಿ

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ , ಸುದೀರ್ಘ ಸಮಯದಿಂದ ಕ್ರಿಕೆಟ್ ರಂಗದಿಂದ ದೂರವುಳಿದಿದ್ದಾರೆ. ಈ ವೇಳೆಯಲ್ಲಿ ಹೊಸ ವರ್ಷವನ್ನು ಕುಟುಂಬದ ಜೊತೆ ಸಂತೋಷದ ಸಮಯವನ್ನು ಕಳೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಹಿಮದಿಂದ ಆವೃತ್ತವಾಗಿರುವ ಉತ್ತರ ಪ್ರದೇಶದ ಪ್ರದೇಶದಲ್ಲಿ ಪತ್ನಿ ಸಾಕ್ಷಿ ಸಿಂಗ್ ಧೋನಿ ಹಾಗೂ ಮಗಳು ಜೊತೆಗೆ ಧೋನಿ ರಜಾ ದಿನಗಳನ್ನು ಕಳೆದಿದ್ದಾರೆ. ಈ ಸಂಬಂಧ ಅಭಿಮಾನಿಗಳ ಜೊತೆಗೆ ಚಿತ್ರಗಳನ್ನು ಹಂಚಿದ್ದಾರೆ. ಹಿಮಪಾತದ ನಡುವೆ ಮಗಳು ಝಿವಾ ಗಿಟಾರ್ ನುಡಿಸುತ್ತಾ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. 2019ನೇ ಸಾಲಿನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್ ರಂಗದಿಂದ ಧೋನಿ ಹೊರಗುಳಿದಿದ್ದಾರೆ. ಯುವ ವಿಕೆಟ್ ಕೀಪರ್‌ಗಳಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಧೋನಿ, ಸುದೀರ್ಘವಾದ ವಿರಾಮವನ್ನು ಪಡೆದಿದ್ದರು. ಈ ನಡುವೆ ರಾಂಚಿಯಲ್ಲಿ ಅಭ್ಯಾಸ ಮಾಡುವ ಮೂಲಕ ಮರಳುವ ಸೂಚನೆ ನೀಡಿದ್ದರು. ವಿಶ್ವಕಪ್ ಬಳಿಕ ತವರಿನಲ್ಲಿ ನಡೆದ ಎಲ್ಲ ಸರಣಿಗಳಿಂದಲೂ ಹೊರಗುಳಿದಿರುವ ಧೋನಿ, ಯಾವಾಗ ಕಮ್ ಬ್ಯಾಕ್ ಮಾಡಲಿದ್ದಾರೆ ಅಥವಾ ನಿವೃತ್ತಿ ಸಲ್ಲಿಸಲಿದ್ದಾರೆಯೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ. ಈ ಬಗ್ಗೆ ಹೊಸ ವರ್ಷದ ವರೆಗೂ ಏನನ್ನೂ ಕೇಳಬಾರದು ಎಂದು ಸ್ವತ: ಧೋನಿ ಹೇಳಿದ್ದರು. ಈಗ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಧೋನಿ ಪಾಲಿಗೆ ನಿರ್ಣಾಯಕವೆನಿಸಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದಕ್ಕೂ ಮೊದಲು ನಿವೃತ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇದು ಧೋನಿ ಅವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟ ವಿಚಾರ. ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಹಾಗೂ ಆಯ್ಕೆ ಸಮಿತಿ ಜೊತೆಗೆ ಧೋನಿ ಸಂಪರ್ಕದಲ್ಲಿದ್ದಾರೆ. ಅಲ್ಲದೆ ಧೋನಿ ಭವಿಷ್ಯದ ಬಗ್ಗೆ ಸ್ಪಷ್ಟತೆಯಿದೆ ಎಂದು ಅಭಿಪ್ರಾಯಪಟ್ಟಿದ್ದರು. ರಾಕ್‌ವಿಲ್ಲಾದಲ್ಲಿ ಸ್ನೊ ಮ್ಯಾನ್ ರಚಿಸುತ್ತಿರುವ ಧೋನಿ ಫ್ಯಾಮಿಲಿ ಝಿವಾಗೆ ಮೊದಲ ಹಿಮಪಾತದ ಅನುಭವ ಕ್ಯೂಟ್ ಝಿವಾ ಡೆಹ್ರಾಡೂನ್‌ನಲ್ಲಿ ಹಾಲಿಡೇ ಮಜಾ ಧೋನಿ ಫ್ಯಾಮಿಲಿ ಪತ್ನಿ ಸಾಕ್ಷಿ ಜೊತೆಗೆ ಧೋನಿ ಹಾಲಿಡೇ ಮೂಡ್‌ನಲ್ಲಿ ಧೋನಿ ಫ್ಯಾಮಿಲಿ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39TRw6T

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...