
ಹೊಸನಗರ: ಕಾಳಿಂಗ ಸರ್ಪವನ್ನು ಹಿಡಿಯಲು ಹೋದ ವೇಳೆ ಸರ್ಪ ಏಕಾಏಕಿ ಉರಗ ರಕ್ಷಕನ ಮೇಲೆ ಆಕ್ರಮಣ ಮಾಡಿದ ಘಟನೆ ಭಾನುವಾರ ನಡೆದಿದೆ. ತಾಲೂಕಿನ ಕೋಡೂರು ಸಮೀಪದ ಮತ್ತಿಘಟ್ಟ ಗ್ರಾಮದಲ್ಲಿ ಕಂಡು ಬಂದಿದ್ದ ಕಾಳಿಂಗ ಸರ್ಪವನ್ನು ಹಿಡಿಯಲು ಸ್ಥಳೀಯ ಉರಗ ರಕ್ಷಕ ಸ್ನೇಕ್ ಪ್ರಭಾಕರ್ ತಮ್ಮ ಸಹಾಯಕನೊಂದಿಗೆ ತೆರಳಿದ್ದರು. ಕಾಳಿಂಗ ಸರ್ಪವೊಂದು ಹೊಳೆಯಲ್ಲಿ ಇರುತ್ತದೆ. ಕಾಳಿಂಗ ಸರ್ಪ ಇರುವ ಪಕ್ಕದಲ್ಲಿ ಮರವೊಂದು ಇರುತ್ತದೆ. ಇದರ ಮೇಲೆ ನಿಂತು ಪ್ರಭಾಕರ್ ಹಾಗೂ ಅವರ ಸಹಾಯಕ ಕಾಳಿಂ ಸರ್ಪವನ್ನು ಹಿಡಯುವ ಯತ್ನದಲ್ಲಿ ಇರುತ್ತಾರೆ. ಈ ವೇಳೆ ಏಕಾಏಕಿ ಸ್ನೇಕ್ ಸ್ಟಿಕ್‌ನಿಂದ ತಪ್ಪಿಸಿಕೊಳ್ಳುವ ಕಾಳಿಂಗ ಸರ್ಪ, ಪ್ರಭಾಕರ್ ಅವರ ಮೇಲೆ ಎರಗಿದೆ. ಇದರಿಂದ ಗಾಬರಿಗೊಂಡ ಪ್ರಭಾಕರ್ ಆಯತಪ್ಪಿ ಬಿದ್ದಿದ್ದಾರೆ. ಆದರೆ ಅದೃಷ್ಟವಶಾತ್ ಕೂದಲೆಳೆಯ ಅಂತರದಿಂದ ಸರ್ಪದ ಕಡಿತದಿಂದ ಪ್ರಭಾಕರ್ ಮತ್ತು ಅವರ ಸಹಾಯಕ ಸುಬ್ರಮಣ್ಯ ಪಾರಾಗಿದ್ದಾರೆ. ನಂತರ ಬಿದ್ದ ಪ್ರಭಾಕರ್ ಕೂಡಲೇ ಹಾವಿನ ತಲೆಯನ್ನು ಹಿಡಿದು ಸರ್ಪವನ್ನು ಸಮೀಪದ ಕಾಡಿನಲ್ಲಿ ಬಿಟ್ಟಿದ್ದಾರೆ. ಸ್ನೇಕ್ ಪ್ರಭಾಕರ್ ಕಾಳಿಂಗ ಸರ್ಪ ಹಿಡಿಯಲು ಹೋದಾಗ ಸರ್ಪ ಆಕ್ರಮಣ ಮಾಡಿದ ದೃಶ್ಯ ವೈರಲ್ ಆಗಿದೆ.
from India & World News in Kannada | VK Polls https://ift.tt/3i4Kfpe