ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ; ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಸೈನಾ, ಸಿಂಧೂ

ಕೌಲಾಲಂಪುರ: ಭಾರತದ ಅಗ್ರಮಾನ್ಯ ತಾರೆಗಳಾದ ಹಾಗೂ , ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಪುರುಷರ ವಿಭಾಗದಲ್ಲಿ ಸೋಲನುಭವಿಸಿರುವ ಸಮೀರ್ ವರ್ಮಾ ಕೂಟದಿಂದಲೇ ನಿರ್ಗಮಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ದ್ವಿತೀಯ ಸುತ್ತಿನ ಸೆಣಸಾಟದಲ್ಲಿ ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌, ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ವಿರುದ್ದ 25-23 21-12ರ ಅಂತರದಲ್ಲಿ ಗೆಲುವು ಬಾರಿಸಿದರು. ಕಳೆದ ಬಾರಿಯ ಇಂಡೋನೇಷ್ಯಾ ಮಾಸ್ಟರ್ಸ್ ಚಾಂಪಿಯನ್ ಆಗಿರುವ ಸೈನಾ, 39 ನಿಮಿಷಗಳ ಅಂತರದಲ್ಲಿ ಪಂದ್ಯ ವಶಪಡಿಸಿಕೊಂಡರು. ಈ ಮೂಲಕ ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ಎದುರಾದ ಸೋಲಿಗೆ ಸೇಡು ತೇರಿಸಿಕೊಂಡರು. ಇನ್ನೊಂದೆಡೆ ವಿಶ್ವ ನಂ. 6ನೇ ಶ್ರೇಯಾಂಕದ ಪಿವಿ ಸಿಂಧೂ ಕೂಡಾ ದ್ವಿತೀಯ ಸುತ್ತಿನ ಹೋರಾಟದಲ್ಲಿ ವಿಜಯದ ನಗು ಬೀರಿದ್ದಾರೆ. ಜಪಾನ್‌ನ ಆಯ ಒಹೊರಿ ವಿರುದ್ಧ 21-10, 21-15ರ ಅಂತರದ ಗೆಲುವು ದಾಖಲಿಸಿ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ಅಲ್ಲದೆ ಪಂದ್ಯವನ್ನು 34 ನಿಮಿಷಗಳಲ್ಲಿ ವಶಪಡಿಸಿಕೊಂಡರು. ಇದು ಓಹೊರಿ ವಿರುದ್ಧ ಸಿಂಧೂ ಅವರ ಸತತ 9ನೇ ಗೆಲುವಾಗಿದೆ. ಏತನ್ಮಧ್ಯೆ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ, ಸ್ಥಳೀಯ ಸ್ಪರ್ಧಿ ಲೀ ಝಿ ಜಿಯಾ ವಿರುದ್ದ 21-19, 22-20ರ ಅಂತರದಲ್ಲಿ ಸೋಲನಭವಿಸಿದರು. 52 ನಿಮಿಷಗಳ ವರೆಗೂ ಜಿದ್ದಾಜಿದ್ದಿನ ಹೋರಾಟ ನೀಡಿದರೂ ಪಂದ್ಯ ಗೆಲ್ಲಲಾಗಲಿಲ್ಲ. ಇದಕ್ಕೂ ಮೊದಲು ಪ್ರಥಮ ಸುತ್ತಿನಲ್ಲೇ ಸೋಲಿನ ಮುಖಭಂಗ ಅನುಭವಿಸಿರುವ ಪರುಪ್ಪಳ್ಳಿ ಕಶ್ಯಪ್ ಹಾಗೂ ಕಿಡಂಬಿ ಶ್ರೀಕಾಂತ್ ಹೊರ ನಡೆದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2FEkd9H

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...