ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ: ಸಚಿವೆ ಶಶಿಕಲಾ ಜೊಲ್ಲೆ ಭರವಸೆ

ಉಡುಪಿ: ಸಾಲ ಮರುಪಾವತಿಯಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಪ್ರಾಮಾಣಿಕರಾಗಿದ್ದು, ಸ್ವಸಹಾಯ ಸಂಘಗಳಿಗೆ ನೀಡುವ ಚಿಂತನೆ ನಡೆದಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹೇಳಿದರು. ಅವರು ಕಡಿಯಾಳಿಯ ಬಿಜೆಪಿ ಜಿಲ್ಲಾ ಕಚೇರಿಗೆ ಗುರುವಾರ ಭೇಟಿ ನೀಡಿ ಮಾತನಾಡಿ, ನಿಪ್ಪಾಣಿಯ ಸಹಕಾರಿ ಸಂಸ್ಥೆ ಮೂಲಕ 50ಹೆಣ್ಣು ಮಕ್ಕಳಿಗೆ ಆರಂಭಿಸಿದ ಸಾಲವನ್ನು ಈಗ 2ಲಕ್ಷ ಮಹಿಳೆಯರಿಗೆ ನೀಡುತ್ತಿದ್ದು, ಶೇ. 99 ಮರುಪಾವತಿಯಾಗುತ್ತಿದೆ ಎಂದರು. ರಾಜ್ಯದಲ್ಲಿ ಹೈಟೆಕ್ ಅಂಗನವಾಡಿ ನಿರ್ಮಾಣ, ಆಟ ಕಲಿಕೆಯ ಡಿಜಿಟಲ್ ವ್ಯವಸ್ಥೆ, ಬಯೋಮೆಟ್ರಿಕ್ ಹಾಜರಾತಿ(ಫೇಸ್ ಆ್ಯಪ್), ಸ್ವಂತ ಕಟ್ಟಡ ನಿರ್ಮಾಣ, ಹಣ ಸೋರಿಕೆ ತಡೆಗೆ ಉದ್ದೇಶಿಸಿದ್ದು ಅನರ್ಹರು ಬಿಪಿಎಲ್ ಕಾರ್ಡನ್ನು ಜ. 31ರೊಳಗೆ ಹಿಂತಿರುಗಿಸಬೇಕು ಎಂದರು. ತ್ಯಾಗ, ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ ಆಡಳಿತದಲ್ಲಿ ಹಿಂದುಳಿದ ಭಾರತ ಅಟಲ್‍ಜಿ, ಮೋದಿ ಆಡಳಿತದಲ್ಲಿ ಅಭಿವೃದ್ಧಿ ಪರ್ವದೊಂದಿಗೆ ಜಗತ್ತಿಗೆ ಗುರುವಾಗುವ ಹಾದಿಯಲ್ಲಿದೆ. ಗಾಂ, ಪಟೇಲ್ ಕಂಡ ಕನಸು ನನಸಾಗುತ್ತಿದೆ ಎಂದರು. ದೇಶದ ಸುರಕ್ಷತೆಗೆ ಕೇಂದ್ರದ ಎನ್‍ಡಿಎ ಸರಕಾರ ಕಾರ್ಯತತ್ಪರವಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆಯ ಅರಿವು ಎಲ್ಲರಲ್ಲೂ ಮೂಡಿಸಬೇಕು. ಪ್ರತಿಪಕ್ಷ ಜನರನ್ನು ಹಾದಿ ತಪ್ಪಿಸುತ್ತಿದೆ. ಮುಸ್ಲಿಂ, ಕ್ರೈಸ್ತರ ಸಹಿತ ಅಲ್ಪಸಂಖ್ಯಾತರ ಹಕ್ಕಿಗೆ ಒಂದಿನಿತೂ ಧಕ್ಕೆಯಾಗದು ಎಂದರು. ಸಚಿವೆಗೆ ಆರತಿ, ತುರುಬಿಗೆ ಮಲ್ಲಿಗೆ ಮುಡಿಸಿ ಸನ್ಮಾನ ಬಿಜೆಪಿ ಕಚೇರಿ ಎದುರು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಆರತಿ ಎತ್ತಿ ಅರಶಿನ ಕುಂಕುಮವಿಟ್ಟು ಸ್ವಾಗತಿಸಿದರೆ, ಸಮಾರಂಭದ ಬಳಿಕ ಸಚಿವೆ ಕೈಗಳಿಗೆ ಗಾಜಿನ ಬಳೆ ತೊಡಿಸಿ, ತುರುಬಿಗೆ ಶಂಕರಪುರ ಮಲ್ಲಿಗೆ ಮುಡಿಸಿ ರೇಶ್ಮೆ ಸೀರೆ ಸಹಿತ ಫಲವಸ್ತು ನೀಡಿ ಪ್ರೀತಿ, ಅಭಿಮಾನವನ್ನು ತೋರಲಾಯಿತು. ತಾಯಿ ಮನೆಗೆ ಮಗಳು ಬಂದಾಗ ನೀಡುವ ಆತಿಥ್ಯ, ಪ್ರೀತಿ ಹೊರತು ಬೇರೆಲ್ಲೂ ಸಿಕ್ಕಿಲ್ಲ ಎಂದು ಶಶಿಕಲಾ ಜೊಲ್ಲೆ ಅಭಿಮಾನ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/2R2yYIH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...