ಸಂತ್ರಸ್ತೆಯನ್ನೇ ವರಿಸಿದರೂ ಅತ್ಯಾಚಾರ ಕೇಸ್‌ನಿಂದ ಮುಕ್ತಿಯಿಲ್ಲ; ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು: ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಒಂದು ವೇಳೆ ಆರೋಪಿ ಸಂತ್ರಸ್ತೆಯನ್ನೇ ಮದುವೆಯಾಗಿದ್ದರೂ ರೇಪ್‌ ಕೇಸ್‌ ವಿಚಾರಣೆ ಮುಂದುವರಿಯುವುದು ರದ್ದುಪಡಿಸಲಾಗದು ಎಂಬ ಮಹತ್ವದ ಆದೇಶ ಹೈಕೋರ್ಟ್‌ನಿಂದ ಹೊರಬಿದ್ದಿದೆ. ಸಾಮಾನ್ಯವಾಗಿ ರೇಪ್‌ ಪ್ರಕರಣಗಳಲ್ಲಿ ಸಂತ್ರಸ್ತೆಯನ್ನು ವರಿಸಿದಾಗ ಹೈಕೋರ್ಟ್‌ ‘ಮಾನವೀಯತೆ’ ನೆಲೆಯಲ್ಲಿ ಅತ್ಯಾಚಾರ ಕೇಸನ್ನು ಮುಕ್ತಾಯಗೊಳಿಸಿ ಇಬ್ಬರ ‘ಸುಖ ಸಂಸಾರ’ಕ್ಕೆ ದಾರಿ ಮಾಡಿಕೊಡುತ್ತಿತ್ತು. ಇಲ್ಲೊಂದು ಪ್ರಕರಣದಲ್ಲಿ ಹಿಂದಿನ ನ್ಯಾಯಮೂರ್ತಿಗಳ ತೀರ್ಪುಗಳನ್ನು ಅನುಕರಿಸದೆ, ಆರೋಪಿ ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆಂಬ ಕಾರಣಕ್ಕೆ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಜಂಟಿಯಾಗಿ ಕ್ರಿಮಿನಲ್‌ ಕೇಸ್‌ ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ಅಷ್ಟೇ ಅಲ್ಲದೆ, ವಿಜಯ್‌ ಕುಮಾರ್‌ ವರ್ಸಸ್‌ ಮಾದನಾಯನಕಹಳ್ಳಿ ಪೊಲೀಸರ ನಡುವಿನ ಪ್ರಕರಣದಲ್ಲಿ ಹಿಂದೆ ಇದೇ ನ್ಯಾಯಾಲಯ ಆರೋಪಿ ಮತ್ತು ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿ ಪ್ರಕರಣ ರದ್ದು ಮಾಡಿದೆ. ಆದರೆ, ಅದನ್ನೇ ಪಾಲನೆ ಮಾಡಬೇಕಾಗಿಲ್ಲ ಎಂದಿದೆ. ಜತೆಗೆ, ಸುಪ್ರೀಂಕೋರ್ಟ್‌ ಕೊಲೆ, ಅತ್ಯಾಚಾರ, ಡಕಾಯಿತಿ ಮತ್ತಿತರ ಪ್ರಕರಣಗಳಲ್ಲಿ ಆರೋಪಿ ಮತ್ತು ಸಂತ್ರಸ್ತರ ನಡುವೆ ಪ್ರಕರಣ ಇತ್ಯರ್ಥವಾಗಿದ್ದರೂ ಅವರ ವಿರುದ್ಧದ ಕ್ರಿಮಿನಲ್‌ ಕೇಸುಗಳನ್ನು ರದ್ದುಗೊಳಿಸಬಾರದೆಂದು ಹೇಳಿದೆ. ಹಾಗಾಗಿ, ಪ್ರಕರಣ ರದ್ದುಗೊಳಿಸಲಾಗದು ಎಂದು ನ್ಯಾಯಾಲಯ ಆದೇಶಿಸಿದೆ. ಅತ್ಯಾಚಾರ ಘಟನೆ ನಡೆದಾಗ 19 ವರ್ಷವಾಗಿತ್ತು ಎಂದು ಸಂತ್ರಸ್ತೆ ಹೇಳಿದ್ದಾರೆ. ಆದರೆ, ಪೊಲೀಸ್‌ ದಾಖಲೆಗಳ ಪ್ರಕಾರ ಅಪ್ರಾಪ್ತಳಾಗಿದ್ದಳು ಎನ್ನಲಾಗಿದೆ. ತನ್ನ ಒಪ್ಪಿಗೆಯಿಂದಲೇ ಅತ್ಯಾಚಾರವೆಸಗಿದ್ದಾನೆ ಎಂದು ಆಕೆ ಹೇಳಿಕೆ ನೀಡಿದ್ದರೂ ಅದನ್ನು ಒಪ್ಪಿಗೆ ಎಂದು ಪರಿಗಣಿಸಲಾಗದು. ಇನ್ನು ಘಟನೆ ನಡೆದ ಸಂದರ್ಭದಲ್ಲಿ ಆಕೆ ಅಪ್ರಾಪ್ತೆಯಾಗಿದ್ದಳೋ ಅಥವಾ ವಯಸ್ಕಳೋ ಎಂಬುದನ್ನು ವಿಚಾರಣಾ ನ್ಯಾಯಾಲಯವೇ ನಿರ್ಧರಿಸಲಿದೆ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣಗಳಲ್ಲಿ ಅಪರಾಧ ದಂಡ ಸಂಹಿತೆಯ ಸೆಕ್ಷನ್‌ 482 ಬಳಸಿ ಪ್ರಕರಣ ರದ್ದು ಪಡಿಸುವುದು ಸರಿಯಲ್ಲ. ಹಾಗೆ ಮಾಡಿದ್ದಲ್ಲಿ ಅದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ರವಾನಿಸಿದಂತಾಗುತ್ತದೆ. ಹಾಗಾಗಿ, ಸಂತ್ರಸ್ತೆ ಹಾಗೂ ಆರೋಪಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ವಿಜಯಪುರ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ನಡೆಯುತ್ತಿರುವ ಅತ್ಯಾಚಾರ ಆರೋಪ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಅನಿಲ್‌ ಮತ್ತು ಆತನನ್ನು ಮದುವೆಯಾಗಿರುವ ಸಂತ್ರಸ್ತೆ ಅರ್ಜಿ ಸಲ್ಲಿದ್ದರು. ಅರ್ಜಿಯಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಬಾಲಕಿ ಎನ್ನಲಾದ ಸಂತ್ರಸ್ತೆಗೆ 19 ವರ್ಷ ವಯಸ್ಸಾಗಿತ್ತು. ಆ ಬಳಿಕ ನಾವಿಬ್ಬರೂ ವಿವಾಹವಾಗಿದ್ದೇವೆ. ಆದ್ದರಿಂದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.


from India & World News in Kannada | VK Polls https://ift.tt/3FIgO6Y

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...