ಎಸ್.ಜಿ. ಕುರ್ಯ, ಉಡುಪಿ ಉಡುಪಿ: ರಾಜ್ಯದಲ್ಲಿ ಪಡಿತರ ಪೂರೈಕೆಗೆ ಸರ್ವರ್ ಸಮಸ್ಯೆಯಾದ ಹಿನ್ನೆಲೆಯಲ್ಲಿ ಪಡಿತರ ಕುಟುಂಬದ ಪ್ರತಿಯೊಬ್ಬರ ಸದಸ್ಯರ ಇ ಕಳೆದ ಮೂರು ದಿನಗಳಿಂದ ಸ್ಥಗಿತವಾಗಿದೆ. ಸೆ. 30ರೊಳಗೆ ಇ ಕೆವೈಸಿ ಕಡ್ಡಾಯಕ್ಕೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆದೇಶ ಹೊರಡಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ಇ ಕೆವೈಸಿ ಪ್ರಕ್ರಿಯೆ ಆಮೆಗತಿಯಲ್ಲಿದೆ. ಪಡಿತರ ಪೂರೈಕೆಗೆ ಸರ್ವರ್ ಸಮಸ್ಯೆಯ ತಲೆನೋವು ಎದುರಾಗದಂತೆ ಕೆವೈಸಿ ಪ್ರಕ್ರಿಯೆಯನ್ನು ಇಲಾಖೆ ಹೊಸ ಆದೇಶ ಹೊರಡಿಸಿ ಪೂರ್ಣಗೊಳಿಸಬೇಕಿದೆ. ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಪ್ರತಿಯೊಬ್ಬ ಸದಸ್ಯರ ಬಯೋ (ಬೆರಳುಚ್ಚು) ದೃಢೀಕರಣವನ್ನು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡೆದುಕೊಂಡರೆ ಮತ್ತೆ ನೀಡುವ ಅಗತ್ಯವಿಲ್ಲ. ಇ ಕೆವೈಸಿ ನೀಡದಿದ್ದರೆ ಎಪಿಎಲ್, ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿಗೆ ಆಹಾರ ಧಾನ್ಯ ಸ್ಥಗಿತದ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಆಧಾರ್ ಲಿಂಕ್‌ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿಗೆ ಉಡುಪಿ ಜಿಲ್ಲೆಯಲ್ಲಿ ಸದಸ್ಯರ ಸಹಿತವಾಗಿ ಶೇ. 100 ಆಧಾರ್ ಲಿಂಕ್ ಆಗಿದ್ದರೆ ಎಪಿಎಲ್ 1,07,505 ಕಾರ್ಡ್‌ಗಳ ಪೈಕಿ 63,808 ಕಾರ್ಡ್ (ಶೇ. 59) ಆಧಾರ್ ಲಿಂಕ್ ಹಾಗೂ 4,65,096 ಸದಸ್ಯರ ಪೈಕಿ 2,30,049 ಮಂದಿಯ (ಶೇ. 49) ಆಧಾರ್ ಲಿಂಕ್ ಪ್ರಗತಿಯಾಗಿದೆ. ಪಡಿತರ ಒಯ್ಯೋರೆಷ್ಟು? 1,07,505 ಎಪಿಎಲ್ ಕಾರ್ಡ್‌ದಾರರ ಪೈಕಿ 29,423 ಮಂದಿಯಷ್ಟೇ ಪಡಿತರಕ್ಕೆ ಬೇಡಿಕೆ ಇಟ್ಟು ನೋಂದಣಿ ಮಾಡಿಕೊಂಡಿದ್ದು, ಕೇವಲ 4,338 ಮಂದಿ (ಶೇ. 4.03) ಮಾತ್ರ ಪಡಿತರ ಒಯ್ಯುತ್ತಿದ್ದಾರೆ. ಉಳಿದಂತೆ ಎಪಿಎಲ್ ಕಾರ್ಡ್‌ನ್ನು ದಾಖಲೆಗಾಗಿ ಹಾಗೂ ಆಯುಷ್ಮಾನ್ ಆರೋಗ್ಯ ಕಾರ್ಡ್ (ಶೇ. 30 ರಿಯಾಯಿತಿ) ನಿಟ್ಟಿನಲ್ಲೂ ಬಳಸಲಾಗುತ್ತಿದೆ. ಕುಟುಂಬದಲ್ಲಿ ಮೃತರಾದವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಸುವುದು ಕಡಾಯವಾಗಿದ್ದು, ಉಜ್ವಲ ಯೋಜನೆಯಡಿ ಉಚಿತ ಅನಿಲ ಸಂಪರ್ಕ ಪಡೆಯಲು ಗ್ಯಾಸ್ ಏಜೆನ್ಸಿಯಲ್ಲಿ ನೋಂದಣಿ ಮಾಡಿಸಬೇಕು. ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುವವರ ಬಯೋಮೆಟ್ರಿಕ್/ಇ ಕೆವೈಸಿ ಪಡೆಯಲು ಸಮಸ್ಯೆ ಇದ್ದು, ವೃದ್ಧರಿಗೆ, ಹಾಸಿಗೆ ಹಿಡಿದವರಿಗೆ, ದಿವ್ಯಾಂಗರಿಗೆ ವಿನಾಯಿತಿ ನೀಡಲಾಗುತ್ತಿದೆ. ಅನರ್ಹರೆಷ್ಟು? ಆದಾಯ ತೆರಿಗೆ ಪಾವತಿದಾರರು: 2,671, ವಾರ್ಷಿಕ 1.2 0ಲಕ್ಷ ರೂ. ಆದಾಯ ಮೀರಿದವರು: 2,688, ಸರಕಾರಿ ನೌಕರರು: 46, ಮೂರು ಹೆಕ್ಟೇರಿಗಿಂತ ಅಧಿಕ ಭೂಮಿ ಉಳ್ಳವರು: 328, ಒಂದಕ್ಕಿಂತ ಹೆಚ್ಚು ಚತುಷ್ಚಕ್ರ ವಾಹನವುಳ್ಳವರು: 610 ಮಂದಿ ಬಿಪಿಎಲ್ ಪಡಿತರ ಚೀಟಿ ಪಡೆದು ಅನರ್ಹರಾಗಿದ್ದಾರೆ. 1,128 ಮಂದಿ ಮೃತ ಸದಸ್ಯರ ಹೆಸರನ್ನು ಪಡಿತರ ಚೀಟಿಗಳಿಂದ ಕಿತ್ತು ಹಾಕಲಾಗಿದೆ. ಇ ಕೆವೈಸಿ ಎಷ್ಟು? ಬಿಪಿಎಲ್, ಅಂತ್ಯೋದಯ: 1,90,034 ಇ ಕೆವೈಸಿ; 1,26519(ಶೇ.67) ಸದಸ್ಯರು: 7,97,285 ಇ ಕೆವೈಸಿ: 6,61,332(ಶೇ. 83) ಎಪಿಎಲ್: 1,07,484 ಇ ಕೆವೈಸಿ: 32,817(ಶೇ. 30.53) ಸದಸ್ಯರು: 4,65,025 ಇ ಕೆವೈಸಿ: 1,41,495(ಶೇ. 30.42) ಪಡಿತರ ವಿತರಣೆಗೆ ತೊಂದರೆಯಾಗದಂತೆ ಇ ಕೆವೈಸಿ ಪ್ರಕ್ರಿಯೆ ಸ್ಥಗಿತವಾಗಿದ್ದು ಮುಂದುವರಿಕೆಗೆ ಆದೇಶ ಬರಬೇಕಿದೆ. ಮೊಹಮ್ಮದ್ ಇಸಾಕ್, ಉಪನಿರ್ದೇಶಕರು, ಉಡುಪಿ ಜಿಲ್ಲಾಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ
from India & World News in Kannada | VK Polls https://ift.tt/3hXcqr9