ಸಂಪುಟ ವಿಸ್ತರಣೆ: ಮುನಿರತ್ನ ಪರವಾಗಿ ಹೈಕಮಾಂಡ್ ಮುಂದೆ ಬಿಎಸ್‌ವೈ ಬ್ಯಾಟಿಂಗ್

ಬೆಂಗಳೂರು: ಬಿಎಸ್‌ವೈ ಸರ್ಕಾರ ರಚನೆಗೆ ಕಾರಣರಾದ ವಲಸೆ ಶಾಸಕರ ಪೈಕಿ ಓರ್ವರಾದ ನಾಯ್ಡುಗೆ ಇದೀಗ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಕೊಟ್ಟ ಮಾತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೊನೆಯ ಹಂತದ ಸರ್ಕಸ್‌ನನ್ನು ಬಿಎಸ್‌ವೈ ಮಾಡುತ್ತಿದ್ದಾರೆ. ಮುನಿರತ್ನ ಅವರನ್ನು ಲಿಸ್ಟ್‌ನಲ್ಲಿ ಸೇರಿಸಿಕೊಳ್ಳಲು ಹೈಕಮಾಂಡ್‌ ಮುಂದೆ ಯಡಿಯೂರಪ್ಪ ಪ್ರಯತ್ನ ಮುಂದುವರಿದಿದೆ. ಆರಂಭದಲ್ಲಿ ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವುದು ಪಕ್ಕಾ ಎನ್ನಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಮುನಿರತ್ನ ಅವರ ಹೆಸರಿಗೆ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ. ಯಡಿಯೂರಪ್ಪ ಅವರು ಮುನಿರತ್ನ ಪರವಾಗಿ ಬ್ಯಾಟಿಂಗ್ ಬೀಸುತ್ತಿದ್ದರೂ ಅದು ಯಶಸ್ವಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಮುನಿರತ್ನ ಅವರ ಮನವೋಲಿಕೆ ಪ್ರಯತ್ನ ನಡೆಯುತ್ತಿದೆ. ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಆರ್‌. ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುನಿರತ್ನ ಅವರ ಮನವೋಲಿಕೆ ಮಾಡುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಕೊನೆಯ ಹಂತದ ಪ್ರಯತ್ನವನ್ನು ಬಿಎಸ್‌ವೈ ನಡೆಸುತ್ತಿದ್ದಾರೆ. ಆರ್‌ ಆರ್‌ ನಗರ ಟಿಕೆಟ್‌ ನೀಡುವಾಗಲೂ ಗೊಂದಲ ಕಾಂಗ್ರೆಸ್‌ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡ ಮುನಿರತ್ನ ಅವರಿಗೆ ಆರ್‌ ಆರ್‌ ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಸಂದರ್ಭದಲ್ಲೂ ಸಮಸ್ಯೆ ಎದುರಾಗಿತ್ತು. ಟಿಕೆಟ್ ನೀಡಲು ಅಂತಿಮ ಹಂತದವರೆಗೂ ಸತಾಯಿಸಲಾಗಿತ್ತು. ಯಡಿಯೂರಪ್ಪ ಒತ್ತಡದ ಫಲವಾಗಿ ಕೊನೆಯ ಗಳಿಗೆಯಲ್ಲಿ ಟಿಕೆಟ್ ನೀಡಲಾಗಿತ್ತು. ಇದಾದ ಬಳಿಕ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಚಿವ ಸ್ಥಾನ ನೀಡುವ ಭರವಸೆಯನ್ನು ಬಿಎಸ್‌ವೈ ನೀಡಿದ್ದರು. ಆದರೆ ಕೊಟ್ಟ ಮಾತನ್ನು ಅವರು ಉಳಿಸಿಕೊಳ್ಳುತ್ತಾರಾ ಎಂಬುವುದು ಸದ್ಯಕ್ಕೆ ಭಾರಿ ಕುತೂಹಲ ಕೆರಳಿಸಿದೆ.


from India & World News in Kannada | VK Polls https://ift.tt/2LrhGGB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...