ಗ್ರಾಹಕರಿಗೆ ಮತ್ತೆ ಬರೆ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 103 ರೂ ಹೆಚ್ಚಳ

ಹೊಸದಿಲ್ಲಿ: ಹೊಸ ವರ್ಷದ ಕೊನೆಯ ತಿಂಗಳು ಕೂಡ ತೈಲ ಕಂಪೆನಿಗಳು ಮತ್ತೊಂದು ಬೆಲೆ ಏರಿಕೆಯ ಬರೆ ಎಳೆದಿವೆ. ವಾಣಿಜ್ಯ ಬಳಕೆಯ ಎಲ್‌ಪಿಜಿ 103.50 ರೂಪಾಯಿ ಹೆಚ್ಚಳವಾಗಿದೆ. ಈ ಪರಿಷ್ಕೃತ ದರವು ಬುಧವಾರದಿಂದಲೇ ಅನ್ವಯವಾಗುತ್ತಿದೆ. ದಿಲ್ಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ದರ ದಿಲ್ಲಿಯಲ್ಲಿ 2,104 ರೂಪಾಯಿಗೆ ತಲುಪಿದೆ. ಈವರೆಗೂ ಇದು 2,000.50 ರೂ ಇತ್ತು. ಕೋಲ್ಕತಾದಲ್ಲಿ ವಾಣಿಜ್ಯ ಬಳಕೆಯ ಅನಿಲದ ಬೆಲೆ 101 ರೂಪಾಯಿ ತುಟ್ಟಿಯಾಗಿದೆ. 2073.5 ರೂ ಇದ್ದ ದರ, ಬುಧವಾರದಿಂದ 2,174.5 ರೂಪಾಯಿಗೆ ಹೆಚ್ಚಳ ಕಂಡಿದೆ. ಹಾಗೆಯೇ ಮುಂಬಯಿಯಲ್ಲಿ 1950 ರೂ ದರವಿದ್ದ ಎಲ್‌ಪಿಜಿ, 2,051 ರೂಪಾಯಿಗೆ ತಲುಪಿದೆ. ವಾಣಿಜ್ಯ ನಗರಿಯಲ್ಲಿ ಕೂಡ ದರ 101 ರೂ ಏರಿಕೆಯಾಗಿದೆ. ಚೆನ್ನೈನಲ್ಲಿ 2,133 ರೂ ದರವಿದ್ದ 19 ಕೆಜಿ ಎಲ್‌ಪಿಜಿ ಸಿಲಿಂಡರ್, ಬುಧವಾರದಿಂದ 2,234.50 ರೂ ಆಗಿದೆ. ನವೆಂಬರ್ 1ರಂದು ಎಲ್‌ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ 266 ರೂ ದುಬಾರಿಯಾಗಿತ್ತು. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಒಂದು ಸಿಲಿಂಡರ್ ಬೆಲೆ 2,000.50 ರೂಪಾಯಿಗೆ ತಲುಪಿತ್ತು. ಅದಕ್ಕೂ ಮುನ್ನ ಸಿಲಿಂಡರ್ ದರ 1734 ರೂಪಾಯಿ ಇತ್ತು. ಪೆಟ್ರೋಲಿಯಂ ಕಂಪೆನಿಗಳು ಗೃಹ ಬಳಕೆಯ 14.2 ಕೆಜಿ ತೂಕದ ಸಿಲಿಂಡರ್ ದರ ಹೆಚ್ಚಳ ಮಾಡದೆ ಇರುವುದು ಜನಸಾಮಾನ್ಯರಿಗೆ ಕೊಂಚ ಸಮಾಧಾನದ ಸಂಗತಿಯಷ್ಟೇ. ದಿಲ್ಲಿಯಲ್ಲಿ ಗೃಹಬಳಕೆ ಸಿಲಿಂಡರ್ ದರ 899.50 ರೂ ಇದ್ದರೆ, 5 ಕೆಜಿ ಸಿಲಿಂಡರ್ ದರ 502 ರೂ ಇದೆ. ಬೆಂಗಳೂರಿನಲ್ಲಿ ಗೃಹ ಬಳಕೆ ಎಲ್‌ಪಿಜಿ ದರ 902.50 ರೂ ಇದೆ. ಸಾಮಾನ್ಯವಾಗಿ ತೈಲ ಕಂಪೆನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ ಮಾಡುತ್ತವೆ. ಪ್ರತಿ ತಿಂಗಳೂ ದರ ಏರಿಕೆ ಆಗುತ್ತಲೇ ಇದೆ. ತಿಂಗಳ ಮಧ್ಯ ಭಾಗದಲ್ಲಿಯೂ ಎಲ್‌ಪಿಜಿ ಬೆಲೆ ಹೆಚ್ಚಳ ಮಾಡುವ ನಿದರ್ಶನಗಳಿವೆ. ಹೀಗಾಗಿ ಗೃಹ ಬಳಕೆಯ ಅನಿಲದ ದರ ಏರಿಕೆಯ ಭಯ ಮತ್ತೆ ಜನರನ್ನು ಕಾಡುತ್ತಿದೆ.


from India & World News in Kannada | VK Polls https://ift.tt/3DbOfNE

ಬಡ ಮಕ್ಕಳ ಆಹಾರದ ಮೇಲೂ ಕಣ್ಣು; ಶಾಲೆಯಲ್ಲಿ ಮೊಟ್ಟೆ ವಿತರಿಸದಂತೆ ಲಿಂಗಾಯತ ಸಂಘಟನೆಗಳ ಪ್ರತಿಭಟನೆ!

ಬೀದರ್‌: ಮಕ್ಕಳ ಆರೋಗ್ಯದ ದೃಷ್ಠಿಯಿಂದ ದೇಹದಲ್ಲಿ ಪೌಷ್ಟಿಕಾಂಶ ವೃದ್ಧಿಯಾಗಲೆಂದು ರಾಜ್ಯ ಸರ್ಕಾರ ಮೊಟ್ಟೆ, ಹಾಲನ್ನು ವಿತರಿಸಲು ಮುಂದಾದರೆ, ಇತ್ತ ಸರ್ಕಾರಿ ಶಾಲೆಯ ಬಡಮಕ್ಕಳ ಆಹಾರಕ್ಕೂ ಕಣ್ಣು ಹಾಕಿರುವ ಕೆಲ ಸಂಘಟನೆಗಳು ಮೊಟ್ಟೆ ವಿತರಿಸಬಾರದೆಂದು ತಕರಾರು ಎಬ್ಬಿಸಿವೆ. ಅನುದಾನಿತ ಮತ್ತು ಸರ್ಕಾರಿ ಶಾಲೆಗಳ 1 ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಕೋಳಿ ಮೊಟ್ಟೆ ಕೊಡುವ ಆದೇಶ ಹಿಂಪಡೆಯಬೇಕು ಎಂದು ಅಗ್ರಹಿಸಿ ವಿವಿಧ ಲಿಂಗಾಯತ ಸಂಘಟನೆಗಳು ಬೀದರ್‌ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿವೆ. ಅಕ್ಕನಾಗಲಾಂಬಿಕಾ ಮಹಿಳಾಗಣ ಹಾಗೂ ಲಿಂಗಾಯತ ಸಮಾಜದ ಸಂಯುಕ್ತಾಶ್ರಯದಲ್ಲಿ ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಕೋಳಿಮೊಟ್ಟೆ ಮಾಂಸಾಹಾರ. ಇದರಿಂದ ಮಕ್ಕಳ ಮಾನಸಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ. ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸುವ ಕಳಕಳಿ ನಿಮ್ಮಲ್ಲಿದ್ದರೆ ಹಣ್ಣು, ದ್ವಿದಳ ಧಾನ್ಯಗಳು, ಮೊಳಕೆ ಕಾಳು ಮುಂತಾದವನ್ನು ಸರ್ಕಾರ ನೀಡುವ ವ್ಯವಸ್ಥೆ ಮಾಡಲಿ ಎಂದು ಬಸವ ಮಂಟಪದ ಪ್ರಧಾನ ಸಂಚಾಲಕರಾದ ಮಾತೆ ಸತ್ಯಾದೇವಿ ಹೇಳಿದ್ದಾರೆ. ಶಾಲೆಯಲ್ಲಿ ಮುಗ್ಧ ಮಕ್ಕಳಿಗೆ ಕೋಳಿಮೊಟ್ಟೆ ನೀಡಿ ಉದ್ದೇಶಪೂರ್ವಕವಾಗಿ ಮಾಂಸಾಹಾರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಮೊಟ್ಟೆ ತಿನ್ನುವ ಮಕ್ಕಳು ಮತ್ತು ತಿನ್ನದ ಮಕ್ಕಳೆಂದು ಶಾಲೆಯಲ್ಲಿ ನೀವೇ ಭೇದಭಾವ ಮೂಡಿಸಿದಂತಾಗುತ್ತದೆ. ಅಲ್ಲದೇ ಜೈನ ಮತ್ತು ಲಿಂಗಾಯತ ಧರ್ಮದ ಪ್ರಕಾರ ಮೊಟ್ಟೆ ಮಾಂಸಾಹಾರ ಪದ್ಧತಿಯಾಗಿದೆ. ಇದರಿಂದ ಸಸ್ಯಾಹಾರಿ ಪದ್ಧತಿ ಅಳವಡಿಸಿಕೊಂಡವರಿಗೆ ಇದು ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಈ ನಿರ್ಣಯವನ್ನು ಹಿಂಪಡೆಯಬೇಕೆಂದು ಸತ್ಯಾದೇವಿ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ‘ಹಿಂದೆ 2007 ರಲ್ಲಿ ಸರ್ಕಾರ ಇದೇ ನಿರ್ಧಾರ ಕೈಗೊಂಡಿತ್ತು. ಆದರೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಷ್ಟ್ರೀಯ ಬಸವ ದಳದ ಉಗ್ರ ಹೋರಾಟಕ್ಕೆ ಮಣಿದು ನಿರ್ಧಾರ ಕೈಬಿಟ್ಟಿದ್ದರು. ಮತ್ತೆ ಇಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಈ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ. ಸೂಕ್ಷ್ಮ ಮನಸ್ಸಿನ ಮಕ್ಕಳಿಗೆ ಮೊಟ್ಟೆ ನೀಡಿ, ಮಾಂಸಾಹಾರಕ್ಕೆ ಪ್ರಚೋದನೆ ನೀಡುತ್ತಿರುವ ಸರ್ಕಾರದ ಆದೇಶ ಖಂಡನೀಯ. ಸರ್ಕಾರವು ಮೊಟ್ಟೆ ನೀಡುವ ಆದೇಶ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಧನ್ನೂರ ತಿಳಿಸಿದರು. ಇದೇ ವೇಳೆ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ ಸೇರಿ ಅನೇಕರು ಉಪಸ್ಥಿತರಿದ್ದರು. ಮೊಟ್ಟೆ ವಿತರಣೆ ವಿರೋಧಕ್ಕೆ ಅಸಮಾಧಾನಲಿಂಗಾಯತ ಸಂಘಟನೆಗಳು ಸೇರಿದಂತೆ ಮಕ್ಕಳ ಪೌಷ್ಟಿಕಾಂಶ ವೃದ್ಧಿಗೆ ಸರ್ಕಾರ ಮೊಟ್ಟೆ ವಿತರಣೆ ಮಾಡೋದನ್ನು ವಿರೋಧಿಸುತ್ತಿರುವವರಿಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಮೊಟ್ಟೆ ಅನ್ನೋದು ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಒಳ್ಳೆಯ ಪೌಷ್ಟಿಕಾಂಶ ಆಹಾರ. ಬಡ ಮಕ್ಕಳ ಆಹಾರಕ್ಕೂ ಕನ್ನ ಹಾಕ್ತಿರೋದು ಸರಿಯಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕೇವಲ ಒಂದು ತರಗತಿಯಲ್ಲಿ ನಾಲ್ಕೈದು ಜನ ಸಸ್ಯಹಾರಿಗಳಿಗೋಸ್ಕರ ಇಪ್ಪತ್ತು-ಮೂವತ್ತು ಜನ ಮಾಂಸಾಹಾರಿಗಳ ಆಹಾರದ ಹಕ್ಕನ್ನು ಕಸಿಯೋದು ಸರಿಯಲ್ಲ. ಮೊಟ್ಟೆ ವಿತರಣೆ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು, ಬೇಕಿದ್ದರೆ ಮೊಟ್ಟೆ ತಿನ್ನದೇ ಇರೋರಿಗೆ ಬಾಳೆ ಹಣ್ಣು ವಿತರಿಸಲಿ ಎಂದು ಆಗ್ರಹಿಸಿದ್ದಾರೆ.


from India & World News in Kannada | VK Polls https://ift.tt/3FZCxrd

ಕಿವೀಸ್‌ ವಿರುದ್ಧ 2ನೇ ಟೆಸ್ಟ್‌ಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!

ಹೊಸದಿಲ್ಲಿ: ಮೊದಲನೇ ಟೆಸ್ಟ್ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಡಿಸೆಂಬರ್‌ 3 ರಿಂದ ಮುಂಬೈನ ವಾಂಖೆಡೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುರುವಾಗಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿವೆ.ಅಂದಹಾಗೆ, ಮೊದಲನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್‌ ಕೊಹ್ಲಿ ಸರಣಿ ನಿರ್ಣಾಯಕ ಎರಡನೇ ಪಂದ್ಯಕ್ಕೆ ಮರಳಿದ್ದಾರೆ ಹಾಗೂ ಅಜಿಂಕ್ಯ ರಹಾನೆ ಅವರಿಂದ ನಾಯಕತ್ವದ ಜವಾಬ್ದಾರಿಯನ್ನು ಪಡೆದುಕೊಳ್ಳಲಿದ್ದಾರೆ. ಅಂದಹಾಗೆ ಪಂದ್ಯ ಡ್ರಾ ಆದ ಪರಿಣಾಮ ಟೀಮ್‌ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಟೇಬಲ್‌ನಲ್ಲಿ ಎಂಟು ಅಂಕಗಳನ್ನು ಕೈಚೆಲ್ಲಿಕೊಂಡಿದೆ. ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿರಾಟ್‌ ಕೊಹ್ಲಿ ಆಗಮನದಿಂದ ಅವರಿಗೆ ಯಾರಾದರೂ ತಮ್ಮ ಸ್ಥಾನವನ್ನು ಬಿಟ್ಟು ಕೊಡಬೇಕಾಗುತ್ತದೆ ಹಾಗೂ ಕಳೆದ ಪಂದ್ಯದಲ್ಲಿ ಕತ್ತು ನೋವಿಗೆ ಒಳಗಾಗಿದ್ದ ವೃದ್ದಿಮಾನ್‌ ಸಹಾ ಎರಡನೇ ಪಂದ್ಯಕ್ಕೆ ವಿಶ್ರಾಂತಿ ಪಡೆಯಬಹುದು. ಆ ಮೂಲಕ ಕೆ.ಎಸ್‌ ಭರತ್ ಮುಂಬೈನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಎಲ್ಲಾ ಸೂಚನೆಗಳು ಎದ್ದು ಕಾಣುತ್ತಿವೆ. ಮತ್ತೊಂದೆಡೆ ಕಳಪೆ ಫಾರ್ಮ್‌ನಲ್ಲಿರುವ ಅಜಿಂಕ್ಯ ರಹಾನೆ ನಾಯಕ ವಿರಾಟ್‌ ಕೊಹ್ಲಿ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಇನ್ನು ಬೌಲಿಂಗ್‌ ವಿಭಾಗದಲ್ಲಿ ಒಂದು ಬದಲಾವಣೆ ನಿರೀಕ್ಷೆ ಇದೆ.

ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಮೂರು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ವಿರಾಟ್‌ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.


ಕಿವೀಸ್‌ ವಿರುದ್ಧ 2ನೇ ಟೆಸ್ಟ್‌ಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!

ಹೊಸದಿಲ್ಲಿ:

ಮೊದಲನೇ ಟೆಸ್ಟ್ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಡಿಸೆಂಬರ್‌ 3 ರಿಂದ ಮುಂಬೈನ ವಾಂಖೆಡೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುರುವಾಗಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿವೆ.

ಅಂದಹಾಗೆ, ಮೊದಲನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್‌ ಕೊಹ್ಲಿ ಸರಣಿ ನಿರ್ಣಾಯಕ ಎರಡನೇ ಪಂದ್ಯಕ್ಕೆ ಮರಳಿದ್ದಾರೆ ಹಾಗೂ ಅಜಿಂಕ್ಯ ರಹಾನೆ ಅವರಿಂದ ನಾಯಕತ್ವದ ಜವಾಬ್ದಾರಿಯನ್ನು ಪಡೆದುಕೊಳ್ಳಲಿದ್ದಾರೆ. ಅಂದಹಾಗೆ ಪಂದ್ಯ ಡ್ರಾ ಆದ ಪರಿಣಾಮ ಟೀಮ್‌ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್ ಟೇಬಲ್‌ನಲ್ಲಿ ಎಂಟು ಅಂಕಗಳನ್ನು ಕೈಚೆಲ್ಲಿಕೊಂಡಿದೆ.

ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ವಿರಾಟ್‌ ಕೊಹ್ಲಿ ಆಗಮನದಿಂದ ಅವರಿಗೆ ಯಾರಾದರೂ ತಮ್ಮ ಸ್ಥಾನವನ್ನು ಬಿಟ್ಟು ಕೊಡಬೇಕಾಗುತ್ತದೆ ಹಾಗೂ ಕಳೆದ ಪಂದ್ಯದಲ್ಲಿ ಕತ್ತು ನೋವಿಗೆ ಒಳಗಾಗಿದ್ದ ವೃದ್ದಿಮಾನ್‌ ಸಹಾ ಎರಡನೇ ಪಂದ್ಯಕ್ಕೆ ವಿಶ್ರಾಂತಿ ಪಡೆಯಬಹುದು.

ಆ ಮೂಲಕ ಕೆ.ಎಸ್‌ ಭರತ್ ಮುಂಬೈನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಎಲ್ಲಾ ಸೂಚನೆಗಳು ಎದ್ದು ಕಾಣುತ್ತಿವೆ. ಮತ್ತೊಂದೆಡೆ ಕಳಪೆ ಫಾರ್ಮ್‌ನಲ್ಲಿರುವ ಅಜಿಂಕ್ಯ ರಹಾನೆ ನಾಯಕ ವಿರಾಟ್‌ ಕೊಹ್ಲಿ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಇನ್ನು ಬೌಲಿಂಗ್‌ ವಿಭಾಗದಲ್ಲಿ ಒಂದು ಬದಲಾವಣೆ ನಿರೀಕ್ಷೆ ಇದೆ.



​ಕೊಹ್ಲಿಗೆ ಸ್ಥಾನ ಬಿಟ್ಟುಕೊಡಲಿರುವ ರಹಾನೆ!
​ಕೊಹ್ಲಿಗೆ ಸ್ಥಾನ ಬಿಟ್ಟುಕೊಡಲಿರುವ ರಹಾನೆ!

ನಿಯಮಿತ ನಾಯಕ ವಿರಾಟ್‌ ಕೊಹ್ಲಿ ಎರಡನೇ ಪಂದ್ಯಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಯಾರು ಸ್ಥಾನ ಬಿಟ್ಟುಕೊಡಲಿದ್ದಾರೆಂಬುದು ಸಾಕಷ್ಟು ಕುತೂಹಲ ಕೆರಳಿದೆ. ಇದಕ್ಕೆ ಒಂದೇ ಒಂದು ನೇರ ಉತ್ತರ ಎಂದರೆ ಅಜಿಂಕ್ಯ ರಹಾನೆ. ಏಕೆಂದರೆ ಅವರನ್ನು ಬಿಟ್ಟರೆ ಕೊಹ್ಲಿಗೆ ದಾರಿ ಮಾಡಿಕೊಡಲು ಯಾರಿಂದಲೂ ಸಾಧ್ಯವಿಲ್ಲ.

ಮಯಾಂಕ್‌ ಅಗರ್ವಾಲ್‌ ಹಾಗೂ ಶುಭಮನ್‌ ಗಿಲ್‌ ಟೀಮ್‌ ಇಂಡಿಯಾಗೆ ಓಪನರ್ಸ್ ಇದ್ದಾರೆ. ಇದರಲ್ಲಿ ಯಾರನ್ನೂ ಬೆಂಚ್‌ ಕಾಯಿಸಲು ಸಾಧ್ಯವಿಲ್ಲ. ತವರು ನೆಲದಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಮಯಾಂಕ್ ಅಗರ್ವಾಲ್ ಹಾಗೂ ಮೊದಲನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಶುಭಮನ್‌ ಗಿಲ್‌ ಅವರನ್ನು ಕೈ ಬಿಡಲು ಸಾಧ್ಯವೇ ಇಲ್ಲ.

ಮತ್ತೊಂದೆಡೆ ಅಂತಾರಾಷ್ಟ್ರೀಯ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಕ್ರಮವಾಗಿ ಶತಕ ಹಾಗೂ ಅರ್ಧಶತಕ ಸಿಡಿಸುವ ಮೂಲಕ ಮ್ಯಾನ್‌ ಆಫ್‌ ದಿ ಮ್ಯಾಚ್‌ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನೂ ಕೈ ಬಿಡಲು ಚಾನ್ಸ್‌ ಇಲ್ಲವೇ ಇಲ್ಲ. ಹಾಗಾಗಿ. ಕಳಪೆ ಫಾರ್ಮ್‌ನಲ್ಲಿರುವ ಅಜಿಂಕ್ಯ ರಹಾನೆ ಅವರ ಸ್ಥಾನದಲ್ಲಿ ಕೊಹ್ಲಿಗೆ ಪ್ಲೇಯಿಂಗ್‌ನಲ್ಲಿ ಅವಕಾಶ ನೀಡಲು ಟೀಮ್‌ ಮ್ಯಾನೇಜ್‌ಮೆಂಟ್‌ ಮನಸು ಮಾಡಬಹುದು.

'ಭಾರತದ ಈ ನಿರ್ಧಾರ ಶಾಕಿಂಗ್' ಡ್ರಾ ಫಲಿತಾಂಶಕ್ಕೆ ಕಾರಣ ತಿಳಿಸಿದ ವಾರ್ನ್‌!



​ವೃದ್ದಿಮಾನ್‌ ಸಹಾ ಬದಲು ಕೆ.ಎಸ್‌ ಭರತ್‌
​ವೃದ್ದಿಮಾನ್‌ ಸಹಾ ಬದಲು ಕೆ.ಎಸ್‌ ಭರತ್‌

ಕತ್ತು ನೋವಿನ ಹೊರತಾಗಿಯೂ ದ್ವಿತೀಯ ಇನಿಂಗ್ಸ್‌ನಲ್ಲಿ ನಿರ್ಣಾಯಕ ಇನಿಂಗ್ಸ್ ಆಡಿದ್ದ ವೃದ್ದಿಮಾನ್ ಸಹಾ ಅರ್ಧಶತಕ ಸಿಡಿಸಿದ್ದರು. ಆ ಮೂಲಕ ನಾಲ್ಕನೇ ದಿನ ಭಾರತ ತಂಡ ಕಿವೀಸ್‌ ವಿರುದ್ಧ ಪ್ರಾಬಲ್ಯ ಸಾಧಿಸಲು ನೆರವಾಗಿದ್ದರು. ಆದರೆ, ಕತ್ತು ನೋವಿನಿಂದಾಗಿ ಸಹಾ ಪಂದ್ಯದ ಬಹುತೇಕ ಭಾಗ ವಿಕೆಟ್‌ ಕೀಪಿಂಗ್‌ಗೆ ಬಂದಿರಲಿಲ್ಲ.

ಇವರ ಬದಲು ವಿಕೆಟ್‌ ಕೀಪಿಂಗ್‌ನಲ್ಲಿ ಕೆ.ಎಸ್‌ ಭರತ್‌ ಮಿಂಚಿದ್ದರು. ಕಠಿಣ ಪಿಚ್‌ನಲ್ಲಿಯೂ ಭಾರತದ ಘಟಾನುಘಟಿ ಸ್ಪಿನ್ನರ್‌ಗಳ ಎಸೆತಗಳನ್ನು ಬಹಳಾ ಅದ್ಭುತವಾಗಿ ಭರತ್ ಅಂದಾಜು ಮಾಡಿದ್ದರು. ಆ ಮೂಲಕ ಎಲ್ಲರ ಮೆಚ್ಚುಗೆಗೆ ಆಂಧ್ರ ಮೂಲದ ಆಟಗಾರ ಪಾತ್ರರಾಗಿದ್ದರು. ಎರಡನೇ ಪಂದ್ಯಕ್ಕೆ ಸಹಾ ವಿಶ್ರಾಂತಿ ಪಡೆಯುವ ಮೂಲಕ ಕೆ.ಎಸ್‌ ಭರತ್‌ಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.

'ಸರಿಯಾದ ಬೌನ್ಸ್‌ ಇರಲಿಲ್ಲ' ಕಾನ್ಪುರ ಪಿಚ್‌ ಬಗ್ಗೆ ದ್ರಾವಿಡ್ ಬೇಸರ!



​ಇಶಾಂತ್‌ ಶರ್ಮಾ ಬದಲು ಮೊಹಮ್ಮದ್‌ ಸಿರಾಜ್‌
​ಇಶಾಂತ್‌ ಶರ್ಮಾ ಬದಲು ಮೊಹಮ್ಮದ್‌ ಸಿರಾಜ್‌

ಕಾನ್ಪುರ ಟೆಸ್ಟ್‌ ಪಂದ್ಯ ಇಶಾಂತ್‌ ಶರ್ಮಾ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿತ್ತು. ಏಕೆಂದರೆ ಅವರಿಗೆ ಒಂದೇ ಒಂದು ವಿಕೆಟ್‌ ಪಡೆಯಲು ಸಾಧ್ಯವಾಗಿರಲಿಲ್ಲ. ಮತ್ತೊಂದೆಡೆ ಕೈ ಬೆರಳಿಗೆ ಸ್ವಲ್ಪ ಗಾಯ ಮಾಡಿಕೊಂಡಿದ್ದರಿಂದ ಅವರು ಬೌಲಿಂಗ್‌ನಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಕಾಣಿಸಿಕೊಂಡಿರಲಿಲ್ಲ.

ಇದರ ಹೊರತಾಗಿಯೂ ಇಶಾಂತ್‌ ಶರ್ಮಾ ದ್ವಿತೀಯ ಇನಿಂಗ್ಸ್‌ನಲ್ಲಿ ಗಮನಾರ್ಹ ಬೆಳವಣೆಗೆ ಕಂಡಿದ್ದರು. ಆದರೂ ಅವರು ಪಂದ್ಯದಲ್ಲಿ ಅಷ್ಟೊಂದು ಲವಲವಿಕೆಯಿಂದ ಕಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಟೆಸ್ಟ್‌ ವೃತ್ತಿ ಜೀವನದಲ್ಲಿ ಅತ್ಯುತ್ತಮ ಆರಂಭ ಪಡೆದಿರುವ ಮೊಹಮ್ಮದ್‌ ಸಿರಾಜ್‌ ಮುಂಬೈ ಟೆಸ್ಟ್‌ ಪಂದ್ಯದಲ್ಲಿ ಇಶಾಂತ್‌ ಶರ್ಮಾ ಬದಲು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಟಿ೨೦ ಸರಣಿಯ ವೇಳೆ ಕೈಗೆ ಚೆಂಡು ತಗುಲಿಸಿಕೊಂಡಿದ್ದ ಸಿರಾಜ್ ಇದೀಗ ಸಂಪೂರ್ಣ ಫಿಟ್‌ ಆಗಿದ್ದಾರೆ.

ರಹಾನೆಗೆ ಬೆಂಬಲಿಸುತ್ತಿರುವ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಗಣೇಶ್‌ ಕಿಡಿ!



ಎರಡನೇ ಟೆಸ್ಟ್‌ಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI
ಎರಡನೇ ಟೆಸ್ಟ್‌ಗೆ ಭಾರತ ಸಂಭಾವ್ಯ ಪ್ಲೇಯಿಂಗ್‌ XI

ಭಾರತ:

ಮಯಾಂಕ್‌ ಅಗರ್ವಾಲ್‌, ಶುಭಮನ್‌ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ಕೆ.ಎಸ್ ಭರತ್‌(ವಿ.ಕೀ), ರವೀಂದ್ರ ಜಡೇಜಾ, ಆರ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಉಮೇಶ್‌ ಯಾದವ್, ಮೊಹಮ್ಮದ್‌ ಸಿರಾಜ್‌

ಪಂದ್ಯದ ವಿವರ

ಎರಡನೇ ಟೆಸ್ಟ್‌ ಪಂದ್ಯ: ಭಾರತ vs ನ್ಯೂಜಿಲೆಂಡ್‌

ದಿನಾಂಕ: ಡಿ.3-2021

ಸಮಯ: ಬೆಳಗ್ಗೆ: 09:30ಕ್ಕೆ

ಸ್ಥಳ: ಮುಂಬೈ ವಾಂಖೆಡೆ ಕ್ರೀಡಾಂಗಣ, ಮುಂಬೈ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಈತನ ಬೌಲಿಂಗ್‌ಗೆ ಸ್ವೀಪ್‌ ಶಾಟ್‌ ಹೊಡೆಯುವುದು ತುಂಬಾನೇ ಕಷ್ಟ: ಹಾಗ್‌!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3d3aavT

ಭಾರತಕ್ಕೆ ಬಯೋ ಬಬಲ್‌ ಸುರಕ್ಷತೆ ಖಾತ್ರಿ ಪಡಿಸಿದ ದಕ್ಷಿಣ ಆಫ್ರಿಕಾ!

ಬೆಂಗಳೂರು: ನೆಲದಲ್ಲಿ ಓಮಿಕ್ರಾನ್‌ ಹೆಸರಿನ ಹೊಸ ಮಾದರಿಯ ಸೋಂಕು ವ್ಯಾಪಕವಾಗಿ ಹರಡಲು ಶುರುವಾಗಿದೆ. ಹೀಗಿರುವಾಗ ಹರಿಣಗಳ ನಾಡಿಗೆ ಪ್ರವಾಸ ಕೈಗೊಳ್ಳುವುದು ಬಹುತೇಕ ಅನುಮಾನ ಎಂಬಂತ್ತಾಗಿತ್ತು. ಆದರೆ, ದಕ್ಷಿಣ ಆಫ್ರಿಕಾ ಸರಕಾರ ಈ ಬಗ್ಗೆ ಅಭಯ ಸೂಚಿಸಿದೆ. ಟೀಮ್ ಇಂಡಿಯಾ ಉಳಿದುಕೊಳ್ಳಲು ಅತ್ಯಂತ ಸುರಕ್ಷಿತ ಬಯೋ ಬಬಲ್‌ ವಾತಾವರಣದ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದೆ. ಹೀಗಾಗಿ ಭಾರತ ತಂಡ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಸಲುವಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳುವುದು ಬಹುತೇಕ ಖಾತ್ರಿಯಾದಂತ್ತಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ನೆದರ್ಲೆಂಡ್ಸ್‌ ತಂಡ ಸರಣಿಯಿಂದ ಅರ್ಧಕ್ಕೆ ಹೊರನಡೆದು ತಾಯ್ನಾಡಿಗೆ ಹಿಂದಿರುಗಿದೆ. ಆದರೆ, ತನ್ನ 'ಎ' ತಂಡವನ್ನು ಕರೆಸಿಕೊಳ್ಳದೆ ಸರಣಿಯಲ್ಲಿ ಮುಂದುವರಿಯಲು ಬಿಟ್ಟಿರುವುದನ್ನು ದಕ್ಷಿಣ ಆಫ್ರಿಕಾ ಶ್ಲಾಘಿಸಿದೆ. ಭಾರತ 'ಎ' ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, 3 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 'ಎ' ತಂಡದೊಂದಿಗೆ ಪೈಪೋಟಿ ನಡೆಸುತ್ತಿದೆ. ಡಿ.9ಕ್ಕೆ ಪ್ರವಾಸ ಸಾಧ್ಯತೆ ಭಾರತ ತಂಡ ಸದ್ಯ ತಾಯ್ನಾಡಿನಲ್ಲಿ ನ್ಯೂಜಿಲೆಂಡ್‌ ಎದುರು ಟೆಸ್ಟ್ ಸರಣಿಯನ್ನಾಡುತ್ತಿದೆ. ಸರಣಿಯ 2ನೇ ಹಾಗೂ ಅಂತಿಮ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಡಿ.3ರಿಂದ 7ರವರೆಗೆ ನಡೆಯಲಿದ್ದು, ದಕ್ಷಿಣ ಆಫ್ರಿಕಾಕ್ಕೆ ಡಿ.9ರಂದು ಮುಂಬೈನಿಂದ ಭಾರತ ತಂಡ ಪ್ರವಾಸ ಬೆಳೆಸಲಿದೆ. ಅಲ್ಲಿ 4 ದಿನಗಳ ಕ್ವಾರಂಟೈನ್‌ ಬಳಿಕ ಟೆಸ್ಟ್‌ ಕ್ರಿಕೆಟ್‌ ಸರಣಿಗೆ ಅಣಿಯಾಗಲಿದೆ. 3 ಪಂದ್ಯಗಳ ಟೆಸ್ಟ್‌ ಸರಣಿ ಡಿ.17ರಂದು ಶುರುವಾಗಲಿದೆ. ಟೆಸ್ಟ್‌ ಸರಣಿ ಬಳಿಕ 3 ಪಂದ್ಯಗಳ ಒಡಿಐ ಮತ್ತು 4 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ ಜರುಗಲಿದೆ. "ಟೀಮ್ ಇಂಡಿಯಾ ಆಟಗಾರರ ಆರೋಗ್ಯ ಮತ್ತು ರಕ್ಷಣೆ ಸಲುವಾಗಿ ದಕ್ಷಿಣ ಆಫ್ರಿಕಾ ಸಕಲ ವ್ಯವಸ್ಥೆಯನ್ನು ಕಲ್ಪಿಸಲಿದೆ. ದಕ್ಷಿಣ ಆಫ್ರಿಕಾ, ಭಾರತ 'ಎ' ತಂಡ ಮತ್ತು ಟೀಮ್ ಇಂಡಿಯಾ ಆಟಗಾರರಿಗೆ ಸಂಪೂರ್ಣ ಸುರಕ್ಷಿತವಾದ ಬಯೋ ಸೆಕ್ಯೂರ್‌ ವಾತಾವರಣ ನಿರ್ಮಾಣ ಮಾಡಲಾಗುವುದು. ಭಾರತ 'ಎ' ತಂಡವನ್ನು ಹಿಂಪಡೆಯದೆ ಬಿಸಿಸಿಐ ಉತ್ತಮ ಒಗ್ಗಟ್ಟನ್ನು ಪ್ರದರ್ಶಿಸಿದೆ," ಎಂದು ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವಾಲಯದ ಅಧಿಕಾರಿ ಒಬ್ಬರು ಹೇಳಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ ಹೀಗಿದೆ ಟೆಸ್ಟ್‌ ಸರಣಿಪ್ರಥಮ ಟೆಸ್ಟ್‌: ಡಿ. 17-21, ವಾಂಡರರ್ಸ್‌, ಜೊಹಾನ್ಸ್‌ಬರ್ಗ್‌ ದ್ವಿತೀಯ ಟೆಸ್ಟ್‌: ಡಿ. 26-30, ಸೂಪರ್‌ಸ್ಪೋರ್ಟ್‌ ಪಾರ್ಕ್‌, ಸೆಂಚೂರಿಯನ್ ತೃತೀಯ ಟೆಸ್ಟ್‌: ಜ. 3-7, ನ್ಯೂಲ್ಯಾಂಡ್ಸ್‌, ಕೇಪ್‌ ಟೌನ್‌ ಏಕದಿನ ಕ್ರಿಕೆಟ್ ಸರಣಿಮೊದಲ ಒಡಿಐ: ಜನವರಿ 11, ಬೊಲ್ಯಾಂಡ್ ಪಾರ್ಕ್‌, ಪಾರ್ಲ್‌ ಎರಡನೇ ಒಡಿಐ: ಜನವರಿ 14, ನ್ಯೂಲ್ಯಾಂಡ್ಸ್‌, ಕೇಪ್‌ ಟೌನ್‌ ಮೂರನೇ ಒಡಿಐ: ಜನವರಿ 16, ನ್ಯೂಲ್ಯಾಂಡ್ಸ್‌, ಕೇಪ್‌ ಟೌನ್‌ ನಾಲ್ಕು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಮೊದಲ ಟಿ20-ಐ: ಜನವರಿ 19, ನ್ಯೂಲ್ಯಾಂಡ್ಸ್‌, ಕೇಪ್‌ ಟೌನ್‌ ಎರಡನೇ ಟಿ20-ಐ: ಜನವರಿ 21, ನ್ಯೂಲ್ಯಾಂಡ್ಸ್‌, ಕೇಪ್‌ ಟೌನ್‌ ಮೂರನೇ ಟಿ20-ಐ: ಜನವರಿ 23, ಬೊಲ್ಯಾಂಡ್‌ ಪಾರ್ಕ್‌, ಪಾರ್ಲ್‌ ನಾಲ್ಕನೇ ಟಿ20-ಐ: ಜನವರಿ 26, ಬೊಲ್ಯಾಂಡ್‌ ಪಾರ್ಕ್‌, ಪಾರ್ಲ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lr515n

ಓಮಿಕ್ರಾನ್ ಆತಂಕ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಾ. ಕೆ ಸುಧಾಕರ್

ಬೆಂಗಳೂರು: ಆತಂಕದ ಹಿನ್ನೆಲೆಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರೋಗ್ಯ ಸಚಿವ ಡಾ. ತೆರಳಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ತೆರಳಿದ ಅವರು ಕೈಗೊಂಡ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ವಿದೇಶದಿಂದ ಬಂದ ಪ್ರಯಾಣಿಕರಿಗೂ ಕಡ್ಡಾಯ ಆರ್‌ಟಿಪಿಸಿಆರ್ ಟೆಸ್ಟ್‌ ಆರಂಭಿಸಲಾಗುವುದು. ಕೇಂದ್ರ ಮಾರ್ಗಸೂಚಿ 5 ಶೇಕಡ ಇದ್ದರೂ ಸಿಎಂ ಹೆಚ್ಚಿನ ಕಾಳಜಿ ಹಾಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಿಎಂ ಹೇಳಿದ್ದಾರೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಪರಿಶೀಲನೆ ಮಾಡಲು ಬಂದಿದ್ದೇನೆ ಎಂದರು. ವಿದೇಶಿ ಪ್ರಯಾಣಿಕರಿಗೆ ನೆಗೆಟಿವ್ ವರದಿ ಬಂದರೆ ಮನೆಯಲ್ಲಿ 7 ದಿನ ಕ್ವಾರಂಟೈನ್ ಮಾಡಲಾಗುವುದು. ಕೋವಿಡ್ ಆಪ್‌ ಮೂಲಕ ಗಮನಿಸಲಾಗುವುದು. ಆರ್‌ಟಿಪಿಸಿಆರ್ ನೆಗೆಟಿವ್ ಬಂದರೆ ಮನೆಗೆ ಹೋದ ಬಳಿಕ 5 ದಿನಗಳ ಬಳಿಕ ಟೆಸ್ಟ್‌ ಮಾಡಲಾಗುವುದು. ನೆಗೆಟಿವ್ ಬಂದರೆ 7 ದಿನ ಆದ ಬಳಿ ಹೊರಗಡೆ ಹೋಗಲು ಅವಕಾಶ ನೀಡಲಾಗುತ್ತದೆ. ಆದರೆ ಪಾಸಿಟಿವ್ ಬಂದರೆ ನೇರವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದರು. ಪಾಸಿಟಿವ್‌ ಬಂದರೆ ವಿಶೇಷ ಐಸೋಲೇಟೆಡ್ ವಾರ್ಡ್‌ಗೆ ಸೇರಿಸಲಾಗುವುದು ಎಂದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಆರೋಗ್ಯ ಸಚಿವರನ್ನು ಸಿಎಂ ಭೇಟಿ ಮಾಡುತ್ತಾರೆ. ಆರೋಗ್ಯ ಇಲಾಖೆಯ ಫ್ರಂಟ್‌ ಲೈನ್ ವರ್ಕರ್ಸ್‌ಗೆ ಬೋಸ್ಟರ್‌ ಡೋಸ್ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತದೆ. ವೈಜ್ಞಾನಿಕವಾಗಿ ಎಷ್ಟು ಉಪಯೋಗ ಆಗಲಿದೆ ಎಂದು ಚರ್ಚಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಯಾವುದೇ ಲೋಪ ಇಲ್ಲದೆ ಎಲ್ಲ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧ. ಪ್ರಕರಣಗಳು ಯಾವ ರೀತಿ ಏರಿಕೆ ಆಗುತ್ತದೆ ಆ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


from India & World News in Kannada | VK Polls https://ift.tt/3I1Idme

ಓಮಿಕ್ರಾನ್ ಪತ್ತೆಯಾದ ದೇಶಗಳಿಂದ ಬಂದ 6 ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್: ಮಹಾರಾಷ್ಟ್ರ

ಮುಂಬಯಿ: 'ಅಪಾಯದಲ್ಲಿ ಇರುವ' ದೇಶಗಳಿಂದ ಬಂದ ಆರು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಬುಧವಾರ ತಿಳಿಸಿದೆ. ಎಲ್ಲ ಆರು ಪ್ರಯಾಣಿಕರು ದಕ್ಷಿಣ ಆಫ್ರಿಕಾ ಅಥವಾ ತಳಿ ಸೋಂಕು ದೃಢಪಟ್ಟ ಬೇರೆ ದೇಶಗಳಿಂದ ಬಂದವರಾಗಿದ್ದಾರೆ. ಅವರ ಪೈಕಿ ಕೆಲವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ (Asymptomatic) ಅಥವಾ ಲಘು ಲಕ್ಷಣಗಳಿವೆ. ಅವರ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿಕೆ ತಿಳಿಸಿದೆ. 'ಅಪಾಯದಲ್ಲಿ ಇರುವ' ದೇಶಗಳೆಂದು ಗುರುತಿಸಲಾಗಿರುವ ರಾಷ್ಟ್ರಗಳಿಂದ ಬರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಏಳು ದಿನಗಳ ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಗಾಗುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಪ್ರಯಾಣಿಕರನ್ನು ಕಡ್ಡಾಯ ಐಸೋಲೇಷನ್‌ಗೆ ಒಳಪಡಿಸುವ ಸೌಲಭ್ಯಗಳು ತಕ್ಷಣದಿಂದಲೇ ಜಾರಿಯಾಗಿದೆ. ನಿಯೋಜಿತ ಹೋಟೆಲ್‌ಗಳಲ್ಲಿ ಪ್ರಯಾಣಿಕರು ಇರಬೇಕಾಗಿದ್ದು, ಅದರ ವೆಚ್ಚಗಳನ್ನು ಪ್ರಯಾಣಿಕರೇ ಭರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಮಹಾರಾಷ್ಟ್ರ ಸರ್ಕಾರದ ಈ ಹೊಸ ಆದೇಶ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ವಿಮಾನ ಏರುವ ಸಂದರ್ಭದಲ್ಲಿ ಅವರಿಗೆ ಈ ಆದೇಶದ ಮಾಹಿತಿ ಇರಲಿಲ್ಲ. ಆದರೆ ಮಹಾರಾಷ್ಟ್ರಕ್ಕೆ ಬಂದು ಇಳಿಯುತ್ತಿದ್ದಂತೆ, ಕಡ್ಡಾಯ ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಪಡುವುದು ಹಾಗೂ ಹೋಟೆಲ್ ಖರ್ಚುಗಳನ್ನು ತಾವೇ ಭರಿಸಬೇಕು ಎನ್ನುವುದು ಗೊತ್ತಿರದೆ ಅವರು ಕಂಗಾಲಾದರು. ಓಮಿಕ್ರಾನ್ ಪತ್ತೆಯಾದ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು, ತಮ್ಮ ಆಗಮನದ ಎರಡು, ನಾಲ್ಕು ಹಾಗೂ ಏಳನೇ ದಿನ- ಹೀಗೆ ಒಟ್ಟು ಮೂರು ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಬೇಕು. ಪಾಸಿಟಿವ್ ಕಂಡುಬಂದ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲಾಗುವುದು. ನೆಗೆಟಿವ್ ಬಂದವರನ್ನು ಹೆಚ್ಚುವರಿ ಏಳು ದಿನ ಕ್ವಾರೆಂಟೈನ್‌ಗೆ ಒಳಪಡಿಸಲಾಗುವುದು. ಓಮಿಕ್ರಾನ್ ಹಿನ್ನೆಲೆಯಲ್ಲಿ ನ. 28ರಂದು ಕೇಂದ್ರ ಸರ್ಕಾರ ಪ್ರಯಾಣ ಮಾರ್ಗಸೂಚಿ ಹೊರಡಿಸಿದ್ದು, ಈ ತಳಿಯನ್ನು ಆತಂಕದ ಪ್ರಭೇದ ಎಂದು ಗುರುತಿಸಿದೆ. ಹೀಗಾಗಿ ಕನಿಷ್ಠ ನಿರ್ಬಂಧಗಳು ಜಾರಿಯಲ್ಲಿ ಇರಲಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮಹಾರಾಷ್ಟ್ರಕ್ಕೆ ಬಂದಿಳಿದ ಅಂತಾರಾಷ್ಟ್ರೀಯ ಪ್ರಯಾಣಿಕರು ತಾವು ಕಳೆದ 15 ದಿನಗಳಲ್ಲಿ ಪ್ರಯಾಣಿಸಿದ ಎಲ್ಲ ದೇಶಗಳ ವಿವರಗಳನ್ನು ನೀಡಬೇಕು. ಇದನ್ನು ಅವರು ಆಗಮಿಸಿದ ಸಂದರ್ಭದಲ್ಲಿ ವಲಸೆ ವಿಭಾಗದಲ್ಲಿ ಪರಿಶೀಲಿಸಿ ದೃಢಪಡಿಸಿಕೊಳ್ಳಲಾಗುತ್ತದೆ. ತಪ್ಪು ಮಾಹಿತಿ ನೀಡಿರುವುದು ಖಚಿತವಾದರೆ ಆ ಪ್ರಯಾಣಿಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005ರ ವಿವಿಧ ಸೆಕ್ಷನ್‌ಗಳ ಅಡಿ ಕ್ರಮಕ್ಕೆ ಒಳಪಡಿಸಲಾಗುತ್ತದೆ. ಕೇಂದ್ರ ಸರ್ಕಾರವು ಗುರುತಿಸಿರುವ 'ಅಪಾಯದಲ್ಲಿ ಇರುವ' ದೇಶಗಳಿಂದ ಬರುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದೆ. ಅವರ ವರದಿ ನೆಗೆಟಿವ್ ಬಂದರೆ ಮನೆಯಲ್ಲಿ ಎರಡು ವಾರಗಳ ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಪಡಬೇಕು. ಪಾಸಿಟಿವ್ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು. ಯುರೋಪ್‌ನ ಎಲ್ಲ 44 ದೇಶಗಳು, ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಚೀನಾ, ಬೋಟ್ಸ್‌ವಾನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ, ಸಿಂಗಪುರ, ಹಾಂಕಾಂಗ್ ಮತ್ತು ಇಸ್ರೇಲ್ 'ಅಪಾಯದಲ್ಲಿ ಇರುವ' ದೇಶಗಳ ಪಟ್ಟಿಯಲ್ಲಿವೆ. ಭಾರತದ ಇತರೆ ವಿಮಾನ ನಿಲ್ದಾಣಕ್ಕೆ ತೆರಳಲು ಸಂಪರ್ಕ ವಿಮಾನಕ್ಕಾಗಿ ಕಾಯುವ ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಡುವಂತೆ ಇಲ್ಲ. ಅವರು ಮಹಾರಾಷ್ಟ್ರದಲ್ಲಿ ಮೊದಲು ಇಳಿದ ಕೂಡಲೇ ಆರ್‌ಟಿ ಪಿಸಿಆರ್ ಪರೀಕ್ಷೆಗೆ ಒಳಪಡಬೇಕು. ಅವರಲ್ಲಿ ನೆಗೆಟಿವ್ ಕಂಡುಬಂದರೆ ಮಾತ್ರವೇ ಮತ್ತೆ ವಿಮಾನ ಏರಲು ಅನುಮತಿ ನೀಡಲಾಗುತ್ತದೆ. ರಾಜ್ಯದ ಒಳಗೆ ಸಂಪರ್ಕ ವಿಮಾನ ಇದ್ದರೆ, ರಾಜ್ಯಕ್ಕೆ ನೇರವಾಗಿ ಬಂದಿಳಿಯುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಇರುವ ಎಲ್ಲ ನಿಯಮಗಳು ಅವರಿಗೂ ಅನ್ವಯವಾಗುತ್ತದೆ.


from India & World News in Kannada | VK Polls https://ift.tt/3lnLJOc

ಓಮಿಕ್ರಾನ್ ಆತಂಕ: ಕಠಿಣ ಕ್ರಮ ಅನಿವಾರ್ಯ; ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ಆರಂಭಿಕವಾಗಿಯೇ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಸಿಎಂ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅನಗತ್ಯ ಆತಂಕ ಬೇಡ ಲಾಕ್‌ ಡೌನ್ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಪ್ರತಿನಿತ್ಯ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2500 ವಿದೇಶಿ ಪ್ರಯಾಣಿಕರು ಬರುತ್ತಾರೆ. ಈ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಕಳೆದ ಬಾರಿ ಆದ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಡಿಸೆಂಬರ್ 2 ನೇ ತಾರೀಕು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಆರೋಗ್ಯ ಮತ್ತು ಫ್ರಂಟ್‌ ಲೈಟ್ ವರ್ಕರ್ಸ್‌ಗೆ ಬೂಸ್ಟರ್‌ ಡೋಸ್ ನೀಡುವ ನಿಟ್ಟಿನಲ್ಲಿ ಕೇಂದ್ರದ ಅನಿಸಿಕೆ ಪಡೆದುಕೊಳ್ಳುತ್ತೇನೆ ಎಂದರು. ಫ್ರಂಟ್‌ ಲೈನ್ ಹಾಗೂ ಹೆಲ್ತ್‌ ವರ್ಕರ್ಸ್‌ಗೆ ಬೂಸ್ಟರ್‌ ಡೋಸ್‌ ಕೊಡುವ ಬಗ್ಗೆ ಪರಿಣಿತರ ಜೊತೆ ಚರ್ಚೆ ಮಾಡಲಾಗಿದೆ ಎಂದ ಅವರು, ವಿದೇಶದಿಂದ ಬಂದ ಪ್ರಯಾಣಿಕರ ಪೈಕಿ ಓರ್ವ ವ್ಯಕ್ತಿಯ ಕೋವಿಡ್‌ ಟೆಸ್ಟ್‌ ಸ್ಯಾಂಪಲನ್ನು ಎನ್‌ಸಿಬಿಎಸ್‌ಗೆ ಕಳಿಸಿದ್ದೇವೆ. ಅದರ ವರದಿ ಬಂದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ ಎಂದರು. ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಕೇರಳ ಗಡಿಯಯಲ್ಲಿ ನಿಗಾ ಇಡಲಾಗಿದೆ. ಆದರೆ ಲಸಿಕೆ ಕಡ್ಡಾಯ ಮಾಡುವ ಉದ್ದೇಶ ಇಲ್ಲ. ಹೊರತಾಗಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು. ಇನ್ನು ಇದೇ ಸಂದರ್ಭದಲ್ಲಿ,ಜೆಡಿಎಸ್‌ ಜೊತೆಗಿನ ಮೈತ್ರಿ ವಿಚಾರವಾಗಿ ಮಾತನಾಡಿ, ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ್ದಾರೆ. ಭೇಟಿ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ಇನ್ನು ರಾಜ್ಯ ಮಟ್ಟದಲ್ಲಿ ಮೈತ್ರಿ ಬಗ್ಗೆ ಎಚ್‌ಡಿಕೆ ಹಾಗೂ ಯಡಿಯೂರಪ್ಪ ನಿರ್ಧಾರ ಮಾಡುತ್ತಾರೆ ಎಂದರು.


from India & World News in Kannada | VK Polls https://ift.tt/3o5mCRX

ಮಿಚಿಗನ್ ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ: ಮೂವರು ಮಕ್ಕಳ ಸಾವು

ವಾಷಿಂಗ್ಟನ್: 15 ವರ್ಷದ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ಮಂಗಳವಾರ ನಡೆಸಿ ಮೂವರನ್ನು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಇನ್ನೂ ಎಂಟು ಮಂದಿ ಗಾಯಗೊಂಡಿದ್ದಾರೆ. ಅಮೆರಿಕದ ಮಿಚಿಗನ್‌ನಲ್ಲಿನ ಹೈಸ್ಕೂಲಿನಲ್ಲಿ ಈ ದಾಳಿ ನಡೆದಿದೆ. ಮನಬಂದಂತೆ ಗುಂಡು ಹಾರಿಸಿದ ಬಾಲಕ, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇದು ಅಮೆರಿಕದಲ್ಲಿ ಈ ವರ್ಷ ನಡೆದ ಅತ್ಯಂತ ಮಾರಕ ಶೂಟಿಂಗ್ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡವರಲ್ಲಿ ಒಬ್ಬ ಶಿಕ್ಷಕ ಸೇರಿದ್ದಾರೆ. ಟೌನ್‌ಶಿಪ್‌ನಲ್ಲಿ ಇರುವ ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ಮಧ್ಯಾಹ್ನದ ತರಗತಿಗಳು ಆರಂಭವಾದ ಕೆಲವೇ ಸಮಯದಲ್ಲಿ ಆಕ್ರಮಣ ಎಸಗಿದ್ದಾನೆ ಎಂದು ಓಕ್ಲಾಂಡ್ ಕಂಟ್ರಿ ಶೆರಿಫ್ ಕಚೇರಿ ತಿಳಿಸಿದೆ. ಮೃತಪಟ್ಟವರಲ್ಲಿ 16 ವರ್ಷದ ಬಾಲಕ, 14 ಮತ್ತು 17 ವರ್ಷದ ಬಾಲಕಿಯರು ಸೇರಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಇನ್ನು ಆರು ಮಂದಿಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡೆಟ್ರೋಯ್ಟ್‌ನ ಉತ್ತರ ಭಾಗದಿಂಧ ಸುಮಾರು 30 ಮೈಲು ದೂರದಲ್ಲಿ ಈ ಪಟ್ಟಣವಿದೆ. ದಾಳಿಕೋರ ಶಂಕಿತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆತನ ಬಳಿಯಿಂದ ಸೆಮಿ ಆಟೋಮ್ಯಾಟಿಕ್ ಹ್ಯಾಂಡ್‌ಗನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆಕ್ಸ್‌ಫರ್ಡ್‌ನಲ್ಲಿ ನಡೆದ ಈ ದಾಳಿಗೆ ಯಾವ ಪ್ರಚೋದನೆ ಇದೆ, ಬಾಲಕನ ದಾಳಿಯ ಹಿಂದಿನ ಉದ್ದೇಶ ಏನು ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ದಾಳಿ ಎಸಗಿದ ವಿದ್ಯಾರ್ಥಿಯನ್ನು ಬಂಧಿಸುವಾಗ ಆತ ಪ್ರತಿರೋಧ ತೋರಿಸಲಿಲ್ಲ. ವಕೀಲರ ನೆರವಿಗಾಗಿ ಆತ ಕೇಳಿದ್ದು, ದಾಳಿಯ ಉದ್ದೇಶದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ 12.55ರ ವೇಳೆಗೆ ಪೊಲೀಸರಿಗೆ ದಾಳಿ ಕುರಿತು ಸತತವಾಗಿ ಫೋನ್ ಕರೆಗಳು ಬಂದಿದ್ದವು. ಕೂಡಲೇ ಅವರು ಅಲ್ಲಿಗೆ ತೆರಳಿದಾಗ ವಿದ್ಯಾರ್ಥಿ ಶರಣಾಗಿದ್ದಾನೆ. ಶಾಲೆಯ ಒಳಗೆ ಹೇಗೆ ಬಂದೂಕು ತೆಗೆದುಕೊಂಡು ಹೋಗಲು ಸಾಧ್ಯವಾಯಿತು ಎಂಬ ಪ್ರಶ್ನೆಗೂ ಆತ ಉತ್ತರ ನೀಡಿಲ್ಲ. ವಿದ್ಯಾರ್ಥಿ ಐದು ನಿಮಿಷದಲ್ಲಿ 15-20 ಗುಂಡುಗಳನ್ನು ಹಾರಿಸಿದ್ದಾನೆ. ಪೊಲೀಸ್ ತುರ್ತು ಸಹಾಯವಾಣಿ 911ಕ್ಕೆ ಕರೆ ಬಂದ ಐದು ನಿಮಿಷದ ಒಳಗೇ ಆತನನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಇದು ನಿಜಕ್ಕೂ ಬಹಳ ದುರಂತ ಘಟನೆ. ಇದರಲ್ಲಿ ಮೂವರು ಅಪ್ರಾಪ್ತ ವಯಸ್ಸಿನವರು ಮೃತಪಟ್ಟಿದ್ದಾರೆ. ಇವರೆಲ್ಲರೂ ಇದೇ ಶಾಲೆಯ ವಿದ್ಯಾರ್ಥಿಗಳು ಎಂದು ಭಾವಿಸಿದ್ದೇವೆ ಎಂದು ಅಧಿಕಾರಿ ಮೈಖಲ್ ಮೆಕ್‌ಕೇಬ್ ತಿಳಿಸಿದ್ದಾರೆ. ಶಾಲೆಯಲ್ಲಿ ಸುಮಾರು 1800 ವಿದ್ಯಾರ್ಥಿಗಳಿದ್ದಾರೆ. ಶಂಕಿತ ವಿದ್ಯಾರ್ಥಿ ಯಾವುದೇ ಹೇಳಿಕೆ ನೀಡದ ಕಾರಣ, ಆತನ ಬಗ್ಗೆ ಮಾಹಿತಿ ಇರುವವರಿಂದ ವಿವರ ಕಲೆ ಹಾಕಲು ಬಯಸಿರುವುದಾಗಿ ಹೇಳಿದ್ದಾರೆ. ಇದು ಶಾಲೆಯೊಂದರಲ್ಲಿ ಈ ವರ್ಷ ನಡೆದ ಅತ್ಯಂತ ಭೀಕರ ಗುಂಡಿನ ದಾಳಿ ಎನ್ನಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ಬಂದೂಕು ತಂದು ಗುಂಡು ಹಾರಿಸುವ ಘಟನೆಗಳು ಪ್ರತಿ ವರ್ಷ ದಾಖಲಾಗುತ್ತಿರುತ್ತದೆ. ಮಂಗಳವಾರದ ಘಟನೆಗೂ ಮುನ್ನ 2021ರಲ್ಲಿ ಅಮೆರಿಕದಾದ್ಯಂತ 138 ಶೂಟಿಂಗ್ ಪ್ರಕರಣಗಳು ವರದಿಯಾಗಿವೆ. ಇಷ್ಟು ಘಟನೆಗಳಲ್ಲಿ ಈವರೆಗೂ 26 ಮಂದಿ ಜೀವ ಕಳೆದುಕೊಂಡಿದ್ದಾರೆ. 2007ರ ಏಪ್ರಿಲ್‌ನಲ್ಲಿ ವರ್ಜೀನಿಯಾದ ಬ್ಲ್ಯಾಕ್ಸ್‌ಬರ್ಗ್‌ನಲ್ಲಿ ಇರುವ ವರ್ಜೀನಿಯಾ ಟೆಕ್‌ನಲ್ಲಿ ಭಯಾನಕ ದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದರು. 2012ರ ಡಿಸೆಂಬರ್‌ನಲ್ಲಿ ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿರುವ ಸ್ಯಾಂಡಿ ಹೂಕ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ದಾಳಿಯಲ್ಲಿ 28 ಜನರು ಹತ್ಯೆಯಾಗಿದ್ದರು. ಇದರಲ್ಲಿ 20 ಮಕ್ಕಳು ಮತ್ತು ಶೂಟರ್ ಕೂಡ ಸೇರಿದ್ದ.


from India & World News in Kannada | VK Polls https://ift.tt/3oaO6pk

ಕುಶಾಲನಗರದಲ್ಲಿ ಆರೆಸ್ಸೆಸ್‌ ಕಾರ‍್ಯಕರ್ತ ಪ್ರವೀಣ್‌ ಪೂಜಾರಿ ಕೊಲೆ ಪ್ರಕರಣ; 9 ಆರೋಪಿಗಳ ಖುಲಾಸೆ

ಮಡಿಕೇರಿ: ತಾಲೂಕು ಗುಡ್ಡೆಹೊಸೂರು ಸಮೀಪ 2016ರಲ್ಲಿ ನಡೆದಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ಪ್ರವೀಣ್‌ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಜಿಲ್ಲಾಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ. ತೀರ್ಪು ಪ್ರಕಟವಾದ ನಂತರ ಆರೋಪಿಗಳ ಪರ ವಕೀಲ ಅಬೂಬಕರ್‌ ಟಿ.ಎಚ್‌. ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ‘2016 ಆ.14ರಂದು ರಾತ್ರಿ ನಡೆದಿದ್ದ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಆ. 24ರಂದು 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. 61ರಷ್ಟು ಸಾಕ್ಷ್ಯ ಕಲೆ ಹಾಕಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಹಾಕಲಾಗಿತ್ತು. ಈ ಪೈಕಿ 27 ಮಂದಿಯ ವಿಚಾರಣೆ ನಡೆಸಿ, ಆರೋಪಿಗಳ ಮೇಲಿನ ಕೊಲೆ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎನ್ನುವ ಕಾರಣದಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಅಬೂಬಕರ್‌ ತಿಳಿಸಿದರು. ತೀರ್ಪು ಪ್ರಕಟಣೆ ಸಂದರ್ಭ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಪ್ರಕರಣದ ಹಿನ್ನೆಲೆ ಸ್ವಾತಂತ್ರ್ಯ ದಿನಾಚರಣೆ ಹಿಂದಿನ ದಿನ ಕುಶಾಲ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ಯಾತ್ರೆ ಅಂಗವಾಗಿ ನಡೆದ ಪಂಜಿನ ಮೆರವಣಿಗೆಯಲ್ಲಿ ಆಟೋ ಚಾಲಕರೂ ಆಗಿದ್ದ ಪ್ರವೀಣ್‌ ಪೂಜಾರಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭ ಮೂವರು ಪ್ರಯಾಣಿಕರು ಆಟೋವನ್ನು ಬಾಡಿಗೆಗೆ ಕರೆದುಕೊಂಡು ಹೋಗಿದ್ದರು. ನಂತರ ಗುಡ್ಡೆ ಹೊಸೂರು ಬಳಿಯ ತಿರುವಿನಲ್ಲಿ ದುಷ್ಕರ್ಮಿಗಳು ಪ್ರವೀಣ್‌ ಪೂಜಾರಿಯ ಕುತ್ತಿಗೆಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಆಟೋ ಚಾಲಕರ ಸಂಘದ ಸದಸ್ಯರು ಹಾಗೂ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಗಮನ ಸೆಳೆದು ಧರಣಿ ನಡೆದಿದ್ದವು. ‘ಸತ್ಯ ಗೆಲ್ಲುತ್ತದೆ ಎನ್ನುವ ಭರವಸೆಯಿತ್ತು. ಈ ತೀರ್ಪಿನಿಂದ ಸಂತೋಷವಾಗಿದೆ. ತೃಪ್ತಿ ಸಿಕ್ಕಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ’ ಎಂದು ಆರೋಪಿಗಳ ಪರ ವಾದಿಸಿದ್ದ ವಕೀಲ ಅಬೂಬಕರ್‌ ಟಿ.ಎಚ್‌ ಹೇಳಿದ್ದಾರೆ. ಇತ್ತ ಹಿಂದೂ ಜಾಗರಣ ವೇದಿಕೆಯ ನಿಧಿ ಪ್ರಮುಖ್‌ ಮಂಜುನಾಥ ಡಿ.ಸಿ ಪ್ರತಿಕ್ರಿಯಿಸಿ, ಹತ್ಯೆಗೀಡಾದ ಪ್ರವೀಣ್‌ ಪೂಜಾರಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ಹಿನ್ನೆಲೆಯಲ್ಲಿ ಅವರ ಕುಟುಂಬದ ಜತೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3Ebibe5

ಬೊಮ್ಮಾಯಿ ಸರಕಾರಕ್ಕೆ 4 ತಿಂಗಳು, ಇನ್ನೂ ಅಂತಿಮಗೊಂಡಿಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ!

  • ಎಸ್‌. ಜಿ. ಕುರ್ಯ, ಉಡುಪಿ
ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಅಸ್ತಿತ್ವಕ್ಕೆ ಬಂದ ನೇತೃತ್ವದ ಬಿಜೆಪಿ ಸರಕಾರಕ್ಕೆ ನಾಲ್ಕು ತಿಂಗಳು ಸಂದರೂ, ಜಿಲ್ಲಾ ಉಸ್ತುವಾರಿ ಸಚಿವರ ನಿಯೋಜನೆಗೆ ಮೀನ ಮೇಷ ಮುಗಿದಿಲ್ಲ! 2021ರ ಜು. 28ಕ್ಕೆ ಬಸವರಾಜ ಬೊಮ್ಮಾಯಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಆ. 15ಕ್ಕೆ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಹಾಗೂ ಕೋವಿಡ್‌ ಉಸ್ತುವಾರಿ, ನೆರೆ ಪರಿಹಾರ ಉಸ್ತುವಾರಿ ಹೊಣೆಯನ್ನು ಸಚಿವರಿಗೆ ವಹಿಸಲಾಗಿದೆ. ಆದರೆ ಪ್ರತಿ ಜಿಲ್ಲೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಸಭೆ ಒಮ್ಮೆಯೂ ನಡೆದಿಲ್ಲ. ಬೆಂಗಳೂರು ನಗರ, ಬೆಳಗಾವಿ, ಮೈಸೂರು ಸಹಿತ ಕೆಲ ಜಿಲ್ಲೆಗಳ ಉಸ್ತುವಾರಿ ಆಕಾಂಕ್ಷಿಗಳು ಪಟ್ಟಿ ಅಖೈರಿನ ಹಾದಿಯಲ್ಲಿ ಅಡ್ಡಗಾಲು ಹಾಕಿದ್ದಾರೆ, ಮುಖ್ಯಮಂತ್ರಿಗೇ ಸುಸ್ತು ಹೊಡೆಸುತ್ತಿದ್ದಾರೆ. ಮುಸುಕಿನ ಗುದ್ದಾಟದ ಬಳಿಕ ಸಚಿವ ವಿ. ಸೋಮಣ್ಣ, ಆರ್‌. ಅಶೋಕ್‌ ನಡುವಿನ ಅಸಮಾಧಾನ ಬಹಿರಂಗವಾಗಿದೆ. ಬೆಳಗಾವಿಯ ರಮೇಶ್‌ ಜಾರಕಿಹೊಳಿ ಸರಕಾರದ ಹೊರಗಿರುವ ಹಿನ್ನೆಲೆಯಲ್ಲಿ ಯಾರಿಗೆ ಜಿಲ್ಲಾಉಸ್ತುವಾರಿ ನೀಡಬೇಕೆನ್ನುವ ಜಿಜ್ಞಾಸೆಯಿದೆ. ಜಿಲ್ಲೆಗೊಬ್ಬ ಉಸ್ತುವಾರಿ ಕಾರ್ಯದರ್ಶಿಯನ್ನು ನೇಮಕ ಮಾಡಿದ ಸರಕಾರದಿಂದ ವಿಧಾನ ಪರಿಷತ್‌ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ (ಡಿ. 14) ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ ನಿರೀಕ್ಷೆಯಿದೆ. ಫೆಬ್ರವರಿಯಲ್ಲಿ ತಾ.ಪಂ., ಜಿ. ಪಂ. ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳ ಗೆಲುವಿಗೆ ಜಿಲ್ಲಾಉಸ್ತುವಾರಿ ಸಚಿವರ ಪಾತ್ರ ಮಹತ್ವದ್ದಾಗಿದೆ. ತಮಗೆ ವಹಿಸಿದ ಖಾತೆ/ ಇಲಾಖೆಗೆ ಸೀಮಿತರಾದ ಸಚಿವರು ತಮ್ಮ ತವರು ಜಿಲ್ಲೆ ಸಹಿತ ಉಸ್ತುವಾರಿ ಜಿಲ್ಲೆಗಳ ಅಭಿವೃದ್ಧಿಗೂ ಗಮನಹರಿಸಬೇಕಿದೆ. ಆದರೆ ಕೋವಿಡ್‌ - 19 ಮಹಾಮಾರಿಯಿಂದಾಗಿ ಬಜೆಟ್‌ ಕಡಿತವಾಗಿದ್ದು ಈಗ ಓಮಿಕ್ರಾನ್‌ ರೂಪಾಂತರಿ ವೈರಸ್ಸಿನ ಆತಂಕವು ಜಿಲ್ಲೆಯ ಅಭಿವೃದ್ಧಿಯ ಹಾದಿಯಲ್ಲಿ ಕಲ್ಲುಮುಳ್ಳಾಗಿ ಪರಿಣಮಿಸಲಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉಡುಪಿಯಲ್ಲಿ ತೆರೆದಿದ್ದರೂ ಸಾರ್ವಜನಿಕರಿಗೆ ಉಪಯೋಗವಿಲ್ಲ, ಲವಲವಿಕೆಯಿಲ್ಲ. ಜಿಲ್ಲೆಯ ಅಭಿವೃದ್ಧಿ ಯೋಜನೆ ರೂಪಿಸಲು, ನಾನಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಟೇಕಾಫ್‌ ಆಗಿಲ್ಲ. ಉಡುಪಿ, ದಕ್ಷಿಣ ಕನ್ನಡಕ್ಕೆ ಉಸ್ತುವಾರಿ ಯಾರು? ಬಿ. ಎಸ್‌. ಯಡಿಯೂರಪ್ಪ ಸರಕಾರವಿದ್ದಾಗ ಉಡುಪಿ ಜಿಲ್ಲೆಯವರಾಗಿದ್ದರೂ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಲು ಶಾಸಕರು ಅಡ್ಡಗಾಲು ಹಾಕಿದ್ದರು, ಸಿಎಂಗೇ ಪತ್ರ ಬರೆದಿದ್ದರು. ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದರು. ಈ ಬಾರಿ ಕೋಟ ಶ್ರೀನಿವಾಸ ಪೂಜಾರಿ ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ, ಕೋವಿಡ್‌, ನೆರೆ ಪರಿಹಾರದ ಉಸ್ತುವಾರಿಯನ್ನು ನೀಡಲಾಗಿದೆ. ಎಸ್‌. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನಿಲ್‌ ಕುಮಾರ್‌ ಅವರಲ್ಲಿ ಯಾರು ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗುತ್ತಾರೆನ್ನುವ ರಾಜಕೀಯ ಕುತೂಹಲವಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಧಾನ ಪರಿಷತ್‌ ಪರಿಷತ್‌ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಅಂತಿಮವಾಗಲಿದೆ. ಉಡುಪಿ ಸಹಿತ ಯಾವುದೇ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಕೊಟ್ಟರೂ ನಿರ್ವಹಣೆಗೆ ಬದ್ಧನಿದ್ದೇನೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕೋವಿಡ್‌ ನಡುವೆ ಓಮಿಕ್ರಾನ್‌ ವೈರಸ್‌ ಆತಂಕವಿದ್ದರೂ ಬರಿಯ ಜಿಲ್ಲಾಧಿಕಾರಿ ಮಾತ್ರ ಜವಾಬ್ದಾರಿ ತೆಗೆದುಕೊಳ್ಳಲಾಗುತ್ತದಾ? ಉಡುಪಿ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಿದ್ದರೂ ಉಸ್ತುವಾರಿ ಸಚಿವರ ನೇಮಕವಾಗದಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೂಡಲೇ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು.


from India & World News in Kannada | VK Polls https://ift.tt/3d2sDbU

ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಕೆಲಸ ಕಾರ್ಯವನ್ನು ನಾವು ಹೇಳೋದಿಲ್ಲ; ಗೋವಿಂದ ಕಾರಜೋಳ

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಮೋಸ ವಂಚನೆ ಗೊತ್ತಾದ ಮೇಲೆ ಇವತ್ತು ದೇಶದಲ್ಲಿ ಜನರು ಅವರನ್ನು ನಂಬುತ್ತಿಲ್ಲ ಎಂದು ಸಚಿವ ಅವರು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್ ಮುಕ್ತ ಭಾರತ ವಿಚಾರಕ್ಕೆ ಸಂಬಂಧಿಸಿದಂತೆ ಈ ರೀತಿ ಹೇಳಿಕೆ ನೀಡಿದರು. ಜನರು ಕಾಂಗ್ರೆಸ್‌ನ್ನು ನಂಬದ ಕಾರಣ ದೇಶದ ಇಪ್ಪತ್ತಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ನ್ನು ಹೊಡೆದೋಡಿಸಲಾಗಿದೆ. ಅಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಏಳು ವರ್ಷದ ಹಿಂದೆ ಕಾಂಗ್ರೆಸ್‌ ಮುಕ್ತ ಭಾರತ ಮಾಡ್ತೀನಿ ಅಂತ ಹೇಳಿದ್ದರು. ಅದು ಇಂದು ನಿಜವಾಗಿದೆ. ಭಾರತ ಕಾಂಗ್ರೆಸ್ ಮುಕ್ತವಾಗ್ತಿದೆ. ಎರಡು ಮೂರು ಕಡೆ ಮಾತ್ರ ಕಾಂಗ್ರೆಸ್ ಉಳಿದಿದೆ, ಮುಂದಿನ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಮುಕ್ತವಾಗುತ್ತೆ. ಎಲ್ಲೂ ಕಾಂಗ್ರೆಸ್ ಇರೋದಿಲ್ಲ ಎಂದು ಹೇಳಿದರು. ಪಡಿತರ ಅಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಾರಜೋಳ, ಬರೀ ಸಿದ್ದರಾಮಯ್ಯನವರು ಅಕ್ಕಿ ಕೊಟ್ಟಿದ್ದೇ ಮಾತನಾಡ್ತಿದ್ದಾರೆ. ಅಕ್ಕಿ ಯಾರದ್ದು, ಚೀಲ ಅಷ್ಟೇ ಸಿದ್ದರಾಮಯ್ಯನವರದ್ದು. ಅಕ್ಕಿ ಕೊಡ್ತಿರೋದು ನರೇಂದ್ರ ಮೋದಿ, ಬರಿ ಚೀಲ ಮತ್ತು ಅದರ ಬಾಡಿಗೆ ಮಾತ್ರ ಕೊಡ್ತಿದ್ರು. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಕೆಲಸ ಕಾರ್ಯವನ್ನು ನಾವು ಹೇಳೋದಿಲ್ಲ ಎಂದು ಇದೇ ವೇಳೆ ಹೇಳಿದರು. ಇನ್ನು ಮುರುಗೇಶ್ ನಿರಾಣಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಸಚಿವ ಕೆಎಸ್‌ ಈಶ್ವರಪ್ಪ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಸಿಎಂ ಆಗ್ತಾರೆ ಅನ್ನೋ ವಿಚಾರ ಸದ್ಯ ಅಪ್ರಸ್ತುತ. ನಾವೀಗ ಜನರ ಸಮಸ್ಯೆ ಕಡೆ ಗಮನ ಹರಿಸಬೇಕಿದೆ. ಕೋವಿಡ್, ನೆರೆ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದೇ ನಮ್ಮ ಕೆಲಸ. ಜನರು ಪ್ರವಾಹ, ಅತಿ ಹೆಚ್ಚು ಮಳೆಯಾಗಿ ತೊಂದರೆಯಲ್ಲಿದ್ದಾರೆ. ಕೋವಿಡ್ ಸಂಕಷ್ಟದ ಮಧ್ಯೆ ಜನರಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ನಾವೆಲ್ಲಾ ಕೈ ಜೋಡಿಸಿ ಕೆಲಸ ಮಾಡಬೇಕಾದಂತಹ ಅಗತ್ಯವಿದೆ. ಹೀಗಾಗಿ ಈ ಎಲ್ಲ ಸಮಸ್ಯೆಗಳ ಮಧ್ಯೆ ಸಿಎಂ ವಿಚಾರ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟರು.


from India & World News in Kannada | VK Polls https://ift.tt/3rpM9aI

ನೆರೆಯಿಂದ ಬೆಳೆ ನಷ್ಟಕ್ಕೆ ಸಿಲುಕಿದ 4.61 ಲಕ್ಷ ರೈತರಿಗೆ 318.87 ಕೋಟಿ ರೂ. ಪರಿಹಾರ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ನೆರೆಯಿಂದ ಬೆಳೆ ನಷ್ಟಕ್ಕೆ ಸಿಲುಕಿದ 4.61 ಲಕ್ಷ ರೈತರಿಗೆ 318.87 ಕೋಟಿ ರೂ. ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಆರ್‌. ಅಶೋಕ್‌ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, "ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಕೃಷಿ ಬೆಳೆ ನಾಶವಾಗಿದೆ. ಈಗಾಗಲೇ ರಾಜ್ಯ ಸರಕಾರವು ನೀಡುವ ಕಾರ್ಯ ಆರಂಭಿಸಿದೆ. ಬೆಳೆ ಹಾನಿ ಗುರುತಿಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಗಡುವು ನೀಡಲಾಗಿದೆ. ಈ ಹಿಂದೆ ಪರಿಹಾರವನ್ನು ಮೂರು ತಿಂಗಳಿಗೊಮ್ಮೆ ನೀಡಲಾಗುತ್ತಿತ್ತು. ಇದೀಗ ಬೆಳೆ ಹಾನಿ ವರದಿ ಸಲ್ಲಿಕೆಯಾದ ಕೂಡಲೇ ಪರಿಹಾರ ವಿತರಣೆಗೆ ಸೂಚಿಸಲಾಗಿದೆ," ಎಂದು ತಿಳಿಸಿದರು. "ಈವರೆಗೂ 3 ಲಕ್ಷ ರೈತರಿಗೆ 276.57 ಕೋಟಿ ರೂ. ಪರಿಹಾರವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ಮಂಗಳವಾರ 1.61 ಲಕ್ಷ ರೈತರಿಗೆ ಇನ್‌ಪುಟ್‌ ಸಬ್ಸಿಡಿ ಸೇರಿಸಿ ಪರಿಹಾರ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಆ ಮೂಲಕ 4.61 ಲಕ್ಷ ರೈತರಿಗೆ 318.87 ಕೋಟಿ ಇನ್‌ಪುಟ್‌ ಸಬ್ಸಿಡಿ ಹಣ ಬಿಡುಗಡೆ ಮಾಡಿದಂತಾಗಲಿದೆ. ಇದೇ ಮೊದಲ ಬಾರಿಗೆ ಬೆಳೆ ಹಾನಿ ವರದಿ ಬಂದ ಕೂಡಲೇ ಪರಿಹಾರ ನೀಡಲಾಗುತ್ತಿದೆ," ಎಂದು ಹೇಳಿದರು. ಬೆಳೆ ನಷ್ಟ ಸಂಬಂಧ ಎನ್‌ಡಿಆರ್‌ಎಫ್‌ ನಿಯಮಾವಳಿಗಡಿ ಕೇಂದ್ರ ಸರಕಾರಕ್ಕೆ ಮತ್ತೆ ವರದಿ ಸಲ್ಲಿಸಲಾಗುವುದು. ಒಟ್ಟಾರೆ ನಷ್ಟ ಅಂದರೆ ಮಳೆ, ನೆರೆಯಿಂದ ವಿದ್ಯುತ್‌ ಕಂಬ ಹಾನಿ ಸೇರಿದಂತೆ ಇತರ ನಷ್ಟದ ಬಗ್ಗೆ ಅಂದಾಜು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಿಂದ ಪರಿಹಾರ ಬಿಡುಗಡೆಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 600 ಕೋಟಿ ರೂ. ಲಭ್ಯವಿದ್ದು, ಹಣದ ಕೊರತೆ ಇಲ್ಲ ಎಂದು ತಿಳಿಸಿದರು.


from India & World News in Kannada | VK Polls https://ift.tt/3d5zeSL

ಚೀನಾ ಮೇಲೆ ನಿಗಾ ಇಡಲು 'ಹೆರಾನ್‌' ಬಲ, ಇಸ್ರೇಲ್‌ನಿಂದ ಬಂದಿವೆ ಅತ್ಯಾಧುನಿಕ ಡ್ರೋನ್‌ಗಳು

ಹೊಸದಿಲ್ಲಿ: ಗಡಿಯಲ್ಲಿ ಸದಾ ಸಂಘರ್ಷಕ್ಕೆ ಮುಂದಾಗುವ ಮೇಲೆ ನಿಗಾ ವಹಿಸಲು ಭಾರತದ ಬತ್ತಳಿಕೆಗೆ ಇಸ್ರೇಲ್‌ ಹೊಸ ಅಸ್ತ್ರಗಳನ್ನು ಪೂರೈಸಿದೆ. ಸುಧಾರಿತ ತಂತ್ರಜ್ಞಾನದ ಹೆರಾನ್‌ ಡ್ರೋನ್‌ ಭಾರತದ ನಿಗಾ ವ್ಯವಸ್ಥೆಗೆ ಬಲ ತುಂಬಲಿವೆ. "ಇಸ್ರೇಲ್‌ನಿಂದ ಬಂದಿರುವ ಅತ್ಯಾಧುನಿಕ ಡ್ರೋನ್‌ಗಳು ಸೇರಿವೆ. ಅಲ್ಲದೆ, ಅವುಗಳನ್ನು ಲಡಾಕ್‌ನ ಪೂರ್ವ ವಲಯಕ್ಕೆ ನಿಯೋಜನೆ ಮಾಡುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ," ಎಂದು ಸರಕಾರದ ಮೂಲಗಳು ತಿಳಿಸಿವೆ. ತುರ್ತು ಸಂದರ್ಭಗಳಲ್ಲಿ ಸೇನೆಯ ಬಳಕೆಗಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ನೀಡಿದ ಆರ್ಥಿಕ ಅಧಿಕಾರದ ಅಡಿಯಲ್ಲಿ ಸೇನೆಯು ಇಸ್ರೇಲ್‌ನಿಂದ ಹೆರಾನ್‌ ಡ್ರೋನ್‌ ಸೇರಿ 500 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಡ್ರೋನ್‌ಗಳ ಹಸ್ತಾಂತರ ವಿಳಂಬವಾಗಿತ್ತು. ಈಗ ಡ್ರೋನ್‌ಗಳನ್ನು ಪೂರೈಕೆ ಮಾಡಲಾಗಿದ್ದು, ಚೀನಾ ಗಡಿಯಲ್ಲಿ ನಿಯೋಜನೆ ಮಾಡಲಾಗುತ್ತಿದೆ. ಭಾರತಕ್ಕೆ ಸುಧಾರಿತ ತಂತ್ರಜ್ಞಾನವುಳ್ಳ ಹೆರಾನ್‌ ಡ್ರೋನ್‌ಗಳನ್ನು ಇಸ್ರೇಲ್‌ ಪೂರೈಕೆ ಮಾಡಿರುವುದರಿಂದ ಕಳೆದ ವರ್ಷದಿಂದಲೂ ಗಡಿಯಲ್ಲಿಉಪಟಳ ಮಾಡುತ್ತಿರುವ ಚೀನಾಗೆ ತಿರುಗೇಟು ನೀಡಲು ದೇಶಕ್ಕೆ ಇದರಿಂದ ಹೆಚ್ಚಿನ ಬಲ ಬಂದಂತಾಗಿದೆ. ಹೆರಾನ್‌ ಡ್ರೋನ್‌ಗಳು ಅತ್ಯಾಧುನಿಕವಾಗಿದ್ದು, ಇದುವರೆಗೆ ಬಳಕೆ ಮಾಡುತ್ತಿದ್ದ ಡ್ರೋನ್‌ಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿವೆ. ಅದರಲ್ಲೂ, ಇವುಗಳಲ್ಲಿ ಅಳವಡಿಸಿರುವ ಆ್ಯಂಟಿ ಜಾಮಿಂಗ್‌ ವ್ಯವಸ್ಥೆಯು ವಿದೇಶಿ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷದ ಮೇನಿಂದಲೂ ಗಡಿಯಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸುವುದು ಸೇರಿ ಹಲವು ರೀತಿಯಲ್ಲಿ ಚೀನಾ ಉದ್ಧಟತನ ಮೆರೆಯುತ್ತಲೇ ಇದೆ. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಪ್ರತ್ಯುತ್ತರ ನೀಡುತ್ತಲೇ ಬರುತ್ತಿದೆ. ಈಗಲೂ ಹಲವು ವಿವಾದಿತ ಪ್ರದೇಶಗಳಲ್ಲಿ ಚೀನಾ ಸೈನಿಕರು ಬೀಡು ಬಿಟ್ಟಿರುವುದರಿಂದ ಅವರ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ನಿಗಾ ಸಾಮರ್ಥ್ಯ ಹೆಚ್ಚಿಸುವ ದಿಸೆಯಲ್ಲಿ ಬೇರೆ ಡ್ರೋನ್‌ಗಳ ಖರೀದಿಗೂ ಸೇನೆ ಮುಂದಾಗಿದೆ.


from India & World News in Kannada | VK Polls https://ift.tt/3xF9Qg8

ಬೆಂಗಳೂರಿನ ರಸ್ತೆಗಳಲ್ಲೆಲ್ಲ ಗುಂಡಿಯೋ ಗುಂಡಿ; ₹98.72 ಕೋಟಿ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ

ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎಡೆಬಿಡದೆ ಸುರಿದ ಮಳೆಗೆ ಮುಚ್ಚಿದ್ದ ಗುಂಡಿಗಳೆಲ್ಲವೂ ಬಾಯ್ದೆರೆದುಕೊಂಡು ವಾಹನ ಸವಾರರ ಜೀವಕ್ಕೆ ಕಂಟಕವಾಗಿ ಪರಿಣಮಿಸಿವೆ. ಮಳೆಯಿಂದ ಅಧ್ವಾನವಾಗಿರುವ ಸಾವಿರಾರು ಕಿ.ಮೀ. ಉದ್ದದ ರಸ್ತೆಗಳ ದುರಸ್ತಿಗಾಗಿ ಅನುದಾನ ಕೋರಿ ಬಿಬಿಎಂಪಿಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮಳೆಯಿಂದ ಡಾಂಬರು ಕಿತ್ತು ಬಂದು ರಸ್ತೆ ತುಂಬೆಲ್ಲಾ ಜಲ್ಲಿಕಲ್ಲು, ಧೂಳು ಹರಡಿಕೊಂಡಿದೆ. ನಗರದ ಯಾವುದೇ ರಸ್ತೆಗೆ ಕಾಲಿಟ್ಟರೂ ಹೊಂಡ-ಗುಂಡಿಗಳ ದರ್ಶನವಾಗುತ್ತಿದೆ. ಮಳೆ ಬಂದಾಗ ಮತ್ತು ರಾತ್ರಿ ವೇಳೆ ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ಕಾಣದಾಗಿ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಣ್ಣಪುಟ್ಟ ಗಲ್ಲಿ ರಸ್ತೆಗಳಷ್ಟೇ ಅಲ್ಲ, ಮುಖ್ಯ ರಸ್ತೆಗಳೂ ಹದಗೆಟ್ಟು ಹೋಗಿವೆ. ಮೇಲ್ಸೇತುವೆಗಳಲ್ಲೂ ಹೊಂಡ -ಗುಂಡಿಗಳದ್ದೇ ಕಾರುಬಾರು. ನಗರದಲ್ಲಿ ಸುಮಾರು 14 ಸಾವಿರ ಕಿ.ಮೀ. ಉದ್ದದ ರಸ್ತೆ ಜಾಲವಿದೆ. ವೈಟ್‌ಟಾಪಿಂಗ್‌ ರಸ್ತೆಗಳನ್ನು ಹೊರತುಪಡಿಸಿ, ಡಾಂಬರು ಹೊದ್ದು ಮಲಗಿದ್ದ ರಸ್ತೆಗಳೆಲ್ಲವೂ ಚರ್ಮವಿಲ್ಲದ ಅಸ್ಥಿ ಪಂಜರಗಳಂತಾಗಿವೆ. ದುರ್ಬೀನು ಹಾಕಿ ಹುಡುಕಿದರೂ ಗುಂಡಿಮುಕ್ತ ರಸ್ತೆಗಳು ಕಾಣ ಸಿಗುವುದಿಲ್ಲ. ಹೊರವಲಯದಲ್ಲಿರುವ ರಸ್ತೆಗಳಂತೂ ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಇಲ್ಲಿನ ನಿವಾಸಿಗಳು ಭತ್ತದ ಪೈರು ನಾಟಿ ಮಾಡಿ, ಹೋಮ ಹವನ, ಅಣಕು ಶವ ಸಂಸ್ಕಾರ ನಡೆಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. 98.72 ಕೋಟಿ ರೂ. ಅನುದಾನಕ್ಕೆ ಬೇಡಿಕೆ: ಮಳೆಯಿಂದಾಗಿ 1940 ಕಿ.ಮೀ. ಉದ್ದದ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳೆಲ್ಲವೂ ಅಧ್ವಾನವಾಗಿವೆ. ಈ ರಸ್ತೆಗಳಲ್ಲಿ ಸದಾ ವಾಹನ ದಟ್ಟಣೆ ಹೆಚ್ಚಿದ್ದು, ಸವಾರರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಹಾಗಾಗಿಯೇ, ಈ ರಸ್ತೆಗಳನ್ನು ದುರಸ್ತಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗಿರುವ , 98.72 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಹಲವು ರಸ್ತೆಗಳು ಕೊಚ್ಚಿ ಹೋಗಿವೆ. ಸಾವಿರಾರು ಕಿ.ಮೀ. ಉದ್ದದ ರಸ್ತೆಗಳಲ್ಲಿ ಡಾಂಬರು ಕಿತ್ತು ಬಂದು, ಗುಂಡಿಗಳು ಬಿದ್ದಿವೆ. ಹೀಗಾಗಿಯೇ, ಪಾಲಿಕೆಯ ಅಧಿಕಾರಿಗಳು ಗುಂಡಿ ಬಿದ್ದಿರುವ ಹಾಗೂ ಡಾಂಬರು ಕಿತ್ತು ಬಂದಿರುವ ರಸ್ತೆಗಳ ಸಮೀಕ್ಷೆ ನಡೆಸುತ್ತಿದೆ. ಸದ್ಯ ಆರ್ಟೀರಿಯಲ್‌ ಮತ್ತು ಸಬ್‌ ಆರ್ಟೀರಿಯಲ್‌ ರಸ್ತೆಗಳಲ್ಲಷ್ಟೇ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದೆ. ಅದೂ ಗುಣಮಟ್ಟದಿಂದ ಕೂಡಿಲ್ಲ. ಕಾಟಾಚಾರಕ್ಕೆ ಗುಂಡಿಗಳಿಗೆ ಡಾಂಬರು ಸುರಿದು ಹೋಗಲಾಗುತ್ತಿದೆ. ವಾರ್ಡ್‌ ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ ಟೆಂಡರ್‌ ಆಹ್ವಾನಿಸಿದ್ದು, ಇದುವರೆಗೆ ಕಾಮಗಾರಿ ಶುರು ಮಾಡಿಲ್ಲ. ಕಳಪೆ ಕಾಮಗಾರಿ ಅವಾಂತರ: ಕಳೆದ ಸೆಪ್ಟೆಂಬರ್‌ನಲ್ಲೂ ಮಳೆಯಿಂದಾಗಿ 2219 ಕಿ.ಮೀ. ಉದ್ದದ ರಸ್ತೆಗಳು ಹಾಳಾಗಿದ್ದವು. ಆಗ ತೀವ್ರ ಟೀಕೆಗೆ ಗುರಿಯಾದ ಪಾಲಿಕೆಯು, ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಂಡಿತು. ಅವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿದ ಕಾರಣ, ಒಂದೆರಡು ದಿನಗಳಲ್ಲೇ ಡಾಂಬರು ಕಿತ್ತು ಬಂದು ಕಳಪೆ ಕಾಮಗಾರಿಯ ಬಣ್ಣ ಬಯಲಾಯಿತು. ಆಗ ಹಾಕಿದ್ದ ತೇಪೆಯೆಲ್ಲಾ ಇತ್ತೀಚೆಗೆ ಸುರಿದ ಮಳೆಗೆ ಕೊಚ್ಚಿ ಹೋಗಿದೆ. ರಸ್ತೆ ಗುಂಡಿಗಳು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದ್ದು, ಪ್ರತಿ ವರ್ಷವೂ ಬಲಿ ಪಡೆಯುತ್ತಲೇ ಇವೆ. ಮಹಾನಗರದಲ್ಲಿ ವಾಹನಗಳನ್ನು ಬಳಸುವ ಬಹಳಷ್ಟು ಜನರ ಬೆನ್ನು ನೋವಿಗೆ ಹೊಂಡ- ಗುಂಡಿಗಳಿಂದ ತುಂಬಿದ ರಸ್ತೆಗಳೇ ಮುಖ್ಯ ಕಾರಣವಾಗಿದೆ. ವೈಜ್ಞಾನಿಕ ವಿಧಾನದಲ್ಲಿ ರಸ್ತೆ ಗುಂಡಿ ದುರಸ್ತಿಪಡಿಸಿದರೆ, ದೀರ್ಘಕಾಲ ಬಾಳಿಕೆ ಬರುತ್ತದೆ. ಆದರೆ, ಎಲ್ಲಿಯೂ ಪಾಲಿಕೆಯು ನಿಯಮಬದ್ಧವಾಗಿ ಗುಂಡಿಗಳನ್ನು ಮುಚ್ಚುತ್ತಿಲ್ಲ. ಇದರಿಂದಾಗಿ ದುರಸ್ತಿಪಡಿಸಿದಷ್ಟೇ ವೇಗದಲ್ಲಿ ಡಾಂಬರು ಕಿತ್ತು ಬರುತ್ತಿದ್ದು, ಜನರ ಪರದಾಟ ಮುಂದುವರಿದಿದೆ. ಗುಂಡಿ ಬಿದ್ದ ಆಕಾರದಲ್ಲೇ ದುರಸ್ತಿಪಡಿಸುವುದು ಅವೈಜ್ಞಾನಿಕ. ಗುಂಡಿಯಲ್ಲಿರುವ ಧೂಳು ತೆಗೆದು, ಜಲ್ಲಿ-ಡಾಂಬರು ಮಿಶ್ರಣ ಹಾಕುತ್ತಿಲ್ಲ. ಬಹಳಷ್ಟು ಕಡೆ ರೋಲರ್‌ ಕೂಡ ಬಳಸುತ್ತಿಲ್ಲ. ದುರಸ್ತಿಯಾದ ಮರುಕ್ಷಣವೇ ವಾಹನಗಳು ಸಂಚರಿಸುವುದರಿಂದ ಡಾಂಬರು ಕಿತ್ತು ಬರುತ್ತಿದೆ. 20 ದಿನಗಳಿಂದ ಸ್ಥಗಿತಗೊಂಡಿದ್ದ ಘಟಕ: ಬಿಬಿಎಂಪಿಯು 7.5 ಕೋಟಿ ರೂ. ವೆಚ್ಚದಲ್ಲಿ ಕಣ್ಣೂರಿನಲ್ಲಿ ಸ್ಥಾಪಿಸಿರುವ ಸ್ವಂತ ಜಲ್ಲಿ-ಬಿಸಿ ಡಾಂಬರು ಮಿಶ್ರಣ (ಹಾಟ್‌ಮಿಕ್ಸ್‌) ಘಟಕವು ವರುಣನ ಆರ್ಭಟದಿಂದಾಗಿ ಕಳೆದ 20 ದಿನಗಳಿಂದ ಸ್ಥಗಿತಗೊಂಡಿತ್ತು. ನ. 26ರಿಂದ ಘಟಕವು ಕಾರ್ಯಾರಂಭಗೊಂಡಿದ್ದು, 270 ಟನ್‌ನಷ್ಟು ಡಾಂಬರು ಮಿಶ್ರಣವನ್ನಷ್ಟೇ ಉತ್ಪಾದಿಸುತ್ತಿದೆ. ಹೀಗಾಗಿ, 1940 ಕಿ.ಮೀ. ಉದ್ದದ 365 ಆರ್ಟೀರಿಯಲ್‌ ಮತ್ತು ಸಬ್‌ ಆರ್ಟೀರಿಯಲ್‌ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ವಾರ್ಡ್‌ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಇನ್ನೂ ಶುರುವಾಗಿಲ್ಲ. ಡಾಂಬರು ಮಿಶ್ರಣ ಘಟಕದ ನಿರ್ವಹಣೆಯನ್ನು ಜೆಎಂಸಿ ಕನ್‌ಸ್ಟ್ರಕ್ಷನ್‌ ಕಂಪೆನಿಗೆ ವಹಿಸಲಾಗಿದೆ. ಗಂಟೆಗೆ 120 ಟನ್‌ನಂತೆ 10 ಗಂಟೆಗಳಲ್ಲಿ 50 ಟ್ರಕ್‌ಗಳಷ್ಟು 160 ಡಿಗ್ರಿ ಉಷ್ಣಾಂಶದ ಹಾಟ್‌ ಮಿಕ್ಸ್‌ ಸಿದ್ಧಪಡಿಸುವ ಸಾಮರ್ಥ್ಯವನ್ನು ಈ ಘಟಕವು ಹೊಂದಿದೆ. ಟೆಂಡರ್‌ ಷರತ್ತಿನಂತೆ ಘಟಕದಲ್ಲಿ ಜಲ್ಲಿ ಹಾಗೂ ಡಾಂಬರು ಮಿಶ್ರಣ ಮಾಡಿ, ಅದನ್ನು ತಂದು ವೈಜ್ಞಾನಿಕ ರೀತಿಯಲ್ಲಿ ರಸ್ತೆ ಗುಂಡಿ ಮುಚ್ಚುವುದು ಈ ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಪಾಲಿಕೆಯು ಪ್ರತಿ ಮೆಟ್ರಿಕ್‌ ಟನ್‌ಗೆ 4300 ರೂ. ಪಾವತಿಸುತ್ತಿದೆ. ‘ಘಟಕವು ನಿತ್ಯ 800 ಟನ್‌ ಡಾಂಬರು ಮಿಶ್ರಣ ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದೆ. ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸದ್ಯ 10-15 ಲೋಡ್‌ ಡಾಂಬರು ಮಾತ್ರ ಘಟಕದಿಂದ ಹೊರಬರುತ್ತಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಗುಂಡಿ ಮುಚ್ಚುವ ಕಾರ್ಯವನ್ನು ಚುರುಕುಗೊಳಿಸಲು ಸಾಧ್ಯವಾಗುತ್ತಿಲ್ಲ. ಮಳೆ ನಿಂತ ಕೂಡಲೇ ಸಮರೋಪಾದಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಪಾಲಿಕೆಯ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು. ಮಾಹಿತಿ ತಂತ್ರಜ್ಞಾನ ನಗರಿ ಎಂದೇ ವಿಶ್ವದ ಗಮನ ಸೆಳೆದಿರುವ ನಗರಕ್ಕೆ ರಸ್ತೆ ಗುಂಡಿ ಮುಚ್ಚುವ ತಂತ್ರಜ್ಞಾನ ಇನ್ನೂ ಸಿದ್ಧಿಸಿಯೇ ಇಲ್ಲ. ರಸ್ತೆಗಳಲ್ಲಿಸವಾರರ ಬಲಿಗಾಗಿ ಹೊಂದಿ ಹಾಕಿ ಕುಳಿತಿರುವ ಗುಂಡಿಗಳು ಸಿಲಿಕಾನ್‌ ಸಿಟಿಯ ಹಿರಿಮೆಯನ್ನು ಅಣಕಿಸುತ್ತಿವೆ. ಹಾಟ್‌ ಮಿಕ್ಸ್‌ ಘಟಕದಿಂದ ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವು ವೇಗ ಪಡೆಯಲಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾ ಬಂದಿದ್ದರು. ಆದರೆ, ಪರಿಸ್ಥಿತಿ ನಿರೀಕ್ಷಿತ ಪ್ರಮಾಣದಲ್ಲಿ ಸುಧಾರಣೆ ಆಗಿಲ್ಲ. ವಾರ್ಷಿಕ 46.10 ಕೋಟಿ ರೂ. ವೆಚ್ಚ: ರಸ್ತೆಯಲ್ಲಿ ಗುಂಡಿಗಳಿವೆಯೋ, ಹೊಂಡಗಳಲ್ಲೇ ರಸ್ತೆ ಇದೆಯೋ ಎನ್ನುವಷ್ಟರ ಮಟ್ಟಿಗೆ ರಸ್ತೆಗಳು ಹದಗೆಟ್ಟು ಹೋಗಿವೆ. ಬಿಬಿಎಂಪಿಯು ಗುಂಡಿಗಳನ್ನು ಮುಚ್ಚುವುದಕ್ಕಾಗಿಯೇ ವಾರ್ಷಿಕ 46.10 ಕೋಟಿ ರೂ. ಖರ್ಚು ಮಾಡುತ್ತಿದೆ. ಇದಲ್ಲದೆ, ರಸ್ತೆ ಅಭಿವೃದ್ಧಿ, ಡಾಂಬರೀಕರಣ ನೆಪದಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ. ಇಷ್ಟಾದರೂ ನಗರದ ರಸ್ತೆಗಳು ಗುಂಡಿ ಮುಕ್ತವಾಗುತ್ತಿಲ್ಲ. ವಾರ್ಡ್‌ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ವಾರ್ಷಿಕ 39.60 ಕೋಟಿ ರೂ. ವ್ಯಯಿಸಲಾಗುತ್ತಿದೆ. ಗುಂಡಿ ಮುಚ್ಚುವ ಕಾರ್ಯಕ್ಕಾಗಿಯೇ ಬಜೆಟ್‌ನಲ್ಲಿ ಪ್ರತಿ ವಾರ್ಡ್‌ಗೆ 20 ಲಕ್ಷ ರೂ. ಅನುದಾನ ಮೀಸಲಿಡಲಾಗುತ್ತಿದೆ. ಇದಲ್ಲದೆ, 1940 ಕಿ.ಮೀ. ಉದ್ದವಿರುವ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ 6.50 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ರಸ್ತೆಗಳ ಅಭಿವೃದ್ಧಿ, ದುರಸ್ತಿಗಾಗಿಯೇ 20 ಸಾವಿರ ಕೋಟಿ ರೂ. ವ್ಯಯಿಸಲಾಗಿದೆ.


from India & World News in Kannada | VK Polls https://ift.tt/3Eb2BPD

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ; ಮಾದಕವಸ್ತು, ಗಾಂಜಾ ಸೇದುವ ಪೈಪ್‌ಗಳು ಪತ್ತೆ!

ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ ಪೊಲೀಸರು ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಗಾಂಜಾ ಮತ್ತು ಗಾಂಜಾ ಸೇದುವ ಪೈಪ್‌ಗಳೂ ಸೇರಿದಂತೆ ನಾನಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು ಹಾಗೂ ಮೂವರು ಎಸಿಪಿ, 15 ಮಂದಿ ಇನ್ಸ್‌ಪೆಕ್ಟರ್‌ ಮತ್ತು ಸಿಬ್ಬಂದಿ ಶ್ವಾನ ದಳದ ಜತೆ ಮಂಗಳವಾರ ಮುಂಜಾನೆ ಐದು ಗಂಟೆಗೆ ದಾಳಿ ನಡೆಸಿದರು. ಈ ವೇಳೆ ಕೈದಿಗಳಿರುವ ಕೊಠಡಿಯ ಪ್ರತಿ ಬ್ಯಾರಕ್‌ಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಗಾಂಜಾ ಮತ್ತು ಗಾಂಜಾ ಸೇದುವ ಪೈಪ್‌ಗಳು ಪತ್ತೆಯಾಗಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು. ಜೈಲಿನಲ್ಲಿ ಕುಳಿತು ಅಪರಾಧ ಚಟುವಟಿಕೆಯಲ್ಲಿ ಭಾಗಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಈಗಾಗಲೇ ಪರಪ್ಪನ ಅಗ್ರಹಾರ ಸೇರಿರುವ ರೌಡಿಶೀಟರ್‌ಗಳು ಜೈಲಿನೊಳಗೇ ಕುಳಿತು ತಮ್ಮ ಸಹಚರರ ಜತೆ ಸಂಪರ್ಕ ಹೊಂದಿ ಅಪರಾಧ ಚಟುವಟಿಕೆಗಳಿಗೆ ಸಾಥ್‌ ನೀಡುತ್ತಿದ್ದರು. ಈ ಮೂಲಕ ಜೈಲಿನಲ್ಲೇ ಕುಳಿತು ಹೊರಗಡೆ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇಷ್ಟೇ ಅಲ್ಲದೇ ಜೈಲಿನಲ್ಲೇ ಕುಳಿತು ಕೆಲವರ ಕೊಲೆಗೆ ಸಂಚು ರೂಪಿಸಿ ಸಹಚರರಿಗೆ ಸುಪಾರಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಇತ್ತೀಚೆಗೆ ಕೇಳಿ ಬರುತ್ತಿತ್ತು. ಅಲ್ಲದೆ, ಕೈದಿಗಳಿಗೆ ಎಲ್ಲ ತರಹದ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಾದಕ ವಸ್ತು ಸೇರಿದಂತೆ ಮದ್ಯ, ಸಿಗರೇಟ್‌ ಹಾಗೂ ಮೊಬೈಲ್‌, ಸಿಮ್‌ ಕಾರ್ಡ್‌ಗಳನ್ನು ಕೈದಿಗಳು ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಎಲ್ಲ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದರು. ದಾಳಿ ವೇಳೆ ಗಾಂಜಾ, ಗಾಂಜಾ ಸೇದುವ ಪೈಪ್‌ಗಳನ್ನು ಹೊರತುಪಡಿಸಿ ಬೇರೇನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ನಾಲ್ಕು ತಿಂಗಳ ಹಿಂದೆಯೂ ಶೋಧ ಸಿಸಿಬಿ ಪೊಲೀಸರು ನಾಲ್ಕು ತಿಂಗಳ ಹಿಂದೆ (ಜುಲೈ 10ರಂದು) ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದರು. ಈ ವೇಳೆ ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ಕೈದಿಗಳ ಪ್ರತಿ ಬ್ಯಾರಕ್‌ ಹುಡುಕಾಡಿದ್ದರು. ಈ ವೇಳೆ ಅಪಾರ ಪ್ರಮಾಣದ ಮಾದಕ ವಸ್ತು, ಗಾಂಜಾ, ಚಾಕು, ಡ್ಯಾಗರ್‌, ಮೊಬೈಲ್‌ಗಳು, ಸಿಮ್‌ಕಾರ್ಡ್‌, ಪೆನ್‌ಡ್ರೈವ್‌ಗಳೂ ಸೇರಿದಂತೆ ನಾನಾ ವಸ್ತುಗಳು ಪತ್ತೆಯಾಗಿದ್ದವು. ಜೈಲಿನಲ್ಲೇ ಕುಳಿತು ಹೊರಗಡೆ ಇರುವ ತಮ್ಮ ಸಹಚರರ ಮೂಲಕ ಅಪರಾಧ ಕೃತ್ಯ ಮಾಡಿಸಲು ಸಂಚು ರೂಪಿಸುತ್ತಿದ್ದರು ಎಂಬುದು ತಿಳಿದುಬಂದಿತ್ತು.


from India & World News in Kannada | VK Polls https://ift.tt/3d8sWli

ಡಿ.1 ರಿಂದ ಆಟೋ ಪ್ರಯಾಣ ದುಬಾರಿ; ಕನಿಷ್ಟ ಪ್ರಯಾಣ ದರ ₹30 ರೂಪಾಯಿಗೆ ಹೆಚ್ಚಳ ಮಾಡಿ ಆದೇಶ

ಬೆಂಗಳೂರು: ನಗರದಲ್ಲಿ ಆಟೊ ಪ್ರಯಾಣ ದರವನ್ನು ಕನಿಷ್ಠ 25 ರೂ. ನಿಂದ 30 ರೂ.ಗಳಿಗೆ ಹೆಚ್ಚಳ ಮಾಡಿ ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಈಗಾಗಲೇ ಆದೇಶ ಹೊರಡಿಸಿದೆ. ಪರಿಷ್ಕೃತ ದರವು ಬುಧವಾರದಿಂದ (ಡಿ. 1) ಜಾರಿಗೆ ಬರಲಿದೆ. ಆಟೊಗಳಲ್ಲಿ ಓಡಾಡುವ ಪ್ರಯಾಣಿಕರು ಬುಧವಾರದಿಂದ 5 ರೂ. ಹೆಚ್ಚಿನ ದರ ಪಾವತಿಸಿ ಪ್ರಯಾಣಿಸಬೇಕಿದೆ. ಕನಿಷ್ಠ ಪ್ರಯಾಣ ದರವನ್ನು ಮೊದಲ 2 ಕಿ.ಮೀ.ಗೆ 5 ರೂ., ಆನಂತರದ ಪ್ರತಿ ಕಿ.ಮೀ.ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಲಗೇಜು ದರವನ್ನು 2 ರೂ. ನಿಂದ 5 ರೂ. ಗೆ ಏರಿಕೆ ಮಾಡಲಾಗಿದೆ. ಈ ಮೊದಲು ಕನಿಷ್ಠ ಪ್ರಯಾಣ ದರವು 1.9 ಕಿ.ಮೀ. ಗೆ 25 ರೂ., ಆನಂತರದ ಪ್ರತಿ ಕಿ.ಮೀ.ಗೆ 13 ರೂ. ಇತ್ತು. ಇದೀಗ ಆ ದರವನ್ನು ಕ್ರಮವಾಗಿ 30 ರೂ. ಮತ್ತು 15 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ, ಲಗೇಜು ದರವನ್ನು ಮೊದಲ 20 ಕೆ.ಜಿ.ಯಿಂದ ನಂತರದ ಪ್ರತಿ 20 ಕೆ.ಜಿ.ಗೆ ಅಥವಾ ಅದರ ಭಾಗಕ್ಕೆ ವಿಧಿಸುತ್ತಿದ್ದ ದರವನ್ನು 2 ರೂ. ನಿಂದ 5 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಉಳಿದಂತೆ ರಾತ್ರಿ ಪ್ರಯಾಣ ದರ, ಕಾಯುವಿಕೆ ದರದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡಿಲ್ಲ. ಪ್ರಾಧಿಕಾರವು 2013ರ ಡಿ. 17ರಂದು ಆಟೊ ಪ್ರಯಾಣ ದರ ಏರಿಕೆ ಮಾಡಿತ್ತು. ಆನಂತರ ದರ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ, ಆಟೋ ಚಾಲಕರು ಹಾಗೂ ಮಾಲೀಕರ ಸಂಘಟನೆಗಳು ದರ ಹೆಚ್ಚಳಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದ್ದವು. ಹೊಸ ಆಟೊ ಬೆಲೆ, ನೋಂದಣಿ ಶುಲ್ಕ, ಅರ್ಹತಾ ಪತ್ರ ನವೀಕರಣ, ಎಲ್‌ಪಿಜಿ ಗ್ಯಾಸ್‌, ಬಿಡಿಭಾಗಗಳ ಬೆಲೆ ದುಪ್ಪಟ್ಟಾಗಿದೆ. ಮನೆ ಬಾಡಿಗೆ, ದಿನಬಳಕೆ ವಸ್ತುಗಳು, ಮಕ್ಕಳ ಶಿಕ್ಷಣ ಶುಲ್ಕವೂ ಜಾಸ್ತಿಯಾಗಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಆದ ಕಾರಣ, ಪ್ರಯಾಣ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಆಟೊ ಪ್ರಯಾಣ ದರ ಪರಿಷ್ಕರಣೆ ಸಂಬಂಧ ಸಂಚಾರ ವಿಭಾಗದ (ಪೂರ್ವ) ಉಪ ಪೊಲೀಸ್‌ ಆಯುಕ್ತರ ಅಧ್ಯಕ್ಷತೆಯಲ್ಲಿ ಒಂದು ಉಪ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಆಟೊರಿಕ್ಷಾ ಸಂಘಟನೆಗಳು, ಚಾಲಕರು ಹಾಗೂ ಸಾರ್ವಜನಿಕರ ಅಹವಾಲು ಆಲಿಸಿ, ವರದಿ ಸಲ್ಲಿಸಿತ್ತು. ವರದಿಯಲ್ಲಿ ಮಾಡಿದ್ದ ಶಿಫಾರಸಿನಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು ಆಟೊ ಪ್ರಯಾಣ ದರವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ನಿಗದಿತ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಆಟೊದ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು. ಪರಿಷ್ಕೃತ ದರವು ಮೀಟರ್‌ನಲ್ಲಿ ಪ್ರದರ್ಶಿತವಾಗುವಂತೆ 2022ರ ಫೆ. 28ರೊಳಗೆ ಪುನಃ ಸತ್ಯಾಪನೆ ಮಾಡಿ, ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಚಾಲಕರಿಗೆ ಸೂಚಿಸಿದ್ದಾರೆ. ಆಟೊ ಪ್ರಯಾಣ ದರದ ವಿವರ:
ಹಾಲಿ ದರ ಪರಿಷ್ಕೃತ ದರ
ಮೊದಲ 1.9 ಕಿ.ಮೀ ಗೆ ₹25 ಮೊದಲ 2 ಕಿ.ಮೀ ಗೆ ₹30
ನಂತರದ ಪ್ರತಿ ಕಿ.ಮೀ ಗೆ ₹13 ನಂತರದ ಪ್ರತಿ ಕಿ.ಮೀ ಗೆ ₹15
ಮೊದಲ 5 ನಿಮಿಷ ಕಾಯುವಿಕೆ ದರ ಉಚಿತ ಮೊದಲ 5 ನಿಮಿಷ ಕಾಯುವಿಕೆ ದರ ಉಚಿತ
ಐದು ನಿಮಿಷದ ನಂತರ ಪ್ರತಿ 15 ನಿಮಿಷಕ್ಕೆ ₹5 ಐದು ನಿಮಿಷದ ನಂತರ ಪ್ರತಿ 15 ನಿಮಿಷಕ್ಕೆ ₹5
ಮೊದಲ 20 ಕೆ.ಜಿ ವರೆಗಿನ ಲಗೇಜು ದರ ಉಚಿತ ಮೊದಲ 20 ಕೆ.ಜಿ ವರೆಗಿನ ಲಗೇಜು ದರ ಉಚಿತ
20 ಕೆ.ಜಿ ಯಿಂದ ನಂತರದ ಪ್ರತಿ 20 ಕೆ.ಜಿ ಗೆ (ಗರಿಷ್ಠ 50 ಕೆ.ಜಿ) ₹2 20 ಕೆ.ಜಿ ಯಿಂದ ನಂತರದ ಪ್ರತಿ 20 ಕೆ.ಜಿ ಗೆ (ಗರಿಷ್ಠ 50 ಕೆ.ಜಿ) ₹5
ರಾತ್ರಿ 10 ರಿಂದ ಮುಂಜಾನೆ 5 ಗಂಟೆವರೆಗಿನ ದರ ಸಾಮಾನ್ಯ ದರ ಮತ್ತು ಅದರ ಅರ್ಧ ಪಟ್ಟು ಹೆಚ್ಚು ರಾತ್ರಿ 10 ರಿಂದ ಮುಂಜಾನೆ 5 ಗಂಟೆವರೆಗಿನ ದರ ಸಾಮಾನ್ಯ ದರ ಮತ್ತು ಅದರ ಅರ್ಧ ಪಟ್ಟು ಹೆಚ್ಚು


from India & World News in Kannada | VK Polls https://ift.tt/3FWNGca

ಜಾರಕಿಹೊಳಿ ಅಶ್ಲೀಲ ಸಿ.ಡಿ ಕೇಸ್‌ನ ವರ್ಚುವಲ್‌ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿ; ನೋಟಿಸ್‌ ಜಾರಿ

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಅಶ್ಲೀಲ ಸಿ.ಡಿ ಪ್ರಕರಣದ ವಿಚಾರಣೆ ವೇಳೆ ವರ್ಚುವಲ್‌ (ವಿಡಿಯೊ ಕಾನ್ಫರೆನ್ಸ್‌) ವಿಚಾರಣೆಯಲ್ಲಿ ಉಜಿರೆಯ ಶ್ರೀಧರ್‌ ಭಟ್‌ ಎಂಬ ವ್ಯಕ್ತಿ ಅರೆ ನಗ್ನವಾಗಿ ಕಾಣಿಸಿಕೊಂಡಿದ್ದಕ್ಕೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಆಕ್ಷೇಪ ಎತ್ತಿದ ಹಿನ್ನೆಲೆ ಹೈಕೋರ್ಟ್‌ ಆ ವ್ಯಕ್ತಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ. ಅಲ್ಲದೇ, ಆ ವ್ಯಕ್ತಿ ಕುರಿತು ಮಾಹಿತಿ ಸಂಗ್ರಹ ಮಾಡುವಂತೆ ನ್ಯಾಯಾಲಯದ ಅಧಿಕಾರಿಗಳಿಗೆ ನ್ಯಾಯಪೀಠ ಸೂಚಿಸಿದೆ. ಮಂಗಳವಾರ ಮಧ್ಯಾಹ್ನ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಸಂತ್ರಸ್ತ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್‌ ವಾದ ಮಂಡಿಸುತ್ತಿದ್ದರು. ಆ ಸಮಯದಲ್ಲಿ ‘ಶ್ರೀಧರ್‌ ಭಟ್‌ ’ ಎಂಬ ಹೆಸರಿನಲ್ಲಿ ವರ್ಚುವಲ್‌ ಮೂಲಕ ವಿಚಾರಣೆಗೆ ಲಾಗಿನ್‌ ಆಗಿದ್ದ ವ್ಯಕ್ತಿಯು ಅರೆನಗ್ನವಾಗಿ ಓಡಾಡುತ್ತಿದ್ದುದು ಕಾಣಿಸುತ್ತಿತ್ತು. ಅದನ್ನು ಗಮನಿಸಿದ ಇಂದಿರಾ ಜೈಸಿಂಗ್‌ ಆಕ್ಷೇಪಿಸಿದರು. ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಹೇಳಿದ್ದೇನು?ಪ್ರಕರಣದ ವಿಚಾರಣೆ ಕೊನೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಸಂತ್ರಸ್ತ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್‌ ಅವರು, ತಾನು ವಾದ ಮಂಡಿಸುತ್ತಿದ್ದ ವೇಳೆ ವರ್ಚುವಲ್ ವಿಚಾರಣೆಗೆ ಲಾಗಿನ್ ಆಗಿದ್ದ ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ ಎಂಬ ಲಾಗಿನ್ ಐಡಿ ಹೊಂದಿದ್ದ ವ್ಯಕ್ತಿಯು ಅರೆನಗ್ನ ಸ್ಥಿತಿಯಲ್ಲಿ ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ವರ್ಚುವಲ್‌ ವಿಚಾರಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದ ಮಹಿಳಾ ವಕೀಲೆಯಾದ ನನಗೆ ಸಾಕಷ್ಟು ಮುಜುಗರ ಉಂಟಾಯಿತು. ಸರಿಯಾಗಿ ವಾದ ಮಂಡಿಸಲು ಸಮಸ್ಯೆಯಾಯಿತು. ಈ ವೇಳೆ ಕೋರ್ಟ್ ಪ್ರಕರಣದ ವಿಚಾರಣೆಯಲ್ಲಿ ತೊಡಗಿದ್ದರಿಂದ ಅದರ ಬಗ್ಗೆ ಚರ್ಚಿಸಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಹಲವು ತಿಂಗಳಿಂದ ನಾನು ವರ್ಚುವಲ್‌ ವಿಚಾರಣೆಯಲ್ಲಿ ಭಾಗಿಯಾಗಿದ್ದೇನೆ. ಈ ರೀತಿ ಎಂದಿಗೂ ಆಗಿರಲಿಲ್ಲ. ಹೈಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಹೀಗಾಗುತ್ತದೆ ಎಂದರೆ ಹೇಗೆ? ಹೈಕೋರ್ಟ್‌ ಘನತೆ ಏನಾಗಬೇಕು? ಆ ವ್ಯಕ್ತಿ ಅರೆ ನಗ್ನವಾಗಿ ಕಾಣಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ದಾಖಲೆ ಇದೆ. ಅದನ್ನು ಕಳುಹಿಸಿಕೊಡುತ್ತೇನೆ. ಇದು ನ್ಯಾಯಾಂಗ ನಿಂದನೆಯಾಗಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಪೀಠವು ಪ್ರಕರಣದಲ್ಲಿ ತಲ್ಲೀನವಾಗಿದ್ದರಿಂದ ಅದರತ್ತ ಗಮನಹರಿಸಲಿಲ್ಲ. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಶ್ರೀಧರ್‌ ಭಟ್‌ ಎಸ್‌ಡಿಎಂಸಿ ಉಜಿರೆ ಎಂದು ಲಾಗಿನ್‌ ಆಗಿದ್ದ ವ್ಯಕ್ತಿ ವರ್ಚುವಲ್‌ ವಿಚಾರಣೆಯಿಂದ ನಿರ್ಗಮಿಸಿದ್ದಾನೆ. ಕೋರಿಕೆ ಪರಿಗಣಿಸಿದ ಪೀಠ, ಅರೆ ನಗ್ನವಾಗಿ ಕಾಣಿಸಿಕೊಂಡಿದ್ದನ್ನು ನಾವು ನೋಡಿಲ್ಲ. ಆದರೂ ಆ ವ್ಯಕ್ತಿಯ ಮಾಹಿತಿಯನ್ನು ದತ್ತಾಂಶದಲ್ಲಿ ಪರಿಶೀಲಿಸಿ ಅವರಿಗೆ ನೋಟಿಸ್‌ ಜಾರಿಗೊಳಿಸಿ ಎಂದು ನ್ಯಾಯಾಲಯದ ಅಧಿಕಾರಿಗಳಿಗೆ ನಿರ್ದೇಶಿಸಿತು. ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿಯ ಲಾಗಿನ್ ಐಡಿ ಹೆಸರಿನಲ್ಲಿ 'ಶ್ರೀಧರ್ ಭಟ್ ಎಸ್‌ಡಿಎಂಸಿ ಉಜಿರೆ' ಎಂದು ಇದ್ದಿದ್ದರಿಂದ ಆತ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಒಡೆತನದ 'ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ'ಗೆ ಸಂಬಂಧಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ.


from India & World News in Kannada | VK Polls https://ift.tt/3Db3k1G

ರಾಜಕಾರಣ ಅನ್ನೋದು ಅಧಿಕಾರವಲ್ಲ, ಜವಾಬ್ದಾರಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅಭಿಮತ

: ಎಂಬುದು ಅಧಿಕಾರವಲ್ಲ. ಅದೊಂದು ಮತದಾರರು ನೀಡುವ ಆಶೋತ್ತರಗಳ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರಿಗೆ ಬೇಸರ ಬರಲು ಕಾರಣ ಜನಪ್ರತಿನಿಧಿಗಳ ಡಬಲ್‌ ಸ್ಟ್ಯಾಂಡಿಗ್‌ ನಡುವಳಿಕೆಯೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಅನಿಲ್‌ ಕುಮಾರ್‌ ಪರ ಮತಯಾಚನೆ ಮಾಡಿ ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ಮತದಾರನ ಮನೆ ಬಾಗಿಲಿಗೆ ಹೋಗಿ ಬೇಡಿಕೊಳ್ಳುವ ನಾವು ನಂತರದಲ್ಲಿ ಅವರ ಮುಂದೆ ದರ್ಪದಿಂದ ನಡೆದು ಕೊಳ್ಳುವುದು ಸರಿಯಲ್ಲ. ಶಾಸಕನಾದವನು ಜನರ ನಡುವಿನಿಂದ ಉದ್ಭವ ಆಗಬೇಕು. ಬದಲಿಗೆ ಮೇಲಿಂದ ಉದುರಬಾರದು. ಜನರ ನಡುವಿನಿಂದ ಆಯ್ಕೆಯಾದವರಿಗೆ ಜನರ ಸಂಕಷ್ಟಕ್ಕೆ ಮಿಡಿಯುವ ಗುಣವಿರುತ್ತದೆ. ಮತದಾರ ಭಾವನೆ ಕನಸುಗಳನ್ನು ಪರಿಹರಿಸಲು ನಾವು ವಿಧಾನಸಭೆಗೆ ಹೋಗುತ್ತೇವೆ. ಆದ್ದರಿಂದ ದರ್ಪಯಾರಿಗೂ ಒಳ್ಳೆಯದಲ್ಲ ಎಂದು ಡಾ. ಕೆ. ಸುಧಾಕರ್‌ ಅವರ ಹೆಸರು ಹೇಳದೆ ಮಾತಿನಲ್ಲೇ ಕುಟುಕಿದರು. ಸೋಲು ಶಾಶ್ವತವಲ್ಲ: ರಾಜಕಾರಣದಲ್ಲಿ ಶಾಶ್ವತ ಸೋಲಾಗಲಿ, ಶಾಶ್ವತ ಗೆಲುವಾಗಲಿ ಇರಲು ಸಾಧ್ಯವಿಲ್ಲ. ಸೋಲು ಗೆಲುವು ಸಹಜವಾದ ನಡೆಗಳಾಗಿವೆ. ಚಿಕ್ಕಬಳ್ಳಾಪುರ ತಾಲೂಕಿನ ಕಾಂಗ್ರೆಸ್‌ ಮತದಾರರು ಯಾವುದೇ ಕಾರಣಕ್ಕೂ ದೃತಿಗೆಡುವ ಅಗತ್ಯವಿಲ್ಲ. ಪ್ರತಿಯೊಬ್ಬ ಮತದಾರನಿಗೂ ಅವರದೇ ಆದ ನಿರ್ಬಂಧ, ನಿರ್ಧಾರ, ಒತ್ತಡ, ಇರುತ್ತದೆ. ಬಿಜೆಪಿ ಜೆಡಿಎಸ್‌ ಒಂದಾಗಲಿ ಬೇರೆ ಬೇರೆಯೇ ಇರಲಿ ಅದು ಅವರಿಗೆ ಬಿಟ್ಟ ವಿಚಾರ. ನಮ್ಮ ಕೆಲಸ ನಾವು ಮಾಡಿಕೊಂಡು ಹೋಗೋಣ ಎಂದು ಒಳ ಒಪ್ಪಂದವನ್ನು ವಿಶ್ಲೇಷಿಸಿದರು. ಗೆಲುವು ಖಚಿತ: ಅವಳಿ ಜಿಲ್ಲೆಯಲ್ಲಿ 11 ತಾಲೂಕಿದ್ದು ಎಲ್ಲೆಡೆಯೂ ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಮ್ಮ ಪಕ್ಷದ ಮತದಾರರ ಸಂಖ್ಯೆ ಕಡಿಮೆಯಿರಬಹುದು. ಚಿಕ್ಕಬಳ್ಳಾಪುರ ಒಂದರಿಂದಲೇ ಎರಡು ಜಿಲ್ಲೆಯನ್ನು ಅಳೆಯಲಾಗದು. ಇಲ್ಲಿನ ಅಸಮತೋಲನ ಮೀರಿ ಅನಿಲ್‌ ಕುಮಾರ್‌ ಅವರನ್ನು ಮುನ್ನಡೆಸುವ ಶಕ್ತಿ ಕಾಂಗ್ರೆಸ್‌ ಪಕ್ಷಕ್ಕಿದೆ. ಬಿಸಿಯೇರುವ ಮುನ್ನ ಪಕ್ಷದ ಮುಖಂಡರು ನಿಮ್ಮ ನಿಮ್ಮ ಮತದಾರರನ್ನು ಕೈಯಲ್ಲಿಟ್ಟು ಕೊಳ್ಳಿ. ಫ್ಲೆಕ್ಸ್‌ ಹಾಕಿಸುವುದು, ನಮ್ಮ ಬೆನ್ನು ನಾವೇ ತಟ್ಟುಕೊಳ್ಳುವ ಕೆಲಸ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡೋಣ. ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಮಾಜಿ ಸಚಿವ ಶಿವಶಂಕರ್‌ ರೆಡ್ಡಿ ಮಾತನಾಡಿ ಅವಳಿ ಜಿಲ್ಲೆಯ 11 ತಾಲೂಕಿನಲ್ಲಿ ನಮ್ಮ ಪಕ್ಷದ 7 ಮಂದಿ ಶಾಸಕರಿದ್ದಾರೆ. ಚಿಂತಾಮಣಿ ಸುಧಾಕರ್‌, ಮುಳಬಾಗಿಲು ಕೊತ್ತೂರು ಮಂಜುನಾಥ್‌, ಕೋಲಾರ ಶ್ರೀನಿವಾಸ ಗೌಡ ನಮ್ಮ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತವಾಗಿದೆ. ಕೊರೊನಾ ಮೂರನೇ ಅಲೆಯಿಂದ ಯಾರಿಗೆ ಲಾಭವಾಗುತ್ತೋ ಇಲ್ಲವೋ ಗೊತ್ತಿಲ್ಲ. ಕಳೆದೆರಡು ಅವಧಿಯಲ್ಲಿ ಇದರ ಹೆಸರಿನಲ್ಲಿ ಲೂಟಿ ಮಾಡಿದವರಿಗಂತೂ ಖಚಿತವಾಗಿ ಲಾಭವಾಗಲಿದೆ ಎಂದು ಸುಧಾಕರ್‌ ಅವರ ಹೆಸರು ಹೇಳದೆ ಕಾಲೆಳೆದರು. ವಿಧಾನ ಪರಿಷತ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಂ. ಎಲ್‌. ಅನಿಲ್‌ ಕುಮಾರ್‌ ಮಾತನಾಡಿ ನಾನು ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದರೂ ಈ ಬಾರಿ ನನಗೆ ಅವಕಾಶ ನೀಡಿದ ಪಕ್ಷಕ್ಕೆ ಧನ್ಯವಾದ ಹೇಳುತ್ತೇನೆ. ಅವಳಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪ್ರಚಾರ ಮಾಡಿದ್ದು ನನಗೆ ಗೆಲ್ಲುವ ವಿಶ್ವಾಸವಿದೆ ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹ್ಮದ್‌, ಮಾಜಿ ಶಾಸಕರಾದ ಎಸ್‌. ಎಂ. ಮುನಿಯಪ್ಪ, ಸಂಪಂಗಿ, ಕೆಪಿಸಿಸಿ ಸದಸ್ಯರಾದ ವಿನಯ್‌ ಶ್ಯಾಮ್‌,ಮುನೇಗೌಡ, ಪ್ರಕಾಶ್‌, ಜಯರಾಮ್‌, ರಾಮಕೃಷ್ಣಪ್ಪ, ಕೃಷ್ಣಪ್ಪ, ಅಶ್ವತ್ಥಪ್ಪ, ನರೇಂದ್ರ, ನಾಗರಾಜ್‌, ಹನುಮಂತಪ್ಪ, ಆವುಲರೆಡ್ಡಿ, ಮೋಹನ್‌ ರೆಡ್ಡಿ, ಮಮತಾ ಮೂರ್ತಿ ಮತ್ತಿತರರು ಇದ್ದರು.


from India & World News in Kannada | VK Polls https://ift.tt/3llNzPw

ದಕ್ಷಿಣ ಕನ್ನಡದ ಏರ್‌ಪೋರ್ಟ್‌, ಬಂದರಿನಲ್ಲಿ ಓಮಿಕ್ರಾನ್ ಹೈ ಅಲರ್ಟ್..!

: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹಾಗೂ ಇತ್ತೀಚೆಗೆ ಹೊರ ರಾಷ್ಟ್ರಗಳಲ್ಲಿ ವರದಿಯಾಗುತ್ತಿರುವ ಅದರ ರೂಪಾಂತರಿ ಓಮಿಕ್ರಾನ್‌ ತಡೆಗಟ್ಟುವಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವ ಮಂಗಳೂರು ಟ್ರಸ್ವ್‌ನ ಪಾತ್ರ ಅತಿ ಮುಖ್ಯವಾಗಿದ್ದು, ಕೋವಿಡ್‌ ಸೋಂಕಿತರ ಪತ್ತೆಗಾಗಿ ಅತ್ಯಂತ ಎಚ್ಚರಿಕೆಯ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಸಂಬಂಧಿಸಿದವರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಅಂತಾರಾಷ್ಟ್ರೀಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರ ತಪಾಸಣೆ ಹಾಗೂ ನಿಗಾ ವಹಿಸುವ ಕುರಿತು ಹಮ್ಮಿಕೊಳ್ಳಲಾಗಿದ್ದ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಮಾನ ನಿಲ್ದಾಣಕ್ಕೆ ಬರುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ವರದಿ ಹೊಂದಿರಬೇಕು. ಕೋವಿಡ್‌ ತಪಾಸಣೆ ವೇಳೆ ಪಾಸಿಟಿವ್‌ ಕಂಡುಬಂದಲ್ಲಿ ಕೂಡಲೇ ಆಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು. ಸೋಂಕಿತರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಜವಾಬ್ದಾರಿಯನ್ನು ಏರ್‌ಪೋರ್ಟ್‌ ಮ್ಯಾನೇಜರ್‌ಗೆ ನೀಡಲಾಗಿದೆ ಎಂದು ಡಿಸಿ ಹೇಳಿದರು. ನವ ಮಂಗಳೂರು ಬಂದರು ಟ್ರಸ್ಟ್‌ಗೆ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಹಡಗುಗಳಲ್ಲಿ ಆಗಮಿಸುವ ಪ್ರಯಾಣಿಕರನ್ನು ಕೋವಿಡ್‌ ತಪಾಸಣೆಗೆ ಒಳಪಡಿಸಬೇಕು. ಎಷ್ಟು ಪ್ರಯಾಣಿಕರು, ಎಷ್ಟು ಹಡಗುಗಳು ಇಲ್ಲಿಗೆ ಬಂದವು. ಆ ವಿವರಗಳನ್ನು ಪ್ರತಿ ವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ಎನ್‌ಎಂಪಿಟಿ ಮ್ಯಾನೇಜರ್‌ಗೆ ತಿಳಿಸಿದರು. ಎಲ್ಲ ಸರಕಾರಿ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್‌ ವ್ಯಾಕ್ಸಿನ್‌ನ ಮೊದಲ ಹಾಗೂ ಎರಡನೇ ಡೋಸ್‌ ಪಡೆದುಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಕೂಡಲೇ ಮಾಹಿತಿ ಒದಗಿಸಬೇಕು. ಸರಕಾರಿ ಕಚೇರಿಗೆ ಆಗಮಿಸುವ ಸಾರ್ವಜನಿಕರು ಕೂಡ ಕೋವಿಡ್‌ ವ್ಯಾಕ್ಸಿನ್‌ ಪಡೆದಿರಬೇಕು. ಪಡೆಯದವರ ಅನುಕೂಲಕ್ಕಾಗಿ ಸಮೀಪದಲ್ಲಿಯೇ ವ್ಯಾಕ್ಸಿನ್‌ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಮಂಗಳೂರು ಮಹಾನಗರ ಪಾಲಿಕೆಗೆ ಆಗಮಿಸುವ ಸಾರ್ವಜನಿಕರು ಕೋವಿಡ್‌ನ ಮೊದಲ ಹಾಗೂ ಎರಡನೇ ಡೋಸ್‌ ಪಡೆದಿರುವ ಬಗ್ಗೆ ಮಾಹಿತಿ ನೀಡಬೇಕು. ಆರ್‌ಟಿಒ ಕಚೇರಿಗೆ ಸಾಕಷ್ಟು ಜನರು ಪ್ರತಿನಿತ್ಯ ಬರುತ್ತಾರೆ. ಅವರು ಕೂಡ ವ್ಯಾಕ್ಸಿನ್‌ ಪಡೆದಿರುವ ಮಾಹಿತಿ ನೀಡಬೇಕು. ಕೇರಳ ಹಾಗೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ವಾಹನಗಳನ್ನು ತಪಾಸಣೆ ಮಾಡಬೇಕು. ವಾಹನಗಳಲ್ಲಿರುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ವರದಿ ಇಟ್ಟುಕೊಂಡಿರಬೇಕು. ಪರಿಶೀಲನೆ ಸಂದರ್ಭದಲ್ಲಿ ಈ ವರದಿ ನೀಡದಿದ್ದರೆ ಅಂತಾರಾಜ್ಯ ಸಾರಿಗೆಯನ್ನು ನಿರ್ಬಂಧಿಸುವ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವವರು ಆರ್‌ಟಿಪಿಸಿಆರ್‌ ರಿಪೋರ್ಟ್‌ ಹೊಂದಿರಬೇಕು. ಕೋವಿಡ್‌ನ ಎರಡು ಡೋಸ್‌ ಲಸಿಕೆ ಪಡೆದಿರಬೇಕು. ಪ್ರತಿನಿತ್ಯ ಕೇರಳದಿಂದ ಇಲ್ಲಿಗೆ ಆಗಮಿಸುವವರು 14 ದಿನಗಳಿಗೊಮ್ಮೆ ಕೋವಿಡ್‌ ತಪಾಸಣೆ ಮಾಡಿಸಿಕೊಂಡು, ವರದಿ ಇಟ್ಟುಕೊಂಡಿರಬೇಕು. ತಪಾಸಣೆ ವೇಳೆ ಅದನ್ನು ಹಾಜರುಪಡಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್‌, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್‌, ಡಿಸಿಪಿ ಹರಿರಾಮ್ ಶಂಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಸಹಾಯಕ ಆಯುಕ್ತ ಮದನ್‌ ಮೋಹನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್‌ ಕುಮಾರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್‌. ಎಂ. ವರ್ಣೇಕರ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3lIeBRB

20 ಜಿಲ್ಲೆಗಳಲ್ಲಿ ಒಂದಂಕಿ ದಾಟದ ಹೊಸ ಪ್ರಕರಣ: 8 ಸೋಂಕಿತರು ಮೃತ!

ಬೆಂಗಳೂರು: ರಾಜ್ಯಾದ್ಯಂತ ಮಂಗಳವಾರ 291 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ 8 ಮಂದಿ ಮೃತಪಟ್ಟಿದ್ದಾರೆ.ಒಟ್ಟು 7 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದ್ದು, 20 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಒಂದಂಕಿಯನ್ನೂ ದಾಟಿಲ್ಲ. ಸೋಂಕಿನಿಂದ ಮುಕ್ತರಾಗಿ ಒಂದೇ ದಿವಸ 745 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದುವರೆಗೆ ಬಿಡಗಡೆಯಾದವರ ಸಂಖ್ಯೆ 29,51,492ಕ್ಕೇರಿದೆ. ಪ್ರಸ್ತುತ, 6,416 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 29,96,148 ದಾಟಿದೆ. ಇದುವರೆಗೆ ಒಟ್ಟು 38,211 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ 185 ಹೊಸ ಪ್ರಕರಣಗಳು ಕಂಡು ಬಂದಿದ್ದು, 6 ಮಂದಿ ಬಲಿಯಾಗಿದ್ದಾರೆ. ಮೈಸೂರಿನಲ್ಲಿ 28, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 19 ಪ್ರಕರಣಗಳು ವರದಿಯಾಗಿವೆ. ಬೀದರ್‌ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲಾವಾರು ಪ್ರಕರಣಗಳ ಸಂಖ್ಯೆ ಬಾಗಲಕೋಟೆ 01, ಬಳ್ಳಾರಿ 01, ಬೆಳಗಾವಿ 05, ಬೆಂಗಳೂರು ಗ್ರಾಮಾಂತರ 02, ಬೆಂಗಳೂರು ನಗರ 185, ಬೀದರ್ 01, ಚಾಮರಾಜನಗರ 03 , ಚಿಕ್ಕಬಳ್ಳಾಪುರ 00, ಚಿಕ್ಕಮಗಳೂರು 00, ಚಿತ್ರದುರ್ಗ 02, ದಕ್ಷಿಣಕನ್ನಡ 19, ದಾವಣಗೆರೆ 01, ಧಾರವಾಡ 09, ಗದಗ 01, ಹಾಸನ 03, ಹಾವೇರಿ 00, ಕಲಬುರಗಿ 01, ಕೊಡಗು 04, ಕೋಲಾರ 01, ಕೊಪ್ಪಳ 02, ಮಂಡ್ಯ 01, ಮೈಸೂರು 28, ರಾಯಚೂರು 00, ರಾಮನಗರ 00, ಶಿವಮೊಗ್ಗ 08, ತುಮಕೂರು 05, ಉಡುಪಿ 07, ಉತ್ತರಕನ್ನಡ 01, ವಿಜಯಪುರ 00, ಯಾದಗಿರಿ 00,


from India & World News in Kannada | VK Polls https://ift.tt/3D6CNmb

ಕೊರೊನಾ ಲಸಿಕೆ ಪಡೆದರಷ್ಟೇ ಫ್ರೀ ಚಿಕಿತ್ಸೆ..? ವ್ಯಾಕ್ಸಿನ್‌ ಗುರಿ ಮುಟ್ಟಿಸಲು ಸರ್ಕಾರದ ಪ್ಲಾನ್..!

: ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌ ಹೊಸ ವೈರಸ್‌ ಓಮಿಕ್ರಾನ್‌ ನಿಯಂತ್ರಿಸಲು ರಾಜ್ಯ ಸರಕಾರ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ವಿದೇಶಗಳಿಂದ ಬಂದವರು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಿಕೊಳ್ಳಬೇಕು. ನೆಗೆಟಿವ್‌ ವರದಿ ಬಂದರೂ ಏಳು ದಿನ ಮನೆಯಲ್ಲೇ ಕ್ವಾರೈಂಟನ್‌ ಆಗಬೇಕು ಎಂದು ಸೂಚಿಸಿದೆ. ಈ ನಡುವೆ, ಎರಡನೇ ಪಡೆಯದವರು ಕೊರೊನಾ ಪೀಡಿತರಾದರೆ ಅವರ ಚಿಕಿತ್ಸಾ ವೆಚ್ಚ ಭರಿಸದಿರುವ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. 'ಎಲ್ಲರೂ ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆಯಬೇಕು ಎಂದು ಮನವೊಲಿಸುತ್ತಿದ್ದರೂ ಲಕ್ಷಾಂತರ ಮಂದಿ ನಿರಾಸಕ್ತಿ ತೋರಿಸುತ್ತಿದ್ದಾರೆ. ಎರಡನೇ ಡೋಸ್‌ ಪಡೆಯದವರಿಗೆ ಮಾಲ್, ಥಿಯೇಟರ್‌ಗಳಿಗೆ ಪ್ರವೇಶ ನೀಡಬಾರದು ಹಾಗೂ ಲಸಿಕೆ ಪಡೆಯದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ನೀಡಬಾರದು ಎಂಬ ಸಲಹೆ ಬಂದಿದೆ. ಈ ವಿಚಾರ ಕುರಿತು ಮುಖ್ಯಮಂತ್ರಿ ಜತೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಇದಕ್ಕೆ ಅವಕಾಶ ನೀಡದೆ ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆಯಬೇಕು' ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ಮನವಿ ಮಾಡಿದರು. ಲಸಿಕೆ ಪಡೆಯದವರಿಗೆ ಸರಕಾರದ ಸವಲತ್ತು ನೀಡಬಾರದು ಎಂದು ತಾಂತ್ರಿಕ ಸಲಹಾ ಸಮಿತಿಯೂ ಸಲಹೆ ನೀಡಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಜತೆ ಮಂಗಳವಾರ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು 'ವಿದೇಶಗಳಿಂದ ರಾಜ್ಯಕ್ಕೆ ನಿತ್ಯ 2500ಕ್ಕೂ ಹೆಚ್ಚಿನ ಪ್ರಯಾಣಿಕರು ಬರುತ್ತಿದ್ದಾರೆ. ಎಲ್ಲರಿಗೂ ಕಡ್ಡಾಯವಾಗಿ ಕೋವಿಡ್‌ ಟೆಸ್ಟ್‌ ಮಾಡಿಸಲಾಗುವುದು' ಎಂದರು. ಚಿಕಿತ್ಸೆಗೆ ಮಾರ್ಗಸೂಚಿ ಓಮಿಕ್ರಾನ್‌ ವೈರಸ್‌ ಬಂದರೆ ಯಾವ ರೀತಿ ಎದುರಿಸಬೇಕು? ಹೇಗೆ ನಿಯಂತ್ರಿಸಬೇಕು? ಆಸ್ಪತ್ರೆ, ಮೆಡಿಕಲ್‌ ಕಾಲೇಜುಗಳಲ್ಲಿ ಸಿದ್ಧತೆಗಳು ಹೇಗಿದೆ ಎಂದು ಸಚಿವರ ಸಭೆಯಲ್ಲಿ ಚರ್ಚಿಸಲಾಗಿದೆ. ಕ್ವಾರಂಟೈನ್‌ ಆ್ಯಪ್‌, ಟೆಲಿ ಮೆಡಿಸಿನ್‌ ಮೊದಲಾದ ತಂತ್ರಜ್ಞಾನ ಬಳಸಿಕೊಳ್ಳಲು ಚರ್ಚೆಯಾಗಿದೆ. ಜೊತೆಗೆ ಚಿಕಿತ್ಸೆಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಲು 10 ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ವೈರಾಣು ವಿಭಾಗದ ಡಾ. ರವಿ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಈ ಸಮಿತಿಯು ಯಾವ ರೀತಿ ಚಿಕಿತ್ಸೆ ನೀಡಬೇಕೆಂದು ನಿಯಮ ರೂಪಿಸಲಿದೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಏನು? * ಲಸಿಕೆ ಪಡೆಯದವರಿಗೆ ಸರಕಾರದ ಸವಲತ್ತು ನೀಡಬಾರದು. * ಲಸಿಕೆ ಹಾಕಿಸಿಕೊಳ್ಳದವರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಬೇಕು. * ಶಾಲಾ ಮಕ್ಕಳು, ಶಿಕ್ಷಕರಿಗೂ ಶೇ. 5ರಷ್ಟು ಟೆಸ್ಟಿಂಗ್‌ ಮಾಡಿಸಬೇಕು. * ಲಾಕ್‌ಡೌನ್‌ ಮಾಡದೆಯೇ ವೈರಸ್‌ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು. * ಹೊಸ ವೈರಸ್‌ ಸೋಂಕಿತರ ಚಿಕಿತ್ಸೆಗೆ ಬೇಕಾದ ಆರೋಗ್ಯ ಸೌಲಭ್ಯ ಸಿದ್ಧಪಡಿಸಿಕೊಳ್ಳಬೇಕು. 'ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್‌ ನೀಡುವ ಕುರಿತು ಚಿಂತನೆ ನಡೆದಿದೆ. ಕೇಂದ್ರ ಸರಕಾರದಿಂದ ಸೂಚನೆ ಬಂದರೆ ಕೋವಿಡ್‌ ವಾರಿಯರ್‌ಗಳ ಜತೆಗೆ ಜನ ಸಾಮಾನ್ಯರಿಗೂ ಇದನ್ನು ನೀಡುವ ಕುರಿತು ನಿರ್ಧರಿಸಲಾಗುವುದು' ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, 'ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಜ್ಜಾಗಿದ್ದೇವೆ. ಲಾಕ್‌ಡೌನ್‌ ಮಾಡುವುದಿಲ್ಲ' ಎಂದಿದ್ದಾರೆ.


from India & World News in Kannada | VK Polls https://ift.tt/3xCagUy

ಕೊರೊನಾ ಪಾಸಿಟಿವ್‌ ಬಂದರೆ ಜಿನೋಮ್‌ ಸೀಕ್ವೆನ್ಸಿಂಗ್‌: ರಾಜ್ಯಗಳಿಗೆ ಕೇಂದ್ರದ ಸೂಚನೆ

: ವಿದೇಶದಿಂದ ಭಾರತಕ್ಕೆ ಬಂದ ಪ್ರಯಾಣಿಕರಿಗೆ ಕೊರೊನಾ ದೃಢಪಟ್ಟರೆ ಅವರ ಜೈವಿಕ ಮಾದರಿಯನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು ಮತ್ತು ವರದಿ ಬರುವವರೆಗೆ ಮನೆಯಲ್ಲಿಯೇ ಪ್ರತ್ಯೇಕ ವಾಸದಲ್ಲಿಡಬೇಕು ಎಂದು ಕೇಂದ್ರ ಸರಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಮಂಗಳವಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜತೆ ಸಭೆ ನಡೆಸಿದರು. 'ಓಮ್ರಿಕಾನ್‌ ಭೀತಿ ಇರುವುದರಿಂದ ಆಯಾ ರಾಜ್ಯಗಳ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಪ್ರಯಾಣಿಕರು ಬಂದಿಳಿದ ತಕ್ಷಣ ಅವರ ತಪಾಸಣೆ ಮಾಡಿಸಬೇಕು. ಹಾಗೊಂದು ವೇಳೆ ಅವರ ವರದಿ ಪಾಸಿಟಿವ್‌ ಬಂದರೆ, ಮಾದರಿಯನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗಾಗಿ ಇಂಡಿಯನ್‌ ಸಾರ್ಸ್‌-ಸಿಒವಿ-2 ಜಿನೋಮಿಕ್ಸ್‌ ಕಾನ್ಸರ್ಟಿಯಂ ಲ್ಯಾಬ್‌ಗಳಿಗೆ ಕಳುಹಿಸಬೇಕು. ಅಲ್ಲದೆ, ವರದಿ ಬರುವವರೆಗೆ ಅವರನ್ನು ಮನೆಯಲ್ಲಿಯೇ ಪ್ರತ್ಯೇಕ ವಾಸ (ಹೋಮ್‌ ಐಸೋಲೇಷನ್‌)ದಲ್ಲಿಇರಿಸಿ ಚಿಕಿತ್ಸೆ ಕುರಿತು ನಿಗಾ ವಹಿಸಬೇಕು' ಎಂದು ಸೂಚನೆ ನೀಡಿದರು. 'ರಾಜ್ಯಗಳು ವಿಮಾನ ನಿಲ್ದಾಣ ಮಾತ್ರವಲ್ಲದೇ ಇತರೆಡೆಗಳಲ್ಲಿಯೂ ತಪಾಸಣೆ ಹೆಚ್ಚಿಸಬೇಕು. ಜಿಲ್ಲೆಗಳಲ್ಲಿ ಪಾಸಿಟಿವ್‌ ಪ್ರಮಾಣದ ಮೇಲೆ ನಿಗಾ ಇಡಬೇಕು. ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಜತೆಗೆ ನಿಯಂತ್ರಣಕ್ಕೆ ಸಕಲ ಕ್ರಮ ತೆಗೆದುಕೊಳ್ಳಬೇಕು' ಎಂದು ಸೂಚಿಸಿದರು. ಮನೆ ಮನೆಗೆ ಲಸಿಕೆ ಅವಧಿ ವಿಸ್ತರಣೆ: ಓಮಿಕ್ರಾನ್‌ ವೈರಾಣು ವಿದೇಶಗಳಲ್ಲಿ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು 'ಮನೆ ಮನೆಗೆ ಲಸಿಕೆ' (ಹರ್‌ ಘರ್‌ ದಸ್ತಕ್‌) ಅಭಿಯಾನವನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸಿದೆ. ದೇಶದ ಪ್ರತಿಯೊಬ್ಬರ ಅರ್ಹ ಫಲಾನುಭವಿಗಳು ಕೊರೊನಾ ನಿರೋಧಕ ಲಸಿಕೆ ಪಡೆಯಬೇಕು ಎಂಬ ದಿಸೆಯಲ್ಲಿ ನವೆಂಬರ್ 3 ರಿಂದ ನವೆಂಬರ್ 30ರ ವರೆಗೆ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಅಭಿಯಾನ ಕೈಗೊಂಡಿತ್ತು. ಇನ್ನೂ ಹೆಚ್ಚಿನ ಜನ ಎರಡನೇ ಡೋಸ್‌ ಪಡೆಯದಿರುವುದು ಹಾಗೂ ಓಮಿಕ್ರಾನ್‌ ರೂಪಾಂತರಿಯು ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ಯೇ ಎಚ್ಚರಿಸಿರುವುದರಿಂದ ಅಭಿಯಾನದ ಅವಧಿ ವಿಸ್ತರಿಸಲಾಗಿದೆ. ಡಿ.31ರವರೆಗೆ ಮಾರ್ಗಸೂಚಿ: ವೈರಾಣುವಿನ ರೂಪಾಂತರಿಗಳು ಹಲವು ರಾಷ್ಟ್ರಗಳಿಗೆ ತಲೆ ನೋವಾಗಿರುವ ಬೆನ್ನಲ್ಲೇ ಕೇಂದ್ರ ಸರಕಾರವು ಕೊರೊನಾ ಮಾರ್ಗಸೂಚಿಗಳನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ. ಕಂಟೈನ್‌ಮೆಂಟ್‌ ವಲಯಗಳಲ್ಲಿ ಕಠಿಣ ಮಾರ್ಗಸೂಚಿಗಳ ಪಾಲನೆ ಜತೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ಜನ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್‌ ಧರಿಸುವುದರ ಕುರಿತು ಕಟ್ಟೆಚ್ಚರ ಇಡಬೇಕು. ಲಸಿಕೆ ವಿತರಣೆಗೆ ಮತ್ತಷ್ಟು ವೇಗ ನೀಡಬೇಕು ಎಂದು ಸೂಚಿಸಲಾಗಿದೆ. ತಪಾಸಣೆಯಲ್ಲಿ ಓಮಿಕ್ರಾನ್‌ ಪತ್ತೆ ಸಾಧ್ಯ ಆರ್‌ಟಿ-ಪಿಸಿಆರ್‌, ಆ್ಯಂಟಿಜನ್‌ ಟೆಸ್ಟ್‌ (ಆರ್‌ಎಟಿ)ನಲ್ಲಿ ಓಮಿಕ್ರಾನ್‌ ಅನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಭಾರತದಲ್ಲಿರುವ ಕೊರೊನಾ ತಪಾಸಣೆ ವಿಧಾನದಿಂದ ಓಮಿಕ್ರಾನ್‌ ಅನ್ನು ಪತ್ತೆ ಹಚ್ಚಬಹುದಾಗಿದೆ. ಅದರಲ್ಲೂ, ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಅನ್ನೇ ಮಾಡುತ್ತಿರುವುದರಿಂದ ಸೋಂಕನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಬಹುದಾಗಿದೆ ಎಂದು ಮಾಹಿತಿ ನೀಡಿದೆ. ಓಮಿಕ್ರಾನ್‌ ಎದುರಿಸಲು ರಾಜ್ಯಗಳಲ್ಲಿಸಿದ್ಧತೆ ಹೇಗಿದೆ? ಕರ್ನಾಟಕ: ವಿದೇಶದಿಂದ ಮಾತ್ರವಲ್ಲ, ಕೇರಳ ಹಾಗೂ ಮಹಾರಾಷ್ಟ್ರಗಳಿಂದ ಕರ್ನಾಟಕಕ್ಕೆ ಬರುವವರಿಗೂ ಕೊರೊನಾ ತಪಾಸಣೆ ಕಡ್ಡಾಯ. ನಿತ್ಯ 45 ಲಕ್ಷ ಜನರಿಗೆ ಲಸಿಕೆ ನೀಡುವಂತೆ ವೈದ್ಯಕೀಯ ಸಿಬ್ಬಂದಿಗೆ ಆದೇಶ. ಈಗಾಗಲೇ ವಿದೇಶದಿಂದ ರಾಜ್ಯಕ್ಕೆ ಬಂದ 600 ಪ್ರಯಾಣಿಕರ ಮೇಲೆ ನಿಗಾ. ದಿಲ್ಲಿ: ಕೃತಕ ಆಮ್ಲಜನಕ ಸೌಲಭ್ಯ ಇರುವ 30,000 ಹಾಸಿಗೆ ಹಾಗೂ 10 ಸಾವಿರ ಐಸಿಯು ಹಾಸಿಗೆಗಳಿಗೆ ವ್ಯವಸ್ಥೆ. ವಿದೇಶದಿಂದ ಬಂದವರಿಗೆ ಆರ್‌ಟಿ-ಪಿಸಿಆರ್‌ ತಪಾಸಣೆ ಕಡ್ಡಾಯ. ಮಹಾರಾಷ್ಟ್ರ: ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಕಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚನೆ. ಲಸಿಕೆ ಅಭಿಯಾನಕ್ಕೂ ವೇಗ ನೀಡುವಂತೆ ಆದೇಶ. ಪಂಜಾಬ್‌: ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಸೇರಿ ಹಲವು ರಾಷ್ಟ್ರಗಳಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇಡಲು ಅಧಿಕಾರಿಗಳಿಗೆ ಆದೇಶ. ಕೇಂದ್ರ ಸರಕಾರದ ಮಾರ್ಗಸೂಚಿ ಪಾಲನೆ, ಆಸ್ಪತ್ರೆಗಳಲ್ಲಿ ಹಾಸಿಗೆ, ಚಿಕಿತ್ಸೆಗೆ ಸಿದ್ಧತೆ ಮಾಡುವಂತೆ ನಿರ್ದೇಶನ. ಜಮ್ಮು-ಕಾಶ್ಮೀರ: ಸೋಂಕಿನ ತಪಾಸಣೆಗೆ ವೇಗ ನೀಡುವ ಜತೆಗೆ ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಲು ಆದೇಶ. ವಿದೇಶಿ ಪ್ರಯಾಣಿಕರ ತಪಾಸಣೆ ಜತೆಗೆ ಯಾವುದೇ ಪರಿಸ್ಥಿತಿಯಲ್ಲೂ ವೈದ್ಯಕೀಯ ಸೌಲಭ್ಯ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ. ಉತ್ತರ ಪ್ರದೇಶ: ವಿಮಾನ ನಿಲ್ದಾಣದಲ್ಲಿ ಆರ್‌ಟಿ - ಪಿಸಿಆರ್‌ ತಪಾಸಣೆ, ಕೊರೊನಾ ನೆಗೆಟಿವ್‌ ವರದಿ ಕಡ್ಡಾಯ. ಲಖನೌ, ಕಾನ್ಪುರ, ಪ್ರಯಾಗರಾಜ್‌, ವಾರಾಣಸಿ ಹಾಗೂ ಆಗ್ರಾಕ್ಕೆ ಬರುವ ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚಿನ ಗಮನ ಇರಿಸಲು ಆದೇಶ. ಉತ್ತರಾಖಂಡ: ದಕ್ಷಿಣ ಆಫ್ರಿಕಾ ಸೇರಿ ಹಲವು ದೇಶಗಳಿಂದ ಬಂದ 14 ಪ್ರಯಾಣಿಕರನ್ನು ಹೋಮ್‌ ಐಸೋಲೇಷನ್‌ನಲ್ಲಿಡಲು ಕ್ರಮ. ಇವರಲ್ಲಿ ಆರು ಜನ ದಕ್ಷಿಣ ಆಫ್ರಿಕಾದಿಂದ ಆಗಮನ. ಹಾಗಾಗಿ, ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ನಿಗಾ ಇಡಲು ಕ್ರಮ. 2ನೇ ಅಲೆಯಲ್ಲಿ ಕೋವಿಶೀಲ್ಡ್‌ ಶೇ.63ರಷ್ಟು ಪರಿಣಾಮಕಾರಿ ಕೊರೊನಾ ಎರಡನೇ ಅಲೆಯ ವೇಳೆ ಕೋವಿಶೀಲ್ಡ್‌ ಲಸಿಕೆಯ ಎರಡೂ ಡೋಸ್‌ ಪಡೆದವರಿಗೆ ಲಸಿಕೆಯು ಶೇ.63ರಷ್ಟು ಪರಿಣಾಮಕಾರಿಯಾಗಿತ್ತು ಎಂದು ಅಧ್ಯಯನ ವರದಿಯೊಂದರಿಂದ ತಿಳಿದುಬಂದಿದೆ. 'ಕೊರೊನಾ ದೃಢಪಟ್ಟ 2,379 ಜನ ಹಾಗೂ ಆರೋಗ್ಯವಾಗಿದ್ದ 1,981 ಜನರನ್ನು ಅಧ್ಯಯನ ಮಾಡಲಾಗಿದ್ದು, ಎರಡೂ ಡೋಸ್‌ ಪಡೆದವರಿಗೆ ಶೇ. 63ರಷ್ಟು ಪರಿಣಾಮಕಾರಿ ಎನಿಸಿದೆ. ಹಾಗೆಯೇ, ಸೋಂಕಿತರು ಗಂಭೀರವಾಗಿ ಅನಾರೋಗ್ಯಕ್ಕೀಡಾಗುವುದರ ವಿರುದ್ಧ ಶೇ. 81ರಷ್ಟು ಪರಿಣಾಮಕಾರಿಯಾಗಿತ್ತು' ಎಂದು 'ದಿ ಲಾನ್ಸೆಟ್‌ ಇನ್‌ಫೆಕ್ಟಿಯಸ್‌ ಡಿಸೀಸಸ್‌' ಜರ್ನಲ್‌ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಓಮಿಕ್ರಾನ್‌ ಮೊದಲು ನೆದರ್‌ಲೆಂಡ್‌ನಲ್ಲಿ ಪತ್ತೆ ದಕ್ಷಿಣ ಆಫ್ರಿಕಾಕ್ಕಿಂತ ಮೊದಲೇ ನೆದರ್‌ಲೆಂಡ್‌ನಲ್ಲಿ ಓಮಿಕ್ರಾನ್‌ ರೂಪಾಂತರಿ ಪತ್ತೆಯಾಗಿದೆ ಎಂದು ಡಚ್‌ ಆರೋಗ್ಯಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ನವೆಂಬರ್ 19 ರಿಂದ 23 ರ ಅವಧಿಯಲ್ಲಿ ನೆದರ್‌ಲೆಂಡ್‌ನಲ್ಲಿ ಮಾಡಿದ ತಪಾಸಣೆ ವೇಳೆ ಇಬ್ಬರಿಗೆ ಓಮಿಕ್ರಾನ್‌ ರೂಪಾಂತರಿ ತಗುಲಿರುವುದು ದೃಢಪಟ್ಟಿದೆ ಎಂದು ಡಚ್‌ನ ಆರ್‌ಐವಿಎಂ ನ್ಯಾಷನಲ್‌ ಹೆಲ್ತ್‌ ಆ್ಯಂಡ್‌ ಎನ್ವಿರಾನ್‌ಮೆಂಟ್‌ ಇನ್ಸ್‌ಟಿಟ್ಯೂಟ್‌ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ದಕ್ಷಿಣ ಆಫ್ರಿಕಾದಿಂದ ಆ್ಯಮ್‌ಸ್ಟರ್‌ಡ್ಯಾಂಗೆ ಎರಡು ವಿಮಾನಗಳಲ್ಲಿ ಬಂದ ಪ್ರಯಾಣಿಕರಲ್ಲಿ 14 ಜನರಿಗೆ ಓಮಿಕ್ರಾನ್‌ ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್‌ ಪತ್ತೆಯಾಗಿದ್ದು, ಇಲ್ಲಿಯೇ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ನವೆಂಬರ್ 24ರಂದು ವಿಶ್ವಸಂಸ್ಥೆಗೆ ದಕ್ಷಿಣ ಆಫ್ರಿಕಾ ತಿಳಿಸಿತ್ತು. 'ದೇಶದಲ್ಲಿ ಇದುವರೆಗೆ ಓಮಿಕ್ರಾನ್‌ನ ಒಂದು ಪ್ರಕರಣವೂ ದಾಖಲಾಗಿಲ್ಲ. ಆದರೂ, ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ, ಅವರಿಗೆ ಕೊರೊನಾ ದೃಢಪಟ್ಟರೆ ಜಿನೋಮ್‌ ಸೀಕ್ವೆನ್ಸಿಂಗ್‌ ಸೇರಿ ಹಲವು ರೀತಿಯಲ್ಲಿ ನಿಗಾ ಇಡಲು ಸೂಚಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ದೇಶ ಶಕ್ತವಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ಹೇಳಿದ್ದಾರೆ.


from India & World News in Kannada | VK Polls https://ift.tt/3d5ZBrK

Omicron: ಡೆಲ್ಟಾ ತಳಿಯಲ್ಲಿಯೇ ಕ್ಲಸ್ಟರ್‌ಗಳಾಗುತ್ತಿವೆ: ಓಮಿಕ್ರಾನ್ ಆತಂಕದ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದಲ್ಲಿ ಆತಂಕದ ಹಿನ್ನೆಲೆಯಲ್ಲಿ ಸೋಂಕಿತರ ಟ್ರ್ಯಾಕಿಂಗ್, ಟೆಸ್ಟಿಂಗ್ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಸಿಎಂ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಹೊಸ ತಳಿ ಓಮ್ರಿಕಾನ್ ಅಂತಾರಾಷ್ಟ್ರೀಯ, ರಾಷ್ಟ್ರ ಹಾಗೂ ರಾಜ್ಯದಲ್ಲಿ ಏನು ಪರಿಣಾಮ ಆಗಲಿದೆ ಎಂದು ಗಮನಿಸುತ್ತಿದ್ದೇವೆ. ಈಗಿರುವ ಡೆಲ್ಟಾ ತಳಿಯಲ್ಲಿಯೇ ಅಲ್ಲಲ್ಲಿ ಕ್ಲಸ್ಟರ್ ಆಗುತ್ತಿರುವುದನ್ನು ನಾವು ನಿಭಾಯಿಸಬೇಕಿದೆ. ಕ್ಲಸ್ಟರ್ ಆಗುತ್ತಿರುವ ಕಡೆಗಳಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು. ವಿದೇಶದಿಂದ ಬಂದ ಪ್ರಯಾಣಿಕರ ಬಗ್ಗೆ ಹೆಚ್ಚಿನ ನಿಗಾ ಇಡಲಾಗುತ್ತದೆ. ಟ್ರ್ಯಾಕಿಂಗ್, ಟ್ರೇಸಿಂಗ್ ಹಾಗೂ ಟೆಸ್ಟಿಂಗ್ ಕಡೆ ಗಮನ ಇಡಲಾಗಿದೆ. ಎಸ್‌ಡಿಎಂನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಜನರನ್ನು ಟೆಸ್ಟ್ ಮಾಡಲಾಗಿದೆ. ಕ್ಲಸ್ಟರ್ ವಿಚಾರವಾಗಿ ವಿಶೇಷ ಗಮನ ಹರಿಸಲಾಗಿದ್ದು, ಅದಕ್ಕಾಗಿ ಮಾರ್ಗಸೂಚಿ ಹೊರಡಿಸಿದ್ದೇವೆ. ಕ್ಲಸ್ಟರ್‌ನಲ್ಲಿ ಹೆಚ್ಚಿನ ಪರೀಕ್ಷೆ ನಡೆಸಬೇಕು, ಅವರ ಸಂಪರ್ಕಕ್ಕೆ ಬಂದವರನ್ನು ಕೂಡ ಪರೀಕ್ಷೆಗೆ ಒಳಪಡಿಸಬೇಕು. ಈಗ ಕ್ಲಸ್ಟರ್ ನಿರ್ಮಾಣ ಆಗಿರುವ ಮೈಸೂರು, ಹಾಸನ, ಆನೇಕಲ್ ಕಡೆ ವಿಶೇಷ ಪರೀಕ್ಷೆ ಅಭಿಯಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಲಂಕಷವಾಗಿ ಸಭೆ ನಡೆಸಲಿದ್ದಾರೆ. ಸಭೆಯ ಫಲಿತಾಂಶದ ಬಗ್ಗೆ ಬಳಿಕ ನಾವು ಚರ್ಚೆ ನಡೆಸಲಿದ್ದು, ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಆದರೆ ಅಥವಾ ಅದರ ಕುರಿತು ಬರುತ್ತಿರುವ ಊಹಾಪೋಹದ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶ ಸರ್ಕಾರದ ಮುಂದೆ ಇಲ್ಲ. ಈಗ ಜನ ಜೀವನ ಹೇಗೆ ನಡೆಯುತ್ತಿದೆಯೋ, ಅದೇ ರೀತಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಜನರು‌ ಸೇರುವ ಕಡೆ ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕು. ಸಂಘ ಸಂಸ್ಥೆಗಳು ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕು. ಆತಂಕದ ಹಿನ್ನೆಲೆಯಲ್ಲಿ ಕ್ಲಸ್ಟರ್ ಉಂಟಾಗಿರುವಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ತಿಳಿಸಿದರು. ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಓಮಿಕ್ರಾನ್ ಎಂಬ ಹೊಸ ಪ್ರಭೇದದ ಕೋವಿಡ್ 19 ಸೋಂಕಿನ ಬಗ್ಗೆ ಡಿಸೆಂಬರ್ 1ನೇ ತಾರೀಕಿನ ಬಳಿಕ ವರದಿ ಸಿಗಲಿದೆ. ಗಡಿಗಳಲ್ಲಿ, ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಚಿವ ಕೆ. ಸುಧಾಕರ್ ಇದಕ್ಕೂ ಮುಂದೆ ತಿಳಿಸಿದ್ದರು.


from India & World News in Kannada | VK Polls https://ift.tt/3xFQOpV

'ಭಾರತದ ಈ ನಿರ್ಧಾರ ಶಾಕಿಂಗ್' ಡ್ರಾ ಫಲಿತಾಂಶಕ್ಕೆ ಕಾರಣ ತಿಳಿಸಿದ ವಾರ್ನ್‌!

ಹೊಸದಿಲ್ಲಿ: ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಐದನೇ ಹಾಗೂ ಅಂತಿಮ ದಿನದ ಕೊನೆಯ ಸೆಷನ್‌ನಲ್ಲಿ ಟೀಮ್‌ ಇಂಡಿಯಾ ರೂಪಿಸಿದ್ದ ತಂತ್ರವನ್ನು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್‌ ಶೇನ್‌ ವಾರ್ನ್‌ ಪ್ರಶ್ನೆ ಮಾಡಿದ್ದಾರೆ. ಸೋಮವಾರ ಕಾನ್ಪುರದ ಗ್ರೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ ಮುಕ್ತಾಯವಾಗಿದ್ದ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಆರಂಭಿಕ ಟೆಸ್ಟ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಅದರಲ್ಲೂ ಐದನೇ ದಿನ ಮೊದಲ ಸೆಷನ್‌ನಲ್ಲಿ ಕಿವೀಸ್‌ ಒಂದೂ ವಿಕೆಟ್‌ ಕಳೆದುಕೊಳ್ಳದೆ ಬೌಲರ್‌ಗಳ ಸವಾಲನ್ನು ಸಮರ್ಥವಾಗಿ ಮೆಟ್ಟಿ ನಿಂತಿತ್ತು. ಆದರೆ, ಭೋಜನ ವಿರಾಮದ ಬಳಿಕ ಭಾರತ ತಂಡದ ಬೌಲರ್‌ಗಳು ಶಕ್ತಿಯುತವಾಗಿ ಕಮ್‌ಬ್ಯಾಕ್‌ ಮಾಡಿದ್ದರು. ಅದರಂತೆ 90ನೇ ಓವರ್‌ನಲ್ಲಿಯೇ ವಿಲಿಯಮ್ಸನ್‌ ಪಡೆ 155 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಗಿತ್ತು. ಭಾರತ ತಂಡ ಗೆಲುವು ಪಡೆಯಲು ಕೊನೆಯ ಎಂಟು ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್‌ ಅಗತ್ಯವಿತ್ತು. ಈ ವೇಳೆ ಭಾರತ ಗೆಲುವು ಸಾಧಿಸುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ರಚಿನ್‌ ರವೀಂದ್ರ(18*) ಹಾಗೂ ಅಜಾಝ್‌ ಪಟೇಲ್‌(2*) ಜೋಡಿಯನ್ನು ಬೇರ್ಪಡಿಸಲು ಟೀಮ್‌ ಇಂಡಿಯಾ ಬೌಲರ್‌ಗಳ ಕೈಯಲ್ಲಿ ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಯಿತು. ಕೊನೆಯ ವಿಕೆಟ್‌ ಪಡೆಯದ ಟೀಮ್‌ ಇಂಡಿಯಾದ ತಂತ್ರದ ಬಗ್ಗೆ ಇದೀಗ ಶೇನ್‌ ವಾರ್ನ್‌ ಬೇಸರ ವ್ಯಕ್ತಪಡಿಸಿದ್ದಾರೆ. ಹೊಸ ಚೆಂಡು ಲಭ್ಯವಿದ್ದರೂ ಪಡೆಯದ ಟೀಮ್‌ ಇಂಡಿಯಾ ನಿರ್ಧಾರದ ಬಗ್ಗೆ ಶೇನ್‌ವಾರ್ನ್‌ ಪ್ರಶ್ನೆ ಮಾಡಿದ್ದಾರೆ. 81ನೇ ಓವರ್‌ನಲ್ಲಿ ಹೊಸ ಚೆಂಡು ಭಾರತಕ್ಕೆ ಲಭ್ಯವಾಗಿತ್ತು. ಆದರೆ, ಇನ್ನೂ ಮೂರು ಓವರ್‌ಗಳವರೆಗೂ ಆತಿಥೇಯರು ಹಳೆಯ ಚೆಂಡಿನಲ್ಲಿಯೇ ಬೌಲ್‌ ಮಾಡಿದ್ದರು. ನಂತರ, 84ನೇ ಓವರ್‌ಗೆ ಹೊಸ ಚಂಡು ಪಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. "ಹೊಸ ಚೆಂಡು ಲಭ್ಯವಾಗಿದ್ದರೂ ಭಾರತ ತಂಡ ಪಡೆಯದೇ ಇರುವುದು ನನ್ನಲ್ಲಿ ಅಚ್ಚರಿ ಮೂಡಿಸಿತ್ತು. ವಿಚಿತ್ರವೆಂದರೆ ಓವರ್‌ಗಳು ಮುಗಿಯುತ್ತಿರುವಾಗ ಇನ್ನೂ ಹಗುರವಾಗಿರುವ ಹಳೆಯ ಚೆಂಡಿನೊಂದಿಗೆ ಬೌಲಿಂಗ್ ಮಾಡುತ್ತಿದ್ದಾರೆ!!!!" ಎಂದು ಟ್ವೀಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಡ್ರಾನಲ್ಲಿ ಅಂತ್ಯವಾದ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಯಾವುದು ಎಂಬ ಬಗ್ಗೆ ಸ್ಪಿನ್ ದಂತಕತೆ ಬೆಳಕು ಚೆಲ್ಲಿದರು. "ಹೊಸ ಚೆಂಡು ಲಭ್ಯವಿದ್ದರೂ ಟೀಮ್ ಇಂಡಿಯಾ ಪಡೆಯದೆ ಹಳೆಯ ಚೆಂಡಿನಲ್ಲಿಯೇ ನಾಲ್ಕು ಓವರ್‌ ಬೌಲ್‌ ಮಾಡಿದ್ದು ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಆಯಿತು. ಇದನ್ನು ಸದುಪಯೋಗಪಡಿಸಿಕೊಂಡ ನ್ಯೂಜಿಲೆಂಡ್‌ ತಂಡ ಆತಿಥೇಯರ ಗೆಲುವನ್ನು ಕಸಿದುಕೊಂಡಿತು. ಭಾರತ ಗೆಲುವು ಪಡೆಯಲು ಸಾಧ್ಯವಾಗದೆ ಇರುವುದಕ್ಕೆ ಇದೇ ಕಾರಣವಿರಬಹುದಲ್ಲವೆ,? ಎಂದು ವಾರ್ನ್‌ ಪ್ರಶ್ನಿಸಿದರು. ಡಿಸೆಂಬರ್‌ 3 ರಿಂದ ಮುಂಬೈನ ವಾಂಖೆಡೆ ಕ್ರೀಡಾಗಣದಲ್ಲಿ ಆರಂಭವಾಗಲಿರುವ ಎರಡನೇ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ. ಅಂದಹಾಗೆ, ನಿಯಮಿತ ನಾಯಕ ವಿರಾಟ್‌ ಕೊಹ್ಲಿ ಈ ಪಂದ್ಯಕ್ಕೆ ಮರಳಲಿದ್ದು, ತಂಡವನ್ನು ಮುನ್ನಡೆಸಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3o6ngyP

ಟಾಪ್‌ ಮೇಲೆ ನಿಲ್ಲದ ಸವಾರಿ; ರಾಣೇಬೆನ್ನೂರಲ್ಲಿ ನಿಯಮ ಮೀರಿ ಪ್ರಯಾಣಿಕರ ಸಾಗಣೆಗೆ ಬೇಕಿದೆ ಕಡಿವಾಣ!

ರಾಣೇಬೆನ್ನೂರು: ಪ್ರಯಾಣಿಕರ ಸುರಕ್ಷತೆ ಉದ್ದೇಶದಿಂದ ಸರಕಾರ ಸಾರಿಗೆ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ಕೆಲ ಖಾಸಗಿ ವಾಹನಗಳು ನಿಯಮವನ್ನು ಗಾಳಿಗೆ ತೂರಿ ಟಾಪ್‌ ಮೇಲೆ ಪ್ರಯಾಣಿಕರನ್ನು ಸಾಗಿಸುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರಗಳು ಸೇರಿ ತಾಲೂಕಿನಲ್ಲಿ 108 ಗ್ರಾಮಗಳಿವೆ. ಈ ಹಿಂದೆ ಬಹುತೇಕ ಗ್ರಾಮಗಳಿಗೆ ಬಸ್‌ ಸಂಪರ್ಕವಿತ್ತು. ಆದರೆ ಲಾಕ್‌ಡೌನ್‌ ನಂತರದಲ್ಲಿಯೂ ಕೆಲ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ ಸಂಚಾರವಿಲ್ಲದ ಪರಿಣಾಮ ಟಾಟಾಎಸ್‌, ಟಂಟಂನಂತಹ ಖಾಸಗಿ ವಾಹನಗಳನ್ನೇ ಅವಲಂಬಿಸಲಬೇಕಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ವಾಹನಗಳು ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಅನಧೀಕೃತ ಪ್ರಯಾಣ ಟಾಟಾಎಸ್‌ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಲು ಅವಕಾಶವಿಲ್ಲ. ಆದರೆ, ನಗರದಲ್ಲಿ ಕೆಲವೊಂದು ಖಾಸಗಿ ವಾಹನಗಳು ರಾಜಾರೋಷವಾಗಿ ಪ್ರಯಾಣಿಕರನ್ನು ಸಾಗಿಸುತ್ತಿವೆ. ನಿಯಮ ಮೀರಿ ವಾಹನದ ಹಿಂದೆ ನಿಂತುಕೊಂಡು ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ತಾಲೂಕಿನ ಕಮದೋಡ, ಮೇಡ್ಲೇರಿ, ಇಟಗಿ, ಹಿರೇಬಿದರಿ, ಸುಣಕಲ್ಲಬಿದರಿ ಸೇರಿದಂತೆ ಕೆಲ ಗ್ರಾಮಗಳು ಸೇರಿದಂತೆ ಹಳ್ಳಿಗಳಿಗೆ ಖಾಸಗಿ ವಾಹನಗಳ ಸಂಚಾರ ಜೋರಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ಹೊತ್ತು ಸಾಗುವ ವಾಹನಗಳು ಬಿದ್ದು ಪ್ರಾಣಹಾನಿಯಾದಂತಹ ಘಟನೆಗಳು ಈ ಹಿಂದೆ ಸಾಕಷ್ಟು ನಡೆದಿವೆ. ಆದರೆ, ಇಂತಹ ಪ್ರಯಾಣಕ್ಕೆ ಕಡಿವಾಣ ಹಾಕಬೇಕಾದ ಸಂಚಾರ ಠಾಣೆ, ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಮಾತ್ರ ನಿದ್ರೆಗೆ ಜಾರಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ. ಕ್ರಮ ಏಕಿಲ್ಲ? ವಾಣಿಜ್ಯನಗರಿಯಾಗಿರುವುದರಿಂದ ನಿತ್ಯವೂ ಸಾವಿರಾರು ಜನ ಪ್ರಯಾಣಿಕರು, ವಾಹನಗಳು ಬಂದು ಹೋಗುತ್ತಾರೆ. ಆದರೆ, ನಗರ ಪ್ರದೇಶದಲ್ಲೂ ವಾಹನಗಳ ಟಾಪ್‌ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದರೂ ಯಾರೊಬ್ಬರು ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಸಂಚಾರ ಠಾಣೆ ಪೊಲೀಸರು, ಆರ್‌ಟಿಒ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಅನಧಿಕೃತ ಪ್ರಯಾಣಕ್ಕೆ ಕಡಿವಾಣ ಹಾಕಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ. ಕಾಲೇಜಿಗೆ ಹೆಚ್ಚುವರಿ ಬಸ್‌ ಅಗತ್ಯನಗರದ ಹೊರವಲಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭಿಸಿದೆ. ಆದರೆ ವಿದ್ಯಾರ್ಥಿಗಳು ತಮಗೆ ತರಗತಿಗೆ ಸಮಯ ಹೊಂದಾಣಿಕೆಯಾಗದೇ ಖಾಸಗಿ ವಾಹನಗಳಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿದ್ದು, ಟಂಟಂ ವಾಹನಗಳು ತುಂಬಿ ತುಳುಕುವಂತೆ ಕಂಡುಬರುತ್ತವೆ. ರಾಣೇಬೆನ್ನೂರ ತಾಲೂಕಿನಲ್ಲಿ ಕೆಲ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೂರಿಸಿಕೊಂಡು ಚಾಲನೆ ಮಾಡುವುದು ಕಂಡುಬಂದಿದೆ. ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ಕುರಿತು ಆರ್‌ಟಿಒ, ಪೊಲೀಸ್‌ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ರಮೇಶ ಜಿ., ಸ್ಥಳೀಯರು, ರಾಣೇಬೆನ್ನೂರು


from India & World News in Kannada | VK Polls https://ift.tt/31dgdv0

ಚರ್ಚೆಗೆ ಅವಕಾಶವನ್ನೇ ನೀಡದೆ 3 ಕೃಷಿ ಕಾಯ್ದೆ ರದ್ದು ವಿಧೇಯಕ ಅಂಗೀಕಾರ; ಸದನದಲ್ಲಿ ವಿಪಕ್ಷಗಳ ಗದ್ದಲ

ಹೊಸದಿಲ್ಲಿ: ಕೇಂದ್ರ ಸರಕಾರವು ಚರ್ಚೆಗೆ ಅವಕಾಶವನ್ನೇ ನೀಡದೆ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವ ವಿಧೇಯಕಕ್ಕೆ ಉಭಯ ಸದನಗಳ ಅಂಗೀಕಾರ ಪಡೆಯಲು ಯಶಸ್ವಿಯಾಗಿದ್ದರಿಂದ ಆಕ್ರೋಶಗೊಂಡ ಪ್ರತಿಪಕ್ಷಗಳು ಸಂಸತ್‌ನ ಚಳಿಗಾಲದ ಅಧಿವೇಶನಕ್ಕೆ ಗದ್ದಲದ ಮುನ್ನುಡಿ ಬರೆದಿವೆ. ಹೀಗಾಗಿ ಅಧಿವೇಶನದ ಮೊದಲ ಎರಡೂ ಸದನಗಳಲ್ಲಿ ಯಾವುದೇ ಕಲಾಪ ನಡೆಯಲಿಲ್ಲ. ಲೋಕಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ವಿಧೇಯಕ ಮಂಡಿಸಿದ ತಕ್ಷಣವೇ ಆಡಳಿತ ಪಕ್ಷಗಳ ಸದಸ್ಯರು ಚರ್ಚೆಗೆ ಆಸ್ಪದವನ್ನೇ ನೀಡದೇ ಧ್ವನಿ ಮತದ ಮೂಲಕ ಅಂಗೀಕಾರದ ಮುದ್ರೆಯೊತ್ತಿದರು. ಇದರಿಂದ ಕುಪಿತಗೊಂಡ ಪ್ರತಿಪಕ್ಷಗಳು ಧರಣಿಗೆ ಮುಂದಾದವು. ಟಿಆರ್‌ಎಸ್‌, ಡಿಎಂಕೆ, ಟಿಎಂಸಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರಿನ ಬಾವಿಗೆ ತೆರಳಿ ಧರಣಿ ಆರಂಭಿಸಿದರೆ, ಕಾಂಗ್ರೆಸ್‌, ಎನ್‌ಸಿಪಿ, ಬಿಎಸ್ಪಿ, ಮುಸ್ಲಿಂ ಲೀಗ್‌ ಸದಸ್ಯರು ತಮ್ಮ ಸ್ಥಳದಲ್ಲಿಯೇ ಎದ್ದು ನಿಂತು ಘೋಷಣೆ ಕೂಗಲಾರಂಭಿಸಿದರು. ‘ಕೃಷಿ ಕಾಯಿದೆ ರದ್ದು ಸಾಕಾಗದು, ರೈತ ಹಿತರಕ್ಷಣೆಯ ಕುರಿತು ಚರ್ಚೆ ಮಾಡಿ’ ಎಂದು ಪಟ್ಟು ಹಿಡಿದ ಪ್ರತಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದರು. ‘ಕೃಷಿ ಕಾಯಿದೆಗಳನ್ನು ರದ್ದು ಪಡಿಸುವ ವಿಧೇಯಕ ಮಂಡನೆ ಮತ್ತು ಅಂಗೀಕಾರ ಎಂಬುದು ಕಲಾಪ ಪಟ್ಟಿಯಲ್ಲಿಯೇ ಇದೆ. ಆದರೂ ಚರ್ಚೆಗೆ ಅವಕಾಶ ನೀಡದೇ ಧ್ವನಿಮತದಿಂದ ಅಂಗೀಕಾರವಾಗಿದೆ ಎಂದು ಘೋಷಿಸಿರುವುದೇಕೆ? ಸರಕಾರ ಸದನದ ಮೇಲೆ ಸವಾರಿ ನಡೆಸುತ್ತಿದೆ’ ಎಂದು ಸದನದಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಅಧೀರ್‌ ರಂಜನ್‌ ಚೌಧರಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕಿವಿಗೊಡದ ಸಭಾಧ್ಯಕ್ಷರು, ‘ಮೊದಲು ನೀವು ಶಾಂತಚಿತ್ತರಾಗಿ ಸೀಟಿನಲ್ಲಿ ಕುಳಿತುಕೊಳ್ಳಿ. ಎದ್ದು ನಿಂತು ಗದ್ದಲ ಎಬ್ಬಿಸಿದರೆ ಚರ್ಚೆಗೆ ಅವಕಾಶ ನೀಡುವುದು ಹೇಗೆ? ಸಮಾಧಾನದಿಂದ ಇದ್ದರೆ ಚರ್ಚೆ ಸಾಧ್ಯ’ ಎಂದರು. ಆದರೂ ಕಿವಿಗೊಡದೆ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದವು. ಎರಡು ಸಲ ಕಲಾಪ ಮುಂದೂಡಲಾಯಿತು. ಮತ್ತೆ ಆಗ ತಾಳ್ಮೆ ಕಳೆದುಕೊಂಡ ಸಭಾಧ್ಯಕ್ಷರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು. ರಾಜ್ಯಸಭೆಯಲ್ಲಿಯೂ ಗಲಾಟೆರಾಜ್ಯಸಭೆಯಲ್ಲಿಯೂ ಪ್ರತಿಪಕ್ಷಗಳ ಗದ್ದಲದಿಂದ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಕೃಷಿ ಕಾಯಿದೆಗಳನ್ನು ರದ್ದುಪಡಿಸುವ ವಿಧೇಯಕ ಮಂಡನೆಯಾದ ಬಳಿಕ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಹರಿವಂಶ್‌ ಅವರು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಎರಡು ನಿಮಿಷದ ಸಮಯ ನೀಡಲಾಯಿತು. ‘ಇತ್ತೀಚಿನ ಉಪ ಚುನಾವಣೆಗಳಲ್ಲಿ ಆದ ಹಿನ್ನಡೆ ಮತ್ತು ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೃಷಿ ಕಾಯಿದೆಗಳನ್ನು ರದ್ದುಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು. ಪ್ರತಿಪಕ್ಷಗಳ ಗದ್ದಲದ ನಡುವೆಯೇ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರವಾಯಿತು. ನಂತರ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಕೋರಿ ಪ್ರತಿಪಕ್ಷಗಳು ಸಲ್ಲಿಸಿದ ಪ್ರಸ್ತಾವವನ್ನು ಸಭಾಪತಿ ಎಂ.ವೆಂಕಯ್ಯ ನಾಯ್ಡು ತಳ್ಳಿಹಾಕಿದರು. ಚರ್ಚೆಗೆ ಪಟ್ಟು ಹಿಡಿದ ಪ್ರತಿಪಕ್ಷಗಳು ಧರಣಿ ಮುಂದುವರಿಸಿದ್ದರಿಂದ ಬೇರೆ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಕಳೆದ ವರ್ಷದ ಮುಂಗಾರು ಅಧಿವೇಶನದಲ್ಲಿ ಮೂರು ಕೃಷಿ ಸುಧಾರಣಾ ವಿಧೇಯಕಗಳು ಅಂಗೀಕಾರಗೊಂಡಿದ್ದವು. ಬಳಿಕ ಅವನ್ನು ವಿರೋಧಿಸಿ ರೈತರು ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ಆರಂಭಿಸಿದ್ದರು. ನವೆಂಬರ್‌ 26ಕ್ಕೆ ರೈತ ಪ್ರತಿಭಟನೆಗೆ ಒಂದು ವರ್ಷ ಸಂದಿತ್ತು. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಗುರುನಾನಕ್‌ ಜಯಂತಿಯಂದು ಕಾಯಿದೆಗಳನ್ನು ಹಿಂದಕ್ಕೆ ಪಡೆಯುವ ಘೋಷಣೆ ಮಾಡಿದ್ದರು.


from India & World News in Kannada | VK Polls https://ift.tt/3I2U17V

ಕ್ಷಮೆ ಕೋರಿದರೆ 12 ಸಂಸದರ ಅಮಾನತು ರದ್ದತಿ ಪರಿಶೀಲನೆ: ಪ್ರಹ್ಲಾದ್ ಜೋಶಿ

ಹೊಸದಿಲ್ಲಿ: ಅನುಚಿತ ವರ್ತನೆ ಕಾರಣದಿಂದ ವಿರೋಧ ಪಕ್ಷದ 12 ಸಂಸದರನ್ನು ಅನಿವಾರ್ಯವಾಗಿ ಮಾಡುವಂತಾಗಿತ್ತು. ಅವರು ಸ್ಪೀಕರ್ ಮತ್ತು ಲೋಕಸಭೆಗೆ ಕ್ಷಮಾಪಣೆ ಕೋರಿದರೆ ಮಾತ್ರವೇ ಅವರ ಅಮಾನತಿನ ಆದೇಶವನ್ನು ಮರು ಪರಿಗಣಿಸುತ್ತೇವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅವರು ಮಂಗಳವಾರ ತಿಳಿಸಿದ್ದಾರೆ. 'ಸದನದ ಘನತೆಯನ್ನು ಕಾಪಾಡುವ ಉದ್ದೇಶದಿಂದ ಸರ್ಕಾರವು ಸದನದ ಮುಂದೆ ಈ ಅಮಾನತು ಪ್ರಸ್ತಾಪದ ಕಾನೂನನ್ನು ಬಲವಂತವಾಗಿ ಮುಂದಿರಿಸುವಂತಾಗಿದೆ. ಆದರೆ ಈ 12 ಮಂದಿ ಸಂಸದರು ತಮ್ಮ ದುರ್ವರ್ತನೆಗಾಗಿ ಈಗಲೂ ಸ್ಪೀಕರ್ ಹಾಗೂ ಸದನಕ್ಕೆ ಕ್ಷಮೆ ಕೋರಿದರೆ, ಸರ್ಕಾರವು ಮುಕ್ತ ಮನಸ್ಸಿನೊಂದಿಗೆ ಅವರ ಪ್ರಸ್ತಾಪವನ್ನು ಸಕಾರಾತ್ಮಕವಾಗಿ ಪರಿಗಣಿಸಲು ಸಿದ್ಧವಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಸಂಸತ್‌ನ ಕಳೆದ ಮುಂಗಾರು ಅಧಿವೇಶನದ ವೇಳೆ ಆಗಸ್ಟ್ 11ರಂದು ವಿರೋಧ ಪಕ್ಷಗಳ ಸದಸ್ಯರು ಹೇಗೆ ನಡೆದುಕೊಂಡಿದ್ದರು ಎಂಬುದನ್ನು ಇಡೀ ದೇಶ ನೋಡಿದೆ ಎಂದು ಜೋಶಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದ್ದರು. 'ಸಂಸದರ ಕೆಟ್ಟ ವರ್ತನೆಯ ಎಲ್ಲ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿವೆ. ಅವುಗಳನ್ನು ಸ್ವತಃ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಕ್ರಮ ತೆಗೆದುಕೊಳ್ಳಲು ಇದ್ದ ಮೊದಲ ಅವಕಾಶವಾಗಿತ್ತು ಮತ್ತು ಅಧ್ಯಕ್ಷರು ಕ್ರಮ ತೆಗೆದುಕೊಂಡಿದ್ದಾರೆ' ಎಂದು ತಿಳಿಸಿದ್ದರು. ಮುಂಗಾರು ಅಧಿವೇಶನದ ಕೊನೆಯ ದಿನದಂದು ರಾಜ್ಯಸಭೆಯ 12 ವಿಪಕ್ಷ ಸಂಸದರು ಗದ್ದಲ, ಹಿಂಸಾಚಾರ ನಡೆಸಿದ್ದರಿಂದ ಅಮಾನತು ಮಾಡಲಾಗಿತ್ತು. ಈ ಅಮಾನತನ್ನು ವಿಪಕ್ಷಗಳು ಖಂಡಿಸಿದ್ದವು. ಇದು ನಿಯಮಾವಳಿಗಳಿಗೆ ವಿರುದ್ಧ ಎಂದು ಆರೋಪಿಸಿದ್ದವು. 'ಸಂಸದರು ಹಿಂದೆಂದೂ ಕಾಣದಂತಹ ಅನುಚಿತ ವರ್ತನೆ, ಅವಿಧೇಯತೆ, ಹಿಂಸೆ ಮತ್ತು ಒರಟು ನಡವಳಿಕೆ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಉದ್ದೇಶಪೂರ್ವಕ ದಾಳಿಗಳನ್ನು ಸ್ವ ಇಚ್ಛೆಯಿಂದಲೇ ನಡೆಸಿದ್ದಾರೆ' ಎಂದು ಅಮಾನತು ನಿಲುವಳಿಯಲ್ಲಿ ಹೇಳಲಾಗಿದೆ. ಶಿವ ಸೇನಾ ಸಂಸದರಾದ ಪ್ರಿಯಾಂಕಾ ಚತುರ್ವೇದಿ ಮತ್ತು ಅನಿಲ್ ದೇಸಾಯಿ, ಟಿಎಂಸಿ ಸಂಸದರಾದ ದೋಲಾ ಸೇನ್ ಮತ್ತು ಶಾಂತಾ ಛೆಟ್ರಿ, ಸಿಪಿಎಂನ ಎಲಮಾರನ್ ಕರೀಮ್ ಹಾಗೂ ಕಾಂಗ್ರೆಸ್‌ನ ಆರು ಸಂಸದರನ್ನು ಅಮಾನತು ಮಾಡಲಾಗಿತ್ತು. ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ವಿಚಾರ ಹಾಗೂ ಪೆಗಾಸಸ್ ವಿಷಯಗಳ ಕುರಿತು ಗದ್ದಲ ಎಬ್ಬಿಸಿದ್ದ ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಅಧಿಕಾರಿಗಳು ಕೂರುವ ಮೇಜುಗಳ ಮೇಲೆ ಹತ್ತಿ ಪ್ರತಿಭಟನೆ ನಡೆಸಿದ್ದರು. ಸರ್ಕಾರದ ವಿರುದ್ಧ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ್ದರು. ಕಾಗದ ಪತ್ರಗಳನ್ನು ಹರಿದು ಎಸೆದಿದ್ದರು. ಅಲ್ಲದೆ, ಭದ್ರತಾ ಸಿಬ್ಬಂದಿಯ ಮೇಲೆಯೂ ಕೈ ಮಾಡಿದ್ದರು. ಮಹಿಳಾ ಮಾರ್ಷಲ್‌ಗಳ ಮೇಲೆ ಕೂಡ ಹಲ್ಲೆ ಮಾಡಿದ್ದರು. ಈ ಬಗ್ಗೆ ಉಪಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ನೋವಿನಿಂದ ಸದನದಲ್ಲಿಯೇ ಕಣ್ಣೀರಿಟ್ಟಿದ್ದರು. ವಿಪಕ್ಷಗಳ ಈ ಕ್ರಮವನ್ನು ಖಂಡಿಸಿದ್ದ ಸರ್ಕಾರ, 12 ಮಂದಿ ಸಂಸದರನ್ನು ಅಮಾನತು ಮಾಡಿದೆ.


from India & World News in Kannada | VK Polls https://ift.tt/3I2TYcf

ಮಾಸ್ಕ್‌ಗೂ ಗೇಟ್‌ಪಾಸ್‌; ಭೌತಿಕ ಅಂತರಕ್ಕೂ ಗುಡ್‌ಬೈ: ಪಾಲನೆಯಾಗದ ಕೋವಿಡ್‌ ನಿಯಮ!

ಆರಗ ರವಿ ಚಿಕ್ಕಮಗಳೂರು: ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ರಾಜ್ಯದ ಜನತೆ ಹಿಂದೇಟು ಹಾಕುತ್ತಿರುವುದರ ನಡುವೆಯೇ ಶೇ.70ಕ್ಕೂ ಹೆಚ್ಚು ಜನ ಮಾಸ್ಕ್‌ಗೂ ಗೇಟ್‌ಪಾಸ್‌ ಕೊಟ್ಟಿದ್ದಾರೆ. ಕೋವಿಡ್‌ ನಿಯಮಗಳ ಪಾಲನೆಯೂ ಕಣ್ಮರೆಯಾಗಿದೆ. ಕೊರೊನಾ ಪ್ರಕರಣಗಳು ಇಳಿಮುಖವಾದ ಬೆನ್ನಲ್ಲೇ ಓಮಿಕ್ರಾನ್‌ ಆತಂಕ ಶುರುವಾಗಿದೆ. ಆದರೆ, ಕಳೆದ 2-3 ತಿಂಗಳಿಂದಲೂ ಕೋವಿಡ್‌ ನಿಯಮಗಳ ಪಾಲನೆಯಿಂದ ಜನ ದೂರ ಸರಿದಿದ್ದು, ಕೋವಿಡ್‌ ಪೂರ್ವದ ಸಹಜ ಜೀವನಕ್ಕೆ ಮರಳಿದ್ದಾರೆ. ರಾಜ್ಯದಲ್ಲಿ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಸಭೆ, ಸಮಾರಂಭಗಳು, ವಿವಾಹಗಳು, ರಾಜಕೀಯ ಸಮಾವೇಶಗಳು, ಪ್ರತಿಭಟನೆಗಳು, ಸಾಂಸ್ಕೃತಿಕ ಕಾರ‍್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಅದರಲ್ಲೂ ಕೋವಿಡ್‌ ಕಾಲದಲ್ಲಿ ಸರಳತೆಗೆ ಜಾರಿದ್ದ ಮದುವೆಗಳು ಈಗ ಕಲ್ಯಾಣ ಮಂಟಪಗಳಲ್ಲಿ ಅದ್ಧೂರಿಯಾಗಿಯೇ ನಡೆಯುತ್ತಿವೆ. ಮಾಸ್ಕ್‌ಗೆ ಗೇಟ್‌ಪಾಸ್‌ ಕೋವಿಡ್‌ ಹರಡಿದ ಆರಂಭಿಕ ದಿನಗಳಲ್ಲಿ ಮಾಸ್ಕ್‌ಗಳ ಕೊರತೆ ತೀವ್ರವಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅಪಾರ ಪ್ರಮಾಣದ ಮಾಸ್ಕ್‌ಗಳು ಮಾರುಕಟ್ಟೆಗೆ ಬಂದಿದ್ದು, ಸಂಘ ಸಂಸ್ಥೆಗಳು ಉಚಿತವಾಗಿಯೂ ವಿತರಿಸಿದ್ದವು. ಗ್ರಾಮೀಣ ಪ್ರದೇಶವೂ ಸೇರಿದಂತೆ ಶೇ.99ರಷ್ಟು ಜನ ಮಾಸ್ಕ್‌ ಧರಿಸುತ್ತಿದ್ದರು. ಕೊರೊನಾ ಪ್ರಕರಣ ಇಳಿಮುಖವಾಗಿ ಸರಕಾರ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಸುತ್ತ ಬಂದಂತೆ ಜನ ಮಾಸ್ಕ್‌ ಧರಿಸುವುದನ್ನೇ ಬಿಟ್ಟಿದ್ದಾರೆ. ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಕಲ್ಯಾಣ ಮಂಟಪಗಳು, ಮಾಲ್‌ಗಳು, ಚಿತ್ರಮಂದಿರಗಳು, ಸಾಂಸ್ಕೃತಿಕ ಭವನಗಳು, ಮಾರ್ಕೆಟ್‌ ಸೇರಿದಂತೆ ಎಲ್ಲಿಯೂ ಹೆಚ್ಚಿನ ಜನ ಮಾಸ್ಕ್‌ಗಳನ್ನು ಧರಿಸುತ್ತಿಲ್ಲ. ಅಂತರವೂ ಇಲ್ಲ! ಯಾವುದೇ ಪ್ರದೇಶದಲ್ಲಿ ಎಷ್ಟೇ ಜನ ಸೇರಿದರೂ ಭೌತಿಕ ಅಂತರ ಕಾಪಾಡುತ್ತಿಲ್ಲ. ಕೋವಿಡ್‌ ಹರಡುವ ಮುನ್ನ ಸೇರುತ್ತಿದ್ದಂತೆಯೇ ನೂರಾರು ಜನ ಗುಂಪು ಸೇರುತ್ತಿದ್ದಾರೆ. ಹಬ್ಬ ಹರಿದಿನ, ಜಾತ್ರಾ ಮಹೋತ್ಸವಗಳು ಕೂಡ ಕೋವಿಡ್‌ ನಿಯಮಗಳನ್ನು ಪಾಲಿಸದೆ ಸರಾಗವಾಗಿ ನಡೆಯುತ್ತಿವೆ. ಅಪರೂಪಕ್ಕೆಂಬಂತೆ ಕೆಲವರು ಮಾತ್ರ ಸ್ಯಾನಿಟೈಸರ್‌ ಬಳಸುತ್ತಿದ್ದು, ಕೋವಿಡ್‌ ನಿಯಮಗಳ ಪಾಲನೆಗೆ ಬಹುತೇಕ ಜನ ಗುಡ್‌ಬೈ ಹೇಳಿದ್ದಾರೆ. ಶಾಲೆಗಳಲ್ಲಿ ಕೂಡ ವಿದ್ಯಾರ್ಥಿಗಳನ್ನು ನಿಯಂತ್ರಿಸಿ ಕೋವಿಡ್‌ ನಿಯಮಗಳನ್ನು ಪಾಲಿಸಿ ಪಾಠ, ಪ್ರವಚನ ಮಾಡುವುದು ಶಿಕ್ಷಕರಿಗೆ ಕಷ್ಟ ಸಾಧ್ಯವಾಗಿದೆ. ಕೋವಿಡ್‌ ಬಗ್ಗೆ ಈ ಹಿಂದೆ ಜನರಿಗಿದ್ದ ಭಯ, ಆತಂಕ ದೂರವಾಗಿದ್ದು, ಅದರೊಂದಿಗೆ ಹೊಂದಿಕೊಂಡು ಬದುಕುವಷ್ಟು ಆತ್ಮಸ್ಥೈರ‍್ಯ ಬೆಳೆದಿದೆ. ಆದರೆ, ಕೊರೊನಾ ಪ್ರಕರಣ ಕಡಿಮೆಯಾದರೂ ಓಮಿಕ್ರಾನ್‌ ಸೇರಿದಂತೆ ನಾನಾ ಬಗೆಯಲ್ಲಿ ಮತ್ತೆ ಮತ್ತೆ ದಾಳಿ ಮಾಡುತ್ತಿರುವ ವೈರಸ್‌ಗಳಿಂದ ರಕ್ಷಣೆ ಮಾಡಿಕೊಳ್ಳಲು ಜನ ಕೋವಿಡ್‌ ನಿಯಮಗಳನ್ನು ಪಾಲಿಸುವ ಅನಿವಾರ‍್ಯತೆ ಇದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು. ನಿಯಮ ಪಾಲಿಸಿ ಕೊರೊನಾ ವೈರಸ್‌ಗಿಂತಲೂ ಓಮಿಕ್ರಾನ್‌ ವೇಗವಾಗಿ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಕೊರೊನಾ ಇಳಿಮುಖವಾದ ಕಾರಣ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ. ಇದರಿಂದ ಮಾತ್ರ ಕೊರೊನಾ, ಓಮಿಕ್ರಾನ್‌ ಸೇರಿದಂತೆ ವೈರಸ್‌ಗಳಿಂದ ರಕ್ಷಣೆ ಪಡೆದುಕೊಳ್ಳಲು ಸಾಧ್ಯ. ಹೆಸರು ಹೇಳಲು ಇಚ್ಛಿಸದ ವೈದ್ಯಾಧಿಕಾರಿ ಮಾಸ್ಕ್‌ಗಳೇ ಮಾಯ ಕೋವಿಡ್‌ ನಿಯಮಗಳ ಪಾಲನೆಯಿಂದ ಜನ ಬಹುತೇಕ ವಿಮುಖರಾಗಿದ್ದಾರೆ. ಶೇ.80ರಷ್ಟು ಜನ ಮಾಸ್ಕ್‌ ಧರಿಸುತ್ತಿಲ್ಲ. ಸಾಮಾಜಿಕ ಅಂತರವನ್ನೂ ಕಾಪಾಡುತ್ತಿಲ್ಲ. ಕೋವಿಡ್‌ ಮತ್ತೆ ಯಾವತ್ತು ಬೇಕಿದ್ದರೂ ದಾಳಿ ಮಾಡಬಹುದು. ಓಮಿಕ್ರಾನ್‌ ಸೇರಿದಂತೆ ಹಲವು ವೈರಸ್‌ಗಳ ಕಾಟ ಶುರುವಾಗಿದೆ. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಲಾಕ್‌ಡೌನ್‌ ಅಪಾಯದಿಂದ ತಪ್ಪಿಸಿಕೊಳ್ಳಬಹುದು ಎನಿಸುತ್ತದೆ. ಇಂದ್ರೇಶ್‌, ಚಿಕ್ಕಮಗಳೂರು


from India & World News in Kannada | VK Polls https://ift.tt/3E9v4VN

ನಾಡಿನತ್ತ ನುಗ್ಗುತ್ತಿದೆ ಗಜಪಡೆ; ಕಾಡಾನೆಗಳ ಚಕ್ರವ್ಯೂಹದಲ್ಲಿ ಸೊರಗಿದ ರಾಮನಗರ ರೈತರು!

ಆರ್‌.ಶ್ರೀಧರ್‌, ರಾಮನಗರ: ಜಿಲ್ಲೆಯಲ್ಲಿ ಮತ್ತೆ ಗಜಪಡೆಯ ದಾಂಧಲೆ ಹೆಚ್ಚಾಗಿದೆ. ಈ ತನಕ ಕಾಡಂಚಿನ ಗ್ರಾಮಗಳಲ್ಲಿ ಆರ್ಭಟ ತೋರಿಸುತ್ತಿದ್ದ ಆನೆಗಳು, ಈ ನಗರ ವ್ಯಾಪ್ತಿಗೆ ನುಗ್ಗುತ್ತಿದ್ದು, ಆರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ. ದಾಳಿಯಿಂದಾಗಿ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದರೇ, ಪಟ್ಟಣ ಮತ್ತು ನಗರಪ್ರದೇಶಗಳ ಜನರಿಗೆ ಜೀವ ಭಯ ಕಾಡಲಾರಂಭಿಸಿದೆ. ಜಿಲ್ಲೆಯಲ್ಲಿ ಏನಾಗುತ್ತಿದೆ? ರಾಮನಗರ ಜಿಲ್ಲೆಯಲ್ಲಿ ಮೊದಲಿನಿಂದಲೂ ಆನೆ ದಾಳಿ ಸರ್ವೇ ಸಾಮಾನ್ಯ. ವಿಶೇಷವೆಂದರೆ ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ಹೊರಬರುತ್ತಿರುವ ಆನೆ ಹಿಂಡು, ನಾಡಿಗೆ ಮುತ್ತಿಗೆ ಹಾಕುತ್ತಿದೆ. ಮೂರ್ನಾಲ್ಕು ತಿಂಗಳ ಹಿಂದೆ ಬಿಡದಿಯ ರೈಲ್ವೆ ಹಳಿಯ ಬಳಿ ಆಗಮಿಸಿದ್ದ ಗಜಪಡೆಗಳು, ಸ್ಥಳೀಯ ನಿವಾಸಿಗಳಲ್ಲಿ ಭಯ ಹುಟ್ಟಿಸಿದ್ದವು. ಆದಾದ ಬಳಿಕ ನಗರ ವ್ಯಾಪ್ತಿಯಲ್ಲಿ ಸುಳಿದಾಡುವುದನ್ನು ಮಾಮೂಲಿಯಾಗಿಸಿಕೊಂಡ ಆನೆಗಳು, ಈಗ ಜನನಿಬಿಡ ಪ್ರದೇಶಗಳಿಗೂ ನಿರ್ಭೀತಿಯಿಂದ ನುಗ್ಗಲಾರಂಭಿಸಿವೆ. ಆನೆಗಳ ಅತಿಕ್ರಮಣ ಪ್ರವೃತ್ತಿಯಿಂದ ಪಟ್ಟಣ ಪ್ರದೇಶಗಳ ಜನರು ಗಾಬರಿಗೊಂಡಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ತಣ್ಣಗೆ ಕುಳಿತಿದ್ದಾರೆ. ಕಾಡಿನ ಚಕ್ರವ್ಯೂಹ ರಾಮನಗರ ಜಿಲ್ಲೆ ಕಾಡಿನ ಚಕ್ರವ್ಯೂಹದೊಳಗೆ ಸಿಲುಕಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಧಾಮ ಹೀಗೆ ಜಿಲ್ಲೆಯಲ್ಲಿ ವನ್ಯಜೀವಿ ಸುರಕ್ಷಿತ ತಾಣಗಳು ಸುತ್ತುವರಿದಿದೆ. ಹೀಗಾಗಿ ಮೂರೂ ಕಡೆಯಿಂದ ಜಿಲ್ಲೆಗೆ ಕಾಡು ಪ್ರಾಣಿಗಳು ಮುತ್ತಿಗೆ ಹಾಕುವುದು ಮಾಮೂಲಿಯಾಗಿದೆ. ಕಾಡಿನಲ್ಲಿ ಆಹಾರ ನೀರಿನ ಕೊರತೆ ಕಾಣಿಸಿಕೊಂಡೊಡನೆ, ಅವು ನಾಡಿನತ್ತ ಮುಖ ಮಾಡುವುದು ಮಾಮೂಲಿ ಆಗಿದೆ. ಮೊದಮೊದಲು ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಹಾಕಿ ಅಷ್ಟಿಷ್ಟು ಬೆಳೆ ತಿಂದು ಮರಳುತ್ತಿದ್ದ ಆನೆಗಳು ಈಗೀಗ ಕಾರ‍್ಯವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡು ಪಟ್ಟಣ ಪ್ರದೇಶಗಳಿಗೂ ದಾಂಗುಡಿ ಇಡುತ್ತಿವೆ. ಸಂಕಷ್ಟದಲ್ಲಿ ರೈತರು ಒಂದೆಡೆ, ಕಳೆದ 20 ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆದ ಬೆಳೆಗಳು ಸಂಪೂರ್ಣ ನೀರುಪಾಲಾಗಿದೆ. ಇನ್ನೊಂದೆಡೆ, ಆನೆ ದಾಳಿಗೆ ತುತ್ತಾಗುತ್ತಿರುವ ಫಲಸು ರೈತರನ್ನು ಮತ್ತಷ್ಟೂ ಹೈರಾಣಾಗುವಂತೆ ಮಾಡಿದೆ. ಇಷ್ಟೆಲ್ಲಾ ಸಮಸ್ಯೆಗಳಿಂದಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನೆ ದಾಳಿ ತಪ್ಪಿಸುವ ಸಲುವಾಗಿ ಅರಣ್ಯ ಇಲಾಖೆ ಶಾಶ್ವತ ಪರಿಹಾರ ದೊರಕಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಆನೆ ಕಾರಿಡಾರ್‌ ವನ್ಯ ಜೀವಿಧಾನ ಹಾಗೂ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯು ಜಿಲ್ಲೆಯಲ್ಲಿ ಹಾದು ಹೋಗುತ್ತವೆ. ಹಾಗಾಗಿ ಆಹಾರ ಅರಸಿಕೊಂಡು ಆನೆಗಳು ಬರುತ್ತವೆ. ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಬರುತ್ತಿದ್ದ ಆನೆಗಳು ಆಹಾರಕ್ಕಾಗಿ ವರ್ಷ ಪೂರ್ತಿ ಹೊರ ಬರುತ್ತಿವೆ. ವಾರಕ್ಕೊಮ್ಮೆಯಾದರೂ ಆನೆ ದಾಳಿ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಶಾಶ್ವತ ಪರಿಹಾರಕ್ಕೆ ಆಗ್ರಹ ಜಿಲ್ಲೆಯಲ್ಲಿ ಸಣ್ಣ ಸಣ್ಣ ಜಮೀನನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆನೆ ದಾಳಿಗಳು ಆಗಿಂದಾಗ್ಗೆ ನಡೆಯುತ್ತಿವೆ. ಹಾಗಾಗಿ ಜಿಲ್ಲೆಯ ರೈತರಿಂದ ಆನೆದಾಳಿಯಿಂದ ಶಾಶ್ವತವಾಗಿ ಪರಿಹಾರ ನೀಡಬೇಕೆಂಬ ಆಗ್ರಹ ಕೇಳಿ ಬರುತ್ತಲೇ ಇದೆ. ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಹಲವು ಬಾರಿ ಆರಣ್ಯ ಇಲಾಖೆ ಮುಂಭಾಗ ಧರಣಿ ಸತ್ಯಾಗ್ರಹ ಸಹ ನೀಡಿದ್ದರು. ಈ ವೇಳೆ ಆನೆ ದಾಳಿ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವ ಸಲುವಾಗಿ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದರು. ಮೂರ್ನಾಲ್ಕು ತಿಂಗಳಾದರೂ ಭರವಸೆ ಮಾತ್ರ ಸಂಪೂರ್ಣವಾಗಿಲ್ಲ. ಸಭೆಯ ಮೇಲೆ ಸಭೆ ಇನ್ನು ಆನೆ ದಾಳಿ ಸಂಬಂಧ ಅಧಿಕಾರಿಗಳು ಸಿಬ್ಬಂದಿಗಳು ಹೆಚ್ಚಿನ ಸಭೆಯನ್ನು ನಡೆಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಆನೆ ದಾಳಿಯು ನಿಂತಿಲ್ಲ. ಆನೆ ಓಡಿಸಿ, ರೈತನ ಕಾಪಾಡಿ ಈ ಹಿಂದೆ ಆನೆ ದಾಳಿ ನಿಯಂತ್ರಿಸಲು ಆಪರೇಷನ್‌ ಎಲಿಫೆಂಟ್‌ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 150ಕ್ಕೂ ಹೆಚ್ಚಿನ ಸಿಬ್ಬಂದಿ ಸೇರಿ, ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಿದ್ದರು. ಇಷ್ಟೆಲ್ಲಾ ಆದರೂ ಆನೆ ದಾಳಿ ಮಾತ್ರ ಜಿಲ್ಲೆಯಲ್ಲಿ ನಿಂತಿಲ್ಲ. ದಾಳಿಯಿಂದಾಗಿ ರೈತರಿಗೆ ಆಗುತ್ತಿರುವ ಅನ್ಯಾಯ ಮಾತ್ರ ತಪ್ಪಿಲ್ಲ. ಇನ್ನಾದರೂ ಆನೆ ದಾಳಿಯ ಬಗ್ಗೆ ಇಲಾಖೆ ಮತ್ತು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಆನೆಗಳನ್ನು ದೂರದ ಕಾಡಿಗಟ್ಟಿ ಮರಳಿ ಜನವಸತಿ ಪ್ರದೇಶದತ್ತ ಸುಳಿಯದಂತೆ ನಿರ್ಬಂಧಿಸಬೇಕು ಎಂಬ ಆಗ್ರಹ ರೈತರದ್ದು. ಜಿಲ್ಲೆಯಲ್ಲಿ ಆನೆ ಕಾಟ ಹೆಚ್ಚಿರುವುದು ಗಮನದಲ್ಲಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಅವುಗಳನ್ನು ಕಾಡಿಗೆ ಅಟ್ಟುವ ಕೆಲಸಕ್ಕೆ ಹಿನ್ನೆಡೆ ಆಗಿದೆ. ಮಳೆ ನಿಂತ ತಕ್ಷಣ ಬೃಹತ್‌ ಪ್ರಮಾಣದಲ್ಲಿ ಕಾರ್ಯಾಚರಣೆ ಕೈಗೊಂಡು ಆನೆಗಳನ್ನು ದೂರದ ಕಾಡಿಗೆ ಅಟ್ಟಲಾಗುವುದು. ದೇವರಾಜು, ಡಿಸಿಎಫ್‌, ರಾಮನಗರ


from India & World News in Kannada | VK Polls https://ift.tt/3lm3rl1

ಮಳೆಗಾಲದ ಅಧಿವೇಶನದಲ್ಲಿ ಗದ್ದಲ ಮಾಡಿದ್ದಕ್ಕೆ ಚಳಿಗಾಲದ ಕಲಾಪದಿಂದ ವಿಪಕ್ಷದ 12 ಸಂಸದರ ಅಮಾನತು!

ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನದ ಕೊನೆಯ ದಿನ ಪ್ರತಿಭಟನೆ ನೆಪದಲ್ಲಿ ದುಂಡಾವರ್ತನೆ ಪ್ರದರ್ಶಿಸಿ ಸಂಸತ್‌ ಕಲಾಪದ ಘನತೆಗೆ ಧಕ್ಕೆ ತಂದ ಆಪಾದನೆಯಡಿ ಪ್ರತಿಪಕ್ಷಗಳ 12 ಸಂಸದರನ್ನು ಚಳಿಗಾಲ ಅಧಿವೇಶನದ ಮೊದಲ ದಿನವೇ ಅಮಾನತುಗೊಳಿಸಲಾಗಿದೆ. ಈ ಅಧಿವೇಶನ ಪೂರ್ತಿ ಸದನಕ್ಕೆ ಅವರ ಪ್ರವೇಶ ನಿಷೇಧಿಸಲಾಗಿದೆ. ಕರ್ನಾಟಕದ ನಾಸಿರ್‌ ಹುಸೇನ್‌ ಸೇರಿದಂತೆ ಹನ್ನೆರಡು ಸಂಸದರನ್ನು ಅಮಾನತುಗೊಳಿಸುವ ನಿಲುವಳಿಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಮಂಡಿಸಿದರು. ‘ಮುಂಗಾರು ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ನೆಪದಲ್ಲಿ ಕೆಲವು ಸಂಸದರು, ಪೀಠದ ಗೌರವ ಧಿಕ್ಕರಿಸಿ ಮನಸ್ಸಿಗೆ ಬಂದಂತೆ ನಡೆದುಕೊಂಡರು. ಉದ್ದೇಶಪೂರ್ವಕವಾಗಿಯೇ ಸದನದ ನಿಯಮಗಳನ್ನು ಗಾಳಿಗೆ ತೂರಿದರು. ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಮೂಲಕ ಹಿಂಸಾತ್ಮಕವಾಗಿಯೂ ವರ್ತಿಸಿದರು. ಹಿಂದೆಂದೂ ಕಾಣದ ದುರ್ವರ್ತನೆ ಪ್ರದರ್ಶಿಸಿದ ಹನ್ನೆರಡು ಸಂಸದರು ಕ್ಷಮೆಗೆ ಅರ್ಹರಲ್ಲ. ಅವರೆಲ್ಲರನ್ನೂ ಈ ಅಧಿವೇಶನದಿಂದ ಅಮಾನತುಗೊಳಿಸುವುದೇ ಸೂಕ್ತ’ ಎಂದು ಪ್ರಲ್ಹಾದ್‌ ಜೋಶಿ ಹೇಳಿದರು. ಅಧಿವೇಶನದ ವೇಳೆ ದಾಂಧಲೆ ಎಬ್ಬಿಸಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಕೇಂದ್ರ ಸರಕಾರ, ಸಭಾಪತಿಗೆ ಈ ಮೊದಲು ಮನವರಿಕೆ ಮಾಡಿಕೊಟ್ಟಿತ್ತು. ನಂತರ ಜೋಶಿ ಅವರು ಮಂಡಿಸಿದ ನಿಲುವಳಿಗೆ ರಾಜ್ಯಸಭೆ ಉಪ ಸಭಾಪತಿ ಹರಿವಂಶ್‌ ನಾರಾಯಣ್‌ ಸಿಂಗ್‌ ಸಮ್ಮತಿಯ ಮುದ್ರೆ ಒತ್ತಿದರು. ಇದನ್ನು ಪ್ರತಿಭಟಿಸಿ ಪ್ರತಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದರು. ‘ಹಿಂದಿನ ಅಧಿವೇಶನದಲ್ಲಿ ಆದ ಘಟನೆಗೆ ಈಗ ಕ್ರಮ ಕೈಗೊಳ್ಳುತ್ತಿರುವುದು ಅಕ್ರಮ. ಅಂತಹ ಯಾವುದೇ ನಿಯಮ ಸದ್ಯಕ್ಕೆ ಇಲ್ಲ. ಈ ಸರಕಾರಕ್ಕೆ ಸದನದ ಘನತೆಯ ಬಗ್ಗೆ ಕಾಳಜಿ ಇಲ್ಲ. ಇದು ಉದ್ಧಟತನ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ ಉಪ ಸಭಾಪತಿಗಳು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು. ಅಮಾನತುಗೊಂಡ ಸದಸ್ಯರು: ಇಳಮರಮ್‌ ಕರೀಮ್‌(ಸಿಪಿಎಂ), ಫುಲೊ ದೇವಿ ನೇತಮ್‌ (ಕಾಂಗ್ರೆಸ್‌), ಛಾಯಾ ವರ್ಮಾ (ಕಾಂಗ್ರೆಸ್‌), ರಿಪುನ್‌ ಬೋರಾ (ಕಾಂಗ್ರೆಸ್‌), ಬಿನೋಯ್‌ ವಿಶ್ವಂ (ಸಿಪಿಐ), ರಾಜಮಣಿ ಪಟೇಲ್‌ (ಕಾಂಗ್ರೆಸ್‌), ಡೋಲಾ ಸೇನ್‌ (ಟಿಎಂಸಿ), ಶಾಂತಾ ಛೆಟ್ರಿ (ಟಿಎಂಸಿ), ಸೈಯದ್‌ ನಾಸಿರ್‌ ಹುಸೇನ್‌ (ಕಾಂಗ್ರೆಸ್‌), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ), ಅನಿಲ್‌ ದೇಸಾಯಿ (ಶಿವಸೇನೆ) ಮತ್ತು ಅಖಿಲೇಶ್‌ ಪ್ರಸಾದ್‌ ಸಿಂಗ್‌ (ಕಾಂಗ್ರೆಸ್‌).


from India & World News in Kannada | VK Polls https://ift.tt/3FWbUmY

Omicron: ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಏರ್‌ಪೋರ್ಟ್‌, ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಸುಧಾಕರ್

ಬೆಂಗಳೂರು: ಆತಂಕದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಬಗ್ಗೆ ಮಂಗಳವಾರ ನಡೆಯಲಿರುವ ತಜ್ಞರ ಸಭೆಯಲ್ಲೂ ಚರ್ಚೆ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ. ಕೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಓಮಿಕ್ರಾನ್ ಎಂಬ ಹೊಸ ಪ್ರಭೇದದ ಸೋಂಕಿನ ಬಗ್ಗೆ ಡಿಸೆಂಬರ್ 1ನೇ ತಾರೀಕಿನ ಬಳಿಕ ವರದಿ ಸಿಗಲಿದೆ. ಹಾಗಿದ್ದರೂ ಗಡಿಗಳಲ್ಲಿ, ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು. ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಕೋವಿಡ್ ಕಂಡು ಬಂದಿದ್ದು ಈ ಪೈಕಿ 63 ವರ್ಷದ ಓರ್ವ ವ್ಯಕ್ತಿಯಲ್ಲಿ ಡೆಲ್ಟಾಗಿಂತ ಭಿನ್ನ ಸ್ವರೂಪದ ವೈರಸ್ ಪತ್ತೆಯಾಗಿದೆ. ಇದರ ಮಾದರಿಯನ್ನು ಐಸಿಎಂಆರ್‌ಗೆ ಕಳಿಸಿಕೊಡಲಾಗಿದ್ದು ಇನ್ನೂ ವರದಿ ಕೈಸೇರಿಲ್ಲ, ಇನ್ನೆರಡು ದಿನಗಳಲ್ಲಿ ವರದಿ ಸಿಗಲಿದೆ ಎಂದರು. ಕೊರೊನಾ ವೈರಸ್‌ನ ಓಮಿಕ್ರಾನ್ ತಳಿ ಕುರಿತಾದ ಆತಂಕದ ಹಿನ್ನೆಲೆಯಲ್ಲಿ ಸರ್ಕಾರದ ಮುಂದೆ ಪ್ರಸ್ತಾವವೇ ಇಲ್ಲ. ಸದ್ಯ ಯಾವುದೇ ಚಟುವಟಿಕೆ ಮೇಲೆ ನಿರ್ಬಂಧ ಇಲ್ಲ. ಶಾಲೆ- ಕಾಲೇಜು ಕೈಗಾರಿಕೆಯ ಮೇಲೆ ನಿರ್ಬಂಧ ಹೇರುವ ಆಲೋಚನೆ ಸರ್ಕಾರದ ಮುಂದೆ ಇಲ್ಲ. ಯಾವುದೇ ಚಟುವಟಿಕೆಯ ಮೇಲೆ ಕ್ರಮ ನಿಯಂತ್ರಣ ಹಾಕುವ ಯಾವುದೇ ಪ್ರಸ್ತಾವವೂ ಸರ್ಕಾರದ ಮುಂದೆ ಇಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಸಭೆಯಲ್ಲಿ ಹೊಸ ತಳಿಯ ಆತಂಕದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. 3ನೇ ಡೋಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಐಸಿಎಂಆರ್ ನಿರ್ಧಾರ ಮಾಡುತ್ತದೆ. ಅವರೇ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಲಾಕ್‌ಡೌನ್ ಮಾಡುವ ಉದ್ದೇಶ ಇಲ್ಲ. ಸರ್ಕಾರ ಘೋಷಣೆ ಮಾಡುವವರೆಗೂ ಲಾಕ್‌ಡೌನ್ ಮಾಡುವುದಿಲ್ಲ. ಲಾಕ್‌ಡೌನ್ ಬಗ್ಗೆ ಜನರನ್ನು ತಪ್ಪುದಾರಿಗೆ ಎಳೆಯಬಾರದು. ಲಾಕ್‌ಡೌನ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರು ಸೋಮವಾರ ಎಚ್ಚರಿಕೆ ನೀಡಿದ್ದರು. ಕೋವಿಡ್ ನ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣು 12 ದೇಶಗಳಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ವಿಮಾನ ನಿಲ್ದಾಣ ಸೇರಿದಂತೆ ವಿವಿಧೆಡೆ ಎಲ್ಲಾ ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಕಳೆದ 12-13 ದಿನಗಳಲ್ಲಿ ನಿರ್ದಿಷ್ಟ ದೇಶಗಳಿಂದ ಬಂದವರ ಮೇಲೆ ನಿಗಾ ಇರಿಸಿ, ಅವರ ಸಂಪರ್ಕಿತರ ಪತ್ತೆ ಹಚ್ಚಲಾಗುತ್ತಿದೆ. ಹೊಸ ವೈರಾಣು ಕುರಿತು ಜನರು ಅನಗತ್ಯವಾಗಿ ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಈ ಮೊದಲಿನಂತೆಯೇ ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಸುಧಾಕರ್ ತಿಳಿಸಿದ್ದರು.


from India & World News in Kannada | VK Polls https://ift.tt/3rrdIAx

ಒಮಿಕ್ರಾನ್ ಆತಂಕ: ಆರೋಗ್ಯ ಇಲಾಖೆ ಅಧಿಕಾರಿಗಳು, ತಜ್ಞರ ಜೊತೆ ಸುಧಾಕರ್‌ ನಡೆಸಲಿದ್ದಾರೆ ಸರಣಿ ಸಭೆ

ಬೆಂಗಳೂರು: 12 ದೇಶಗಳಿಗೆ ಹರಡಿರುವ 'ಒಮಿಕ್ರಾನ್' ರೂಪಾಂತರಿ ಕೊರೊನಾ ಸೋಂಕು ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲ ಹಾ ಸಮಿತಿಯ ಪ್ರಮುಖರ ಜೊತೆ ಮಂಗಳವಾರ 11 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಒಮಿಕ್ರಾನ್ ತೀವ್ರತೆ ಹಾಗೂ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ದಕ್ಷಿಣ ಆಫ್ರಿಕಾ, ಬ್ರಿಟನ್‌ ಸೇರಿದಂತೆ ಒಟ್ಟು 12 ದೇಶಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಕೋವಿಡ್‌ನ ಹೊಸ ತಳಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ನಡುವೆ ದಕ್ಷಿಣ ಆಫ್ರಿಕಾದಿಂದ ಬಂದಿರುವ ವ್ಯಕ್ತಿಗಳಲ್ಲಿ, ಕೋವಿಡ್ ದೃಢಪಟ್ಟ ಇಬ್ಬರ ಪೈಕಿ ಒಬ್ಬರಲ್ಲಿ ಡೆಲ್ಟಾಕ್ಕಿಂತ ಭಿನ್ನ ಸ್ವರೂಪದ ವೈರಾಣು ಪತ್ತೆಯಾಗಿದೆ. ಒಮಿಕ್ರಾನ್ ಶಂಕೆ ಹಿನ್ನೆಲೆಯಲ್ಲಿ ಮಾದರಿಯನ್ನು ಐಸಿಎಂಆರ್‌ಗೆ ಕಳಿಸಿಕೊಡಲಾಗಿದೆ. ಅದರ ವರದಿ ಇನ್ನಷ್ಟೇ ಬರಬೇಕಿದೆ. ಸಭೆಯಲ್ಲಿ ಏನೆಲ್ಲಾ ಚರ್ಚೆಗಳು ನಡೆಯಬಹುದು? * ಒಮಿಕ್ರಾನ್‌ಸೋಂಕು ತೀವ್ರತೆ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳು * ಇತರ ದೇಶಗಳಲ್ಲಿ ಸೋಂಕು ಉಂಟು ಮಾಡಿದ ಅಪಾಯ ಹಾಗೂ ತೀವ್ರತ ಬಗ್ಗೆ ಚರ್ಚೆ * ಒಮಿಕ್ರಾನ್‌ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸುವ ಅಗತ್ಯತೆಗಳ ಕುರಿತಾಗಿ ಚರ್ಚೆ * ನಿರ್ಬಂಧಗಳನ್ನು ಕೈಗೊಳ್ಳಬೇಕಾದಲ್ಲಿ ಸದ್ಯ ಯಾವ ರೀತಿಯ ನಿರ್ಬಂಧಗಳ ಅಗತ್ಯ ಇದೆ? ಎಂಬ ನಿಟ್ಟಿನಲ್ಲಿ ತಜ್ಞರಿಂದ ಸಲಹೆ ಸೂಚನೆ ಸಂಗ್ರಹ ಸಾಧ್ಯತೆ * ವಿವಿಧ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮೂರನೇ ಅಲೆ ಸಾಧ್ಯತೆಗಳ ಕುರಿತಾಗಿ ಚರ್ಚೆ * ಒಮಿಕ್ರಾನ್‌ ಸೋಂಕು ಹಾಗೂ ಮೂರನೇ ಅಲೆ ತೀವ್ರತೆ ಜಾಸ್ತಿಯಾದಲ್ಲಿ ಅದನ್ನು ಎದುರಿಸಲು ಮಾಡಿಕೊಳ್ಳಬೇಕಾದ ಅಗತ್ಯ ಸಿದ್ಧತೆಗಳ ಬಗ್ಗೆ ತಜ್ಞರ ಅಭಿಪ್ರಾಯ ಮಾರ್ಗಸೂಚಿ ಜಾರಿಗೊಳ್ಳುತ್ತಾ? ರಾಜ್ಯದಲ್ಲಿ ಕೋವಿಡ್ ಸೋಂಕಿನ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಮಾಯವಾಗಿದೆ. ಈ ನಿಟ್ಟಿನಲ್ಲಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಗೈಡ್‌ ಲೈನ್ಸ್ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಸರ್ಕಾರದ ಮುಂದೆ ಲಾಕ್‌ಡೌನ್ ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಆದರೂ ಕೆಲವೊಂದು ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಈ ಎಲ್ಲ ವಿಚಾರಗಳ ಜೊತೆಗೆ ಅಧ್ಯಯನ ವರದಿಗಳ ಬಗ್ಗೆ ಚರ್ಚೆ ನಡೆಯಬಹುದು. ಅಷ್ಟೇ ಅಲ್ಲದೆ ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಕೆಲವೊಂದು ಮಹತ್ವದ ಸಲಹೆ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.


from India & World News in Kannada | VK Polls https://ift.tt/3E8PBtE

ಕೋವಿಡ್ 19 ಲಾಕ್‌ಡೌನ್‌ನ ಮೊದಲ ಮೂರು ತಿಂಗಳಲ್ಲಿ ಶೇ 7.5ರಷ್ಟು ಉದ್ಯೋಗ ನಷ್ಟ: ಕೇಂದ್ರ ಸರ್ಕಾರ

ಹೊಸದಿಲ್ಲಿ: ಕೊರೊನಾ ವೈರಸ್ ಸೋಂಕಿನ ಕಾರಣದಿಂದ ದೇಶಾದ್ಯಂತ 2020ರ ಮಾರ್ಚ್ ತಿಂಗಳಲ್ಲಿ ಜಾರಿಯಾದ ಮೊದಲ ಮೂರು ತಿಂಗಳು ಸಂಘಟಿತ ವಲಯದಲ್ಲಿ ಶೇ 7.5ರಷ್ಟು ಕಡಿತ ಉಂಟಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್‌ಗೆ ತಿಳಿಸಿದೆ. 2020ರ ಜೂನ್ ಬಳಿಕದ ಉಂಟಾದ ಉದ್ಯೋಗ ಕಡಿತದ ಕುರಿತು ತನ್ನ ಬಳಿ ದಾಖಲೆಗಳಿಲ್ಲ ಎಂದು ಹೇಳಿದೆ. ಲೋಕಸಭೆಯಲ್ಲಿ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರವಾಗಿ ಅಂಕಿ ಅಂಶಗಳನ್ನು ನೀಡಿದೆ. ತೀವ್ರ ಕಟ್ಟುನಿಟ್ಟಾದ ಲಾಕ್‌ಡೌನ್ ಕಾರಣದಿಂದ ಮಹಿಳೆಯರು ಉದ್ಯೋಗ ಕಳೆದುಕೊಂಡ ಬಗ್ಗೆ ಸರ್ಕಾರಕ್ಕೆ ಅರಿವು ಇದೆಯೇ ಎಂದು ಸಿಂಗ್ ಪ್ರಶ್ನಿಸಿದ್ದರು. 2020-21ನೇ ಸಾಲಿನ ಮೊದಲ ತ್ರೈಮಾಸಿಕ ಉದ್ಯೋಗ ಸಮೀಕ್ಷೆಯ ದಾಖಲೆಗಳನ್ನು ಉಲ್ಲೇಖ ಮಾಡಿರುವ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ, ಉತ್ಪಾದನೆ, ಸಾರಿಗೆ ಮತ್ತು ನಿರ್ಮಾಣ ವಲಯಗಳು ಸೇರಿದಂತೆ ಒಟ್ಟು ಒಂಬತ್ತು ವಲಯಗಳಲ್ಲಿನ ಪುರುಷ ಉದ್ಯೋಗಿಗಳ ಸಂಖ್ಯೆ 21 ಮಿಲಿಯನ್‌ನಿಂದ 20 ಮಿಲಿಯನ್‌ಗೆ ಕುಸಿದಿದೆ. ಹಾಗೆಯೇ ಮಹಿಳಾ ಉದ್ಯೋಗಿಗಳ ಸಂಖ್ಯೆ 9 ಮಿಲಿಯನ್‌ನಿಂದ 8.3 ಮಿಲಿಯನ್‌ಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ. ಈ ಸಮೀಕ್ಷೆಯು ಸಂಘಟಿತ ವಲಯವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡಿದೆ. ಆದರೆ ಅಸಂಘಟಿತ ವಲಯವನ್ನು ಗಣನೆಗೆ ತೆಗೆದುಕೊಂಡಿಲ್ಲ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಪ್ರಕಾರ ಭಾರತದಲ್ಲಿ ಈ ವರ್ಷ ಶೇ 81ರಷ್ಟು ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ, ಶೇ 6.5ರಷ್ಟು ಮಂದಿ ಔದ್ಯೋಗಿಕ ಹಾಗೂ ಶೇ 0.8ರಷ್ಟು ಮಂದಿ ಮನೆಗೆಲಸಗಳ ವಲಯದಲ್ಲಿ ಇದ್ದಾರೆ. ಐಟಿ, ಬಿಪಿಒ, ಹಣಕಾಸು ಸೇವೆ, ಆರೋಗ್ಯ ವಲಯದಂತಹ 'ಬಿಳಿ ಕಾಲರ್' ಉದ್ಯೋಗಳಿಗೆ ಹೋಲಿಸಿದರೆ ನಿರ್ಮಾಣ, ಉತ್ಪಾದನೆ, ಶಿಕ್ಷಣ ಮತ್ತು ವ್ಯಾಪಾರ ವಲಯಗಳಂತಹ 'ನೀಲಿ ಕಾಲರ್' ಉದ್ಯೋಗಗಳಲ್ಲಿ ಅಧಿಕ ಕಡಿತ ಉಂಟಾಗಿದೆ. ಅಖಿಲ ಭಾರತ ತ್ರೈಮಾಸಿಕ ಸಂಸ್ಥೆ ಆಧಾರಿತ ಉದ್ಯೋಗ ಸಮೀಕ್ಷೆ (AQEES) ವರದಿ ಪ್ರಕಾರ, 2020ರ ಮಾರ್ಚ್ 25 ರಿಂದ 2020ರ ಜುಲೈ 1 ಅವಧಿಯವರೆಗೆ ಭಾರತದಲ್ಲಿ 14.2 ಲಕ್ಷ ಉದ್ಯೋಗ ನಷ್ಟವು ಉತ್ಪಾದನಾ ವಲಯದಲ್ಲಿ ಸಂಭವಿಸಿದೆ. ನಿರ್ಮಾಣ ವಲಯದಲ್ಲಿ ಒಂದು ಲಕ್ಷ, ವ್ಯಾಪಾರ ಮತ್ತು ಶಿಕ್ಷಣ ವಲಯಗಳಲ್ಲಿ ಕ್ರಮವಾಗಿ 1.8 ಲಕ್ಷ ಮತ್ತು 2.8 ಲಕ್ಷ ಉದ್ಯೋಗ ಕಡಿತ ಉಂಟಾಗಿದೆ. ಮಹಿಳಾ ಉದ್ಯೋಗ ಪ್ರಮಾಣ ಹೆಚ್ಚಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಸರ್ಕಾರವು ಕಳೆದ ವರ್ಷ ಜಾರಿಗೆ ತಂದಿರುವ ಆತ್ಮನಿರ್ಭರ ಭಾರತ ರೋಜ್‌ಗಾರ್ ಯೋಜನೆಯನ್ನು ಉಲ್ಲೇಖಿಸಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಉಂಟಾದ ಉದ್ಯೋಗ ನಷ್ಟವನ್ನು ಮರಳಿ ಕಲ್ಪಿಸಲು ಹಾಗೂ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ನೀಡಲು ಮತ್ತು ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಈ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಯು 5,70,000 ಮಹಿಳೆಯರು ಸೇರಿದಂತೆ 2.2 ಮಿಲಿಯನ್ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿದೆ ಎಂದು ಸರ್ಕಾರ ತಿಳಿಸಿದೆ.


from India & World News in Kannada | VK Polls https://ift.tt/2ZHaOfu

ಓಮಿಕ್ರಾನ್‌ ವೈರಸ್‌ ಆತಂಕ: ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆಗೆ ಧಾವಂತ!

ಎಸ್‌. ಜಿ. ಕುರ್ಯ, ಉಡುಪಿ: ಕೋವ್ಯಾಕ್ಸಿನ್‌, ಲಸಿಕೆಯ ಪ್ರಥಮ ಮತ್ತು ದ್ವಿತೀಯ ಡೋಸ್‌ ಸಾಕಷ್ಟು ಲಭ್ಯವಿದ್ದರೂ ಉದಾಸೀನ, ನಿರ್ಲಕ್ಷ್ಯ ಮನೋಭಾವ ತೋರದೆ ಬೇಗ ಬೇಗನೆ ಹಾಕಿಸಿಕೊಳ್ಳಲು ಓಮಿಕ್ರಾನ್‌ ರೂಪಾಂತರಿ ವೈರಸಿನ ಆತಂಕ ಪ್ರಚೋದನೆ ನೀಡಿದೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್‌-19 ಲಸಿಕೆ ಕೋವಿಶೀಲ್ಡ್‌ ಹಾಗೂ ಒಂದು ಲಕ್ಷ ಡೋಸಿಗೂ ಅಧಿಕ ದಾಸ್ತಾನಿದ್ದು ಓಮಿಕ್ರಾನ್‌ ವೈರಸ್‌ನಿಂದಾಗಿ ಕೋವಿಡ್‌ ಲಸಿಕೆಯ ಪ್ರಥಮ ಮತ್ತು ಎರಡನೇ ಡೋಸಿಗೆ ಒಡೋಡಿ ಬರುತ್ತಿದ್ದಾರೆ. ಸೋಮವಾರ ಕೋವಿಡ್‌19 ಲಸಿಕೆಯ ಮೊದಲ ಡೋಸ್‌ 1,622 ಮಂದಿ ಹಾಗೂ ಎರಡನೇ ಡೋಸ್‌ 11,258ಮಂದಿ ಹಾಕಿಸಿಕೊಂಡಿದ್ದಾರೆ. ಆತಂಕದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಜನತೆಗೆ ಮುನ್ನೆಚ್ಚರಿಕೆ ನೀಡಿದೆ, ಚೆಕ್‌ಪೋಸ್ಟ್‌ ನಿರ್ಮಾಣ, ಸೋಂಕು ಪರೀಕ್ಷೆ ಸಹಿತ ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದೆ. 72ಗಂಟೆಗಳೊಳಗಿನ ವರದಿ ಕೇರಳ, ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆ ಪ್ರವೇಶಿಸುವವರಿಗೆ 72ಗಂಟೆಗಳೊಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯವಾಗಿದ್ದು ಏಳು ದಿನಗಳ ಕ್ವಾರಂಟೈನಿಗೆ ಒಳಪಡಿಸಿ, ಕೊನೆಯ ದಿನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೊಮ್ಮೆ ಆರ್‌ಟಿಪಿಸಿಆರ್‌ ವರದಿ ಇಲ್ಲದೆ ಬಂದವರನ್ನು ಪರೀಕ್ಷಿಸಿ ಕ್ವಾರಂಟೈನಿಗೊಪ್ಪಿಸಲಾಗುತ್ತದೆ. ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಕೋವಿಡ್‌ ಟೆಸ್ಟಿಗೆ ಒಳಪಡಿಸಲಾಗುತ್ತಿದ್ದು ಏಳು ದಿನಗಳ ಕ್ವಾರಂಟೈನ್‌ ಕಡ್ಡಾಯವಾಗಿದೆ. ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲೂ ಕೇರಳ, ಮಹಾರಾಷ್ಟ್ರದಿಂದ ಬಂದವರಿಗೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯವಾಗಿದ್ದು ವರದಿ ಇಲ್ಲದಿದ್ದರೆ ಪರೀಕ್ಷೆಗೊಳಪಡಿಸಲಾಗುತ್ತಿದೆ. ಮಾಸ್ಕ್‌ ಧಾರಣೆ ಮರೆಯದಿರಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧಾರಣೆಯನ್ನು ಜನರು ನಿಧಾನವಾಗಿ ಮರೆಯುವ ನಿರ್ಲಕ್ಷ್ಯವು ಅನ್ಯರಿಗೆ ಓಮಿಕ್ರಾನ್‌ ರೂಪಾಂತರಿ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ಅಪಾಯಕಾರಿಯಾಗಿದೆ. 26 ಇಲಾಖೆಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದವರ ವಿರುದ್ಧ ದಂಡ ಪ್ರಯೋಗ ಅಸ್ತ್ರವನ್ನು ಹೆಚ್ಚಿನ ಅಧಿಕಾರಿಗಳು ಕೈಬಿಟ್ಟಿದ್ದಾರೆ. ಪೊಲೀಸ್‌ ಇಲಾಖೆಯು ಈ ತನಕ ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಧರಿಸದವರ ವಿರುದ್ಧ 52,190ಪ್ರಕರಣ ದಾಖಲಿಸಿ 58,01,770ರೂ. ದಂಡ ವಸೂಲಿ ಮಾಡಲಾಗಿದೆ. ಕಳೆದ 15 ದಿನಗಳಿಂದ ಮಾಸ್ಕ್‌ ಧರಿಸಲು ಜನರ ನಿರ್ಲಕ್ಷ್ಯದ ಮೇಲೆ ನಿಗಾ ಇರಿಸಿ ಎಚ್ಚರಿಸಬೇಕಾದ ಅಧಿಕಾರಿಗಳೂ ನಿಷ್ಕ್ರೀಯರಾಗಿದ್ದಾರೆ. ಧಾರ್ಮಿಕ ದತ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ. ಪೂ. ಶಿಕ್ಷಣ ಇಲಾಖೆ ದಂಡ ವಿಧಿಸುವಲ್ಲಿ ಶೂನ್ಯ ಸಾಧನೆ ಮಾಡಿದೆ. ಉಡುಪಿ ಜಿಲ್ಲೆಯಲ್ಲಿ ಆರು ಚೆಕ್‌ ಪೋಸ್ಟ್‌ ನಿರ್ಮಿಸಿದ್ದು ವಿದೇಶ, ಅನ್ಯ ರಾಜ್ಯ, ಅನ್ಯ ಜಿಲ್ಲೆಗಳಿಂದ ಬರುವವರ ಮೇಲೆ ನಿಗಾ ಮುಂದುವರಿದಿದೆ. ಎಲ್ಲರಿಗೂ ಕೋವಿಡ್‌-19 ಲಸಿಕೆಯ ಮೊದಲ, ಎರಡನೇ ಡೋಸ್‌ ಪೂರ್ಣ ಪ್ರಮಾಣದಲ್ಲಾಗಬೇಕು. ಒಮಿಕ್ರಾನ್‌ ರೂಪಾಂತರಿ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಪರೀಕ್ಷೆ, ಲಸಿಕೆಯ ಮೊದಲ/ಎರಡನೇ ಡೋಸ್‌ ಪಡೆಯುವುದು ಹಾಗೂ ಮಾಸ್ಕ್‌ ಧಾರಣೆಯ ಮುನ್ನೆಚ್ಚರಿಕೆಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು. ಕೂರ್ಮಾ ರಾವ್‌, ಜಿಲ್ಲಾಧಿಕಾರಿ, ಉಡುಪಿ ಮಾಸ್ಕ್‌ ಧರಿಸಿದವರ ವಿರುದ್ಧ ದಂಡ ಪ್ರಯೋಗ ಎಷ್ಟು?
  • ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ: 4,848ಪ್ರಕರಣ(8,97,100ರೂ.)
  • 155 ಗ್ರಾ.ಪಂ. ವ್ಯಾಪ್ತಿ: 5,479ಪ್ರಕರಣ(5,51,470ರೂ.)
  • ಅಬಕಾರಿ ಇಲಾಖೆ: 2066ಪ್ರಕರಣ(2,06,600ರೂ.)
  • ಕಂದಾಯ ಇಲಾಖೆ: 1,421ಪ್ರಕರಣ(1,42,650ರೂ.)
  • ಪೊಲೀಸ್‌ ಇಲಾಖೆ: 38,071ಪ್ರಕರಣ(39,73,350ರೂ.)
  • ಮೀನುಗಾರಿಕಾ ಇಲಾಖೆ: 90ಪ್ರಕರಣ(9,000ರೂ.)
  • ಪ್ರವಾಸೋದ್ಯಮ ಇಲಾಖೆ: 86ಪ್ರಕರಣ(8,600ರೂ.)
  • ಸಾರಿಗೆ ಇಲಾಖೆ: 8ಪ್ರಕರಣ(800ರೂ.)
  • ಎಪಿಎಂಸಿ: 121ಪ್ರಕರಣ(12,200ರೂ.)
ಕೋವಿಡ್‌ ಲಸಿಕೆ ಪ್ರಗತಿ ಎಷ್ಟು?
  • ಫಸ್ಟ್‌ ಡೋಸ್‌ ಗುರಿ: 9,99,900
  • ಪ್ರಗತಿ: 9,33,638(ಶೇ.93.46)
  • ಬಾಕಿ: 66,262
  • ಸೆಕೆಂಡ್‌ ಡೋಸ್‌ ಗುರಿ: 9,99,900
  • ಪ್ರಗತಿ 6,93,545(ಶೇ. 69.42)
  • ಬಾಕಿ: 3,06,355


from India & World News in Kannada | VK Polls https://ift.tt/3D0eqXu

ಬೆಂಗಳೂರಿನಲ್ಲಿ 2343 ಎಕರೆ ಸರಕಾರಿ ಭೂಮಿ ಹಂಚಿಕೆ; ಸಾರ್ವಜನಿಕ ಉದ್ದೇಶಕ್ಕೆ ಬಳಕೆ!

ನಾಗಪ್ಪ ನಾಗನಾಯಕನಹಳ್ಳಿ, ಬೆಂಗಳೂರು: ಸರಕಾರಿ ಗೋಮಾಳ, ಗುಂಡುತೋಪು, ಕೆರೆ ಅಂಗಳ, ಸ್ಮಶಾನ ಭೂಮಿಯನ್ನು ಕಬಳಿಸಿರುವವರ ವಿರುದ್ಧ ಸಮರ ಸಾರಿರುವ ನಗರ ಜಿಲ್ಲಾಡಳಿತ, ಇಲ್ಲಿಯವರೆಗೆ 16,195 ಎಕರೆಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ 2343 ಎಕರೆಯಷ್ಟು ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಹಂಚಿಕೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1,22,918 ಎಕರೆ ಸರಕಾರಿ ಜಮೀನಿದೆ. ಈ ಪೈಕಿ 22,199 ಎಕರೆಯಷ್ಟು ಒತ್ತುವರಿಯಾಗಿದ್ದು, ಇದುವರೆಗೆ 16,195 ಎಕರೆ ಒತ್ತುವರಿ ತೆರವುಗೊಳಿಸಿ, ಸರಕಾರದ ಸುಪರ್ದಿಗೆ ಪಡೆದುಕೊಳ್ಳುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. 12179 ಎಕರೆಗೆ ಸಂಬಂಧಿಸಿದಂತೆ ಸಾರ್ವಜನಿಕರು ನಮೂನೆ-50/53 ಅಡಿ ಅರ್ಜಿ ಸಲ್ಲಿಸಿದ್ದು, ಇತ್ಯರ್ಥ ಬಾಕಿ ಇದೆ. 2139 ಎಕರೆ ಜಮೀನಿನ ಒಡೆತನಕ್ಕೆ ಸಂಬಂಧಿಸಿದ ವಿವಾದವು ನ್ಯಾಯಾಲಯದಲ್ಲಿದೆ. 7881 ಎಕರೆಯು ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಿದೆ. ಹಾಗಾಗಿ, 22,199 ಪೈಕಿ 16,526 ಎಕರೆ ಮಾತ್ರ ಒತ್ತುವರಿಯಾಗಿರುವುದನ್ನು ಗುರುತಿಸಲಾಗಿತ್ತು. ನಗರ ಜಿಲ್ಲಾಡಳಿತವು ನೀಡಿರುವ ಅಂಕಿ-ಅಂಶಗಳ ಪ್ರಕಾರ ಇಲ್ಲಿಯವರೆಗೆ ಖಾಸಗಿ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಟ್ರಸ್ಟ್‌ಗಳು, ಸಂಘ-ಸಂಸ್ಥೆಗಳಿಗೆ 358.19 ಎಕರೆಯನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿದೆ. ಇದಲ್ಲದೆ, ಶಾಲೆ, ಅಂಗನವಾಡಿ ಆಟದ ಮೈದಾನ, ಆಸ್ಪತ್ರೆ, ಸಮುದಾಯನ ಭವನ, ವಿದ್ಯುತ್‌ ಚಿತಾಗಾರ, ಸ್ಮಶಾನ, ರಸ್ತೆ, ವಿದ್ಯಾರ್ಥಿ ನಿಲಯ, ಆಶ್ರಯ ಯೋಜನೆ, ಒಂದು ಲಕ್ಷ ಬಹುಮಹಡಿ ಮನೆಗಳ ನಿರ್ಮಾಣ, ಘನತ್ಯಾಜ್ಯ ವಿಲೇವಾರಿ, ದೇವಾಲಯ ಮತ್ತು ಹಲವು ಸರಕಾರಿ ಇಲಾಖೆಗಳಿಗೆ ಜಮೀನು ಹಂಚಿಕೆ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದೀಚೆಗೆ ನಗರದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಹಾಗಾಗಿ, ಭೂಗಳ್ಳರು ಸರಕಾರಿ ಭೂಮಿಯನ್ನು ಕಬಳಿಸುತ್ತಲೇ ಬಂದಿದ್ದಾರೆ. ಜಿಲ್ಲಾಡಳಿತವು ಪ್ರತಿ ಶನಿವಾರ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡು, ಒತ್ತುವರಿದಾರರಿಗೆ ಬಿಸಿ ಮುಟ್ಟಿಸುತ್ತಲೇ ಇದೆ. ಅತಿಕ್ರಮಣ ತೆರವುಗೊಳಿಸಿ, ವಶಕ್ಕೆ ಪಡೆದ ಜಾಗವನ್ನು ಮತ್ತೆ ಒತ್ತುವರಿಯಾಗದಂತೆ ರಕ್ಷಿಸುವುದು ದೊಡ್ಡ ಸವಾಲಾಗಿದೆ. ಕೆಲವೆಡೆ ತೆರವುಗೊಳಿಸಿದ ಬಳಿಕವೂ ಒತ್ತುವರಿ ಮಾಡಿಕೊಂಡಿರುವ ಉದಾಹರಣೆಗಳಿವೆ. ಕೆಲ ಪ್ರಭಾವಿಗಳು, ಬಲಾಢ್ಯರು ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದಾರೆ. ಹೀಗಾಗಿ, ನೂರಾರು ಎಕರೆ ಭೂಮಿಯನ್ನು ಭೌತಿಕವಾಗಿ ಸರಕಾರದ ಸುಪರ್ದಿಗೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. 11 ವರ್ಷದಲ್ಲಿ 2,343 ಎಕರೆ ಹಂಚಿಕೆ ಹೀಗಾಗಿಯೇ, ರಾಜ್ಯ ಸರಕಾರವು ಒತ್ತುವರಿ ತೆರವುಗೊಳಿಸಿದ ಜಮೀನನ್ನು ನಾನಾ ಉದ್ದೇಶಗಳಿಗೆ ಹಂಚಿಕೆ ಮಾಡುತ್ತಿದೆ. ಕಳೆದ 11 ವರ್ಷಗಳಿಂದೀಚೆಗೆ ಒಟ್ಟು 2,343 ಎಕರೆ ಭೂಮಿಯನ್ನು ಸಾರ್ವಜನಿಕ ಉದ್ದೇಶಗಳಿಗೆ ಮಂಜೂರು ಮಾಡಿ, ಆಯಾ ಇಲಾಖೆಗಳ ವಶಕ್ಕೆ ಒಪ್ಪಿಸಲಾಗಿದೆ. ಇದರಿಂದ ಭೂಗಳ್ಳರ ಕಣ್ಣು ಮತ್ತೆ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಲಾಗಿದೆ. 2010-11 ರಿಂದ 2015-16ರವರೆಗೆ ಒಟ್ಟು 924.03 ಎಕರೆ ಜಮೀನನ್ನು ಶಾಲೆ, ಸರಕಾರಿ ಕಚೇರಿಗಳ ಕಟ್ಟಡ ನಿರ್ಮಾಣ, ಆಶ್ರಯ, ಸ್ಮಶಾನ, ಆಸ್ಪತ್ರೆ, ಸಮುದಾಯ ಭವನ, ರಾಜೀವ್‌ಗಾಂಧಿ ವಸತಿ ನಿಗಮ, ದೇವಾಲಯ, ರಸ್ತೆ, ಕೊಳಚೆ ನಿರ್ಮೂಲನಾ ಮಂಡಳಿ, ಆಟದ ಮೈದಾನ, ಕ್ರೀಡಾಂಗಣಕ್ಕೆ ಒದಗಿಸಲಾಗಿದೆ. ಅಷ್ಟೇ ಅಲ್ಲ; ಈ ಅವಧಿಯಲ್ಲಿ ಖಾಸಗಿಯವರಿಗೂ ಸರಕಾರಿ ಭೂಮಿಯನ್ನು ಧಾರೆ ಎರೆಯಲಾಗಿದೆ. ಯಲಹಂಕದಲ್ಲಿ ಸ್ಟಾಂಡರ್ಡ್‌ ಬಿರಕ್‌ ಮತ್ತು ಟೈಲ್ಸ್‌ ಕಂಪೆನಿಗೆ 11 ಗುಂಟೆ, ಆವಲಹಳ್ಳಿಯಲ್ಲಿ ಮಿಥಿಕ್‌ ಸೊಸೈಟಿಗೆ 10 ಎಕರೆ, ಜಾಲಾ ಹೋಬಳಿಯ ಹೊಸಹಳ್ಳಿಯಲ್ಲಿ ವೈ.ಎ.ಎನ್‌.ಚಾರಿಟಬಲ್‌ ಟ್ರಸ್ಟ್‌ಗೆ 4.28 ಎಕರೆ, ಕೊಡವ ಸಮಾಜಕ್ಕೆ ಶಾಲೆ, ವೃದ್ಧಾಶ್ರಮ, ಆಸ್ಪತ್ರೆ ನಡೆಸಲು 7 ಎಕರೆಗೆ ಮಂಜೂರು ಮಾಡಲಾಗಿದೆ. ಜಿಗಣಿಯ ಮಹಾಂತಲಿಂಗಪುರದಲ್ಲಿ 110 ಎಕರೆಯನ್ನು 30 ವರ್ಷಗಳ ಅವಧಿಗೆ ಐಐಎಂಬಿ ಸಂಸ್ಥೆಗೆ ಶೈಕ್ಷಣಿಕ ಉದ್ದೇಶಕ್ಕೆ ಗುತ್ತಿಗೆ ನೀಡಲಾಗಿದೆ. ಹಾಗೆಯೇ ಸರ್ಜಾಪುರದ ಕೂಡ್ಲುಬಳಿ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಹೈಯರ್‌ ಎಜುಕೇಷನ್‌ ಸಂಸ್ಥೆಗೆ 2 ಎಕರೆ, ಅತ್ತಿಬೆಲೆಯ ಯಡವನಹಳ್ಳಿಯಲ್ಲಿ ಗೌತಮ್‌ ಜನರಲ್‌ ಕಾಲೇಜು ವಿದ್ಯಾರ್ಥಿ ನಿಲಯಕ್ಕೆ 19 ಗುಂಟೆ, ವರ್ತೂರಿನ ಗುಂಜೂರಿನಲ್ಲಿ ಗುಂಜೂರು ಕ್ಲಬ್‌ಗೆ 6 ಎಕರೆ, ಕೆ.ಆರ್‌.ಪುರದ ಕ್ಯಾಲಸನಹಳ್ಳಿಯಲ್ಲಿ ನಿಮ್ಹಾನ್ಸ್‌ಗೆ 39.38 ಎಕರೆ, ಚಲ್ಲಘಟ್ಟ ಮತ್ತು ಕೋಡಿಹಳ್ಳಿಯಲ್ಲಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ಗೆ 124 ಎಕರೆಯನ್ನು ಗುತ್ತಿಗೆಗೆ ಕೊಡಲಾಗಿದೆ. ಒಟ್ಟಾರೆ, ಖಾಸಗಿಯವರಿಗೆ 358.19 ಎಕರೆಯನ್ನು ಮಂಜೂರು ಮಾಡಲಾಗಿದೆ. ತಾಲ್ಲೂಕುವಾರು ಸರಕಾರಿ ಜಮೀನು ಹಂಚಿಕೆ ವಿವರ (2015ರಿಂದ ಇಲ್ಲಿಯವರೆಗೆ) ತಾಲೂಕು ಸಾರ್ವಜನಿಕ ಉದ್ದೇಶಕ್ಕೆ ಹಂಚಿಕೆ ಮಾಡಿರುವ ಭೂಮಿ (ಎಕರೆಗಳಲ್ಲಿ)
  • ಬೆಂಗಳೂರು ಉತ್ತರ 131.22
  • ಬೆಂಗಳೂರು ದಕ್ಷಿಣ 633.09
  • ಯಲಹಂಕ 127.11
  • ಬೆಂಗಳೂರು ಪೂರ್ವ 102.05
  • ಆನೇಕಲ್‌ 425.14
  • ಒಟ್ಟು 1419.21


from India & World News in Kannada | VK Polls https://ift.tt/3D451Or

ಡಿಸೆಂಬರ್‌ 3ರವರೆಗೆ ರಾಜ್ಯದ ಕೆಲವೆಡೆ ಮಳೆ ಮುಂದುವರಿಕೆ ಸಾಧ್ಯತೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್‌ 3ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ನ. 30ರಿಂದ ಡಿ. 3ರವರೆಗೆ ಮಳೆಯಾಗುವ ಸಂಭವವಿದೆ. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಡಿ.2ರಂದು ಹೊರತುಪಡಿಸಿ ಉಳಿದ ದಿನಗಳಲ್ಲಿ ಯಾವುದೇ ಮಳೆಯ ಮುನ್ಸೂಚನೆ ಇಲ್ಲ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಉಡುಪಿ ಜಿಲ್ಲೆಯ ಮೂಡಾರು 20 ಮಿ.ಮೀ, ಶಂಕರನಾರಾಯಣ 18 ಮಿ.ಮೀ, ಉಳ್ಳೂರಿನಲ್ಲಿ 17.5 ಮಿ.ಮೀ ಹಾಗೂ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ 7.5 ಮಿ.ಮೀ. ಮಳೆಯಾಗಿದೆ. ಆಂಧ್ರ ಸೇರಿ ಹಲವು ರಾಜ್ಯಗಳಲ್ಲಿ ಇನ್ನೆರಡು ದಿನ ಸಾಧ್ಯತೆ ಅಮರಾವತಿ: ಅಂಡಮಾನ್‌ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಆಂಧ್ರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಡಿ. 2ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. "ಅಂಡಮಾನ್‌ ಸಾಗರದಲ್ಲಿನ ವಾಯುಭಾರ ಕುಸಿತವು ನ. 20ರಂದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಹೀಗಾಗಿ ಅಂಡಮಾನ್‌ ಮತ್ತು ನಿಕೋಬಾರ್‌, ಆಂಧ್ರ ಪ್ರದೇಶ, ಒಡಿಶಾಗಳಲ್ಲಿ ಡಿ.2ರವರೆಗೆ ಭಾರಿ ಮಳೆಯಾಗಲಿದೆ. ಅಲ್ಲದೆ, ಗುಜರಾತ್‌, ಮಹಾರಾಷ್ಟ್ರದ ಕೊಂಕಣ ಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶಗಳಲ್ಲಿಯೂ ಇನ್ನೂ ಎರಡು ದಿನ ಮಳೆಯಾಗಲಿದೆ. ದೇಶಾದ್ಯಂತ ಈ ವಾರ ಹವಾಮಾನ ಪರಿಸ್ಥಿತಿಯಲ್ಲಿ ಗಣನೀಯ ಬದಲಾವಣೆ ಉಂಟಾಗಲಿದೆ," ಎಂದು ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿಆಂಧ್ರ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ತಮಿಳುನಾಡಿನಲ್ಲಿ ಮಳೆ ಆರ್ಭಟ ಸೋಮವಾರವೂ ಮುಂದುವರಿದಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಾಯುಭಾರ ಕುಸಿತ- ರಾಯಚೂರಿಗೆ ಮತ್ತೆ ಮಳೆಯ ಕಾಟ ರಾಯಚೂರು: ಕಳೆದ ಒಂದು ವಾರದಿಂದ ಮಳೆಯಿಂದ ತತ್ತರಿಸಿದ್ದ ಜಿಲ್ಲೆಯ ಜನತೆಗೆ ಈಗ ವಾಯುಭಾರ ಕುಸಿತದಿಂದ ಮತ್ತೆ ಮಳೆಯಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಳೆಯಿಂದಾಗಿ ಭತ್ತ, ಹತ್ತಿ ಬೆಳೆ ಹಾನಿ ಅನುಭವಿಸಿದ್ದ ರೈತರಿಗೆ ಸೋಮವಾರದಿಂದ ಮತ್ತೆ ಮಳೆ ಸುರಿಯಲಾರಂಭಿಸಿದ್ದು ನಷ್ಟದ ಹೊರೆ ಹೆಚ್ಚಿಸುವ ಭೀತಿ ಮೂಡಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಚಳಿ ಮತ್ತು ಮಂಜಿನ ವಾತಾವರಣವಿತ್ತು. ಆದರೆ ಸೋಮವಾರ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ಮಳೆ ಅಲ್ಲಲ್ಲಿ ಸುರಿಯತೊಡಗಿದ್ದು, ಜನಜೀವನ ವ್ಯತ್ಯಯವಾಯಿತು. ಅಷ್ಟೇ ಅಲ್ಲದೆ ಭತ್ತ,ಹತ್ತಿ, ತೊಗರಿ ಮತ್ತಿತರೆ ಬೆಳೆಗಾರರು ಆತಂಕಕ್ಕೆ ಸಿಲುಕುವಂತಾಯಿತು. ಜಿಲ್ಲೆಯ ಕವಿತಾಳ, ಲಿಂಗಸುಗೂರು, ಮಸ್ಕಿಯಲ್ಲಿ ಸೋಮವಾರ ಜಿಟಿ ಜಿಟಿ ಮಳೆ ಆಗಾಗ್ಗೆ ಸುರಿಯಿತು. ರಾಯಚೂರು ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಸಂಜೆ 4ರಿಂದಲೇ ಜಿಟಿಜಿಟಿ ಮಳೆ ಸುರಿಯಲಾರಂಭಿಸಿ ಜನರ ಜೀವನಕ್ಕೆ ತೊಂದರೆಯಾಯಿತು. ಸಂಜೆಯ ಆರರಷ್ಟೊತ್ತಿಗೆ ನಗರದಲ್ಲಿ ಕತ್ತಲೆ ಕವಿದು ಮಳೆ ಹನಿಯತೊಡಗಿತು.


from India & World News in Kannada | VK Polls https://ift.tt/3D6Mh0P

ಚೇತರಿಕೆಯಲ್ಲಿ ಹೈನೋದ್ಯಮ: ಹೆಣ್ಣು ಕರು ಜನನಕ್ಕೆ 'ವೀರ್ಯ ಅಭಿಯಾನ'; ಸರ್ಕಾರದಿಂದ ಹೊಸ ಯೋಜನೆ!

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು: ರಾಜ್ಯದಲ್ಲಿ ಹಸುಗಳ ಸಂಖ್ಯೆ ವೃದ್ಧಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ'ಲಿಂಗ ನಿರ್ಧಾರಿತ ' ಬಳಕೆ ಪ್ರಕ್ರಿಯೆ ಚುರುಕುಗೊಳಿಸಲು 2022 ಜನವರಿಯಿಂದ ಸರಕಾರ ಹೊಸ ಅಭಿಯಾನ ಆರಂಭಿಸಲಿದೆ. ರೈತರಿಗೆ ಆರ್ಥಿಕ ಹೊರೆಯಾಗಿ ಕಾಡುತ್ತಿರುವ ಗಂಡು ಕರುಗಳ ಬದಲಿಗೆ, ಜನಿಸುವಂತೆ ವೀರ್ಯವನ್ನು ಬಳಕೆ ಮಾಡಿಕೊಳ್ಳಲು ದೇಶಾದ್ಯಂತ ಕೇಂದ್ರ ಸರಕಾರ 3 ಕಡೆ ಪ್ರಯೋಗಾಲಗಳನ್ನು ಆರಂಭಿಸಿದ್ದು, ಇವುಗಳ ಮೂಲಕ ರಾಜ್ಯಕ್ಕೆ 2 ಲಕ್ಷ ವೀರ್ಯ ಮಾದರಿ ಪೂರೈಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ವೀರ್ಯ ಬಳಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಒಂದು ಬಾರಿಗೆ 900ರಿಂದ 1000ರೂ. ದರ ನಿಗದಿಗೊಳಿಸಲಾಗಿದೆ. ಸರಕಾರದ ಸಬ್ಸಿಡಿಯೊಂದಿಗೆ ರೈತರಿಗೆ 450ರೂ.ಗೆ ಈ ಸೌಲಭ್ಯ ನೀಡಲಾಗುತ್ತಿದೆ. ಸಾಮಾನ್ಯ ವೀರ್ಯವನ್ನು ಬಹುತೇಕ ಹಾಲು ಒಕ್ಕೂಟಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ ಲಿಂಗ ನಿರ್ಧಾರಿತ ವೀರ್ಯಕ್ಕೆ 450ರೂ. ನೀಡಲು ರೈತರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಗಂಡು ಕರುಗಳ ಜನನವಾಗುತ್ತಿದೆ. ಹೀಗಾಗಿ ರೈತರಿಗೆ ಈ ಸಂಬಂಧ ವೆಚ್ಚ ತಗ್ಗಿಸಲು 90% ಸಬ್ಸಿಡಿ ನೀಡುವ ಚಿಂತನೆಯನ್ನು ಪಶುಸಂಗೋಪನಾ ಇಲಾಖೆ ಹೊಂದಿದೆ. ಜನವರಿಯಿಂದ 50ರೂ.ಗೆ ಹೆಣ್ಣು ಕರು ಜನನಕ್ಕೆ ಪೂರಕವಾಗುವ ವೀರ್ಯ ಸಿಗಲಿದ್ದು, 92% ಫಲಪ್ರದತೆ ದರವಿರುವ ಈ ಪ್ರಕ್ರಿಯೆಯಿಂದ ರಾಜ್ಯದ ಮತ್ತಷ್ಟು ಚೇತರಿಕೆ ಕಾಣುವ ನಿರೀಕ್ಷೆಯಿದೆ. ಏನಿದು ಲಿಂಗ ನಿರ್ಧಾರಿತ ವೀರ್ಯ? ಹಸುಗಳಿಗೆ ಬಳಕೆ ಮಾಡುವ ಸಾಮಾನ್ಯ ವೀರ್ಯದ ಫಲಪ್ರದತೆ ಶೇ.50ರಷ್ಟಿದ್ದು, ಗಂಡು ಅಥವಾ ಹೆಣ್ಣು ಯಾವುದೇ ಕರು ಜನಿಸಬಹುದು. ಆದರೆ, ಲಿಂಗ ನಿರ್ಧಾರಿತ ವೀರ್ಯ ಬಳಕೆ ಮಾಡುವ ವಿಧಾನದಡಿ ಮೊದಲೇ ಹೆಣ್ಣು ಕರು ಜನಿಸಲು ಅಗತ್ಯವಿರುವ ವೀರ್ಯವನ್ನು ಪ್ರತ್ಯೇಕಿಸಿ ಹಸುವಿಗೆ ಬಳಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಶೇ.92ರಷ್ಟು ಫಲಪ್ರದತೆ ದರವಿದ್ದು, ಗಂಡು ಕರುಗಳ ಜನನ ನಿಯಂತ್ರಿಸಬಹುದಾಗಿದೆ. ವಂಶಾವಳಿ ದೃಢೀಕೃತ ಹೋರಿಗಳ ವೀರ್ಯ ಬಳಸುವುದರಿಂದ ಉತ್ಕೃಷ್ಟ ಹೆಣ್ಣು ಕರುಗಳ ಜನನವಾಗಲಿದೆ. ಗೋಶಾಲೆಗಳಿಗೆ ರಿಲೀಫ್‌ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯಿದೆ ಜಾರಿಯಾಗಿರುವ ಹಿನ್ನೆಲೆ ಬಹುತೇಕ ಗೋಶಾಲೆಗಳು ಹೌಸ್‌ಫುಲ್‌ ಆಗಿವೆ. ರೈತರು ಗಂಡು ಕರುಗಳನ್ನು ಸಾಕಲಾಗದೆ ಬೀದಿಯಲ್ಲಿ ಬಿಡುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ಗೋಶಾಲೆಗಳಿಗೆ ಸಂರಕ್ಷಿತ ಗೋವುಗಳ ನಿರ್ವಹಣೆ ಒತ್ತಡ ಸೃಷ್ಟಿಯಾಗಿದೆ. ಇದಲ್ಲದೆ ಎಳೆಯ ಗಂಡು ಕರುಗಳನ್ನು ಕಸಾಯಿಖಾನೆಗೆ ನೀಡುವುದೂ ಕಂಡುಬರುತ್ತಿದ್ದು, ಈ ಸಮಸ್ಯೆ ಪರಿಹರಿಸಲು ಸಹಾಯವಾಗಲಿದೆ. ಲಿಂಗ ನಿರ್ಧಾರಿತ ವೀರ್ಯ ಬಳಕೆ ಪ್ರಕ್ರಿಯೆ ಬಗ್ಗೆ ಈ ಹಿಂದೆಯೇ ಚಿಂತನೆ ನಡೆಸಲಾಗಿತ್ತು. ಸಾಧಕ ಬಾಧಕಗಳಿಗನುಸಾರವಾಗಿ ಸರಕಾರ ಶೀಘ್ರ ನಿರ್ಧಾರ ಕೈಗೊಂಡು ರೈತರ ಪರವಾದ ವ್ಯವಸ್ಥೆ ಜಾರಿಗೊಳಿಸಬೇಕಿದೆ. ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಹೆಣ್ಣುಕರುಗಳ ವೃದ್ಧಿಯಿಂದಾಗಿ ಹೈನೋದ್ಯಮದಲ್ಲಿ ಮತ್ತಷ್ಟು ಚೇತರಿಕೆ ಕಂಡುಬರಲಿದೆ. ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್‌ ಅಧ್ಯಕ್ಷರು ಗೋಶಾಲೆ ಮತ್ತು ರೈತರ ಆರ್ಥಿಕ ನಷ್ಟ ಕಡಿಮೆಗೊಳಿಸಲು ಹೆಣ್ಣು ಕರುಗಳ ಜನನ ಪ್ರಮಾಣ ಹೆಚ್ಚಿಸುವ ಚಿಂತನೆಯಿದೆ. ಈ ಪ್ರಯೋಗಕ್ಕೆ ಪ್ರತ್ಯೇಕಗೊಂಡ ವೀರ್ಯ ಬಳಕೆಯ ಮೊತ್ತಕ್ಕೆ ಸಬ್ಸಿಡಿ ಹೆಚ್ಚಿಸುವ ಚಿಂತನೆಯಿದೆ. ಪ್ರಭು ಚೌಹಾಣ್‌ ಸಚಿವರು, ಪಶುಸಂಗೋಪನಾ ಇಲಾಖೆ


from India & World News in Kannada | VK Polls https://ift.tt/315GUSU

ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ; ಬಸವನಗುಡಿ ರಸ್ತೆಯ ತುಂಬ ಗ್ರಾಮೀಣ ಸೊಗಡು

ಬೆಂಗಳೂರು: ಕಣ್ಣು ಹಾಯಿಸಿದಲ್ಲೆಲ್ಲ ಜನವೋ ಜನ. ಕಡಲೆಕಾಯಿ ರಾಶಿ, ಕಣ್ಸೆಳೆಯುವ ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ಕಿವಿಗಡಚಿಕ್ಕುವ ಪೀಪಿಗಳ ಸದ್ದು, ರಾತ್ರಿ ವೇಳೆಯಂತೂ ಇಡೀ ಪ್ರದೇಶ ದೀಪಗಳಿಂದ ಜಗಮಗ.. ಜಾತ್ರೆಯ ವಾತಾವರಣವನ್ನು ಸೃಷ್ಟಿಸಿರುವ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಕಂಡು ಬಂದ ದೃಶ್ಯಗಳಿವು. ಕಳೆದ ನಾಲ್ಕು ದಿನಗಳಿಂದ ಬಸವನಗುಡಿಯ ದೊಡ್ಡ ಗಣಪತಿ ದೇಗುಲದ ಎದುರಿನ ರಸ್ತೆ ಅಕ್ಷರಶಃ ಹಳ್ಳಿಯಂತಾಗಿದೆ. ಮೂರ್ನಾಲ್ಕು ದಶಕಗಳ ಹಿಂದೆ ಹಳ್ಳಿಗಳಲ್ಲಿ ನಡೆಯುತ್ತಿದ್ದ ಸಂತೆಯನ್ನು ನೆನಪಿಸುತ್ತಿದೆ. ನಗರ ಮಾತ್ರವಲ್ಲದೆ ರಾಜ್ಯದ ನಾನಾ ಭಾಗದ ಜನರನ್ನೂ ಸೆಳೆಯುತ್ತಿದೆ. ದೊಡ್ಡ ಬಸವಣ್ಣ ದೇವಾಲಯದಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸೋಮವಾರ ಅಧಿಕೃತ ಚಾಲನೆ ಸಿಕ್ಕಿದ್ದು, ನಾನಾ ಆಚರಣೆಗಳು ನಡೆದವು. ಬುಧವಾರದವರೆಗೆ ಪರಿಷೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಕಡಲೆಕಾಯಿ ಮಾರಾಟ ಮಳಿಗೆಗಳನ್ನು ಅಧಿಕೃತವಾಗಿ ತೆರೆದರೆ, ಕಡ್ಲೆಪುರಿ, ಬೆಂಡು, ಬತ್ತಾಸು ಇತ್ಯಾದಿ ಮಳಿಗೆಗಳು ಕೂಡ ನೂರಾರು ಸಂಖ್ಯೆಯಲ್ಲಿದ್ದವು. ಒಂದು ಸೇರು ಕಡಲೆಕಾಯಿಗೆ 50 ರೂ.ನಂತೆ ಮಾರಾಟವಾಗುತ್ತಿತ್ತು. ಮುಂಜಾಗ್ರತಾ ಕ್ರಮಮುಜರಾಯಿ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿದೆ. ಸದ್ಯ ಒಮಿಕ್ರಾನ್‌ ರೂಪಾಂತರಿ ತಳಿ ಆತಂಕ ಹುಟ್ಟಿಸಿರುವುದರಿಂದ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್‌, ಸ್ಯಾನಿಟೈಸರ್‌ ಕಡ್ಡಾಯ ಮಾಡಲಾಗಿದೆ. ದೇವಸ್ಥಾನ ಬಳಿ ಕ್ಯಾಂಪ್‌ ಹಾಕಿ, ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಟೆಸ್ಟ್‌ ಕೂಡ ಕೈಗೊಳ್ಳಲಾಗುತ್ತಿದೆ. ಸೋಮವಾರ ಬೆಳಗ್ಗೆ ಮೋಡದ ವಾತಾವರಣ, ತುಂತುರು ಮಳೆ ಇದ್ದ ಕಾರಣ ಪರಿಷೆಯಲ್ಲಿ ಹೆಚ್ಚಿನ ಜನರು ಕಂಡು ಬರಲಿಲ್ಲ. ಆದರೆ, ಮಧ್ಯಾಹ್ನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಕೆಲವರು ಮಾಸ್ಕ್‌ ಧರಿಸಿದ್ದರೆ, ಇನ್ನೂ ಕೆಲವರು ಹಾಗೆಯೇ ಓಡಾಡುತ್ತಿದ್ದರು. ಎಲ್ಲರೂ ಮಾಸ್ಕ್‌ ಧರಿಸುವಂತೆ ಮಾರ್ಷಲ್‌ಗಳು/ ಪೊಲೀಸರು ಮೈಕ್‌ನಲ್ಲಿ ಎಚ್ಚರಿಸುತ್ತಿದ್ದರು. ದೀಪದ ಬೆಳಕಿನಲ್ಲೇ ನಡೆಯುತ್ತಿತ್ತು ಕಡಲೆಕಾಯಿ ವ್ಯಾಪಾರಪರಿಷೆ ಉದ್ಘಾಟನೆ ವೇಳೆ ಮಾತನಾಡಿದ ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ, ಕಳೆದ ಎರಡು ವರ್ಷ ಕೋವಿಡ್‌ ಸಂಕ್ರಮಣ ಕಾಲದಿಂದ ಉತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಕಡಲೆಕಾಯಿ ಪರಿಷೆ ಕೆಂಪೇಗೌಡರ ಕಾಲದಿಂದಲೂ ನಡೆಯುತ್ತಿದ್ದು, ಸುತ್ತಮುತ್ತಲ ಪ್ರದೇಶದ ರೈತರು ದೊಡ್ಡಗಣಪತಿ ದೇವಸ್ಥಾನದ ಸಮೀಪ ಕಡಲೆಕಾಯಿ ಮಾರುತ್ತಿದ್ದರು. ಅದಕ್ಕೆ ಸಾಕ್ಷಿಯೆಂಬಂತೆ ಇಲ್ಲಿನ ಬಂಡೆಗಳ ಮೇಲೆ ದೀಪ ಬೆಳಗಿಸಲು ಕುಳಿ ಒಡೆದಿರುವ ಗುರುತುಗಳಿವೆ. ಈ ದೀಪದ ಬೆಳಕಿನಲ್ಲೇ ವ್ಯಾಪಾರ ನಡೆಯುತ್ತಿತ್ತು ಎಂಬ ಪ್ರತೀತಿ ಇದೆ ಎಂದು ಹೇಳಿದರು. ಬಸವನಗುಡಿಯ ಕಡಲೆಕಾಯಿ ಪರಿಷೆ ಆರಂಭಕ್ಕೂ ಮುನ್ನವೇ ಭಾನುವಾರ ಸುಮಾರು 1.5 ಲಕ್ಷ ಜನರು ಆಗಮಿಸಿದ್ದರು. ಈ ಜಾತ್ರಾ ಮಹೋತ್ಸವವು ಸಂಜೆ ಹೊತ್ತು ನಡೆಯುವ ಕಾರ್ಯಕ್ರಮವಾಗಿದ್ದು, ಮೂರು ದಿನಗಳ ಈ ಜಾತ್ರೆಯಲ್ಲಿ ಆರು ಲಕ್ಷ ಜನರು ವೀಕ್ಷಿಸುವ ನಿರೀಕ್ಷೆ ಇದೆ. ಜಾತ್ರೆ ನಡೆಯುವ ಪ್ರದೇಶಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. 500ಕ್ಕೂ ಹೆಚ್ಚು ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ, ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. 300 ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಪರಿಷೆ ನಡೆಯುತ್ತಿದೆ. 12 ವಾಚ್‌ ಟವರ್‌ಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಬೆಸ್ಕಾಂ, ಜಲಮಂಡಳಿ, ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿಗಳನ್ನು ಈ ಜಾತ್ರಾ ಮಹೋತ್ಸವದಲ್ಲಿ ನಾನಾ ಮೂಲ ಸೌಕರ್ಯಗಳನ್ನು ಒದಗಿಸಲು ನಿಯೋಜಿಸಲಾಗಿದ್ದು ತಂಡಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಧಾರ್ಮಿಕ ಉತ್ಸವದ ಯಶಸ್ಸಿಗೆ ಪ್ರತಿಯೊಬ್ಬರೂ ಒಗ್ಗೂಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. 4 ಕ್ವಿಂಟಲ್‌ ಬೆಣ್ಣೆಯಿಂದ ಅಲಂಕಾರದೊಡ್ಡಗಣೇಶನಿಗೆ ಸೋಮವಾರ ಸುಮಾರು 400 ಕೆ.ಜಿ. ಬೆಣ್ಣೆಯಿಂದ ಅಲಂಕಾರ ಮಾಡಲಾಗಿತ್ತು. ಜತೆಗೆ ದೊಡ್ಡ ಬಸವಣ್ಣನ ದೇವಾಲಯದಲ್ಲಿ ಸಹಸ್ರ ಕೆ.ಜಿ. ಕಡಲೆಕಾಯಿಯಲ್ಲಿ ಅಭಿಷೇಕ ಮಾಡಿ ಬಂದ ಭಕ್ತರಿಗೆ ಕಡಲೆಕಾಯಿಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು.


from India & World News in Kannada | VK Polls https://ift.tt/31evQTp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...