ಮದುವೆಗೆ ಹೆಣ್ಣು ನೋಡಲು ಬಂದ ಮಂಡ್ಯದ ಯುವಕ ಅಕ್ಕ ಒಪ್ಪದಿದ್ದಕ್ಕೆ ತಂಗಿಯನ್ನೇ ಕರೆದೊಯ್ದ!

ಚಮಂಡ್ಯ: ಮದುವೆಗೆಂದು ಹುಡುಗಿ ನೋಡಲು‌ ಬಂದ ಯುವಕನೋರ್ವ ಮದುವೆಗೆ ಹಿರಿಯ ಮಗಳು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕಿರಿಯ ಮಗಳನ್ನೇ ಪುಸಲಾಯಿಸಿ ಕರೆದೊಯ್ದಿರೋ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಅಕ್ಕ ಒಪ್ಪಲಿಲ್ಲ ಎಂಬ ಕಾರಣಕ್ಕೆ ತಂಗಿಯನ್ನೇ ಕರೆದೊಯ್ದಿರೋದಾಗಿ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪೊಲೀಸರು ಯುವಕನ ಪತ್ತೆಗೆ ಬಲೆ ಬೀಸಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆಗಸ್ಟ್ 9 ರಂದು ಈ ಘಟನೆ ನಡೆದಿದ್ದು, ನಾಪತ್ತೆಯಾಗಿರುವ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದ ವಿದ್ಯಾರ್ಥಿನಿ ರಕ್ಷಿತಾಳನ್ನು ನಾಗಮಂಗಲ ಮೂಲದ ಗಿರೀಶ್ ಎನ್ನುವವನು ಅಪಹರಣ ಮಾಡಿದ್ದಾನೆ ಎಂದು ಆಕೆಯ ಪೋಷಕರು ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ನಾಗಮಂಗಲದ ಗಿರೀಶ್ ಇತ್ತೀಚೆಗೆ ತನ್ನ ಸಂಬಂಧಿಕರಾದ ನಂದೀಶ್ ಹಿರಿಮಗಳು ಚಂದನಾಳನ್ನು ವಿವಾಹವಾಗಲು ಕೇಳಿದ್ದನು. ಆದರೆ ಚಂದನ ಅಂತಿಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿದ್ದರಿಂದ ಮದುವೆಗೆ ಒಪ್ಪಿರಲಿಲ್ಲ. ಬಳಿಕ ಮೇ 20ರಂದು ಮನೆಯಿಂದಲೇ ಕಿರಿ ಮಗಳು ರಕ್ಷಿತಾ ನಾಪತ್ತೆಯಾಗಿ ವಾಪಸ್ಸಾಗಿದ್ದಳು. ಆ ಬಳಿಕ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದಳು. ಮತ್ತೆ ಆಗಸ್ಟ್ 9 ರಿಂದ ಮತ್ತೊಮ್ಮೆ ಕಾಣೆಯಾಗಿದ್ದಾಳೆ. ಹಿರಿ ಮಗಳು ಚಂದನಾ ಮದುವೆಗೆ ಒಪ್ಪಲಿಲ್ಲವೆಂದು ಹಿರಿ ಮಗಳನ್ನು ನೋಡಲು ಬಂದಿದ್ದ ಗಿರೀಶ್ ಕಿರಿ ಮಗಳನ್ನು ಪುಲಾಯಿಸಿ ಕಿಡ್ನಾಪ್ ಮಾಡಿದ್ದಾನೆ ಎಂದು ಯುವತಿ ಪೋಷಕರು ಯುವಕನ‌ ವಿರುದ್ದ ದೂರು ನೀಡಿದ್ದಾರೆ. ಮತ್ತೊಂದೆಡೆ ಯುವಕನ ಜೊತೆಗೆ ತೆರಳಿರುವ ವಿದ್ಯಾರ್ಥಿನಿ ಕೂಡ ಅಪ್ರಾಪ್ತೆಯಾಗಿದ್ದು, ಈ ಪ್ರಕರಣ ಸಂಬಂಧ ಶ್ರೀ ರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ಯುವತಿ ಕರೆದೊಯ್ದಿರೋ ಯುವಕ ನಾಗಮಂಗಲ ಮೂಲದ ಗಿರೀಶ್ ನ‌ ಪತ್ತೆಗೆ ಬಲೆ ಬೀಸಿದ್ದಾರೆ.


from India & World News in Kannada | VK Polls https://ift.tt/3BI39L1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...