
ಕಾಬೂಲ್: ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ ಎಂದು ತಾಲಿಬಾನ್‌ನೊಂದಿಗೆ ಬಹುಕಾಲದಿಂದ ಜೊತೆಗಿರುವ ಹೇಳಿದೆ. ಕಾಶ್ಮೀರ ವಿಚಾರ ಅದರ ನ್ಯಾಯವ್ಯಾಪ್ತಿಯನ್ನು ಮೀರಿದೆ. ಆ ವಿಚಾರದಲ್ಲಿ ಯಾವುದೇ ಮಧ್ಯ ಪ್ರವೇಶ ಭಾರತದ ನೀತಿಯ ವಿರುದ್ಧವಾಗುತ್ತದೆ ಎಂದು ಹಕ್ಕಾನಿ ನೆಟ್‌ವರ್ಕ್‌ನ ಪ್ರಮುಕ ಅನಾಸ್ ಹಕ್ಕಾನಿ ಹೇಳಿದ್ದಾನೆ. ತಾಲಿಬಾನ್‌ನ ಪ್ರಮುಖರೊಂದಿಗೆ ಭಾರತೀಯ ರಾಯಭಾರಿಗಳು ಸಭೆ ನಡೆಸಿದ ಬೆನ್ನಲ್ಲೇ ಅನಾಸ್ ಹಕ್ಕಾನಿ ಈ ರೀತಿ ಹೇಳಿದ್ದು, ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಮುಂದಾಗಿದೆ. ನಮ್ಮ ಸಂಬಂಧವನ್ನು ಮುಂದುವರಿಸಲು ಎಲ್ಲದನ್ನೂ ಮರೆಯಲು ನಾವು ತಯಾರಾಗಿದ್ದೇವೆ ಎಂದು ಹೇಳಿದ್ದಾನೆ. ಹಕ್ಕಾನಿ ನೆಟ್‌ವರ್ಕ್ ಆಪ್ಘನ್ ಗೊರಿಲ್ಲಾ ದಂಗೆಕೋರರ ಗುಂಪಾಗಿದೆ. 1995ರಿಂದಲೂ ತಾಲಿಬಾನ್ ಜೊತೆಗೆ ಹಕ್ಕಾನಿ ನೆಟ್‌ವರ್ಕ್ ಗುರುತಿಸಿಕೊಂಡಿದ್ದು, ಜಲಾಲುದ್ದೀನ್ ಹಕ್ಕಾನಿ ಈ ಹಕ್ಕಾನಿ ನೆಟ್‌ವರ್ಕ್‌ನ್ನು ಸ್ಥಾಪಿಸಿದ್ದ. ಈಗ ಜಲಾಲುದ್ದೀನ್ ಹಕ್ಕಾನಿ ಪುತ್ರ ಅನಾಸ್ ಹಕ್ಕಾನಿ ನೆಟ್‌ವರ್ಕ್ ನೇತೃತ್ವ ವಹಿಸಿಕೊಂಡಿದ್ದಾನೆ. ನಾವು ಕಾಶ್ಮೀರ ವಿಚಾರದಲ್ಲಿ ತಲೆ ಹಾಕಲ್ಲ. ಅಪ್ಘಾನಿಸ್ತಾನದ ಆಂತರಿಕ ವಿಚಾರದಲ್ಲೂ ಯಾರು ತಲೆಹಾಕಬಾರದು ಎಂದು ನಾವು ಬಯಸುತ್ತೇವೆ ಎಂದು ಅನಾಸ್ ಹಕ್ಕಾನಿ ಹೇಳಿದ್ದಾನೆ. ಅದಲ್ಲದೇ ಪಾಕಿಸ್ತಾನ ಬೆಂಬಲಿತ ಜೈಷೆ ಮೊಹಮದ್ ಹಾಗೂ ಲಷ್ಕರೆ ತೊಯ್ಬಾ ಉಗ್ರ ಸಂಘಟನೆಗಳಿಗೆ ಹಕ್ಕಾನಿ ನೆಟ್‌ವರ್ಕ್ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ನಮ್ಮ ಬಗ್ಗೆ ಭಾರತೀಯ ಮಾಧ್ಯಮಗಳು ನಕಾರಾತ್ಮಕವಾಗಿ ಬಿತ್ತರಿಸುತ್ತಿದ್ದು, ಉತ್ತಮ ವಾತಾವರಣವನ್ನು ಹಾಳು ಮಾಡುತ್ತಿವೆ. ನಮ್ಮ ಬಗ್ಗೆ ಯಾರೂ ಕೂಡ ತಪ್ಪಾಗಿ ಯೋಚಿಸುವುದಕ್ಕೆ ಬಿಡುವುದಿಲ್ಲ. ಭಾರತ ನಮ್ಮ ಶತ್ರುವಿಗೆ 20 ವರ್ಷ ಸಹಾಯ ಮಾಡಿದೆ. ಆದರೆ, ನಾವು ಎಲ್ಲವನ್ನೂ ಮರೆಯಲು ಸಿದ್ಧರಿದ್ದೇವೆ ಎಂದು ಅನಾಸ್ ಹಕ್ಕಾನಿ ಹೇಳಿದ್ದಾನೆ. ತಾಲಿಬಾನ್ ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಭಾರತೀಯರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಅನಾಸ್ ಹಕ್ಕಾನಿ, ಅಪ್ಘಾನಿಸ್ತಾನದಲ್ಲಿ ಈಗ ಎಲ್ಲರೂ ಸುರಕ್ಷಿತವಾಗಿದ್ದಾರೆ. ಆರಂಭದಲ್ಲಿ ಸ್ವಲ್ಪ ಆತಂಕ ಇತ್ತು. ಆದರೆ, ಈಗ ಎಲ್ಲ ತಹಬದಿಗೆ ಬಂದಿದ್ದು, ಜನರು ಸಂತೋಷವಾಗಿದ್ದಾರೆ. ಆಪ್ಘನ್ ಸಿಖ್, ಹಿಂದೂ ಅಥವಾ ಯಾವುದೇ ಸಮುದಾಯದವರು ಸಂತೋಷವಾಗಿ ಇಲ್ಲಿರಬಹುದು ಎಂದು ಹೇಳಿದ್ದಾನೆ. ಇನ್ನು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಾವು ಕೇವಲ ಭಾರತದ ಸಹಾಯ ಮಾತ್ರ ಕೇಳಲ್ಲ. ವಿಶ್ವದ ಇತರೆ ರಾಷ್ಟ್ರಗಳನ್ನು ಕೂಡ ನಾವು ಆಹ್ವಾನಿಸುತ್ತೇವೆ ಎಂದು ಅನಾಸ್ ಹಕ್ಕಾನಿ ಹೇಳಿದ್ದಾನೆ.
from India & World News in Kannada | VK Polls https://ift.tt/3jASGuD