ಬೆಂಗಳೂರು: ನನ್ನನ್ನು ಅಪಮಾನಿಸುತ್ತಿರುವ ಬಿಜೆಪಿಗರೇ ಎಚ್ಚರ. ನಿಮ್ಮ ವಂಶವಾಹಿಗಳು (ಜೀನ್ ಗಳು) ಪಾಕಿಸ್ತಾನದಲ್ಲಿರಬಹುದು. ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ನನ್ನ ವಂಶವಾಹಿ (ಜೀನ್) ಇದೇ ಮಣ್ಣಿನಲ್ಲಿದೆ. ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಶನಿವಾರ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಕೊಲೆ ಪಿತೂರಿ ನಡೆಯುತ್ತಿರುವ ಭಯಂಕರ ರಹಸ್ಯವನ್ನು ಬಯಲು ಬಯಲುಮಾಡಿದ್ದಾರೆ. ನನ್ನನ್ನು ಕೊಲ್ಲಲು ಯತ್ನಿಸುವವರು ನವ ಉಗ್ರರು. ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು ಎಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು ಮತ್ತೆ ಒಕ್ಕಲಿಗ ಅಸ್ಮಿತೆಯ ಮೊರೆ ಹೋಗಿದ್ದಾರೆ.
from India & World News in Kannada | VK Polls https://ift.tt/37qSQMH