
ಬೆಂಗಳೂರು: ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು ಸಿಎಂ ಬಿಎಸ್‌ವೈ ಅಧಿಕೃತ ನಿವಾಸ ಕಾವೇರಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸಚಿವಾಕಾಂಕ್ಷಿಗಳು ಅಂತಿಮ ಹಂತದ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮುರುಗೇಶ್ ನಿರಾಣಿ ಹಾಗೂ ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಬ್ಬರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದ್ದು ಅಧಿಕೃತ ಘೋಷಣೆ ಆಗಬೇಕಿದೆ. ಈ ನಿಟ್ಟಿನಲ್ಲಿ ಬೀಳಗಿ ಶಾಸಕ ಮುರುಗೇಶ್ ನಿರಾಣಿ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುರುಗೇಶ್ ನಿರಾಣಿ, ನನಗೆ ಯಾವ ಇಲಾಖೆ ಕೊಟ್ಟರೂ ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ದುಡಿದವರಿಗೆ ಅವಕಾಶ ಕೊಡುತ್ತಾರೆ ಎಂದು ಗೊತ್ತಿತ್ತು. ಅದಂತೆ ಸಚಿವ ಸ್ಥಾನ ಸಿಗಲಿದೆ ಎಂದರು. ಇನ್ನು ಶಾಸಕ ಉಮೇಶ್ ಕತ್ತಿ ಮಾತನಾಡಿ, 8 ಬಾರಿ ಶಾಸಕನಾಗಿದ್ದೇನೆ, ಸಚಿವನೂ ಆಗುತ್ತೇನೆ ಎಂಬ ವಿಶ್ವಾಸ ಇದೆ. ನನಗೆ ಫೋನ್ ಮೂಲಕ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಹಾಗಾಗಿ ನಾನು ಬಂದಿದ್ದೇನೆ. ಶಾಸಕ ಆದ ಬಳಿಕ ಮಂತ್ರಿ ಆಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ ಎಂದರು. ಸಚಿವ ಬುಧವಾರ ಸಂಜೆ 3.50 ರಾಜಭವನದಲ್ಲಿ ನಡೆಯಲಿದೆ. ಸದ್ಯ 7 ಸ್ಥಾನಗಳನ್ನು ಭರ್ತಿ ಮಾಡಲು ಬಿಎಸ್‌ವೈ ಮುಂದಾಗಿದ್ದಾರೆ. ಈ ನಾಲ್ಕು ಮಂದಿಯ ಹೆಸರು ಖಚಿತವಾಗಿದ್ದು ಇನ್ನೂ ಮೂರು ಸ್ಥಾನಗಳಿಗಾಗಿ ಪೈಪೋಟಿ ಶುರುವಾಗಿದೆ.
from India & World News in Kannada | VK Polls https://ift.tt/38Ds8n0