ಹೊಸದಿಲ್ಲಿ: ಸತತ 5ನೇ ತಿಂಗಳೂ ಲಕ್ಷ ಕೋಟಿ ರೂ.ಗಳ ಗಡಿ ದಾಟಿದೆ. ಫೆಬ್ರವರಿಯಲ್ಲಿ ರೂ.ಗೆ ತೆರಿಗೆ ಸಂಗ್ರಹ ವೃದ್ಧಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.7ರಷ್ಟು ಏರಿಕೆಯಾಗಿದೆ. ಇದು ಆರ್ಥಿಕ ಚಟುವಟಿಕೆಗಳ ಪ್ರಗತಿಯನ್ನು ಬಿಂಬಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಹೀಗಿದ್ದರೂ, ತೆರಿಗೆ ಸಂಗ್ರಹವು ಜನವರಿಗೆ ಹೋಲಿಸಿದರೆ( 1.19 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ. 2021ರ ಫೆಬ್ರವರಿಯಲ್ಲಿ ಸಿಜಿಎಸ್‌ಟಿ 21,092 ಕೋಟಿ ರೂ, ಎಸ್‌ಜಿಎಸ್‌ಟಿ 27,273 ಕೋಟಿ ರೂ, ಐಜಿಎಸ್‌ಟಿ 55,253 ಕೋಟಿ ರೂ. ಸಂಗ್ರಹವಾಗಿದೆ. ಸರಕುಗಳ ಆಮದಿನಿಂದ ಸರಕಾರಕ್ಕೆ ತೆರಿಗೆ ಆದಾಯದಲ್ಲಿ 15 ಪರ್ಸೆಂಟ್ ಏರಿಕೆಯಾಗಿದೆ. ಲಾಕ್‌ಡೌನ್ ಸಡಿಲವಾದ ನಂತರ ಆರ್ಥಿಕ, ವಾಣಿಜ್ಯ ಚಟುವಟಿಕೆಗಳು ಸುಧಾರಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಥಿಕ ಪರಿಣಿತೆ ಅದಿತಿ ನಾಯರ್ , ಫೆಬ್ರವರಿ 2021 ರಲ್ಲಿ ಜಿಎಸ್ಟಿ ಸಂಗ್ರಹಗಳ ಬೆಳವಣಿಗೆಯು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಕೂಡ ಆರೋಗ್ಯಕಾರ ಬೆಳವಣಿಗೆ ಎದ್ದು ಕಾಣುತ್ತಿದೆ. ಇದು ವಿವಿಧ ಪ್ರಮುಖ ಸೂಚಕಗಳಲ್ಲಿ ಕಂಡುಬರುವ ಆರ್ಥಿಕ ಚಟುವಟಿಕೆಯ ವೇಗದಲ್ಲಿನ ಬಲವರ್ಧನೆಗೆ ಅನುಗುಣವಾಗಲಿದೆ ಎಂದು ತಿಳಿಸಿದರು.
from India & World News in Kannada | VK Polls https://ift.tt/383oQZQ