ಕರಾವಳಿಯಲ್ಲಿ ತಿಂಗಳಾಂತ್ಯಕ್ಕೆ ಆಧುನಿಕ ಕಂಬಳ ಆರಂಭ: ಇಲ್ಲಿದೆ ವೇಳಾಪಟ್ಟಿ!

ಮೂಡುಬಿದಿರೆ: ಕೋವಿಡ್‌ ಮಾರ್ಗಸೂಚಿ ಹಿನ್ನೆಲೆಯಲ್ಲಿ ತಡೆಯಾಗಿದ್ದ ತುಳುನಾಡಿನ ಆಧುನಿಕ ಜನವರಿ ತಿಂಗಳಾಂತ್ಯದಿಂದ ನಡೆಸಲು ಜಿಲ್ಲಾಕಂಬಳ ಸಮಿತಿ ನಿರ್ಧರಿಸಿದ್ದು, ಈ ಋುತುವಿನಲ್ಲಿ ಒಟ್ಟು 7 ಕಂಬಳ ನಡೆಯಲಿದೆ. ರಾತ್ರಿ ಕಂಬಳವನ್ನು ನಿಷೇಧಿಸಲಾಗಿದ್ದು, ಹಗಲು ವೇಳೆ ಮಾತ್ರ ನಡೆಯಲಿದೆ. ಸಮಾಜಮಂದಿರದಲ್ಲಿ ಶನಿವಾರ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾನಾ ಕಂಬಳ ಸಮಿತಿಗಳ ವ್ಯವಸ್ಥಾಪಕರು, ಕಂಬಳದ ಯಜಮಾನರು, ಓಟಗಾರರು ಮತ್ತು ತೀರ್ಪುಗಾರರ ಸಲಹೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ ಮಾತನಾಡಿ, ಸರಕಾರದ ನೀತಿ ನಿಯಮ ಪಾಲಿಸಿಕೊಂಡು ಕಂಬಳ ನಡೆಸಲು ವ್ಯವಸ್ಥಾಪಕರು ನಿರ್ಧರಿಸಿದ್ದಾರೆ. ಇದಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲಾಗುವುದು ಎಂದರು. ಸಮಿತಿಯ ಗೌರವಾಧ್ಯಕ್ಷರಾದ ಬಾರ್ಕೂರು ಶಾಂತಾರಾಮ ಶೆಟ್ಟಿ, ಕೊಳಕೆ ಇರ್ವತ್ತೂರು ಭಾಸ್ಕರ ಎಸ್‌ ಕೋಟ್ಯಾನ್‌, ಉಪಾಧ್ಯಕ್ಷರಾದ ನವೀನ್‌ಚಂದ್ರ ಆಳ್ವ, ಪ್ರಧಾನ ಕಾರ್ಯದರ್ಶಿ ರಾಜೀವ್‌ ಶೆಟ್ಟಿ ಎಡ್ತೂರು, ಜತೆ ಕಾರ್ಯದರ್ಶಿ ವಿದ್ಯಾಧರ ರೆಂಜಾಳ, ಬೆಳುವಾಯಿ ಸದಾನಂದ ಶೆಟ್ಟಿ, ದಿನೇಶ್‌ ಶೆಟ್ಟಿ ಮಾಳ, ಗೌರವ ಸಲಹೆಗಾರರಾದ ಎರ್ಮಾಳು ರೋಹಿತ್‌ ಹೆಗ್ಡೆ, ಚಂದ್ರಹಾಸ ಸನಿಲ್‌ ಉಪಸ್ಥಿತರಿದ್ದರು. ವಿಜಯ್‌ಕುಮಾರ್‌ ಕಂಗಿನಮನೆ, ಮುಚ್ಚೂರು ಲೋಕೇಶ್‌, ಗೋಪಾಲಕೃಷ್ಣ ಭಟ್‌, ಚಂದ್ರಹಾಸ ಶೆಟ್ಟಿ, ಬೋಳಾರ ತ್ರಿಶಾಲ್‌, ತೀರ್ಪುಗಾರರಾದ ರವೀಂದ್ರ ಕುಕ್ಕುಂದೂರು ಮತ್ತಿತರರು ಸಭೆಯಲ್ಲಿಸೂಕ್ತ ಸಲಹೆ ನೀಡಿದರು. ಎಡ್ತೂರು ರಾಜೀವ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು. ವಿಕ ವಿಶೇಷ ವರದಿ ಮಾಡಿತ್ತು ಕೋವಿಡ್‌ ಕಾರಣದಿಂದ ಆಧುನಿಕ ಕಂಬಳ ನಡೆಯುವ ಬಗ್ಗೆ ಗೊಂದಲ ಇತ್ತು. ಒಂದು ಹಂತದಲ್ಲಿ ಆಧುನಿಕ ಕಂಬಳ ನಡೆಯಲ್ಲ ಅನುಮಾನ ಎಂಬ ಚರ್ಚೆ ವ್ಯಕ್ತವಾಗಿತ್ತು. ಈ ಸಂದರ್ಭ ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಅವಕಾಶ ನೀಡಬೇಕು, ಜಿಲ್ಲಾಡಳಿತ ಇದಕ್ಕೊಂದು ಮಾರ್ಗಸೂಚಿ ರಚಿಸಬೇಕು ಎಂದು ವಿಜಯ ಕರ್ನಾಟಕ ನ.4ರಂದು ವಿಶೇಷ ವರದಿ ಮಾಡಿತ್ತು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕಂಬಳ ಆಯೋಜನೆಗೆ ಪೂರಕವಾಗಿ ಸ್ಪಂದಿಸಿದ್ದರು. ಇದೀಗ ಕಂಬಳ ಸಮಿತಿ ಸಭೆ ಸೇರಿ 7 ಕಂಬಳ ಆಯೋಜನೆಗೆ ನಿರ್ಧರಿಸಿದೆ. ಕಂಬಳ ದಿನಾಂಕ ಸ್ಥಳ ಕಂಬಳ
  • ಜ. 30 -31 ಹೊಕ್ಕಾಡಿಗೋಳಿ ವೀರ-ವಿಕ್ರಮ
  • ಫೆ. 6 -7 ಐಕಳಬಾವ ಕಾಂತಬಾರೆ-ಬುಧಬಾರೆ
  • ಫೆ. 13-14 ವಾಮಂಜೂರು ತಿರುವೈಲು ಸಂಕುಪೂಂಜ-ದೇವುಪೂಂಜ
  • ಫೆ. 20 -21 ಮೂಡುಬಿದಿರೆ ಕೋಟಿ ಚೆನ್ನಯ
  • ಫೆ. 27 - 28 ಮಿಯ್ಯಾರು ಲವ-ಕುಶ
  • ಮಾ. 6 -7 ಬಂಗ್ರಕೂಳೂರು ರಾಮ- ಲಕ್ಷ್ಮಣ
  • ಮಾ. 20 -21 ವೇಣೂರು ಪೆರ್ಮುಡ ಸೂರ್ಯ-ಚಂದ್ರ
ಕಂಬಳ ಸಂಘಟಕರು, ಕೋಣದ ಯಜಮಾನರು, ಕಂಬಳಾಭಿಮಾನಿಗಳ ಆಗ್ರಹದಂತೆ ಸರಕಾರದ ಮಾರ್ಗಸೂಚಿಯನ್ನು ಪಾಲಿಸಿಕೊಂಡು 7 ಕಂಬಳ ನಡೆಸಲು ನಿರ್ಧರಿಸಲಾಗಿದೆ. ಎಲ್ಲ ಕಂಬಳ ಶನಿವಾರ ಮತ್ತು ಭಾನುವಾರ ಹಗಲು ಮಾತ್ರ ನಡೆಯಲಿದೆ. ಕಂಬಳ ಆಯೋಜನೆ ಬಗ್ಗೆ ಶೀಘ್ರದಲ್ಲೇ ದ.ಕ. ಜಿಲ್ಲಾಧಿಕಾರಿಯವನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ. ಪಿ.ಆರ್‌. ಶೆಟ್ಟಿ, ಅಧ್ಯಕ್ಷರು, ಜಿಲ್ಲಾಕಂಬಳ ಸಮಿತಿ


from India & World News in Kannada | VK Polls https://ift.tt/3pGOius

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...