
ಲಂಡನ್: ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಹಾಗೂ ರೀಷಭ್ ಪಂತ್ ಅವರಿಗಿಂತ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ತೆರಳಲು ಕಾರಣವೇನೆಂಬುದನ್ನು ವೇಗಿ ಬಹಿರಂಗಪಡಿಸಿದ್ದಾರೆ. ಗುರುವಾರ ಇಲ್ಲಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆರಂಭವಾದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ 61.3 ಓವರ್‌ಗಳಿಗೆ 191 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮೊದಲನೇ ದಿನದಾಟದ ಅಂತ್ಯಕ್ಕೆ 17 ಓವರ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು 53 ರನ್ ಗಳಿಸಿದೆ. ಅಂದಹಾಗೆ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ 28 ರನ್ ಜೊತೆಯಾಟವಾಡುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ, ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಕ್ರಮವಾಗಿ ಕ್ರಿಸ್ ವೋಕ್ಸ್ ಮತ್ತು ಓಲ್ಲಿ ರಾಬಿನ್ಸನ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ಚೇತೇಶ್ವರ್ ಪೂಜಾರ(4) ಅವರನ್ನು ಜೇಮ್ಸ್ ಆಂಡರ್ಸನ್ ಔಟ್ ಮಾಡಿದರು. ಈ ವೇಳೆ ಅಜಿಂಕ್ಯ ರಹಾನೆ ಕ್ರೀಸ್‌ಗೆ ಬರಲಿದ್ದಾರೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ರವೀಂದ್ರ ಜಡೇಜಾ(10) ಬ್ಯಾಟಿಂಗ್‌ಗೆ ಇಳಿಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಆದರೂ ಜಡೇಜಾ ಮೇಲಿನ ಕ್ರಮಾಂಕದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಮೊದಲನೇ ದಿನದಾಟದ ಬಳಿಕ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಶಾರ್ದುಲ್ ಠಾಕೂರ್‌ಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾರ್ದುಲ್, ಇದು ಪೂರ್ವ ಯೋಜನೆಯಾಗಿತ್ತು. ಪ್ರಸಕ್ತ ಸರಣಿಯಲ್ಲಿ ಜಡೇಜಾ ಫಾರ್ಮ್ ಅನ್ನು ಪರಿಗಣಿಸಲಾಗಿದೆ. ಅದರಲ್ಲೂ ಕ್ರೀಸ್‌ನಲ್ಲಿ ಎಡಗೈ ಹಾಗೂ ಬಲಗೈ ಬ್ಯಾಟ್ಸ್‌ಮನ್ ಸಂಯೋಜನೆ ಒದಗಿಸುವುದು ಇಲ್ಲಿ ನಮ್ಮ ಯೋಚನೆಯಾಗಿತ್ತು ಎಂದು ಹೇಳಿದ್ದಾರೆ. "ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ಇಬ್ಬರಲ್ಲಿ ಯಾರು ಮೇಲಿನ ಕ್ರಮಾಂಕದಲ್ಲಿ ಬಡ್ತಿ ಪಡೆಯಲಿದ್ದಾರೆಂಬ ಬಗ್ಗೆ ಸಾಕಷ್ಟು ದಿನಗಳಿಂದ ಎಲ್ಲರೂ ಚಿಂತಿಸುತ್ತಿದ್ದರು. ಆದರೆ, ಈ ಇಬ್ಬರೂ ಮ್ಯಾಚ್ ವಿನ್ನರ್‌ಗಳಾಗಿರುವುದರಿಂದ ಇವರಲ್ಲಿ ಯಾರು ಮೇಲಿನ ಕ್ರಮಾಂಕದಲ್ಲಿ ಆಡಲಿದ್ದಾರೆಂಬುದು ವಿಷಯವಲ್ಲ. ಅಂದಹಾಗೆ, ರವೀಂದ್ರ ಜಡೇಜಾ ಕೆಳ ಮಧ್ಯಮ ಕ್ರಮಾಂಕದಲ್ಲಿ ನಿರ್ಣಾಯಕ ರನ್‌ಗಳನ್ನು ಗಳಿಸಿರುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ," ಎಂದರು. "ಇಂಗ್ಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಹಾಗೂ ಲಾರ್ಡ್ಸ್ ಟೆಸ್ಟ್ ಪ್ರಥಮ ಇನಿಂಗ್ಸ್‌ಗಳಲ್ಲಿ ಜಡೇಜಾ ಎಂತಹ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು ಎಂಬುದನ್ನು ನೀವು ನೋಡಿದ್ದೀರಿ. ಅವರು ಕ್ರೀಸ್‌ನಲ್ಲಿ ದೀರ್ಘ ಅವಧಿ ಉಳಿಯಲು ಪ್ರಯತ್ನಿಸುತ್ತಾರೆ ಹಾಗೂ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಎಡಗೈ ಹಾಗೂ ಬಲಗೈ ಬ್ಯಾಟಿಂಗ್ ಸಂಯೋಜನೆಗೆ ಬಳಸಿಕೊಳ್ಳಲಾಗಿದೆ. ಈ ಕಾರಣದಿಂದ ಅವರಿಗೆ ಮೇಲಿನ ಕ್ರಮಾಂಕದಲ್ಲಿ ಬಡ್ತಿ ನೀಡಲಾಗಿದೆ," ಎಂದು ಸುದ್ದಿಗೋಷ್ಠಿಯಲ್ಲಿ ಶಾರ್ದುಲ್ ತಿಳಿಸಿದರು. ಜಡೇಜಾಗೆ ಮೇಲಿನ ಕ್ರಮಾಂಕಕ್ಕೆ ಬಡ್ತಿ ನೀಡಿದ್ದಕ್ಕೆ ಮಾಂಜ್ರೇಕರ್ ಅಸಮಾಧಾನ! ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನ ರವಿಂದ್ರ ಜಡೇಜಾಗೆ ಮೇಲಿನ ಕ್ರಮಾಂಕದಲ್ಲಿ ಬಡ್ತಿ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಜಡೇಜಾ ಅವರನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸಿದ್ದು, ಟಿ20 ಕ್ರಿಕೆಟ್ ಹಾದಿಯಲ್ಲಿತ್ತು. ನನ್ನ ಪ್ರಕಾರ ಇಂತಹ ಪರಿಸ್ಥಿತಿಗಳಲ್ಲಿ ನಂ .5 ನೇ ಕ್ರಮಾಂಕಕ್ಕೆ ರವೀಂದ್ರ ಜಡೇಜಾ ಸಾಮರ್ಥ್ಯವನ್ನು ಟೀಮ್ ಮ್ಯಾನೇಜ್‌ಮೆಂಟ್ ಅತಿಯಾಗಿ ಅಂದಾಜು ಮಾಡಿದೆ. ಅವರಿಗಾಗಿ(ಜಡೇಜಾ) ಕಾಯುತ್ತಿರುವುದು ವಿಪತ್ತಿಗೆ ಹಾದಿ. ವಿದೇಶಿ ಪರಿಸ್ಥಿತಿಗಳಲ್ಲಿ ಭಾರತೀಯ ಕ್ರಿಕೆಟ್ ಜಡೇಜಾ ಬ್ಯಾಟಿಂಗ್ ಸಾಮರ್ಥ್ಯವನ್ನು ಅತಿಯಾಗಿ ಅಂದಾಜು ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ," ಎಂದು ಮಾಂಜ್ರೇಕರ್ ಬೇಸರ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tfzpCf