IND vs NZ: ವಿಲಿಯಮ್ಸನ್‌ ವಿಕೆಟ್‌ ಪಡೆಯಲು ಮೂರು ತಂತ್ರಗಳು ಇಲ್ಲಿವೆ..

ಹೊಸದಿಲ್ಲಿ: ಭಾರತ ಹಾಗೂ ತಂಡಗಳು ನಾಳೆಯಿಂದ(ಗುರುವಾರ) ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಅಂದಹಾಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿರುವ ವಿಶ್ವಾಸದಲ್ಲಿರುವ ಭಾರತ ತಂಡ, ಇದೀಗ ಟೆಸ್ಟ್‌ ಸರಣಿ ಅಭಿಯಾನವನ್ನು ಆರಂಭಿಸಲಿದೆ. ಕಳೆದ ಜೂನ್ ಅಂತ್ಯದಲ್ಲಿ ಸೌಥ್‌ಹ್ಯಾಂಪ್ಟನ್‌ನಲ್ಲಿ ನಡೆದಿದ್ದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಫೈನಲ್‌ ಹಣಾಹಣಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ದೀರ್ಘಾವಧಿ ಸ್ವರೂಪದಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ಹೀನಾಯ ಸೋಲು ಅನುಭವಿಸಿತ್ತು. ಅಂದಹಾಗೆ, ಮುಂಬರುವ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡಕ್ಕೆ ದೊಡ್ಡ ಸವಾಲಾಗಿ ಎದುರಾಗಲಿದ್ದಾರೆ. ಅವರು ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಅವರನ್ನು ಔಟ್‌ ಮಾಡಬೇಕೆಂದರೆ ಬೌಲರ್‌ಗಳು ಸಾಕಷ್ಟು ಬುದ್ದಿವಂತಿಕೆಯನ್ನು ಉಪಯೋಗಿಸಬೇಕಾಗುತ್ತದೆ. ಇತ್ತೀಚೆಗೆ ಮುಗಿದಿರುವ ಟಿ20 ಸರಣಿಯಿಂದ ಹೊರಗುಳಿದಿದ್ದ ಕೇನ್‌ ವಿಲಿಯಮ್ಸನ್‌ ಟೆಸ್ಟ್‌ ಸರಣಿಗೋಸ್ಕರ ಸಾಕಷ್ಟು ತಯಾರಿ ನಡೆಸಿಕೊಂಡಿದ್ದಾರೆ. ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೇನ್‌ ವಿಲಿಯಮ್ಸನ್ ಅವರ ವಿಕೆಟ್‌ ಪಡೆಯಬೇಕೆಂದರೆ, ಭಾರತ ತಂಡಕ್ಕೆ ಮೂರು ಹಾದಿಗಳಿವೆ. ಈ ಮೂರು ಹಾದಿಗಳನ್ನು ಪಾಲನೆ ಮಾಡಿದ್ದೇ ಆದಲ್ಲಿ ಕಿವೀಸ್‌ ನಾಯಕನನ್ನು ಬಹುಬೇಗ ಕಟ್ಟಿ ಹಾಕಬಹದು. ಅವುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. 1. ಶಾರ್ಟ್‌ ಪಿಚ್‌ ದಾಳಿ ನಡೆಸಬೇಕು ಶಾರ್ಟ್‌ ಪಿಚ್‌ ಎಸೆತಗಳನ್ನು ಆಡುವ ವಿಷಯದಲ್ಲಿ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಅವರಿಗೆ ವೀಕ್‌ನೆಸ್‌ ಇದೆ. ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದುದ್ದಕ್ಕೂ ಅವರು ಶಾರ್ಟ್‌ ಪಿಚ್‌ ಎಸೆತಗಳು ಎದುರು ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅವರು ಶಾರ್ಟ್ ಪಿಚ್‌ ಬೌಲಿಂಗ್‌ ಅನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾಗಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿಯೇ ಕೇನ್‌ ವಿಲಿಯಮ್ಸನ್‌ ಶೇ. 90 ರಷ್ಟು ಶಾರ್ಟ್‌ ಎಸೆತಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ. ಹಾಗಾಗಿ, ಭಾರತೀಯ ಬೌಲರ್‌ಗಳು ಈ ತಂತ್ರವನ್ನು ಅನುಸರಿಸಿದರೆ ಕಿವೀಸ್‌ ನಾಯಕನ ವಿಕೆಟ್‌ ಪಡೆಯಬಹುದು. 2. ವಿಲಿಯಮ್ಸನ್‌ಗೆ ಅಶ್ವಿನ್‌ ಬೌಲ್‌ ಮಾಡಬೇಕು ಟೀಮ್‌ ಇಂಡಿಯಾ ಮಾಜಿ ಸ್ಪಿನ್ನರ್‌ ಪ್ರಗ್ಯಾನ್‌ ಓಜಾ(5 ಬಾರಿ) ಬಳಿಕ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಎದುರು ಅತ್ಯಂತ ಯಶಸ್ವಿಯಾಗಿರುವ ಬೌಲರ್‌ ಆರ್ ಅಶ್ವಿನ್‌. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೇನ್ ವಿಲಿಯಮ್ಸನ್‌ ಅವರನ್ನು ಹಿರಿಯ ಸ್ಪಿನ್ನರ್‌ ಒಟ್ಟು ಐದು ಬಾರಿ ಔಟ್‌ ಮಾಡಿದ್ದಾರೆ. ಇವರನ್ನು ಬಿಟ್ಟರೆ ಮಾಜಿ ವೇಗಿ ಜಹೀರ್‌ ಖಾನ್‌ ನಾಲ್ಕು ಬಾರಿ ಕಿವೀಸ್‌ ನಾಯಕನನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಔಟ್‌ ಮಾಡಿದ್ದಾರೆ. ಈ ಹಿಂದಿನ ದಾಖಲೆ ಅನುಸಾರ ಆರ್‌ ಅಶ್ವಿನ್‌ ಅವರನ್ನು ಕೇನ್‌ ವಿಲಿಯಮ್ಸನ್‌ ಎದುರು ಬಳಸಿಕೊಳ್ಳಬೇಕು. 3. ವೇಗದ ಬೌಲರ್‌ಗಳ ಬಳಕೆ ವೇಗದ ಬೌಲರ್‌ಗಳ ಎದುರು ಶೇ.26.1 ರಷ್ಟು ಕೇನ್‌ ವಿಲಿಯಮ್ಸನ್‌ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ಕೊಟ್ಟಿದ್ದಾರೆ. ಫಾಸ್ಟ್ ಬೌಲಿಂಗ್‌ನಲ್ಲಿ ಅತಿಯಾದ ವೇಗ, ಬೌನ್ಸರ್‌ ಹಾಗೂ ಸ್ವಿಂಗ್‌ ಇದ್ದರೆ ವಿಲಿಯಮ್ಸನ್‌ ಬ್ಯಾಟ್‌ ಮಾಡಲು ಸ್ವಲ್ಪ ತಿಣುಕಾಡುತ್ತಾರೆ. ಇದು ಟೀಮ್‌ ಇಂಡಿಯಾ ಬೌಲರ್‌ಗಳಿಗೆ ಲಾಭದಾಯಕವಾಗಬಹುದು. ಅದರಂತೆ ಭಾರತ ತಂಡದಲ್ಲಿ ಇಶಾಂತ್‌ ಶರ್ಮಾ ಹಾಗೂ ಮೊಹಮ್ಮದ್‌ ಸಿರಾಜ್‌ ಅವರಂಥ ಅತ್ಯುತ್ತಮ ಬೌಲರ್‌ಗಳಿರುವುದರಿಂದ ಕೇನ್‌ ವಿಲಿಯಮ್ಸನ್‌ ಅವರನ್ನು ಔಟ್‌ ಮಾಡುವ ಎಲ್ಲಾ ಸಾಧ್ಯತೆ ಇದೆ. ಈ ಎಲ್ಲಾ ತಂತ್ರಗಳನ್ನು ಕೇನ್‌ ವಿಲಿಯಮ್ಸನ್‌ಗೆ ಆರಂಭದಲ್ಲಿಯೇ ಪ್ರಯೋಗ ಮಾಡಬೇಕಾಗುತ್ತದ. ಇಲ್ಲವಾದಲ್ಲಿ ವಿಲಿಯಮ್ಸನ್‌ ದಿನಪೂರ್ತಿ ಬೌಲರ್‌ಗಳಿಗೆ ಕಾಟ ನೀಡಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3FGEnNt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...