
: ಜಿಲ್ಲೆಯ ಗ್ರಾಮವೊಂದರ ಜನರು ರಾತ್ರೋರಾತ್ರಿ ಮನೆಯಿಂದ ಹೊರಗೆ ಓಡಿ ಬಂದು ಜಾಗರಣೆ ಮಾಡಿದ್ದಾರೆ. ಇಡೀ ರಾತ್ರಿ ಆತಂಕದಲ್ಲಿಯೇ ಕಾಲ ಕಳೆದಿದ್ದಾರೆ..! ಈ ಘಟನೆ ನಡೆದಿರೋದು ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ. ಬಿ., ಕರಭಂಟನಾಳ ಹಾಗೂ ಇತರ ಗ್ರಾಮಗಳಲ್ಲಿ.. ಎಂದಿನಂತೆ ಇವರು ರಾತ್ರಿ ವೇಳೆ ಆರಾಮಾಗಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದರು. ಆದರೆ, ಏಕಾಏಕಿ ಭೂಮಿಯೊಳಗಿನಿಂದ ಭಾರಿ ಶಬ್ದ ಕೇಳಿ ಬಂದಿದೆ..! ಈ ವೇಳೆ, ಗಾಬರಿಯಾದ ಗ್ರಾಮಸ್ಥರು ಎದ್ದೆನೋ, ಬಿದ್ದೆನೋ ಎಂದು ಹೌಹಾರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ನಡು ರಾತ್ರಿ ವೇಳೆ ಎಲ್ಲರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತಾ ತಮಗಾದ ವಿಚಿತ್ರ ಅನುಭವಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಆಗಿದೆ ಎಂದು ಭಯಗೊಂಡಿರುವ ಜನ, ನಡು ರಾತ್ರಿ ಮನೆಯಿಂದ ಹೊರ ಬಂದು ರಾತ್ರಿಯಿಡೀ ಬೀದಿಯಲ್ಲಿಯೇ ಸಮಯ ಕಳೆದಿದ್ದಾರೆ. ಒಳಗಿನಿಂದ ಶಬ್ದ ಬಂದಾಗ, ಜನರು ಮಲಗಿದ್ದ ನೆಲ ನಡುಗಿದ ಅನುಭವವಾಗಿದೆ. ಜನರು ತಾವು ಎದುರಿಸಿದ ಆ ಕರಾಳ ಕ್ಷಣಗಳನ್ನು ಹೊರ ಹಾಕಿದ್ದಾರೆ. ಅಲ್ಲದೇ, ಈಗಲೂ ಭಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಭಾರಿ ಶಬ್ದ ಉಂಟಾಗಲು ಏನು ಕಾರಣ ಎಂಬುದರ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರದ ಅಧಿಕಾರಿಗಳೂ ಈವರೆಗೆ ಇತ್ತ ಸುಳಿಯದಿರುವುದು ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೆ ತಳ್ಳುವಂತೆ ಮಾಡಿದೆ.
from India & World News in Kannada | VK Polls https://ift.tt/3t9UldZ