ಸುಳ್ಯ: ಗ್ರಾಮದ ಮುಳ್ಯ ಅಟ್ಲೂರಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಮುಳ್ಯ ಮಠರಿಗೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ. ಸೋಮವಾರ ರಾತ್ರಿ ಮುಳ್ಯ ಅಟ್ಲೂರಿನಲ್ಲಿ ಯಕ್ಷಗಾನ ಕಾರ್ಯಕ್ರಮಕ್ಕೆ ಬಂದಿದ್ದ ವಿಶ್ವನಾಥ ಮುಳ್ಯಮಠ ಅವರು ಭಜನಾ ಮಂದಿರದ ಸಮೀಪ ತನ್ನ ಜತೆಗಾರರೊಂದಿಗೆ ನಿಂತಿದ್ದಾಗ ಅಲ್ಲಿಗೆ ತನ್ನ ಸಹೋದರ ರಾಘವರ ಜತೆ ಬಂದ ಮುಳ್ಯ ಮಠದ ಯೋಗೀಶ ಎಂಬಾತ ವಿಶ್ವನಾಥರ ಜತೆ ವಾಗ್ವಾದ ನಡೆಸಿದ್ದು, ಬಳಿಕ ತಳ್ಳಾಟ ನಡೆಯಿತೆಂದು ತಿಳಿದುಬಂದಿದೆ. ಈ ತಳ್ಳಾಟವನ್ನು ಅಲ್ಲಿದ್ದ ಕೆಲವರು ಬಿಡಿಸಿದರು. ಕೆಲವು ಹೊತ್ತಿನಲ್ಲಿ ಮತ್ತೆ ಅದೇ ಸ್ಥಳಕ್ಕೆ ಹಿಡಿದುಕೊಂಡು ಬಂದ ಯೋಗೀಶ ವಿಶ್ವನಾಥರಿಗೆ ಕತ್ತಿ ಬೀಸಿದ್ದು, ಈ ವೇಳೆ ಶಿವ ಎಂಬವರು ಯೋಗೀಶನ ಕೈಹಿಡಿದಿದ್ದರಿಂದ ಕತ್ತಿ ವಿಶ್ವನಾಥರ ತುಟಿಗೆ ತಾಗಿ ಗಾಯವಾಯಿದೆ ಎನ್ನಲಾಗಿದೆ. ತಕ್ಷಣ ವಿಶ್ವನಾಥರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಕೇಸು ದಾಖಲಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಹಳೆ ವೈಷಮ್ಯ ಹಿನ್ನೆಲೆ ಕೃತ್ಯ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/3uR6N2P