ಜ.15-ಫೆ.5 ವರೆಗೆ ಕರ್ನಾಟಕದಲ್ಲಿ ರಾಮಜನ್ಮ ಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನ; ವಿಹಿಂಪ

ಬೆಳಗಾವಿ: ಕರ್ನಾಟಕದಲ್ಲಿ ಜ.15 ರಿಂದ ಫೆ.5 ವರೆಗೆ ರಾಮಜನ್ಮ ಭೂಮಿ ಮಂದಿರ ನಡೆಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಮಧ್ಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ತಿಳಿಸಿದರು. ಶನಿವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಯೋಧ್ಯೆಯಲ್ಲಿ 2.7 ಎಕರೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ. 67 ಎಕರೆ ಪ್ರಮುಖ ದೇಶದಲ್ಲಿ ಇತರ ಕಟ್ಟಡಗಳು ನಿರ್ಮಾಣವಾಗಲಿದೆ. ಈ ಮಂದಿರವನ್ನು ಸಾರ್ವಜನಿಕರ ಹಣದಿಂದ ಕಟ್ಟಬೇಕು ಎಂದು ರಾಮಜನ್ಮ ಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬರುವ ಸಂಕ್ರಾಂತಿ ದಿನ ಜ.14 ರಿಂದ ಅಭಿಯಾನ ಶುರುವಾಗಲಿದೆ ಎಂದರು. ದೇಶದಲ್ಲಿ 22 ಕೋಟಿ ಹಿಂದೂ ಪರಿವಾರ ಕುಟುಂಬ ಇದೆ ಎನ್ನುವ ಅಂದಾಜಿದೆ. ಕರ್ನಾಟಕದಲ್ಲಿ 90 ಲಕ್ಷ ಕುಟುಂಬವನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ. ಬೆಳಗಾವಿಯಲ್ಲಿ 10 ಲಕ್ಷ ಕುಟುಂಬಗಳು, 1400 ಗ್ರಾಮಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಯಾರಿಗೂ ಒತ್ತಾಯ ಮಾಡಿ ನಿಧಿ ಸಂಗ್ರಹಿಸುವುದಿಲ್ಲ. ಜನರು ತಮಗೆ ಸಾಧ್ಯವಾದಷ್ಟು ನಿಧಿ ನೀಡಬಹುದು ಎಂದರು. ವಿಶ್ವಹಿಂದೂ ಪರಿಷತ್ ನ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಅರ್ಕೆ ಬಾಗೆ, ಬೆಳಗಾವಿ ಘಟಕದ ಅಧ್ಯಕ್ಷ ಶ್ರೀಕಾಂತ್ ಕದಮ್, ಪ್ರಮುಖರಾದ ನಾರಾಯಣ ಮಠಾಧಿಕಾರಿ, ಮನೋಹರ ಮಠದ, ಸೋಮಶೇಖರ್ ಹಿರೇಮಠ, ಕೃಷ್ಣ ಭಟ್ ಹಾಜರಿದ್ದರು.


from India & World News in Kannada | VK Polls https://ift.tt/2XfZKRL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...