
ಆರ್.ಶ್ರೀಧರ್ ರಾಮನಗರ ರಾಮನಗರ: ರಾಜ್ಯದ ಬಡ ಸಮುದಾಯದ ಯುವಕ-ಯುವತಿಯರಿಗೆ ನೆರವಾಗುವ ಉದ್ದೇಶದಿಂದ 2020ರಲ್ಲಿ ರಾಜ್ಯದ ನಡೆಸಲು ಉದ್ದೇಶಿಸಿದ್ದ ಕಾರ‍್ಯಕ್ರಮಕ್ಕೆ ಈ ವರ್ಷವೂ ವೇದಿಕೆ ಸಿದ್ದಗೊಳ್ಳುತ್ತಿದೆ. ಸಾಮೂಹಿಕ ವಿವಾಹ ನಡೆಯುವ ದಿನಾಂಕಗಳು ಹಾಗೂ ದೇಗುಲಗಳ ಪಟ್ಟಿ ಶೀಘ್ರವೇ ಪ್ರಕಟಗೊಳ್ಳಲಿದೆ. ಕಳೆದ ವರ್ಷ ಸ್ಥಗಿತಗೊಂಡಿತ್ತು ಕಳೆದ ವರ್ಷ ರಾಜ್ಯದ ಎ ವರ್ಗದ 100 ದೇಗುಲಗಳಲ್ಲಿ ರಾಜ್ಯ ಸರಕಾರವೇ ಸಾಮೂಹಿಕ ವಿವಾಹ ಏರ್ಪಡಿಸಿತ್ತು. ಏ.26 ಹಾಗೂ ಮೇ 24ರಂದು ವಿವಾಹ ನಡೆಸಲು ಉದ್ದೇಶಿಸಲಾಗಿತ್ತು. ಅಷ್ಟರಲ್ಲೇ ಕೋವಿಡ್-19 ಮಹಾಮಾರಿ ವಕ್ಕರಿಸಿದ್ದರಿಂದ ಕಾರ‍್ಯಕ್ರಮ ರದ್ಧಾಗಿತ್ತು. ಸಾಮೂಹಿಕ ವಿವಾಹದ ಲಾಭ ಪಡೆಯಲು ರಾಜ್ಯದಲ್ಲಿ ಸಾವಿರಾರು ಜೋಡಿಗಳು ಅರ್ಜಿ ಸಲ್ಲಿಸಿದ್ದವು. ಆದರೆ, ಕಾರ‍್ಯಕ್ರಮ ರದ್ಧಾಗಿದ್ದರಿಂದ ಅವರೆಲ್ಲಾ ನಿರಾಶರಾಗಬೇಕಾಯಿತು. ಶೇ.99 ರಷ್ಟು ಮುಗಿದಿವೆ ಕಳೆದ ವರ್ಷದ ಸಾಮೂಹಿಕ ವಿವಾಹಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ ಶೇ.99ರಷ್ಟು ಮದುವೆಗಳು ಈಗಾಗಲೇ ಮುಕ್ತಾಯಗೊಂಡಿವೆ. ಹೀಗಾಗಿ ಅಂದು ಅರ್ಜಿ ಸಲ್ಲಿಸಿದ್ದವರಿಗೆ ಸರಕಾರ ಊಡುಗೊರೆಗಳು ದೊರೆಯುವುದಿಲ್ಲ. ಈ ವರ್ಷ ಮತ್ತೆ ಧಾರ್ಮಿಕ ಇಲಾಖೆ ಮೂಲಕ ಜಿಲ್ಲಾಡಳಿತಗಳಿಗೆ ಸೂಚನೆ ರವಾನೆಯಾಗಿದ್ದು, ಹೊಸದಾಗಿ ಅರ್ಜಿ ಕರೆಯಲು ಸೂಚನೆ ನೀಡಿದೆ. ಇದೀಗ ಮತ್ತೆ ರಾಜ್ಯದ ಪ್ರತಿ ಜಿಲ್ಲೆಯು, ಸಾಮೂಹಿಕ ವಿವಾಹಕ್ಕೆ ಅರ್ಜಿ ಕರೆಯಬೇಕಿದೆ. ಬಳಿಕ ಮದುವೆ ದಿನಾಂಕ ನಿಗದಿ ಪಡಿಸಿ, ಆಯ್ದ ದೇಗುಲಗಳಲ್ಲಿ ವಿವಾಹ ನಡೆಸಲು ಸಿದ್ಧತೆ ನಡೆಯುತ್ತಿದೆ. ಏನೇನು ದೊರೆಯುತ್ತದೆ? ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುವವ ವಧೂವರರಿಗೆ ಸರಕಾರ ಕೆಲವೊಂದು ಉಡುಗೊರೆಗಳನ್ನು ನೀಡುತ್ತದೆ. ವಧುವಿಗೆ 40 ಸಾವಿರ ರೂ. ಮೌಲ್ಯದ 8 ಗ್ರಾಂ ಚಿನ್ನದ ತಾಳಿ ಜತೆಗೆ ಧಾರೆ ಸೀರೆ, ಹೂವಿನ ಹಾರ, ರವಿಕೆ ಕಣ ಖರೀದಿಗೆ 10 ಸಾವಿರ ರೂ., ವರನಿಗೆ ಹೂ ಹಾರ, ಪಂಚೆ, ಶರ್ಟ್, ಶಲ್ಯ ಖರೀದಿಗೆ 5 ಸಾವಿರ ರೂ. ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ನೀವೇ ಖರೀದಿಸಬೇಕು ತಮ್ಮ ಸಂಪ್ರದಾಯ, ಸಂಸ್ಕೃತಿಗೆ ಅನುಗುಣವಾದ ಪೇಟ, ಬಾಸಿಂಗ ಟೋಪಿ, ಕಾಲುಂಗುರವನ್ನು ವಧೂವರರು ತಮ್ಮ ಬ್ಯಾಂಕ್ ಖಾತೆಗೆ ಸರಕಾರ ಜಮೆ ಮಾಡಿದ ಹಣದಿಂದಲೇ ಖರೀದಿಸಬೇಕು. ಊಟ, ವಾದ್ಯ , ಶಾಮಿಯಾನ ಖರ್ಚನ್ನು ದೇವಾಲಯದ ನಿಧಿಯಿಂದ ಭರಿಸಲಾಗುವುದು. ನಿಯಮಗಳು ಅನ್ವಯ ಬಾಲ್ಯ ವಿವಾಹ, ಎರಡನೇ ವಿವಾಹ, ವರದಕ್ಷಿಣೆಗೆ ಅವಕಾಶವಿಲ್ಲ. ನೋಂದಾಯಿತ ವಧೂವರರ ಅಂತಿಮ ಪಟ್ಟಿಯನ್ನು 15 ದಿನಗಳ ಮೊದಲು ದೇವಳಗಳ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ವಧುವಿಗೆ ಎಂಟು ಗ್ರಾಂ ಚಿನ್ನದ ತಾಳಿ (ಎರಡು ಚಿನ್ನದ ಗುಂಡು ಸಹಿತ) ಖರೀದಿಗೆ ಟೆಂಡರ್ ಕರೆಯಬೇಕು. ಅರ್ಹ ಏಜೆನ್ಸಿ ಆಯ್ಕೆ ಬಳಿಕ ಕಾರ್ಯಾದೇಶ ಹೊರಡಿಸಬೇಕು. ಬಳಿಕ ಟೆಂಡರ್‌ನಲ್ಲಿ ಆಯ್ಕೆಯಾದ ಏಜೆನ್ಸಿಯು ಚಿನ್ನದ ತಾಳಿ ಮತ್ತು ಗುಂಡುಗಳನ್ನು ದೇವಳಕ್ಕೆ ಪೂರೈಸಬೇಕು. ವಧೂವರರು ಅವಿವಾಹಿತರೆನ್ನುವ ದೃಢಿಕರಣ ಪತ್ರ, ಜನನ ಪ್ರಮಾಣ ಪತ್ರ, ಎಸ್‌ಎಸ್‌ಎಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಪ್ರತಿ ಸಲ್ಲಿಸಬೇಕು. ವಧೂರರಿಗೆ ತಂದೆ ತಾಯಿ ಇಲ್ಲದಿದ್ದರೆ, ಪೋಷಕರು /ವಾರಸುದಾರರು ಇಲ್ಲದಿದ್ದರೆ ಸಾಕ್ಷಿದಾರರು ಬೇಕು. ಸಾಮೂಹಿಕ ವಿವಾಹಕ್ಕೆ ಉಪ ನೋಂದಣಾಧಿಕಾರಿ ಉಪಸ್ಥಿತಿ ಮುಖ್ಯ. ವಿವಾಹ ನೋಂದಣಿ ಕಡ್ಡಾಯ. ಕಳೆದ ವರ್ಷ ನಡೆಸಲು ಉದ್ದೇಶಿಸಿದ್ದ ಸಾಮೂಹಿಕ ವಿವಾಹ ಯೋಜನೆಯು ಕೋವಿಡ್‌ನಿಂದಾಗಿ ನಡೆದಿರಲಿಲ್ಲ. ಹೀಗಾಗಿ ಮತ್ತೆ ಯೋಜನೆ ಪ್ರಾರಂಭಿಸುವಂತೆ ಸರಕಾರ ಸೂಚನೆ ನೀಡಿದೆ. ಇದಿಗ ಮತ್ತೆ ಅರ್ಜಿಗಳನ್ನು ಕರೆದು, ಆಯ್ದ ದೇವಾಲಯಗಳಲ್ಲಿ ವಿವಾಹಗಳನ್ನು ನಡೆಸಲಾಗುವುದು. ಕಳೆದ ವರ್ಷ ಅರ್ಜಿ ಸಲ್ಲಿಸಿದ್ದವರ ಪೈಕಿ ಶೇ.99ರಷ್ಟು ಮದುವೆಗಳು ಈಗಾಗಲೇ ನಡೆದು ಬಿಟ್ಟಿವೆ. ಲಕ್ಷ್ಮಿನಾರಾಯಣ್, ತಹಸೀಲ್ದಾರ್‌ಧಾರ್ಮಿಕ ದತ್ತಿ ಇಲಾಖೆ
from India & World News in Kannada | VK Polls https://ift.tt/2MjJfSh