ಹಣದುಬ್ಬರ, ಬೆಲೆ ಏರಿಕೆ ಬಗ್ಗೆ ನನ್ನನ್ನು ಕೇಳ್ಬೇಡಿ ಅಂದ್ರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌!

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ತಾತ್ಕಾಲಿಕವಾಗಿದ್ದು, ಮುಂಬರುವ ದಿನಗಳಲ್ಲಿ ಕಡಿಮೆಯಾಗಲಿದೆ ಎಂದು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ತಿಳಿಸಿದ್ದಾರೆ. ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಸಂಘಟನಾ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ಮಲ್ಲೇಶ್ವರದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಹಣದುಬ್ಬರ, ಬೆಲೆ ಏರಿಕೆ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘ಈ ಬಗ್ಗೆ ನನ್ನನ್ನು ಕೇಳಬೇಡಿ. ಅರ್ಥಶಾಸ್ತ್ರಜ್ಞರನ್ನು ಕೇಳಿಕೊಳ್ಳಿ. ಆರ್‌ಬಿಐ ಗವರ್ನರ್‌ ಅವರನ್ನು ಕೇಳಿದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ’ ಎಂದು ಒಂದು ಹಂತದಲ್ಲಿ ಅರುಣ್‌ ಸಿಂಗ್‌ ಹೇಳಿದರು. ಅಲ್ಲದೇ ಯುಪಿಎ ಆಡಳಿತದಲ್ಲಿ ಹಣದುಬ್ಬರ ಶೇ.15ರಿಂದ ಶೇ.20ರಷ್ಟಿತ್ತು. ಈಗ ಶೇ.2ರಿಂದ ಶೇ.3ರಷ್ಟಿದೆ. ಕೇವಲ 100 ದಿನ ಹಣದುಬ್ಬರ ನಿಯಂತ್ರಿಸುವುದಾಗಿ ಯುಪಿಎ ಕಾಲದಲ್ಲಿ ಚಿದಂಬರಂ ಹೇಳಿದ್ದರು. ಆದರೆ, ಅದು ಏರುತ್ತಲೇ ಹೋಯಿತು. ಬಿಜೆಪಿ ಬಂದ ಬಳಿಕ ಸುಧಾರಣೆ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಡವರ ಪರ ಹಮ್ಮಿಕೊಂಡಿರುವ ಹಲವು ಯೋಜನೆಗಳಿಗೆ ಹಣದ ಅವಶ್ಯಕತೆ ಇದ್ದು, ಇದನ್ನು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರದ ಬೆಲೆ ಹೆಚ್ಚಳವಾದ ಹಣದಿಂದ ಭರಿಸಲಾಗುವುದು. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಆಗುವ ವಿಶ್ವಾಸವಿದೆ. ಯಾರೂ ಒಂದು ಈರುಳ್ಳಿ, ಒಂದು ಟೊಮ್ಯಾಟೋ ಬಗ್ಗೆ ಚರ್ಚಿಸಬೇಡಿ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿ ಇದೆ. ಈ ಕುರಿತು ಚರ್ಚೆ ನಡೆಸಿ ಎಂದರು. ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಪೂರ್ಣ ಆಶೀರ್ವಾದವಿದೆ ಎಂದ ಅರುಣ್ ಸಿಂಗ್, ಗರಿಷ್ಠ ಅನುದಾನ ನೀಡಲಾಗುತ್ತಿದೆ. ಬಸವರಾಜ ಬೊಮ್ಮಾಯಿ ಸರಕಾರವೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸರಕಾರಕ್ಕೆ ಬರುತ್ತಿರುವ ತೆರಿಗೆ ಹಣ ಭ್ರಷ್ಟಾಚಾರ ರಹಿತವಾಗಿ ಬಳಕೆಯಾಗುತ್ತಿದೆ. ಸಿಎಂ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಪಕ್ಷ ಗರಿಷ್ಠ ಸ್ಥಾನ ಗಳಿಸಲಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ, ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ಬೆಂಗಳೂರು ದಕ್ಷಿಣದ ಜಿಲ್ಲಾಧ್ಯಕ್ಷ ಎನ್‌.ಆರ್‌ ರಮೇಶ್‌, ಬೆಂಗಳೂರು ಉತ್ತರದ ಜಿಲ್ಲಾಧ್ಯಕ್ಷ ಬಿ.ನಾರಾಯಣ ಗೌಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ದಲ್ಲಾಳಿಗಳೇ ಹಾಗೆಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಅರುಣ್‌ ಸಿಂಗ್‌, ದಲ್ಲಾಳಿಗಳ ಯೋಚನೆ ದಲ್ಲಾಳಿಗಳಂತೆಯೇ ಇರುತ್ತದೆ. ಅದೇ ಮಾದರಿಯಲ್ಲಿ ಕುಮಾರಸ್ವಾಮಿ ಟೀಕೆಯಿದೆ ಎಂದರು.


from India & World News in Kannada | VK Polls https://ift.tt/3yGeQzW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...