ಗಾಯದ ಹೊರತಾಗಿಯೂ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದೆ ಎಂದ ಶಾರ್ದುಲ್‌!

ಲಂಡನ್‌: ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನ ಭಾರತ ತಂಡದ ವೇಗಿ ಶಾರ್ದುಲ್‌ ಠಾಕೂರ್ ಸ್ಪೋಟಕ ಬ್ಯಾಟಿಂಗ್‌ ಎಲ್ಲರ ಗಮನ ಸೆಳೆದಿತ್ತು. ಕೇವಲ 36 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ ಶಾರ್ದುಲ್‌ 57 ರನ್‌ ಸಿಡಿಸಿದರು. ಆ ಮೂಲಕ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಟೀಮ್‌ ಇಂಡಿಯಾಗೆ 191 ರನ್‌ ಗಳಿಸಲು ನೆರವಾಗಿದ್ದರು. ಅಂದಹಾಗೆ ಗುರುವಾರ ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ಆರಂಭವಾದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ 61.3 ಓವರ್‌ಗಳಿಗೆ 191 ರನ್‌ ಗಳಿಗೆ ಆಲೌಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌ ಮೊದಲನೇ ದಿನದಾಟದ ಅಂತ್ಯಕ್ಕೆ 17 ಓವರ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು 53 ರನ್‌ ಗಳಿಸಿದೆ. ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಬಳಿಕ ಸ್ನಾಯುಸೆಳೆತದ ನೋವಿನಿಂದ ಎರಡು ಹಾಗೂ ಮೂರನೇ ಟೆಸ್ಟ್‌ ಪಂದ್ಯಗಳಿಂದ ಹೊರಗುಳಿದಿದ್ದರು. ಇದರ ಹೊರತಾಗಿಯೂ ತಂಡದ ಅಭ್ಯಾಸದಲ್ಲಿ ತೊಡಗಿರುವುದಾಗಿ ತಿಳಿಸಿದ ಶಾರ್ದುಲ್‌, ಬ್ಯಾಟಿಂಗ್‌ ಕೋಚ್‌ ವಿಕ್ರಮ್ ರಾಥೋಡ್‌, ನನ್ನ ಬ್ಯಾಟಿಂಗ್‌ಗೆ ತುಂಬಾ ನೆರವಾಗಿದ್ದಾರೆಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ. ಮೊದಲನೇ ದಿನದಾಟ ಬಳಿಕ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾರ್ದುಲ್‌ ಠಾಕೂರ್‌, "ನಮ್ಮ ಅಭ್ಯಾಸ ನಿಜಕ್ಕೂ ಅತ್ಯುತ್ತಮವಾಗಿತ್ತು. ಗಾಯದಿಂದಾಗಿ ಕಳೆದ ಎರಡು ಪಂದ್ಯಗಳಿಗೆ ನಾನು ಅಲಭ್ಯನಾಗಿದ್ದೆ. ಇದರ ಹೊರತಾಗಿಯೂ ತಂಡದೊಂದಿಗೆ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಅಭ್ಯಾಸ ಮಾಡುತ್ತಿದ್ದೆ. ಏಕೆಂದರೆ, ಲಯವನ್ನು ಕಳೆದುಕೊಳ್ಳಬಾರದೆಂಬ ಉದ್ದೇಶ ನನ್ನದಾಗಿತ್ತು," ಎಂದು ಹೇಳಿದರು. "ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಗೂ ಮುನ್ನ ನಾವು ಅತ್ಯುತ್ತಮವಾಗಿ ತಯಾರಿ ನಡೆಸಿಕೊಂಡಿದ್ದೆವು. ಆದರೆ, ಮೊದಲನೇ ಟೆಸ್ಟ್ ಬಳಿಕ ನಾನು ಅನಿರೀಕ್ಷಿತವಾಗಿ ಗಾಯಕ್ಕೆ ತುತ್ತಾಗಿದ್ದೆ. ಇದರ ಹೊರತಾಗಿಯೂ ನಾನು ನೆಟ್ಸ್‌ನಲ್ಲಿ ತಂಡದೊಂದಿಗೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಅಭ್ಯಾಸ ನಡೆಸಿದ್ದೆ. ಅದರಲ್ಲೂ ವಿಶೇಷವಾಗಿ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ನನ್ನಲ್ಲಿ ಅಪಾರ ವಿಶ್ವಾಸವನ್ನು ಮೂಡಿಸಿದ್ದರು. ಇದರ ಫಲವಾಗಿ ಇಂದು(ಗುರುವಾರ) ನಾನು ಅತ್ಯುತ್ತಮ ಬ್ಯಾಟ್‌ ಮಾಡಿದೆ," ಎಂದು ಶಾರ್ದುಲ್‌ ತಿಳಿಸಿದರು. ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ನಲ್ಲಿ ಗುರುವಾರ ಬೆಳಗ್ಗೆ ಮೋಡ ಮುಸುಕಿದ ವಾತಾವರಣವಿತ್ತು. ಈ ಕಾರಣದಿಂದ ಮೊದಲು ಬ್ಯಾಟ್‌ ಮಾಡುವುದು ತುಂಬಾನೇ ಕಷ್ಟ. ಆದರೆ, ಟಾಸ್‌ ಸೋತಿದ್ದರಿಂದ ನಾವು ಅನಿವಾರ್ಯವಾಗಿ ಬ್ಯಾಟ್‌ ಮಾಡಲೇಬೇಕಾಯಿತು ಎಂದು ವೇಗಿ ಹೇಳಿದ್ದಾರೆ. "ಮೋಡ ಮುಸುಕಿದ ವಾತಾವರಣವಿದ್ದ ಕಾರಣ, ಬೆಳಗಿನ ಸೆಷನ್‌ನಲ್ಲಿ ಬೌನ್ಸ್ ಹಾಗೂ ಸ್ವಿಂಗ್‌ ಜಾಸ್ತಿ ಇತ್ತು. ಹಾಗಾಗಿ, ಹೊಸ ಚೆಂಡಿನಲ್ಲಿ ಬ್ಯಾಟ್‌ ಮಾಡುವುದು ತುಂಬಾನೇ ಕಠಿಣವಾಗಿತ್ತು. ಟಾಸ್‌ ಸೋತಿದ್ದು ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಕಠಿಣತೆಯನ್ನು ತಂದೊಡ್ಡಿತು.ಅದರಲ್ಲೂ ವಿಶೇಷವಾಗಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಹೊಸ ಚೆಂಡು ಎದುರಿಸುವುದು ಸವಾಲುದಾಯಕವಾಗಿತ್ತು," ಎಂದು ಶಾರ್ದುಲ್‌ ವಿವರಿಸಿದರು. "ನಾನು ಕ್ರೀಸ್‌ಗೆ ಹೋದಾಗ ರಿಷಭ್‌ ಪಂತ್‌ ಆಡುತ್ತಿದ್ದರು ಹಾಗೂ ಅವರು ತುಂಬಾ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತುಕೊಳ್ಳುವುದು ನನ್ನ ಪಾಲಿಗೆ ಮುಖ್ಯವಾಗಿತ್ತು. ಹೋಗಿ ಚೆಂಡನ್ನು ಹೊಡೆಯಿರಿ ಎಂಬ ಬಗ್ಗೆ ನನಗೆ ಯಾವುದೇ ವಿಶೇಷ ಸಂದೇಶವಿರಲಿಲ್ಲ. ಆದರೆ, ನೀವು ಈ ಹಂತದಲ್ಲಿ ಆಡುತ್ತಿರುವಾಗ ಸನ್ನಿವೇಶಕ್ಕೆ ತಕ್ಕಂತೆ ಪ್ರತಿಕ್ರಿಯಿಸಬೇಕಾಗುತ್ತದೆ. ರಿಷಭ್‌ ಪಂತ್ ಔಟ್‌ ಆಗುವ ಹೊರೆಗೂ ನಾನು ಕ್ರಿಸ್‌ನಲ್ಲಿ ಗಟ್ಟಿಯಾಗಿ ನಿಲ್ಲಬೇಕು ಹಾಗೂ ಪಂತ್‌ ಔಟ್‌ ಆದ ಬಳಿಕ ಸಾಧ್ಯವಾದಷ್ಟು ರನ್‌ಗಳನ್ನು ಗಳಿಸುವುದು ನನ್ನ ಯೋಜನೆಯಾಗಿತ್ತು," ಎಂದು ಶಾರ್ದುಲ್‌ ಠಾಕೂರ್‌ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tbOSDg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...