ರೈತರ ಟ್ರ್ಯಾಕ್ಟರ್‌ ರ‍್ಯಾಲಿ Live: ಟ್ರ್ಯಾಕ್ಟರ್‌ಗಳೊಂದಿಗೆ ಆಗಮಿಸಿದ ಅನ್ನದಾತರು, ದಿಲ್ಲಿ ಗಡಿ ಬಂದ್‌ ಮಾಡಿದ ಖಾಕಿ!

ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ ಕಾನೂನನ್ನು ವಿರೋಧಿಸಿ ಇಂದು ಅನ್ನದಾತರು ಗಣರಾಜ್ಯ ದಿನದಂದೇ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸುತ್ತಿದ್ದಾರೆ. ದೆಹಲಿಗೆ ಪ್ರವೇಶ ಕಲ್ಪಿಸುವ ಸಿಂಘೂ, ಟಿಕ್ರಿ ಹಾಗೂ ಗಾಜೀಪುರ ಗಡಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದು ಕೆಲವರು ಈಗಾಗಲೇ ತಮ್ಮ ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ಜಾಥ ಹೊರಟು ಬಿಟ್ಟಿದ್ದಾರೆ. ಆದರೆ ದೆಹಲಿಯತ್ತ ಬರುವ ರೈತರಿಗೆ ಅವಕಾಶ ನೀಡಲು ಹಿಂದೇಟು ಹಾಕಿರುವ ಸರ್ಪಗಾವಲ ಹಾಕಿದ್ದಾರೆ. ಈಗಾಗಲೇ ದಿಲ್ಲಿಯ ಎಲ್ಲ ಗಡಿಗಳನ್ನು ಮುಚ್ಚಿದ್ದು ರೈತರಿಗೆ ಯಾವುದೇ ರೀತಿಯ ಎಂಟ್ರಿಗೆ ಅವಕಾಶವಿಲ್ಲ. ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ದೆಹಲಿಯ ಸುತ್ತಲೂ ಪೊಲೀಸರು ಐದು ಸುತ್ತಿನ ಭದ್ರತಾ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಬಾರ್ಡರ್‌ ಪಿಕೆಟ್ಸ್‌, ಇನ್ನರ್‌ ಪಿಕೆಟ್ಸ್‌, ಮಿಡಲ್‌ ಪಿಕೆಟ್ಸ್‌ ಹಾಗೂ ಔಟರ್‌ ಪಿಕೆಟ್ಸ್‌ ಸೇರಿ ಒಟ್ಟು ಐದು ಸ್ತರದ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.ಭಾಗವಹಿಸುವ ಲಕ್ಷಾಂತರ ಟ್ರ್ಯಾಕ್ಟರ್‌ಗಳು ಹೂವಿನಿಂದ ಸಿಂಗಾರಗೊಂಡಿದ್ದು, ಸಿಖ್‌ ಧರ್ಮಗುರುಗಳಾದ ಶಹೀದ್‌ ಬಾಬಾ ದೀಪ್‌ ಸಿಂಗ್, ಬಾಬಾ ಬಂದಾ ಸಿಂಗ್‌ ಬಹದೂರ್‌ ಹಾಗೂ ಗುರು ತೇಗ್‌ ಬಹದೂರ್‌ ಅವವರ ಪೋಸ್ಟರ್‌ಗಳನ್ನು ಟ್ರ್ಯಾಕ್ಟರ್‌ನಲ್ಲಿ ಅಂಟಿಸಲಾಗಿದೆ. =============== ಹೊಸ ದಿಲ್ಲಿಯಲ್ಲಿ ಬಿಗಿ ಭದ್ರತೆ! ಪ್ರತಿಭಟನೆ ಹಿನ್ನೆಲೆ ಹೊಸದಿಲ್ಲಿಯಲ್ಲಿ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಟ್ರ್ಯಾಕ್ಟರ್‌ ಜಾಥ ಹೊರಟಿರುವ ರೈತರು ಭದ್ರತೆಯನ್ನು ಮೀರಿ ಹೊಸದಿಲ್ಲಿಯೊಳಗೆ ಪ್ರವೇಸುವಚ ಸಾಧ್ಯತೆ ಇರುವುದರಿಂದ ಆರು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ================= ಬ್ಯಾರಿಕೇಡ್‌ ಬೇಧಿಸಿದ ರೈತರು!ಸಿಂಘು ಗಡಿಯಿಂದ ರೈತ ಸಂಘಟನೆಯೊಂದು ಟ್ರಾಕ್ಟರ್ ರ‍್ಯಾಲಿ ಆರಂಭಿಸಿದ್ದು ಸಿಂಘು ಗಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಬೇಧಿಸಿ ಮುಂದೆ ಚಲಿಸಿದೆ. ಮೊದಲ ಸಾಲಿನ ಪೊಲೀಸ್ ಬ್ಯಾರಿಕೇಡ್‌ಗಳನ್ನು ಸಿಂಘು ಗಡಿಯಲ್ಲಿ ಹಾಕಲಾಗಿದೆ. ಬ್ಯಾರಿಕೇಡ್‌ಗಳನ್ನು ದಾಟಿ ಬರುವಂತಿಲ್ಲ. ಆದರೆ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ರೈತರು ಟ್ರ್ಯಾಕ್ಟರ್‌ಗಳೊಂದಿಗೆ ಮುಂದೆ ಸಾಗಿದ್ದಾರೆ. ಈ ರೈತರು ದೆಹಲಿಗೆ ಪ್ರವೇಶಿಸುವ ಪ್ರಯತ್ನದಲ್ಲಿದ್ದಾರೆ. ಇನ್ನು ಇವರು ಪಂಜಾಬ್‌ನ ಕಿಸಾನ್‌ ಮಜ್ದೂರ್‌ ಸಂಘರ್ಷ ಕಮಿಟಿಯ ಕಾರ್ಯಕರ್ತರು ಎಂದು ತಿಳಿದುಬಂದಿದೆ. -------------- ನವದೆಹಲಿಗೆ ವಾಹನಗಳ ಪ್ರವೇಶವನ್ನು ನಿಲ್ಲಿಸಲು ಕರ್ನಾಲ್ ಬೈಪಾಸ್‌ನಲ್ಲಿ ತಾತ್ಕಾಲಿಕ ತಡೆ ಗೋಡೆ ನಿರ್ಮಿಸಿದ ಪೊಲೀಸರು!


from India & World News in Kannada | VK Polls https://ift.tt/3oiho2i

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...