ಕುಡಿದು ಗಾಡಿ ಓಡಿಸಿ ಅಪಘಾತಕ್ಕೆ ಕಾರಣನಾದ.. ಪೊಲೀಸರ ವಿರುದ್ಧವೇ ಕೂಗಾಡಿದ ಹಾಸನದ ಭೂಪ..!

ಅರಕಲಗೂಡು (): ಮಾಡಿ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿದ ವ್ಯಕ್ತಿಯೊಬ್ಬ ಅಪಘಾತಕ್ಕೆ ಕಾರಣನಾಗಿದ್ದಷ್ಟೇ ಅಲ್ಲದೆ, ಪೊಲೀಸರಿಗೂ ಆವಾಜ್ ಹಾಕಿದ ಪ್ರಕರಣ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ. ಹೈಡ್ರಾಮಾ ಮಾಡಿ ಪೊಲೀಸರಿಗೆ ಅವಾಜ್ ಹಾಕಿದ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭರ್ಜರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಘಟನೆಯ ವಿವರ: ಅರಕಲಗೂಡು ಮೂಲದ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ. ಆತ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆದ. ಈ ವೇಳೆ ಕಾರು ಚಾಲಕ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿಸಲು ಕಾರನ್ನು ರಸ್ತೆಯಿಂದ ಹಳ್ಳಕ್ಕೆ ಇಳಿಸಿದ. ಹೀಗಾಗಿ, ದೊಡ್ಡ ಅನಾಹುತವೊಂದು ತಪ್ಪಿತು. ಆದ್ರೆ, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದವು. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯ್ತು. ಕಾರಿನ ಪ್ರಯಾಣಿಕರು ಬೆಂಗಳೂರು ಕಡೆಯಿಂದ ಕುಟುಂಬದ ಜೊತೆ ಮಡಿಕೇರಿಯತ್ತ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಅರಕಲಗೂಡು ತಾಲೂಕಿನ ಮುತ್ತಿಗೆ ಬಳಿ ಕಾರಿಗೆ ಗುದ್ದಿದ್ದ. ಈತನ ಹೆಸರು ಮಹೇಶ್. ಈತ ತನ್ನನ್ನು ತಾನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ದ್ವಿಚಕ್ರ ವಾಹನ ಚಾಲಕ ಮಹೇಶ್ ವಾಹನ ಚಲಾಯಿಸುವಾ ಮದ್ಯಪಾನ ಮಾಡಿದ್ದ ಎನ್ನಲಾಗಿದೆ. ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ್ದಷ್ಟೇ ಅಲ್ಲದೆ ಈತ ಕಾರಿಗೆ ಡಿಕ್ಕಿ ಹೊಡೆದು ಮಾಡಿ, ಸಹಾಯಕ್ಕೆ ಬಂದಾಗ ಗ್ರಾಮಸ್ಥರ ಮೇಲೇ ಕೂಗಾಡಿದ್ದಾನೆ. ಅಷ್ಟೇ ಅಲ್ಲದೆ, ಪೊಲೀಸರ ಮೇಲೆಯೂ ಕೂಗಾಟ, ರಂಪಾಟ ಮಾಡಿ ಹುಚ್ಚಾಟ ಮೆರೆದಿದ್ದಾನೆ. ಪೊಲೀಸರು ಆತನ ಮನವೊಲಿಸಲು ಯತ್ನಿಸಿ ಪ್ರಕರಣದ ಬಗ್ಗೆ ದೂರು ದಾಖಲಿಸುವಂತೆ ಮನವಿ ಮಾಡಿದಾಗ, ಆತ ಪೊಲೀಸರ ಮೇಲೇ ಹಲ್ಲೆಗೆ ಯತ್ನಿಸಿ, ನಾನೊಬ್ಬ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ, ನನ್ನನ್ನೇ ಠಾಣೆಗೆ ಬನ್ನಿ ಎಂದು ಕರೆಯುವಷ್ಟು ಧೈರ್ಯವೇ ನಿಮಗೆ ಎಂದು ಸವಾಲೆಸೆದಿದ್ದಾನೆ. ನಾನು ಠಾಣೆಗೆ ಬರುವುದಿಲ್ಲ ಎಂದು ಹಠ ಹಿಡಿದು ಹುಚ್ಚು ಹುಚ್ಚಾಗಿ ನಡೆದುಕೊಂಡಿದ್ದಾನೆ. ಕೊನೆಗೆ ಮಹೇಶನ ಪೋಷಕರು ಸ್ಥಳಕ್ಕಾಗಮಿಸಿ ಬಲವಂತವಾಗಿ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತಹ ಒಂದು ಪ್ರಕರಣ ಜರುಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಅಪಘಾತ ಪ್ರಕರಣದ ಅಡಿ ದೂರು ದಾಖಲಿಸಿಕೊಂಡಿದ್ದಾರೆ.


from India & World News in Kannada | VK Polls https://ift.tt/3zFVxbh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...