
ಟೆಕ್ಸಾಸ್: ಅಧಿಕಾರವಧಿ ಮುಕ್ತಾಯವಾಗಲು ಇನ್ನು ಕೆಲವೇ ದಿನ ಬಾಕಿ ಇರುವಾಗಲೇ, ತನ್ನನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲು ಸಂಸತ್‌ನಲ್ಲಿ ರಿಪಬ್ಲಿಕನ್ ಪಕ್ಷ ಮಂಡಿಸಿರುವ ಪ್ರಕ್ರಿಯೆಗೆ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದರಿಂದ ದೇಶಾದ್ಯಂತ ಭುಗಿಲೆದ್ದಿರುವ ಹಿಂಸಾಚಾರ ಮತ್ತಷ್ಟು ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಟೆಕ್ಸಾಸ್‌ನ ರಿಯೋ ಗ್ರೆನೇಡ್ ಕಣಿವೆಯಲ್ಲಿ ನಿರ್ಮಾಣವಾದ ಹೊಸ ಗಡಿಗೆ ಭೇಟಿ ನೀಡಿದ ಪರಿಶೀಲನೆ ನಡೆಸಿದ ಟ್ರಂಪ್, ಬಳಿಕ ತನ್ನ ವಿರುದ್ದ ಮಂಡಿಸಲಾಗಿರುವ ವಾಗ್ದಂಡನೆ ಪ್ರಕ್ರಿಯೆ ವಿರುದ್ಧ ಕಿಡಿ ಕಾರಿದರು. ಇದು ನನ್ನ ವಿರುದ್ಧ ನಡೆಸುತ್ತಿರುವ ಸಂಘಟಿತ ದಾಳಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವಾಗ್ದಂಡನೆ ಪ್ರಕ್ರಿಯೆ ಅಮೆರಿಕ ಇತಿಹಾಸದಲ್ಲೇ ಅತೀ ದೊಡ್ಡ ಸಂಘಟಿತ ದಾಳಿಯಾಗಿದ್ದು, ಇದು ಜನರಲ್ಲಿ ಮತ್ತಷ್ಟು ಕೋಪ ತರಿಸಲಿದೆ. ಇಂಥ ಸಮಯದಲ್ಲಿ ದೇಶಕ್ಕೆ ಇದು ಮಾರಕವಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ. ಆ ಮೂಲಕ ಬರುವ ದಿನಗಳಲ್ಲಿ ಅಮೆರಿಕದಲ್ಲಿ ಮತ್ತಷ್ಟು ಪ್ರತಿಭಟನೆ ನಡೆಯುವ ಸುಳಿವನ್ನು ನೀಡಿದ್ದಾರೆ. ಸಂವಿಧಾನಕ್ಕೆ 25ನೇ ತಿದ್ದುಪಡಿ ಮಾಡುವ ಮೂಲಕ ನನ್ನ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಮಂಡಿಸಲಾಗಿದೆ. ನೆನಪಿರಲಿ ಇದು ಜೋ ಬಿಡೆನ್ ಅವರಿಗೂ ಕಾಡಲಿದೆ. ಎಚ್ಚರಿಕೆಯಿಂದರಿ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಜನವರಿ 6ರಂದು ತನ್ನ ಬೆಂಬಲಿಗರು ಸಂಸತ್ ಭವನ ಕ್ಯಾಪಿಟಲ್ ಹಿಲ್ ಮೇಲೆ ನಡೆಸಿದ ದಾಳಿಗೆ ತಮ್ಮದೇ ಪ್ರಚೋದನೆ ಇತ್ತು ಎಂಬುವುದನ್ನು ಟ್ರಂಪ್ ಅಲ್ಲಗೆಳೆದಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿದ್ದರಿಂದಲೇ ಜನ ಆಕ್ರೋಶೀತರಾಗಿ ಈ ದಾಳಿ ನಡೆಸಿದ್ದರು ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರನ್ನು ಅಧ್ಯಕ್ಷ ಗಾದಿಯಿಂದ ಕಿತ್ತು ಹಾಕಬೇಕು ಎಂದು ಅಮೆರಿಕದ ಸಂಸತ್‌ನಲ್ಲಿ ವಾಗ್ದಂಡನೆ ಪ್ರಕ್ರಿಯೆ ಮಂಡನೆಯಾಗಿದ್ದು, ಈ ಗೊತ್ತುವಳಿಗೆ ಇಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮತದಾನ ನಡೆಯಲಿದೆ. ಈ ಮನೆಯಲ್ಲಿ ಡೆಮಾಕ್ರೆಟಿಕ್ ಪಕ್ಷಕ್ಕೆ ಬಹುಮತ ಇರುವುದರಿಂದ ಟ್ರಂಪ್ ಅವರು ವಾಗ್ದಂಡನೆಯ ಅವಮಾನಕ್ಕೆ ಗುರಿಯಾಗುವುದು ನಿಶ್ಚಿತ ಎನ್ನಲಾಗಿದೆ.
from India & World News in Kannada | VK Polls https://ift.tt/3bzdGP5