![](https://vijaykarnataka.com/photo/81340696/photo-81340696.jpg)
ಬೆಂಗಳೂರು: ದೂರುದಾರ ದಿನೇಶ್ ನೀಡಿರುವ ಸಿ.ಡಿ.ಯಲ್ಲಿರುವ ವಿಡಿಯೋ ಮತ್ತು ಅಶ್ಲೀಲ ಚಾಟಿಂಗ್‌ನಲ್ಲಿರುವುದು ಒಬ್ಬ ಮಹಿಳೆಯೇ ಅಥವಾ ಬೇರೆ ಬೇರೆ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ದಿನೇಶ್ ಕಲ್ಲಹಳ್ಳಿ ನೀಡಿರುವ ಸಿ.ಡಿ.ಯಲ್ಲಿ ಮತ್ತು ಜಾಲತಾಣಗಳಲ್ಲಿ ಐದು ವಿಡಿಯೋ ಹರಿದಾಡುತ್ತಿವೆ. ಅದರಲ್ಲಿಎರಡು ಅಶ್ಲೀಲ ಆಡಿಯೊ, ಒಂದು ಅಶ್ಲೀಲ ವಿಡಿಯೊ ಚಾಟಿಂಗ್ ಮತ್ತು ಉಳಿದೆರೆಡು ಚಾಟಿಂಗ್ ಮಾಡಿರುವ ಆಡಿಯೋ ಇವೆ. ಎರಡು ಪ್ರತ್ಯೇಕ ಸ್ಥಳಗಳಲ್ಲಿ ಎರಡು ವಿಡಿಯೋಗಳು ರೆಕಾರ್ಡಿಂಗ್ ಆಗಿರುವಂತಿದೆ. ಏಕೆಂದರೆ, ವಿಡಿಯೊ ಕೊಠಡಿಯ ಒಳಾಂಗಣ ವಿನ್ಯಾಸ ಮತ್ತು ಗಾದಿ ಬೇರೆ ಬೇರೆ ಇವೆ. ಒಂದು ವಿಡಿಯೋ ಚಾಟಿಂಗ್ ಬೇರೆ ಕೊಠಡಿಯಲ್ಲಿ ಮಾಡಲಾಗಿದೆ. ಉಳಿದ ಎರಡು ಆಡಿಯೋಗಳಿಗೆ ಎಡಿಟ್ ಮಾಡಿ ಸ್ಟಿಲ್ ವಿಡಿಯೋ ರೂಪ ನೀಡಲಾಗಿದೆ. ಈ ಐದು ತುಣುಕುಗಳಲ್ಲಿ ಇರುವುದು ಒಬ್ಬರೇ ಮಹಿಳೆಯೇ ಎಂಬುದನ್ನು ಪತ್ತೆ ಹಚ್ಚಬೇಕು. ಅದಕ್ಕಾಗಿ ಈಗ ದೂರಿನಲ್ಲಿ ತಿಳಿಸಿರುವ ಒಬ್ಬ ಸಂತ್ರಸ್ಥ ಮಹಿಳೆ ಸಿಕ್ಕರೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗೊಂದಲ ಪರಿಹರಿಸಿಕೊಳ್ಳಲು ಎಫ್‌ಎಸ್‌ಎಲ್ ನೆರವು ಪಡೆಯಬೇಕಾಗುತ್ತದೆ. ಆದರೆ, ಅದಕ್ಕೆ ಪ್ರಕರಣ ದಾಖಲಿಸಿಕೊಳ್ಳ-\ಬೇಕಾಗುತ್ತದೆ. ಹೀಗಾಗಿ, ಪೊಲೀಸರು ಕಾನೂನಿನ ವ್ಯಾಪ್ತಿಯಲ್ಲಿ ಆಡಿಯೋ, ವಿಡಿಯೊದಲ್ಲಿರುವ ಮಹಿಳೆ/ಯುವತಿಯ ಗುರುತು ಪತ್ತೆಗೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆಂದು ತಿಳಿದು ಬಂದಿದೆ. ಸಂತ್ರಸ್ತೆಯ ಇನ್‌ಸ್ಟಾಗ್ರಾಂ ಅಕೌಂಟ್ ಬಂದ್! ಜೊತೆ ವಿಡಿಯೋದಲ್ಲಿದ್ದಾರೆ ಎನ್ನಲಾದ ಮಹಿಳೆ/ಯುವತಿಯ ಫೋಟೋಗಳು ವ್ಯಾಟ್ಸ್ಯಾಪ್‌ನಲ್ಲಿ ಹರಿದಾಡುತ್ತಿವೆ. ಫೋಟೊಶೂಟ್ ಮಾಡಿಕೊಂಡಿರುವ, ಸೆಲ್ಫಿಯ ಹಲವು ಫೋಟೊಗಳನ್ನು ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿಆ ಯುವತಿ ಅಪ್‌ಲೋಡ್ ಮಾಡಿದ್ದಾರೆ. ಆದರೆ, ಆ ಇನ್‌ಸ್ಟಾಗ್ರಾಂ ಅಕೌಂಟ್ ಬಂದ್ ಆಗಿದೆ.
from India & World News in Kannada | VK Polls https://ift.tt/2PACFIN