ವೆಲ್ಲಿಂಗ್‌ಟನ್: ನ್ಯೂಜಿಲ್ಯಾಂಡ್‌ನಲ್ಲಿ 12 ಗಂಟೆಯೊಳಗೆ ಬರೋಬ್ಬರಿ ಮೂರು ಬಾರಿ ಉಂಟಾಗಿದೆ. ಅದರಲ್ಲೂ ನ್ಯೂಜಿಲ್ಯಾಂಡ್‌ನ ನಾರ್ಥ್ ಐಸ್‌ಲ್ಯಾಂಡ್‌ನಲ್ಲಿ 8.1 ತೀವ್ರತೆಯ ಭೀಕರ ಭೂ ಕಂಪನ ಸಂಭವಿಸಿದ್ದು, ಭೂಮಿಯ ಕಂಪನಕ್ಕೆ ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಇನ್ನು ತೀವ್ರ ಪ್ರಮಾಣದ ಭೂ ಕಂಪನದಿಂದ ಪೆಸಿಫಿಕ್ ಸಾಗರದಿಂದ ಸುತ್ತುವರಿದಿರುವ ನ್ಯೂಜಿಲ್ಯಾಂಡ್‌ಗೆ ಭೀತಿ ಎದುರಾಗಿದೆ. ಅಲ್ಲದೆ ಭೂಕಂಪನದಿಂದ ಪೆಸಿಫಿಕ್ ಸಾಗರದಲ್ಲಿ ಸುನಾಮಿ ಏಳುವ ಸಾಧ್ಯತೆ ಇದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಕರಾವಳಿ ಭಾಗದಲ್ಲಿರುವ ಜನರನ್ನು ಅಲ್ಲಿನ ಸ್ಥಳೀಯ ಆಡಳಿತ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನಲಾಗಿಒದೆ. ಬ್ಯಾಕ್ ಟು ಬ್ಯಾಕ್ ಭೂ ಕಂಪನ!ಕೆರ್ಮಾಡೆಕ್ ದ್ವೀಪಗಳಲ್ಲಿ ಮೊದಲಿಗೆ 7.2, ನಂತರ 7.4 ಹಾಗೂ ಬಳಿಕ 8.1 ತೀವ್ರತೆಯಲ್ಲಿ ಸರಣಿ ಭೂಕಂಪನ ಉಂಟಾಗಿದೆ. ಇದರಿಂದಾಗಿ ಕಿವೀಸ್ ದೇಶದ ಜನರು ಬೆಚ್ಚಿಬಿದ್ದಿದ್ದಾರೆ. ಮೊದಲು ಭೂ ಕಂಪನ ಉಂಟಾಗುತ್ತಿದ್ದಂತೆ ಕೂಡಲೇ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರು, ಪ್ರವಾಸಿಗರನ್ನು ಸ್ಥಳಾಂತರ ಮಾಡಲಾಯಿತು. ಹೀಗಾಗಿ 8.1 ತೀವ್ರತೆಯ ಭೂ ಕಂಪನ ಉಂಟಾದರು ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನಲಾಗಿದೆ. ಇನ್ನು ಕೊನೆಯ 8.1 ತೀವ್ರತೆ ರಿಕ್ಟರ್ ಮಾಪಕದಲ್ಲಿ ಭೂ ಕಂಪನ ದಾಖಲಾಗಿದ್ದು, ನ್ಯೂಜಿಲೆಂಡ್ ಕರಾವಳಿಯ ಸುಮಾರು 1,000 ಕಿಲೋಮೀಟರ್ ದೂರದಷ್ಟು ಭೀಕರವಾಗಿ ಭೂಕಂಪ ಸಂಭವಿಸಿದೆ. ಸುಮಾರು 1,000 ಕಿ,ಮೀ ದೂರದಷ್ಟು ಭೂಮಿ ಕಂಪಿಸಿದ ಅನುಭವ ಆಗಿದೆಯಂತೆ. ಇನ್ನು 8.1 ತೀವ್ರತೆಯ ಭೂಕಂಪದಿಂದ ಸುನಾಮಿ ಸುಮಾರು 10 ಅಡಿ ಎತ್ತರ ಉದ್ಭವವಾಗಿತ್ತು ಎನ್ನಲಾಗಿದೆ. ಅಲ್ಲದೆ ಮುಂದಿನ ಕೆಲವು ಗಂಟೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು ಭೂ ಕಂಪನದಿಂದ ಪೆಸಿಫಿಕ್ ಸಾಗರದಲ್ಲಿ ಸುನಾಮಿ ಸಂಭವಿಸಬಹುದು ಎನ್ನಲಾಗಿದೆ. ಇದಕ್ಕಿಂತಲೂ ಕಡಿಮೆ ತೀವ್ರತೆಯ ಭೂಕಂಪ ಈ ಹಿಂದೆ ನ್ಯೂಜಿಲೆಂಡ್ನಲ್ಲಿ ಸಂಭವಿಸಿದ್ದಾಗ ನೂರಾರು ಮಂದಿ ಸಾವನ್ನಪ್ಪಿದ್ದರು. ಇಂಡೋನೇಷ್ಯಾದಲ್ಲಿ ಸಂಭವಿಸಿದ 8.2 ತೀವ್ರತೆಯ ಭೂಕಂಪದಿಂದ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ದೊಡ್ಡ ಸುನಾಮಿಯನ್ನೇ ಸೃಷ್ಟಿಸಿ ಲಕ್ಷಾಂತರ ಜನರನ್ನ ಬಲಿಪಡೆದಿತ್ತು. ಇನ್ನು ನೀರಿನಿಂದ ಸುತ್ತುವರಿದಿರುವ ದೇಶವಾಗಿದ್ದು, ನ್ಯೂಜಿಲ್ಯಾಂಡ್ ದೇಶ ಸುತ್ತ ಪೆಸಿಫಿಕ್ ಸಾಗರವಿದೆ.
from India & World News in Kannada | VK Polls https://ift.tt/38c9TEE