
ಟೆಹ್ರನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಯಾವುದೇ ಕಾರಣಕ್ಕೂ ಹೆಣೆದಿರುವ ಬಲೆಯಲ್ಲಿ ಬೀಳದಂತೆ, ವಿದೇಶಾಂಗ ಸಚಿವ ಸಲಹೆ ನೀಡಿದ್ದಾರೆ. ಇರಾಕ್‌ನಲ್ಲಿ ಬೀಡು ಬಿಟ್ಟಿರುವ ಅಮೆರಿಕನ್ ಪಡೆಗಳ ಮೇಲೆ ದಾಳಿ ಮಾಡುವ ಸಂಚು ರೂಪಿಸಿರುವ ಇಸ್ರೇಲ್,ಈ ದಾಳಿಗಳನ್ನು ಇರಾನ್ ನಡೆಸುತ್ತಿದೆ ಎಂದು ಬಿಂಬಿಸಲು ಹವಣಿಸುತ್ತಿದೆ. ಈ ಮೂಲಕ ಅಮೆರಿಕ-ಇರಾನ್ ನಡುವೆ ಯುದ್ಧವಾಗಲಿ ಎಂಬುದು ಇಸ್ರೇಲ್ ಕುತಂತ್ರ ಎಂದು ಮೊಹಮ್ಮದ್ ಜವಾದ್ ಜರೀಫ್ ಅಭಿಪ್ರಾಯಪಟ್ಟಿದ್ದಾರೆ. ಇರಾಕ್‌ನಲ್ಲಿರುವ ಅಮೆರಿಕದ ಪಡೆಗಳ ಮೇಲೆ ದಾಳಿ ಮಾಡಿ ಅದನ್ನು ಇರಾನ್ ತಲೆಗೆ ಕಟ್ಟುವ ಸಂಚು ನಡೆದಿದ್ದು, ಟ್ರಂಪ್ ಇಸ್ರೇಲ್ ಮಾತು ಕೇಳಿಕೊಂಡು ಇರಾನ್ ಮೇಲೆ ಯುದ್ಧಕ್ಕೆ ಮುಂದಾಗುವುದು ಬೇಡ ಎಂದು ಜರೀಫ್ ಮನವಿ ಮಾಡಿದ್ದಾರೆ. ಇರಾಕ್‌ನಲ್ಲಿ ಇರಾನ್‌ನ ಉನ್ನತ ಸೇನಾ ಕಮಾಮಡರ್ ಖಾಸೀಂ ಸುಲೈಮಾನಿ ಅವರನ್ನು ಅಮೆರಿಕ ಹತ್ಯೆ ಮಾಡಿ ಒಂದು ಚವಚರ್ಷವಾಗಿದೆ. ಈ ಅವಧಿಯಲ್ಲಿ ಇರಾಣ್-ಅಮೆರಿಕ ನಡುವಿನ ಸಂಬಂಧ ತೀರ ಹದಗೆಟ್ಟಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಯುದ್ಧದ ಹೊಸ್ತಿಲಲ್ಲಿ ನಿಂತಿವೆ. ಆದರೆ ಈ ಎಲ್ಲಾ ಬೆಳವಣಿಗೆಗಳಿಗೆ ಇಸ್ರೇಲ್ ಕುತಂತ್ರವೇ ಕಾರಣ ಎಂದಿರುವ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್ ಜರೀಫ್, ಇಸ್ರೇಲ್ ಮಾತು ಕೇಳಿ ಯುದ್ಧೋನ್ಮಾದ ತೋರದಂತೆ ಟ್ರಂಪ್ ಅವರಿಗೆ ಮನವಿ ಮಾಡಿದ್ದಾರೆ. ಇರಾಕ್‌ನಲ್ಲಿರುವ ಅಮೆರಕ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಇಸ್ರೇಲ್ ಸಂಚು ರೂಪಿಸಿದೆ. ಈ ದಾಳಿಗಳ ಬಗ್ಗೆ ಅಮೆರಿಕ ಎಚ್ಚರಿಕೆಯಿಂದ ಇರಬೇಕು ಎಂದು ಜರೀಫ್ ಹೇಳಿದ್ದಾರೆ.
from India & World News in Kannada | VK Polls https://ift.tt/3b4whSK