ಮಂಗಳೂರು: ವಂಚನಾ ಆರೋಪಿಗಳ ಕಾರು ಮಾರಾಟ ಪ್ರಕರಣ, ಸಿಐಡಿ ಅಧಿಕಾರಿ ಜತೆಯೂ ಕಾರು ಆರೋಪಿ ನಂಟು!

ಮಂಗಳೂರು: ವಂಚನಾ ಆರೋಪಿಗಳ ಕಾರು ಮಾರಾಟ ಪ್ರಕರಣದ ತನಿಖೆಯನ್ನು (ಕೇಂದ್ರ ತನಿಖಾ ದಳ)ಗೆ ವಹಿಸಲಾಗಿದ್ದು, ಕಳಂಕಿತ ಆರೋಪಿಗಳು ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಯೊಬ್ಬರ ಜತೆ ಮೊಬೈಲ್‌ ಮಾತುಕತೆ ನಡೆಸಿರುವುದು ಇದೀಗ ಬಹಿರಂಗವಾಗಿದೆ. ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾರ್ಕೊಟಿಕ್‌ ಎಂಡ್‌ ಇಕಾನಾಮಿಕ್‌ ಠಾಣಾ ಇನ್‌ಸ್ಪೆಕ್ಟರ್‌ ರಾಮಕೃಷ್ಣ, ಸಿಸಿಬಿ ಸಬ್‌ಇನ್‌ಸ್ಪೆಕ್ಟರ್‌ ಆಗಿದ್ದ ಕಬ್ಬಾಳ್‌ರಾಜ್‌, ಹೆಡ್‌ ಕಾನ್‌ಸ್ಟೇಬಲ್‌ ಆಶಿತ್‌ ಡಿಸೋಜ, ರಾಜ ಎಂಬವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣ ತನಿಖೆ ಸಿಐಡಿಗೆ ಹೋದ ಬಳಿಕ ನಾಲ್ವರು ಆರೋಪಿಗಳಲ್ಲಿ ಒಬ್ಬಾತ ಸಿಐಡಿ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಮಾತನಾಡಿರುವುದು ಬಹಿರಂಗವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಐಡಿ ಅಧಿಕಾರಿ 'ಮಾಧ್ಯಮದಲ್ಲಿ ಬಂದದ್ದೆಲ್ಲ ಸತ್ಯವಲ್ಲ, ಆ ಬಗ್ಗೆ ಟೆನ್ಷನ್‌ ಮಾಡಬೇಡಿ' ಎಂದು ಭರವಸೆ ಮಾತುಗಳನ್ನಾಡಿದ್ದಾರೆಂದು ತಿಳಿದು ಬಂದಿದೆ. ಫೋನ್‌ನಲ್ಲಿ ಆರೋಪಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ವಿಷಯ ಗೃಹ ಇಲಾಖೆ, ಸಿಐಡಿ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದೆ ಎಂದು ತಿಳಿದು ಬಂದಿದೆ. ಸಾಕ್ಷಿದಾರರ ವಿಚಾರಣೆ: ಸಿಐಡಿ ತಂಡ ನಗರಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದು, ಆರೋಪಕ್ಕೆ ಒಳಗಾದವರನ್ನು ಹಾಗೂ ಸಾಕ್ಷಿಗಳನ್ನು ಒಟ್ಟಿಗೆ ತನಿಖೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಸಿಐಡಿ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಬಗ್ಗೆಯೇ ಪೊಲೀಸ್‌ ವಲಯಲದಲ್ಲಿಅನುಮಾನ ಉಂಟಾಗಿದೆ. ಇದು ಹೀಗೆಯೇ ಮುಂದುವರಿದರೆ ಈಗ ಆರೋಪಕ್ಕೆ ಒಳಗಾಗಿರುವ ಪ್ರಕರಣ ತನಿಖಾ ಹಂತದಲ್ಲೇ ಮುಚ್ಚಿಹೋಗುವ ಅಪಾಯವಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕೋವಿಡ್‌ ಟೈಮ್‌ನಲ್ಲೂ ಸುತ್ತಾಟ: ಕಾರು ಮಾರಾಟ ಪ್ರಕರಣದ ಆರೋಪ ಎದುರಿಸುತ್ತಿರುವ ಆಶಿತ್‌ ಡಿಸೋಜ 'ಡಿಜಿಗೆ ಸಲ್ಲಿಕೆಯಾದ ಡಿಸಿಪಿ ವಿಚಾರಣಾ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ನಾನು ಕೊರೊನಾ ರಜೆಯಲ್ಲಿಮನೆಯಲ್ಲಿದ್ದೆ. ನನ್ನ ಮೇಲೆ ವಿನಾ ಕಾರಣ ಆರೋಪ ಮಾಡಲಾಗಿದೆ' ಎಂದು ಹೇಳಿದ್ದಾರೆ. ಆದರೆ ಕೋವಿಡ್‌, ಕ್ವಾರಂಟೈನ್‌ ಅವಧಿಯಲ್ಲೇ ಸಿಸಿಬಿ ಕಚೇರಿ ಸೇರಿದಂತೆ ನಾನಾ ಕಚೇರಿ, ನಗರದಲ್ಲಿ ಸುತ್ತಾಡಿದ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಅವರ ಮೊಬೈಲ್‌ ದಾಖಲೆ ಪರಿಶೀಲಿಸಲಾಗಿದೆ. ಇದರಿಂದ ಕೋವಿಡ್‌ ರಜೆಯಲ್ಲೂ ಕೋವಿಡ್‌ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಮಹಿಳೆಯಿಂದಲೂ ಸುಲಿಗೆ ? ನಗರ ಸಿಸಿಬಿ ಪೊಲೀಸರ ಕಾರು ಮಾರಾಟ ವಂಚನೆ ಪ್ರಕರಣ ಹೊರಬಿದ್ದ ಒಂದರ ಹಿಂದೆ ಒಂದು ಪ್ರಕರಣಗಳು ಹೊರಬರುತ್ತಿವೆ. ಇದೇ ಮಾದರಿ ವೀಣಾ ಎಂಬವರಿಂದಲೂ ಹಣ ಸುಲಿಗೆ ಮಾಡಿರುವ ಬಗ್ಗೆ ಆರೋಪ ಬಂದಿದೆ. 2019ರ ಅಕ್ಟೋಬರ್‌ನಲ್ಲಿ ವೀಣಾ ಎಂಬವರ ಹಾಲಿನ ಡೈರಿಗೆ ನುಗ್ಗಿ ಏಕಾಏಕಿ 86ಸಾವಿರ ರೂ. ಹಣ ಕೊಂಡೊಯ್ದ ಬಗ್ಗೆ ಮಹಿಳೆ ದೂರಿದ್ದಾರೆ. ಹಣದ ಬಗ್ಗೆ ಪೊಲೀಸ್‌ ದೂರು ನೀಡಿದ್ದರೂ, ಯಾವುದೇ ನ್ಯಾಯ ಸಿಕ್ಕಿಲ್ಲ ವೀಣಾ ಅವರು ಆರೋಪಿಸಿದ್ದಾರೆ.


from India & World News in Kannada | VK Polls https://ift.tt/30fIldm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...