ವರ್ಜೀನಿಯ ಟೆಕ್‌ನಲ್ಲಿ ಅರ್ಧ ಗಂಟೆಯಲ್ಲಿ ಉರುಳಿ ಬಿದ್ದಿತ್ತು 32 ಹೆಣ, ಕಾರಣ ಇಂದಿಗೂ ನಿಗೂಢ; ಅಮೆರಿಕ ಅನುಭವ ಕಥನ - 34

ಜೋರಾದ ಮಾತು, ನಡುವೆ ಗಲಿಬಿಲಿಯ ನಗು ಕೂಡಾ ನಡೆದಿತ್ತು. ಥಟ್ಟನೆ ನೆನಪಾಯ್ತು, ವಾಲ್ಟರ್‌ಗೆ ಅತೀ ಟೆನ್ಷನ್ ಆದಾಗ ಗಲಿಬಿಲಿ ನಗು ಹೆಚ್ಚುತ್ತದೆ ಅಂತ. ಏನೆಂದು ಕೇಳಿಯೇ ಬಿಡಬೇಕು ಎಂದು ಎದ್ದೇಳುವುದಕ್ಕೂ, ನಮ್ಮ ಮ್ಯಾನೇಜರ್ ಇವನ ಕ್ಯೂಬಿಗೆ ಬರುವುದಕ್ಕೂ ಸರಿಹೋಯ್ತು. ವಿಷಯದ ಅರಿವಾಯ್ತು. ಅಂದು ಏಪ್ರಿಲ್ 16, 2007. ರಾಜ್ಯದ ಪ್ರತಿಷ್ಠಿತ ಟೆಕ್ನಾಲಜಿ ಕಾಲೇಜುಗಳಲ್ಲಿ ಒಂದಾದ ವರ್ಜೀನಿಯ ಟೆಕ್‌ನಲ್ಲೂ ಶುಭವಾಗಿಯೇ ತರಗತಿಗಳು ಆರಂಭವಾಗಿತ್ತು. ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಗಳಲ್ಲಿ ಕಲಿಕೆ ನಡೆಸಿದ್ದರು. ಇವೆಲ್ಲವೂ ಬೆಳಗಿನ ಒಂಬತ್ತು ಘಂಟೆಯ ಸಮಯದಲ್ಲಿ ನಡೆದಿತ್ತು. ಇದಕ್ಕೂ ಮುನ್ನ ಇದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಯೊಬ್ಬ ಯಾವುದೋ ಡಿಪಾರ್ಟ್ಮೆಂಟ್‌ನ ಅಸಿಸ್ಟೆಂಟ್ ಮತ್ತು ಒಬ್ಬ ವಿದ್ಯಾರ್ಥಿನಿಯ ಮೇಲೆ ಗುಂಡು ಹೊಡೆದು ಕೊಂದು ಹೊರಟು ಹೋಗಿದ್ದ. ಬಹುಶಃ ಆ ವಿದ್ಯಾರ್ಥಿನಿಯ ಬಾಯ್ ಫ್ರೆಂಡ್ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನದ ಮೇಲೆ ಆತನ ಹುಡುಕಾಟವೇನೋ ನಡೆದಿತ್ತು. ನಂತರ ನಡೆದದ್ದೇ ಬೇರೆ ! ಒಂಬತ್ತು ಘಂಟೆಯ ಸಮಯದಲ್ಲಿ ತನ್ನ ಬ್ಯಾಕ್‌ಪ್ಯಾಕ್‌ ಏರಿಸಿಕೊಂಡು ಮತ್ತೆ ಬಂದವನ ಚೀಲದಲ್ಲಿ ಬಾಗಿಲನ್ನು ಬಿಗಿದು ಹಿಡಿವ ಚೈನ್‌ಗಳು, ರಾಶಿ ಬುಲೆಟ್‌ಗಳು, ಒಂದೆರಡು ಬಗೆಯ ಬಂದೂಕುಗಳು ಇದ್ದವು. ಎರಡನೆಯ ಮಹಡಿಯ ರೂಮುಗಳಲ್ಲಿ ಓಡಾಡುತ್ತಾ ಕ್ಲಾಸ್ ರೂಮಿನೊಳಗೆ ಬಗ್ಗಿ ನೋಡುತ್ತಾ ಮುಂದೆ ಸಾಗಿದ್ದ. ಏಪ್ರಿಲ್ ತಿಂಗಳ ಸಮಯದಲ್ಲಿ ತಮ್ಮ ತರಗತಿ ಯಾವುದು ಎಂದು ಹುಡುಕುತ್ತಾ ಸಾಗುವುದು ಸೋಜಿಗವೇ ಸರಿ. ವಿದ್ಯಾರ್ಥಿಗಳಿಗೆ ಅಚ್ಚರಿಯಾದರೂ ತಲೆ ಕೆಡಿಸಿಕೊಳ್ಳಲಿಲ್ಲ. ಮುಂದೆ ನಡೆದದ್ದು ಕರಾಳ ಇತಿಹಾಸ. ಒಂದು ರೂಮಿನಲ್ಲಿ ಹೀಗೆ ಬಗ್ಗಿ ನೋಡಲು ಅಲ್ಲಿದ್ದವರು ಹದಿಮೂರು ವಿದ್ಯಾರ್ಥಿಗಳು ಮಾತ್ರ. ಘನವಾದ ಒಂದು ಸಬ್ಜೆಕ್ಟ್‌ನ ಪಾಠವನ್ನು ಮಾಡುತ್ತಿದ್ದ ಶ್ರೀಲಂಕಾದ ಲೋಗನಾಥನ್ ಅವರ ಮೇಲೆ ಗುಂಡಿನ ಮಳೆಗರೆದ. ಆ ನಂತರ ವಿದ್ಯಾರ್ಥಿಗಳ ಮೇಲೆ. ಕೆಲವರು ಸ್ಥಳದಲ್ಲೇ ಸತ್ತರೆ ಕೆಲವರಿಗೆ ತೀವ್ರವಾದ ಗಾಯ. ಇಷ್ಟು ಹೊತ್ತಿಗೆ ಕಾಲೇಜಿನಲ್ಲಿ ಅಲ್ಲೋಲ ಕಲ್ಲೋವಾಗಿದೆ. ಕೆಲವರು ಎದ್ದೆನೊ ಬಿದ್ದೆನೋ ಎಂದು ಓಡುವಾಗ ಇವನ ಬಂದೂಕಿಗೆ ಆಹುತಿಯಾಗಿದ್ದಾರೆ. ಕೆಲವು ಪ್ರೊಫೆಸರ್‌ಗಳು ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ಪ್ರಾಣ ತೆತ್ತರು. ಕೆಲವು ವಿದ್ಯಾರ್ಥಿಗಳು ಎರಡನೆಯ ಮಹಡಿಯ ಮೇಲಿನಿಂದ ಹಾರುವಾಗ ಸತ್ತರೆ, ಮತ್ತೆ ಕೆಲವರು ಗಾಯಗೊಂಡರು. ಬಹುಶಃ ಅರ್ಧ ಘಂಟೆಯ ಸಮಯದಲ್ಲಿ, ಐದು ಮಂದಿ ಪ್ರೊಫೆಸರ್‌ಗಳು ಮತ್ತು 27 ಮಂದಿ ವಿದ್ಯಾರ್ಥಿಗಳು ಅಸುನೀಗಿದ್ದರು. ಕಲಿಕೆಗೆಂದು ಬಂದವರು ಕಾಲವಾಗಿದ್ದರು. ಕಲಿಸಲೆಂದು ಬಂದವರು ಕಾಲವಾಗಿದ್ದರು. ಇದೆಲ್ಲಕ್ಕಿಂತಾ ದೊಡ್ಡ ಸೋಜಿಗ ಎಂದರೆ, ಯಾವ 23 ವರುಷದ ವಿದ್ಯಾರ್ಥಿ ಇವರೆಲ್ಲರನ್ನೂ ಯಮಪುರಿಗೆ ಅಟ್ಟಿದನೋ ಕೊನೆಯಲ್ಲಿ ಅವನೇ ಆತ್ಮಹತ್ಯೆ ಮಾಡಿಕೊಂಡ. ಅವನು ಸತ್ತಿದ್ದೇ ಅಲ್ಲದೆ, ಅವನು ಯಾವ ಉದ್ದೇಶದಿಂದ ಎಲ್ಲರನ್ನೂ ಆಹುತಿ ತೆಗೆದುಕೊಂಡ ಎಂಬ ಕಾರಣವನ್ನೂ ಕೊಂದಿದ್ದ. ಈವರೆಗೂ ಗೊತ್ತಿಲ್ಲ ಮಾರಣಹೋಮದ ಹಿಂದಿನ ಉದ್ದೇಶ. ವಾಲ್ಟರ್‌ ಮಗ ಆ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಮುಂದೆ?


from India & World News in Kannada | VK Polls https://ift.tt/3DWJad7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...