
ಬೆಳಗಾವಿ: ಸತೀಶ್ ಅಣ್ಣಾ ಜಾರಕಿಹೊಳಿ ಅವರು ನಮ್ಮ ಅಣ್ಣಾ ಇದ್ದಾರೆ ಅವರು ಹಾಗೆ ಹೇಳ್ತಾ ಇರುತ್ತಾರೆ ಎಂದು ಸಹೋದರ ಲಖನ್ ಜಾರಕಿಹೊಳಿ ಸತೀಶ್ ಜಾರಕಿಹೊಳಿ ಅವರ ಮಾತಿಗೆ ತೀರುಗೇಟು ನೀಡಿದರು.ಲಖನ್ ನಾಮಪತ್ರ ಹಿಂಪಡೆಯುತ್ತಾರೆ ನೋಡಿ ಎಂದು ಸತೀಶ್ ಜಾರಕಿಹೊಳಿ ಮಾತಿಗೆ ಲಖನ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಸತೀಶ ನಮ್ಮ ಅಣ್ಣ, ಸಹೋದರರು ಟಿಕೆಟ್ ವಿಚಾರದ ತಮ್ಮ ಅನಿಸಿಕೆಯನ್ನ ಹೇಳಿದ್ದಾರೆ ಎಂದು ವ್ಯಂಗವಾಡಿದರು. ನಮ್ಮ ಬೆಂಬಲಿಗರು, ಕಾರ್ಯಕರ್ತರು ಹೇಳಿದ್ದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಎಂಎಲ್‍ಸಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ಮಂಗಳವಾರ ಸಾವಿರಾರು ಅಭಿಮಾನಿಗಳು ಜತೆ ಬೃಹತ್ ಮೆರವಣಿಗೆಯ ಬಳಿಕ ನಾಮಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಲಖನ್ ಜಾರಕಿಹೊಳಿ ಈ ಚುನಾವಣೆಯಲ್ಲಿ ನಮಗೆ ಕಾಂಪಿಟೇಟರ್ ಯಾರು ಇಲ್ಲ ಅವರ ಬಗ್ಗೆ ವಿಚಾರ ಮಾಡುವುದಿಲ್ಲ. ಸಹೋದರರು ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ. ಸತೀಶ್ ಜಾರಕಿಹೊಳಿ ಎನೇ ಹೇಳಿದರು ಅವರು ನಮ್ಮ ಅಣ್ಣ. ಪಂಚಾಯಿತಿ ಅಭಿವೃದ್ಧಿಗೋಸ್ಕರ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಇವತ್ತು ಶಕ್ತಿ ಪ್ರದರ್ಶನ ಅಲ್ಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೂಡಿದ್ದಾರೆ ಎಂದರು. ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಬಳಿಕ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂಬ ಸತೀಶ್ ಹೇಳಿಕೆ ವಿಚಾರಕ್ಕೆ ನಾನು ನಾಮಪತ್ರ ವಾಪಸ್ ತೆಗೆದುಕೊಳ್ಳುವ ಚಾನ್ಸೆ ಇಲ್ಲ. ಸತೀಶ್ ಜಾರಕಿಹೊಳಿ ಸುತ್ತಮುತ್ತ ಇದ್ದವರು ಊಹಾಪೋಹಗಳನ್ನು ಎಬ್ಬಿಸುತ್ತಿದ್ದಾರೆ ಎಂದರು. ಜನರ, ಕಾರ್ಯಕರ್ತರ ಹಾಗೂ ಮತದಾರರ ಬೆಂಬಲ ಇದೆ. ಅವರ ಆಶೀರ್ವಾದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಉದ್ಯಮಿ ಲಖನ್ ಜಾರಕಿಹೊಳಿ ಹೇಳಿದರು. ನನ್ನ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿಗೆ ನಷ್ಟವಾಗುತ್ತಿದೆ ಎಂದು ಕೆಲವರು ಅಪ ಪ್ರಚಾರ ನಡೆಸುತ್ತಿದ್ದಾರೆ. ಆದರೆ ನಾನು ಸ್ಪರ್ಧೆ ಮಾಡುತ್ತಿರುವುದರಿಂದ ಬಿಜೆಪಿ ಅಭ್ಯರ್ಥಿಗೆ ಲಾಭವಾಗುತ್ತದೆ. ನಾನು ಬಿಜೆಪಿ ಬಂಡಾಯ ಅಭ್ಯರ್ಥಿ ಅಲ್ಲ. ನಾನು ಟಿಕೆಟ್ ಕೇಳಿಯೇ ಇಲ್ಲ. ಆದ್ದರಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.ಮತದಾರರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿಕೊಂಡರು. ನನ್ನ ತಮ್ಮ ಚನ್ನರಾಜನ ಗೆಲವು ಖಚಿತ: ಶಾಸಕಿ ಹೆಬ್ಬಾಳ್ಕರ್ನನ್ನ ಸಹೋದರ ಕಾಂಗ್ರೆಸ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾನೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದು ದೇವರಲ್ಲಿ ಪಾರ್ಥನೆ ಮಾಡಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ಚುನಾವಣೆಯನ್ನ ನಾವು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಎಂದರು. ಹೀಗಾಗಿ ಗೆಲವು ನಮ್ಮದೆ ಎಂದು ತಿಳಿಸಿದರು.
from India & World News in Kannada | VK Polls https://ift.tt/3FGVZZr