ಚಳಿಗೆ ಗಢಗಢ ನಡುಗುತ್ತಿದ್ದರು ನಿಲ್ಲದ ದೇಶಪ್ರೇಮ: 16 ಸಾವಿರ ಅಡಿ ಎತ್ತರದಲ್ಲಿ ITBPಯಿಂದ ಗಣರಾಜ್ಯ

ಲಡಾಕ್‌: ಒಂದೆಡೆ ಮೈಕೊರೆಯುವ ಚಳಿ ಇದ್ದರೂ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಯೋಧರ ದೇಶಪ್ರೇಮಕ್ಕೇನು ಕೊರತೆ ಇಲ್ಲ. ಹೌದು, ಅತೀ ಎತ್ತರ ಪ್ರದೇಶದ ಬಾರ್ಡರ್‌ ಔಟ್‌ಪೋಸ್ಟ್‌ ಆಗಿರುವ ಬಳಿ ಐಟಿಬಿಪಿ ಯೋಧರು 72ನೇ ಗಣರಾಜ್ಯವನ್ನು ಆಚರಿಸಿದ್ದಾರೆ. 16 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸಂವಿಧಾನದ ಅಸ್ತಿತ್ವ ದಿನವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಮತ್ತೊಂದು ಐಟಿಬಿಪಿ ಪಡೆ ಹಿಮದ ಮಧ್ಯೆಯೇ ಪರೇಡ್‌ಗಳನ್ನು ನಡೆಸಿ ಗಣರಾಜ್ಯವನ್ನು ಸಂಭ್ರಮಿಸರು. ದೇಶದೆಲ್ಲೆಡೆ ಇಂದು 72ನೇ ಗಣರಾಜ್ಯವನ್ನು ಆಚರಿಸಲಾಗುತ್ತಿದೆ. ಇನ್ನು ಗಣರಾಜ್ಯದ ಸಂಭ್ರಮದ ವೇಳೆ ಯೋಧರು ಜೋರಾಗಿ ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗಿದರು. ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ತಮ್ಮ ನಿವಾಸದಲ್ಲಿ ಧ್ವಜಾರೋಹಣ ಮೂಲಕ ಗಣರಾಜ್ಯ ದಿನಾಚರಣೆ ಮಾಡಿದರು.


from India & World News in Kannada | VK Polls https://ift.tt/2YbA8pz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...