ಯಾರಾಗುತ್ತಾರೆ ರಾಜ್ಯ ‘ಯುವ ಕಾಂಗ್ರೆಸ್’ ಅಧ್ಯಕ್ಷ? ಕೈ ಪಾಳಯದಲ್ಲಿ ಪಟ್ಟಕ್ಕಾಗಿ ಪೈಪೋಟಿ

ಬೆಂಗಳೂರು: ರಾಜ್ಯ ‘ಯುವ ಕಾಂಗ್ರೆಸ್‌’ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಆಂತರಿಕ ಚುನಾವಣೆ ಪೈಪೋಟಿ ತೀವ್ರಗೊಂಡಿದೆ. ಪಟ್ಟಕ್ಕಾಗಿ ನಾಲ್ವರಲ್ಲಿ ಪೈಪೋಟಿ ನಡೆಯುತ್ತಿದ್ದು ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುವುದು ಕುತೂಹಲ ಕೆರಳಿಸಿದೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಗೆ ಡಿಸೆಂಬರ್‌ 31 ರಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿತ್ತು. ಜನವರಿ 7 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಕೋವಿಡ್‌ ಕಾರಣಕ್ಕಾಗಿ ಈ ಬಾರಿ ಆನ್‌ಲೈನ್‌ನಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಇರುವ ಒಟ್ಟು 4.50 ಲಕ್ಷ ಸದಸ್ಯರು ಈ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮೂಲಕ ತಮ್ಮ ಅಧ್ಯಕ್ಷನನ್ನು ಆಯ್ಕೆ ಮಾಡಲಿದ್ದಾರೆ. ಕಣದಲ್ಲಿ ಯಾರೆಲ್ಲಾ ಇದ್ದಾರೆ? ಯುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಸದ್ಯ ಕಣದಲ್ಲಿ ಎನ್‌ಎಸ್‌ಯುಐ ಅಧ್ಯಕ್ಷ ಎಚ್‌ಎಸ್‌ ಮಂಜುನಾಥ್ ಗೌಡ, ಮಾಜಿ ಸಚಿವ ಎಂಆರ್‌ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ, ಶಾಸಕ ಎನ್‌ಎ ಹ್ಯಾರಿಸ್ ಪುತ್ರ ಮುಹಮ್ಮದ್ ನಲಪಾಡ್‌ ಹಾಗೂ ಮಿಥುನ್ ರೈ ಹೆಸರು ಮುಂಚೂಣಿಯಲ್ಲಿದೆ. ಈ ಪೈಕಿ ಎಚ್‌ಎಸ್ ಮಂಜುನಾಥ್ ಗೌಡ ಹಾಗೂ ಮುಹಮ್ಮದ್ ನಲಪಾಡ್‌ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಉಳಿದಂತೆ ಭವ್ಯಾ, ಸೈಯದ್ ಖಾಲಿದ್ ಹಾಗೂ ಸಂದೀಪ ನಾಯಕ ಹೆಸರುಗಳು ಕೂಡಾ ಕೇಳಿಬರುತ್ತಿವೆ. ಅಭ್ಯರ್ಥಿಗಳು ಏನು ಹೇಳುತ್ತಾರೆ? " ಸದಸ್ಯತ್ವದ ಜೊತೆಗೆ ಪಕ್ಷದ ಸಂಘಟನೆಯನ್ನು ಮಾಡಿಕೊಂಡು ಬಂದಿದ್ದೇನೆ. ಪಕ್ಷದ ಎಲ್ಲ ನಾಯಕರ ಜೊತೆಗೆ ಉತ್ತಮ ಒಡನಾಡ ಇದೆ.ಎನ್‌ಎಸ್‌ಯುಐನಲ್ಲಿ ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡಿದ್ದೇನೆ. ಸಂಘಟನೆ ವಿಚಾರ ಬಂದಾದ ಗಟ್ಟಿಯಾಗಿ ನಿಂತಿದ್ದೇನೆ. ಗೆಲ್ಲುವ ವಿಶ್ವಾಸ ಇದೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಆಶೀರ್ವಾದವೂ ನನಗಿದೆ" ಎನ್ನುತ್ತಾರೆ ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿ ಎಚ್‌ಎಸ್ ಮಂಜುನಾಥ್ ಗೌಡ “ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಂತರಿಕವಾಗಿ ನಡೆಯುವ ಚುನಾವಣೆ ಇದು ಇಲ್ಲಿ ಸೋಲು, ಗೆಲವು ಪ್ರಶ್ನೆ ಮುಖ್ಯವಲ್ಲ. ಚುನಾವಣಾ ಪ್ರಕ್ರಿಯೆಗೆ ಹಿರಿಯ ನಾಯಕರು ಕೈಜೋಡಿಸಿದ್ದಾರೆ. ಯಾವುದೇ ಘರ್ಷಣೆ ಇಲ್ಲದೆ ಎಲ್ಲರನ್ನು ಜೊತೆಗೂಡಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಕಾಂಗ್ರೆಸ್‌ ಪಕ್ಷ ಯುವಕರಿಗೆ ಸಾಕಷ್ಟು ಅವಕಾಶ ನೀಡುತ್ತಿದೆ.ಈ ನಿಟ್ಟಿನಲ್ಲಿ ಸೂಕ್ತ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಲಿದೆ” ಎಂದು ಅಭ್ಯರ್ಥಿಯಾಗಿರುವ ಮಿಥುನ್ ರೈ ವಿಶ್ವಾಸ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/38WLYZC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...