ಮಲೆನಾಡಿಗೆ ಮುದ ನೀಡಿದ ಕಾಫಿ ಕಂಪು; ರೋಬಸ್ಟಾ ಗಿಡದಲ್ಲಿ ಹೂ ರಾಶಿ, ಪ್ರವಾಸಿಗರು ಫಿದಾ!

ಅರುಣ್‌ ರಕ್ಷಿದಿ ಸಕಲೇಶಪುರ ಹಾಸನ: ಮಲೆನಾಡಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯ ಪರಿಣಾಮ ಅರಳಿ ಘಮಘಮ ಕಂಪು ಸೂಸಿ ವಾತಾವರಣಕ್ಕೆ ಮುದ ನೀಡಿದೆ. ಕಳೆದ ಸುಮಾರು 10 ದಿನಗಳ ಹಿಂದೆ(ಕಳೆದ ಗುರುವಾರ-ಶುಕ್ರವಾರ) ತಾಲೂಕಿನ ಹಾನುಬಾಳು, ಹೆತ್ತೂರು, ಯಸಳೂರು, ಬೆಳಗೂರು ಮತ್ತು ಕಸಬಾ ಹೋಬಳಿ ವ್ಯಾಪ್ತಿಯ ಬಹುತೇಕ ಭಾಗಗಳಲ್ಲಿ ಮಳೆ ಸುರಿದಿತ್ತು. ಇದರ ಪರಿಣಾಮ ಬಹುತೇಕ ತೋಟಗಳಲ್ಲಿ ರೋಬಸ್ಟಾ ಗಿಡಗಳು ಭಾನುವಾರ ಮುಂಜಾನೆಯೆ ಹೂವು ಅರಳಿ ವಾತಾವರಣಕ್ಕೆ ಮುದ ನೀಡಿತು. ಎಲ್ಲಿ ನೋಡಿದರೂ ಹಸಿರು ಪರಿಸರದಲ್ಲಿ ಮಲ್ಲಿಗೆ ಹೂವು ಹಾಸಿದಂತೆ ಬೆಳ್ಳಗಿನ ದೃಶ್ಯ, ಕೀಟಗಳ ಝೇಂಕಾರ, ಹಕ್ಕಿಗಳ ಚಿಲಿಪಿಲಿ ನಿನಾದ ನೋಡುಗರನ್ನು ಸೆಳೆಯುತ್ತಿವೆ. ಮಲೆನಾಡಿನ ಹತ್ತಾರು ಹೋಂಸ್ಟೇ, ರೆಸಾರ್ಟ್‌ಗಳಿಗೆ ವೀಕೆಂಡ್‌ ಎಂಜಾಯ್‌ ಮಾಡಲು ಬಂದಿರುವ ಪ್ರವಾಸಿಗರಿಗಂತೂ, ಇಲ್ಲಿನ ಕಾಫಿ ಹೂವಿನ ಕಂಪು, ಘಮಘಮಿಸುವ ವಾತಾವರಣ ಸವಿದು ಸಂಭ್ರಮಿಸುವಂತಾಗಿದೆ. ವೀಕೆಂಡ್‌ನಲ್ಲೆ ಹೂವು ಅರಳಿ ಇಲ್ಲಿನ ಪರಿಸರ ಕಂಗೊಳಿಸುವಂತೆ ಮಾಡಿರುವುದು ಪ್ರವಾಸಿಗರಿಗೆ ಇದೊಂದು ಅಪರೂಪದ ಘಳಿಗೆ ಎಂದೇ ಹೇಳಬಹುದು. ಇಲ್ಲಿನ ಬಹುತೇಕ ಪ್ರಮುಖ ರಸ್ತೆ ಪಕ್ಕದ ತೋಟಗಳು, ರೆಸಾರ್ಟ್‌, ಹೋಂಸ್ಟೆಗಳ ಸಮೀಪದ ತೋಟಗಳಲ್ಲಿ ಇಂತಹ ವಾತಾವರಣ ಸವಿಯಲು ಪ್ರವಾಸಿಗರು ಮುಗಿಬಿದ್ದದ್ದು ಕಂಡುಬಂತು. ಆಕಾಶದೆತ್ತರದಿಂದ ನೋಡುವ ಸಂಭ್ರಮ ಕಾಫಿ ಹೂವು ಬಿಟ್ಟು ವಾತಾವರಣಕ್ಕೆ ಮುದ ನೀಡಿರುವ ಈ ಸಂದರ್ಭದಲ್ಲೇ ಹಾನುಬಾಳು ಸಮೀಪ ವೆಂಕಟಹಳ್ಳಿ ದೀಣೆ(ಮೈದಾನ)ಯಲ್ಲಿ ಸ್ಥಳೀಯ ಹೋಂಸ್ಟೆ ಮತ್ತು ರೆಸಾರ್ಟ್‌ ಮಾಲೀಕರ ಸಂಘದ ಸಹಕಾರದೊಂದಿಗೆ ಪ್ಯಾರಾಸೇಲಿಂಗ್‌ ಮತ್ತು ಪ್ಯಾರಾಮೋಟರಿಂಗ್‌ ಹಾರಾಟ ಆಯೋಜಿಸಲಾಗಿತ್ತು. ಇದು ಸ್ಥಳೀಯರು ಮತ್ತು ಪ್ರವಾಸಿಗರು, ಹೆಂಗಸರು, ಮಕ್ಕಳು ಮಲೆನಾಡಿನ ಕಾಫಿ ತೋಟಗಳ ಸುಂದರ ಸೊಬಗನ್ನು ಆಕಾಶದೆತ್ತರದಿಂದ ನೋಡಿ ಸಂಭ್ರಮಿಸಲು ಸಾಧ್ಯವಾಯಿತು.


from India & World News in Kannada | VK Polls https://ift.tt/3uKIKm1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...