ಇಂದು ಅರೆನೆರಳಿನ ಚಂದ್ರಗ್ರಹಣ, ರಾಜ್ಯದಲ್ಲಿ ಗೋಚರ ಇಲ್ಲ

ಬೆಂಗಳೂರು: ಬನದ ಹುಣ್ಣಿಮೆಯ ಸಂಭ್ರಮ ಒಂದೆಡೆ ಯಾದರೆ, ಶುಕ್ರವಾರ ರಾತ್ರಿ ಸಂಭವಿಸುವ ಚಂದ್ರ ಕುರಿತ ಚರ್ಚೆ ಮತ್ತೊಂದೆಡೆ. ಈ ವರ್ಷ ಸಂಭವಿಸುವ ನಾಲ್ಕು ಚಂದ್ರ ಗ್ರಹಣಗಳಲ್ಲಿ ಇದು ಮೊದಲನೆಯದು. ಪೆನ್ಯೂಂಬ್ರಲ್‌ ಲೂನಾರ್‌ ಎಕ್ಲಿಫ್ಸ್‌ ಅಥವಾ ವುಲ್ಫ್‌ ಲೂನಾರ್‌ ಎಕ್ಲಿಫ್ಸ್‌ ಎಂದೇ ಹೆಸರಾದ ಗ್ರಹಣ ಯೂರೋಪ್‌, ಆಫ್ರಿಕಾ, ಏಷಿಯಾ, ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಆಸ್ಪ್ರೇಲಿಯಾದಲ್ಲಿ ಗೋಚರಿಸಲಿದೆ. ಶುಕ್ರವಾರ ರಾತ್ರಿ 10.37ಕ್ಕೆ ಪ್ರಾರಂಭವಾಗುವ ಗ್ರಹಣ ಶನಿವಾರ ಬೆಳಗಿನ ಜಾವ 2.42ಕ್ಕೆ ಮುಕ್ತಾಯವಾಗುತ್ತದೆ. ನಮ್ಮ ರಾಜ್ಯದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಭಾರತದ ಕೆಲ ಭಾಗಗಳಲ್ಲಿ ಮಾತ್ರ ಗೋಚರಿಸಲಿದೆ. ಹಾಗಾಗಿ ಯಾವುದೇ ವಿಶೇಷ ಪೂಜೆ, ಪುನಸ್ಕಾರಗಳ ಅವಶ್ಯಕತೆ ಇಲ್ಲ ಎಂದು ಜ್ಯೋತಿಷಿ ಡಾ. ಸಿ.ಕೆ. ಆನಂದತೀರ್ಥಾಚಾರ್‌ ಹೇಳಿದ್ದಾರೆ. 2020ರ ಜೂನ್‌ 5, ಜುಲೈ 5 ಮತ್ತು ನ. 30ರಂದು ಸಂಭವಿಸುವ ನಮಗೆ ಗೋಚರವಾಗುವುದಿಲ್ಲ. ಡಿ.14ರಂದು ಸಂಭವಿಸುವ ಸೂರ್ಯ ಗ್ರಹಣ ಆಚರಣೆಯೂ ಇರುವುದಿಲ್ಲ. ಆದರೆ ಜೂನ್‌ 21ರಂದು ಸಜಂಭವಿಸುವ ಸೂರ್ಯ ಗ್ರಹಣ ನಮಗೆ ಗೋಚರಿಸುವುದರಿಂದ ಅದರ ಆಚರಣೆ ಅವಶ್ಯ. ಅದರ ಹೊರತಾಗಿ 2020ರಲ್ಲಿ ಸಂಭವಿಸುವ ಯಾವುದೇ ಗ್ರಹಣಗಳು ನಮಗೆ ಗೋಚರಿಸದ ಕಾರಣ ಆಚರಣೆಯಿಲ್ಲ ಎಂದು ಅವರು ವಿವರಿಸಿದ್ದಾರೆ. ''ಬರಿಗಣ್ಣಿನಲ್ಲಿ ನೋಡಿದರೆ ಚಂದ್ರನ ಮೇಲಿರುವ ಮಂದ ಛಾಯೆ ಕಾಣುವುದೇ ಇಲ್ಲ. ಆದರೆ ಚಂದ್ರನ ಮೇಲೆ ಮತ್ತೊಂದು ನೆರಳಿನ ಬಿಂಬ ಮಬ್ಬಾಗಿ ಮೂಡಿದಂತೆ ಕಾಣುತ್ತದೆ. ಆದರೆ ಶೇ.90ರಷ್ಟು ಗ್ರಹಣ ಸಂಭವಿಸಿದ ಸಮಯದಲ್ಲಿ ಅಂದರೆ, ರಾತ್ರಿ 12.41ರ ಹೊತ್ತಿಗೆ ಚಂದ್ರನ ಮೇಲೆ ಬಿದ್ದಿರುವ ಭೂಮಿಯ ನೆರಳನ್ನು ಬರಿಗಣ್ಣಿನಿಂದ ನೋಡಿದರೂ ಸ್ಪಷ್ಟವಾಗಿ ಗುರುತಿಸಬಹುದು,'' ಎನ್ನುತ್ತಾರೆ ಕೊಲ್ಕೋತಾದ ಬಿರ್ಲಾಪ್ಲಾನಿಟೋರಿ ಯಂನ ನಿರ್ದೇಶಕರಾದ ದೇವಿ ಪ್ರಸಾದ್‌ ದೊರೈ.


from India & World News in Kannada | VK Polls https://ift.tt/2sUbU7j

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...