
ಲಂಡನ್: ಬ್ಯಾಟ್ಸ್‌ಮನ್‌ಗಳಿಗೆ ಪ್ರಸ್ತುತ ಐದು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ತಂಡದ ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಸಿಂಹ್ವ ಸ್ವಪ್ನವಾಗಿ ಕಾಡುತ್ತಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 2ರಂದು ಶುರುವಾದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 39 ವರ್ಷದ ಅನುಭವಿ ಬಲಗೈ ವೇಗದ ಬೌಲರ್ ಆಂಡರ್ಸನ್, ಮತ್ತೊಮ್ಮೆ ಹೊಸ ಚೆಂಡಿನಲ್ಲಿ ಔಟ್ ಸ್ವಿಂಗ್ ಮತ್ತು ಇನ್ ಸ್ವಿಂಗ್ ಎಸೆತಗಳೊಂದಿಗೆ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಇನ್ನಿಲ್ಲದಂತೆ ಕಾಡಿದರಲ್ಲದೆ, ಚೇತೇಶ್ವರ್ ಪೂಜಾರ (4) ವಿಕೆಟ್ ಕೂಡ ಪಡೆದರು. ಭಾರತ ತಂಡ ಓವಲ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತ್ತಾಗಿ 191 ರನ್‌ಗಳಿಗೆ ಆಲ್‌ಔಟ್ ಆಯಿತು. ಇನಿಂಗ್ಸ್ ಅಂತ್ಯದಲ್ಲಿ ಆಂಡರ್ಸನ್ ತಮ್ಮ ಮೂರನೇ ಸ್ಪೆಲ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮಂಡಿ ಕಿತ್ತು ರತ್ತ ಸುರಿಯುತ್ತಿದ್ದರೂ ಆಟ ಮುಂದುವರಿಸುತ್ತಿರುವುದು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿತ್ತು. ಇನಿಂಗ್ಸ್‌ನ 42ನೇ ಓವರ್‌ನಲ್ಲಿ ಜಿಮ್ಮಿ ಬೌಲಿಂಗ್ ಮಾಡುತ್ತಿದ್ದ ವೇಳೆ ಅವರ ಮಂಡಿ ಭಾಗದಲ್ಲಿ ರಕ್ತದ ಕಲೆ ಎದ್ದು ಕಾಣುತ್ತಿತ್ತು. ಬಹುಶಃ ಫೀಲ್ಡಿಂಗ್ ವೇಳೆ ಮಂಡಿ ತರಚಿದ್ದ ಕಾರಣ ಗಾಯಗೊಂಡು ರಕ್ತ ಸುರಿದಿದೆ. ಆದರೆ, ಅರ್ಧಶತಕ ಬಾರಿಸಿ ಕ್ರಿಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಹಠದಲ್ಲಿ ಜೇಮ್ಸ್ ತಮ್ಮ ಬೌಲಿಂಗ್ ಮುಂದುವರಿಸಿದ್ದರು. ಬಳಿಕ, ಓಲ್ಲೀ ರಾಬಿನ್ಸನ್ ಬೌಲಿಂಗ್‌ನಲ್ಲಿ ನಂತರದ ಓವರ್‌ನಲ್ಲೇ ಕೊಹ್ಲಿ ಔಟಾದರು. ಭಾರತ ತಂಡ 191ಕ್ಕೆ ಆಲ್‌ಔಟ್ಲೀಡ್ಸ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲೊ 78ಕ್ಕೆ ಆಲ್‌ಔಟ್ ಆಗಿದ್ದ ಭಾರತ ತಂಡ, ದಿ ಓವಲ್ ಕ್ರೀಡಾಂಗಣದಲ್ಲೂ ಅಂಥದ್ದೇ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲ ದಿನ ಭೋಜನ ವಿರಾಮಕ್ಕೆ 54 ರನ್‌ಗಳಿಗೆ 3 ವಿಕೆಟ್ ಒಪ್ಪಿಸಿದ್ದ ಭಾರತ ತಂಡ ಬಳಿಕ ವಿರಾಟ್ ಕೊಹ್ಲಿ ಬಾರಿಸಿದ 27 ಟೆಸ್ಟ್ ಫಿಫ್ಟಿ ನೆರವಿನಿಂದ ಚೇತರಿಸಿತು. ಇದಾದ ಬಳಿಕ ಹಠಾತ್ ಕುಸಿತ ಕಂಡರೂ, ಇನಿಂಗ್ಸ್ ಅಂತ್ಯದಲ್ಲಿ 37 ಎಸೆತಗಳಲ್ಲಿ 7 ಫೋರ್ ಮತ್ತು 3 ಸಿಕ್ಸರ್‌ಗಳೊಂದಿಗೆ ಶಾರ್ದುಲ್ ಠಾಕೂರ್ ಬಾರಿಸಿದ 57 ರನ್‌ಗಳ ಬಲದಿಂದ 191 ರನ್ ದಾಖಲಿಸುವಲ್ಲಿ ಯಶಸ್ವಿಯಾಯಿತು. 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ದಿನದ ಕೊನೇ ಅವಧಿಯಲ್ಲಿ ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ 6 ರನ್ ಕಲೆಹಾಕುವ ಹೊತ್ತಿಗೆ ತನ್ನ ಇಬ್ಬರೂ ಓಪನರ್‌ಗಳನ್ನು ಕಳೆದುಕೊಂಡಿತು. ವೇಗಿ ಜಸ್‌ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ರೋರಿ ಬರ್ನ್ಸ್ (5) ಕ್ಲೀನ್ ಬೌಲ್ಡ್ ಆದರೆ, ಹಸೀಬ್ ಹಮೀದ್ (0) ವಿಕೆಟ್‌ಕೀಪರ್‌ಗೆ ಕ್ಯಾಚಿತ್ತು ಹೊರ ನಡೆದರು. ಇದಾದ ಬಳಿಕ ಜೋ ರೂಟ್ (21) ಮತ್ತು ಡಾವಿಡ್ ಮಲಾನ್ (26*) 3ನೇ ವಿಕೆಟ್‌ಗೆ 40ಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ಕಟ್ಟಿದರಾದರೂ, ಉಮೇಶ್ ಯಾದವ್ ಅದ್ಭುತ ಇನ್ ಸ್ವಿಂಗ್ ಎಸೆತದೊಂದಿಗೆ ಜೋ ರೂಟ್‌ನ ಕ್ಲೀನ್ ಬೌಲ್ಡ್ ಮಾಡಿ ಭಾರತ ತಂಡಕ್ಕೆ ಮೇಲುಗೈ ಒದಗಿಸಿದರು. ಸರಣಿಯಲ್ಲಿ ಸತತ 3 ಶತಕ ಬಾರಿಸಿರುವ ರೂಟ್, ಇಂಗ್ಲೆಂಡ್ ಪರ ಏಕಾಂಗಿಯಾಗಿ ರನ್ ಗಳಿಸಿದ್ದಾರೆ. ಹೀಗಾಗಿ ಪಂದ್ಯದ ಮೊದಲ ದಿನವೇ ರೂಟ್ ವಿಕೆಟ್ ಪತನವಾಗಿರುವುದು ಭಾರತ ತಂಡಕ್ಕೆ ಸಿಕ್ಕ ದೊಡ್ಡ ಯಶಸ್ಸಾಗಿದೆ. ದಿ ಓವಲ್ ಟೆಸ್ಟ್ ಪಂದ್ಯದ ಸಂಕ್ಷಿಪ್ತ ಭಾರತ: ಮೊದಲ ಇನಿಂಗ್ಸ್ 61.3 ಓವರ್‌ಗಳಲ್ಲಿ 191ಕ್ಕೆ ಆಲ್‌ಔಟ್ (ಕೆಎಲ್ ರಾಹುಲ್ 17, 50, ಅಜಿಂಕ್ಯ ರಹಾನೆ 14, ಶಾರ್ದುಲ್ ಠಾಕೂರ್ 57; ಕ್ರಿಸ್ ವೋಕ್ಸ್ 55ಕ್ಕೆ 4, ಓಲ್ಲೀ ರಾಬಿನ್ಸನ್ 38ಕ್ಕೆ 3, 41ಕ್ಕೆ 1, ಕ್ರೇಗ್ ಓವರ್ಟರ್ನ್ 49ಕ್ಕೆ1). ಇಂಗ್ಲೆಂಡ್: ಮೊದಲ ಇನಿಂಗ್ಸ್ 17 ಓವರ್‌ಗಳಲ್ಲಿ 3 ವಿಕೆಟ್‌ಗೆ 53 (ಜೋ ರೂಟ್ 21, ಡಾವಿಡ್ ಮಲಾನ್ 26*; ಜಸ್‌ಪ್ರೀತ್ ಬುಮ್ರಾ 15ಕ್ಕೆ 2, ಉಮೇಶ್ ಯಾದವ್ 15ಕ್ಕೆ 1). (* ಮೊದಲ ದಿನದಾಟದ ಅಂತ್ಯಕ್ಕೆ)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jD7Xew